For Quick Alerts
  ALLOW NOTIFICATIONS  
  For Daily Alerts

  ಯಾರೂ ನಿರೀಕ್ಷಿಸದ ಇಂಟರ್‌ವಲ್.. ಚಿಂದಿ ಸಾಂಗ್ಸ್.. ಅಪ್ಪು ಚಮಕ್ಕು.. ಸೂರಿ ಮ್ಯಾಜಿಕ್ಕು.. ಜಗಮಗ 'ಜಾಕಿ'

  |

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಕರಿಯರ್‌ನಲ್ಲಿ ಅಭಿಮಾನಿಗಳು ಎಂದೂ ಮರೆಯದ ಸಿನಿಮಾ 'ಜಾಕಿ'. ಸೂರಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದೀಗ 12 ವರ್ಷ ಪೂರೈಸಿದೆ. ಎಲ್ಲಾ ವಿಭಾಗದಲ್ಲೂ ಫಸ್ಟ್ ಕ್ಲಾಸ್ ಎನ್ನಿಸಿಕೊಂಡಿದ್ದ 'ಜಾಕಿ' ಬರೆದ ದಾಖಲೆಗಳು ಒಂದೆರಡಲ್ಲ. ಸೂರಿ ಟೇಕಿಂಗ್, ಅಪ್ಪು ಪರ್ಫಾರ್ಮೆನ್ಸ್ ಸಿಂಪ್ಲಿ ಸೂಪರ್. ಮನರಂಜನೆಯ ರಸದೌತಣವನ್ನೇ ಉಣಬಡಿಸಿದ್ದ ಸಿನಿಮಾ ನೋಡಿ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದರು.

  'ಜಾಕಿ' ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಹ ಸಿನಿಮಾ. ವಿ. ಹರಿಕೃಷ್ಣ ಮ್ಯೂಸಿಕ್‌ನಲ್ಲಿ ಆಲ್ಬಮ್‌ ಸೂಪರ್ ಹಿಟ್ ಆಗಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸಿನಿಮಾ ಚಿತ್ರಮಂದಿರಕ್ಕೆ ಸೆಳೆದಿತ್ತು. ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅವತ್ತಿನ ಕಾಲಕ್ಕೆ ಕೋಟಿ ಕೋಟಿ ಕೊಳ್ಳೆ ಹೊಡೆದು ಸದ್ದು ಮಾಡಿತ್ತು. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಸ್ವತಃ ಪಾರ್ವತಮ್ಮ ರಾಜ್‌ಕುಮಾರ್ ಸಿನಿಮಾ ನಿರ್ಮಾಣ ಮಾಡಿದ್ದರು. ಯೋಗರಾಜ್‌ ಭಟ್ ಚಿತ್ರದ 5 ಹಾಡುಗಳಿಗೆ ಸಾಹಿತ್ಯ ಬರೆದಿದ್ದರು.

  'ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್‌ ಬರೋ ಗೆಸ್ಟ್ ಯಾರು? ಇಲ್ಲಿದೆ ಕಂಪ್ಲೀಟ್ ಲಿಸ್ಟ್!'ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್‌ ಬರೋ ಗೆಸ್ಟ್ ಯಾರು? ಇಲ್ಲಿದೆ ಕಂಪ್ಲೀಟ್ ಲಿಸ್ಟ್!

  ಒಂದರ್ಥದಲ್ಲಿ ಇದು ಅಪ್ಪುಗೆ ಹಾಗೂ ಅವರ ಬ್ಯಾನರ್‌ನಲ್ಲಿ ಪ್ರಯೋಗಾತ್ಮಕ ಸಿನಿಮಾ. ನಿರ್ದೇಶಕ ಸೂರಿ ಚಿತ್ರದಲ್ಲಿ 'ಜಾಕಿ' ಕ್ಯಾರೆಕ್ಟರ್ ಡಿಸೈನ್ ಮಾಡಿದ್ದ ರೀತಿಯೇ ವಿಭಿನ್ನವಾಗಿತ್ತು. ಹೇಳಿಕೊಳ್ಳುವಂತಹ ಕಥೆ ಇಲ್ಲದೇ ಇದ್ದರೂ ಸ್ಕ್ರೀನ್‌ಪ್ಲೇ ಮಜವಾಗಿತ್ತು. ಎಲ್ಲೂ ಬೋರ್ ಹೊಡೆಸದೇ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಜಾಕಿ ಸಿನಿಮಾಗಳ ವಿಶೇಷತೆಗಳು ಬಗ್ಗೆ ಮುಂದೆ ಓದಿ.

  ಯಾರೂ ನಿರೀಕ್ಷಿಸದ 'ಜಾಕಿ' ಇಂಟರ್‌ವಲ್

  ಯಾರೂ ನಿರೀಕ್ಷಿಸದ 'ಜಾಕಿ' ಇಂಟರ್‌ವಲ್

  ಆಕ್ಷನ್ ಸಿನಿಮಾ ಅಂದರೆ ಸಾಮಾನ್ಯವಾಗಿ ಇಂಟರ್‌ವಲ್‌ನಲ್ಲಿ ಒಂದು ಫೈಟ್‌ ಇರುತ್ತೆ. ಹೀರೊ ಎದುರಾಳಿಗಳಿಗೆ ಚಾಲೆಂಜ್ ಹಾಕೋದೊ, ಇಲ್ಲ ಹೀರೊ ಸೋಲುವ ಸನ್ನಿವೇಶ ಇರುತ್ತೆ. ಆದರೆ ಸೂರಿ ಬಹಳ ಸಿಂಪಲ್ ಇಂಟರ್‌ವಲ್ ಇಟ್ಟಿದ್ರು. ಆದರೆ ಅದು ಥಿಯೇಟರ್‌ನಲ್ಲಿ ಕೊಟ್ಟ ಮಜಾ ಬೇರೇನೆ ಇತ್ತು. ಬೆಳ್ಳಿಗೆರೆಯ 'ಜಾಕಿ' ಏನೋ ಮಾಡಲು ಹೋಗಿ ಮತ್ತೇನೋ ಎಡವಟ್ಟಾಗಿ ಅದನ್ನು ಸರಿಪಡಿಸಿಕೊಳ್ಳುವ ಹಾದಿಯಲ್ಲಿ ಊರು ಬಿಟ್ಟು ಬೆಂಗಳೂರಿಗೆ ಬರುವಂತಾಗುತ್ತದೆ. ತನ್ನದಲ್ಲದ ತಪ್ಪಿಗೆ ಪೊಲೀಸರ ಕಣ್ಣಲ್ಲಿ ಅಪರಾಧಿಯಂತೆ ಕಾಣಿಸುವ 'ಜಾಕಿ' ಪೊಲೀಸರಿಂದ ತಪ್ಪಿಸಿಕೊಂಡು ತಿರುಗಾಡುತ್ತಿರುತ್ತಾನೆ. ಹೀಗೆ ತಪ್ಪಿಸಿಕೊಂಡು ತಿರುಗಾಡುತ್ತಾ ಬಂದು 'ಜಾಕಿ' ಕಲಾಸಿಪಾಳ್ಯ ಪೊಲೀಸ್ ಠಾಣೆ ಚಾವಣಿ ಮೇಲೆಯೇ ಮಲಗುತ್ತಾನೆ. ಕ್ಯಾಮರಾ ನಿಧಾನವಾಗಿ ಅಲ್ಲಿಂದ ಕೆಳಗೆ ಪ್ಯಾನ್ ಆಗುತ್ತಿದ್ದಂತೆ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ ಬಿದ್ದಿತ್ತು.

  ಮನೆ ನೋಡಿ ತುಂಬಾ ತಿಂಗಳಾಗಿತ್ತು, ಅಪ್ಪು ಸರ್ ಮನೆಗೆ ಕರೆಸಿ ಇಷ್ಟದ ಊಟ ಹಾಕಿಸಿದ್ರು: ರಾಜ್ ಬಿ ಶೆಟ್ಟಿಮನೆ ನೋಡಿ ತುಂಬಾ ತಿಂಗಳಾಗಿತ್ತು, ಅಪ್ಪು ಸರ್ ಮನೆಗೆ ಕರೆಸಿ ಇಷ್ಟದ ಊಟ ಹಾಕಿಸಿದ್ರು: ರಾಜ್ ಬಿ ಶೆಟ್ಟಿ

  ಅಪ್ಪು ಕರಿಯರ್‌ನಲ್ಲಿ ವಿಭಿನ್ನ ಪ್ರಯೋಗ

  ಅಪ್ಪು ಕರಿಯರ್‌ನಲ್ಲಿ ವಿಭಿನ್ನ ಪ್ರಯೋಗ

  ಹೇಳುವಂತಹ ಕಥೆ ಇಲ್ಲದಿದ್ದರೂ ಚಿತ್ರಕಥೆ, 'ಜಾಕಿ' ಕ್ಯಾರೆಕ್ಟರೈಸೇಷನ್ ಸೊಗಸಾಗಿತ್ತು. ಅಪ್ಪು ರಿಯಲ್ ಎಸ್ಟೇಟ್ ಬ್ರೋಕರ್ ಆಗಿರೋದು, ಇಸ್ಪೀಟ್ ಆಡುವುದು, ಪಕ್ಕಾ ಲೋಕಲ್ ಹುಡುಗನ ಬಾಡಿ ಲಾಂಗ್ವೇಜ್, ಲುಕ್, ಮಾತನಾಡುವ ಶೈಲಿ ಎಲ್ಲವೂ ಹೊಸತಾಗಿತ್ತು. ಅದರಲ್ಲೂ ಅಪ್ಪು ಹೋಂ ಬ್ಯಾನರ್‌ನಲ್ಲಿ ಇದು ಹೊಸ ಬಗೆಯ ಪ್ರಯತ್ನ ಎನ್ನಬಹುದು. ಆದರೆ ಪ್ರೇಕ್ಷಕರು ಒಪ್ಪಿಕೊಂಡಿದ್ದರು. ವಿಶೇಷ ಅಂದರೆ ಫ್ಯಾಮಿಲಿ ಆಡಿಯನ್ಸ್‌ಗೂ ಸಿನಿಮಾ ಇಷ್ಟವಾಗಿತ್ತು.

  ಜಬರ್ದಸ್ತ್‌ ಆಕ್ಷನ್ ಸೀಕ್ವೆನ್ಸ್

  ಜಬರ್ದಸ್ತ್‌ ಆಕ್ಷನ್ ಸೀಕ್ವೆನ್ಸ್

  'ಜಾಕಿ' ಚಿತ್ರದ ಹೈಲೆಟ್ ಅಂದ್ರೆ ಸಾಂಗ್ಸ್ ಮತ್ತು ಆಕ್ಷನ್ ಸೀಕ್ವೆನ್ಸ್. ಒಂದಕ್ಕಿಂತ ಒಂದು ಫೈಟ್ ಸೀನ್ ಮಜವಾಗಿತ್ತು. ಪುನೀತ್ ರಾಜ್‌ಕುಮಾರ್ ಆಕ್ಷನ್ ಬಗ್ಗೆ ಬಿಡಿಸಿ ಹೇಳುವುದೇ ಬೇಡ. ಪೊಲೀಸರಿಂದ ತಪ್ಪಿಸಿಕೊಂಡು ಯಾವುದೋ ಬೈಕಿನಲ್ಲಿ ಓಡುತ್ತಿದ್ದ ಜಾಕಿಗೆ ಅಚಾನಕ್ಕಾಗಿ ಹುಡುಗಿಯೊಬ್ಬಳನ್ನು ನರಬಲಿಕೊಡುತ್ತಿದ್ದ ಗ್ಯಾಂಗ್ ಎದುರಾಗುತ್ತದೆ. ಆಗ ನಡೆಯುವ ಫೈಟ್ ಮೈ ಜುಮ್ ಅನ್ನಿಸುವಂತಿದೆ. ಅಪ್ಪು ಯಾವುದೇ ಡ್ಯೂಪ್ ಇಲ್ಲದೇ ಸ್ಟಂಟ್ ಮಾಡಿದ್ದರು. ಇದೇ ಆಕ್ಷನ್ ಸೀನ್ ನೋಡಿ ಸ್ಟಂಟ್ ಮಾಸ್ಟರ್ ರವಿವರ್ಮಾಗೆ ಪ್ರಭುದೇವಾ ಬಾಲಿವುಡ್ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು. ಇನ್ನು ಡೆಡ್ ಬಾಡಿ ಕಾಯುವಾಗ ನಡೆಯುವ ಬೆಂಕಿ ಫೈಟ್, ಹುಚ್ಚನ ವೇಷದಲ್ಲಿ ನಟೋರಿಯಸ್ ಜೂಲಿ ಅಂಡ್‌ ಗ್ಯಾಂಗ್‌ ಮೇಲೆ ದಾಳಿ ಮಾಡುವ ಫೈಟ್‌ ಕೂಡ ಬೊಂಬಾಟ್ ಆಗಿತ್ತು.

   ಶತದಿನೋತ್ಸವ ಆಚರಿಸಿಕೊಂಡಿದ್ದ 'ಜಾಕಿ'

  ಶತದಿನೋತ್ಸವ ಆಚರಿಸಿಕೊಂಡಿದ್ದ 'ಜಾಕಿ'

  ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನು 'ಜಾಕಿ' ಸಿನಿಮಾ ರಂಜಿಸಿತ್ತು. ಸೆಕೆಂಡ್‌ ಹಾಫ್ ಪೊಲೀಸ್ ಕಾನ್ಸ್‌ಸ್ಟೇಬಲ್ ಮೀಸೆ ಭೀಮಣ್ಣ ರಂಗಾಯಣ ರಘು ಹಾಗೂ ಜಾಕಿ ನಡುವಿನ ಕಾಮಿಡಿ ಸನ್ನಿವೇಶಗಳು ಇಷ್ಟವಾಗಿತ್ತು. ಡೈಲಾಗ್ಸ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಇನ್ನು ಕ್ಲೈಮ್ಯಾಕ್ಸ್‌ನಲ್ಲಿ ಹುಡುಗಿಯರ ಮಾರಾಟಜಾಲವನ್ನು ಕೂಡ ಜಾಕಿ ಭೇದಿಸುತ್ತಾನೆ. ಇನ್ನು ಕಲರ್‌ಫುಲ್ ಸೆಟ್‌ಗಳನ್ನು ಹಾಕಿ ಸಿನಿಮಾ ಶೂಟಿಂಗ್ ಮಾಡಲಾಗಿತ್ತು. ಫಾರಿನ್‌ ಲೊಕೇಶನ್‌ನಲ್ಲಿ 2 ಸಾಂಗ್ಸ್ ಸೆರೆಹಿಡಿಯಲಾಗಿತ್ತು. ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿತ್ತು. ಹೊರ ರಾಜ್ಯಗಳಲ್ಲೂ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿತ್ತು.

  English summary
  Duniya Soori and Puneeth Rajkumar Combination movie Jackie Completes 12 Years. Know More.
  Friday, October 14, 2022, 23:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X