Don't Miss!
- News
ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಅಧಿಕ ಸಾವುನೋವುಗಳ ಭೀತಿ!
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ನೇ ಟಾಪ್ 10 ಭಾರತೀಯರ ನಟ-ನಟಿಯರ ಪಟ್ಟಿ ರಿಲೀಸ್: ಧನುಷ್ ನಂ 1, ಯಶ್ ಎಷ್ಟನೇ ಸ್ಥಾನ?
2022 ಇನ್ನೇನು ಮುಗಿಯುತ್ತಿದೆ. ಇನ್ನೇನು ಕೆಲವು ದಿನಗಳಲ್ಲಿ 2023ಕ್ಕೆ ಗ್ರ್ಯಾಂಡ್ ವೆಲ್‌ಕಮ್ ಆಗುತ್ತೆ. ಈ ಒಂದು ವರ್ಷದಲ್ಲಿ ಯಾವ್ಯಾವ ನಟರು ಮಾಡಿದ ಸಾಧನೆ ಏನು? ಭಾರತದಲ್ಲಿ ಟಾಪ್ 10 ಪಟ್ಟಿಯರಲ್ಲಿರೋ ಸ್ಟಾರ್‌ಗಳು ಯಾರು? ಅನ್ನೋ ಕುತೂಹಲವಿದೆ.
ಸಿನಿಮಾ, ಟಿವಿ ಹಾಗೂ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ನೀಡುವ IMDb 2022ರಲ್ಲಿ ಸಾಧನೆ ಮಾಡಿದ ಸ್ಟಾರ್ ನಟರ ಪಟ್ಟಿಯನ್ನು ರಿಲೀಸ್ ಮಾಡಿದೆ. ವಿಶ್ವದಾದ್ಯಂತ ಸುಮಾರು 200 ಮಿಲಿಯನ್‌ಗೂ ಅಧಿಕ ವೀಕ್ಷಕರು ಹುಡುಕಿದ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.
40
ದಿನ
ಬ್ಯಾಂಕಾಕ್‌ನಲ್ಲಿ
'ಪುಷ್ಪ
2'
ಶೂಟಿಂಗ್:
ಡಿಸೆಂಬರ್‌ನಲ್ಲಿ
ಸರ್ಪ್ರೈಸ್!
IMDb ರಿಲೀಸ್ ಮಾಡಿದ 2022ರ ಪಟ್ಟಿಯಲ್ಲಿರುವ ಟಾಪ್ 10 ಭಾರತೀಯ ನಟ-ನಟಿಯರ ಪಟ್ಟಿ ಹೀಗಿದೆ.

ಧನುಷ್ ನಂ 1
2022 ರ ಟಾಪ್ 1ನೇ ಸ್ಥಾನದಲ್ಲಿರೋದು ಧನುಷ್. ಈ ವರ್ಷ ಧನುಷ್ ಐದು ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಓಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ಸಿರೀಸ್ 'ಗ್ರೇ ಮ್ಯಾನ್', ತಮಿಳು ಸಿನಿಮಾಗಳು 'ಮಾರನ್', 'ತಿರುಚಿತ್ರಂಬಲಂ', 'ನಾನೇ ವರುವೆನ್' ಹಾಗೂ 'ವಾಥಿ' ಸಿನಿಮಾಗಳು ಈ ವರ್ಷ ರಿಲೀಸ್ ಆಗಿವೆ. ಈ ಆಧಾರದಲ್ಲಿ ಧನುಷ್ ನಂ 1 ಸ್ಥಾನದಲ್ಲಿದ್ದಾರೆ.

ಆಲಿಯಾ ಭಟ್
ಬಾಲಿವುಡ್ ನಟಿ ಆಲಿಯಾ ಭಟ್ ಎರಡನೇ ಸ್ಥಾನದಲ್ಲಿದ್ದಾರೆ. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದಲ್ಲಿ ಕೆಲವೇ ನಿಮಿಷಗಳಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾನೇ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ. ಹಾಗೇ 'ಗಂಗೂಬಾಯಿ ಕಾಠಿಯವಾಡಿ' ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿತ್ತು.

ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್ ಟಾಪ್ 3 ಸ್ಥಾನದಲ್ಲಿದ್ದಾರೆ. ಸುಮಾರು 5 ವರ್ಷಗಳ ಬಳಿಕ ಐಶ್ವರ್ಯಾ ರೈ ಬಚ್ಚನ್ ವಾಒಆಸ್ ಚಿತ್ರರಂಗಕ್ಕೆ ಮರಳಿದ್ದರು. ಮಣಿರತ್ನಂ ನಿರ್ದೇಶಿಸಿದ 'ಪೊನ್ನಿಯನ್ ಸೆಲ್ವನ್ 1' ರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅತಿ ಹೆಚ್ಚು ಮಂದಿ ಐಶ್ವರ್ಯಾ ರೈ ಅನ್ನು ಸರ್ಚ್ ಮಾಡಿದ್ದರು.

ರಾಮ್ ಚರಣ್ ತೇಜಾ
ಈ ವರ್ಷ ವಿಶ್ವ ಮಟ್ಟದಲ್ಲಿ ಗಮನ ಸೆಳೆದ ಸಿನಿಮಾ RRR. ರಾಜಮೌಳಿ ನಿರ್ದೇಶಿಸಿದ ಈ ಸಿನಿಮಾದಲ್ಲಿ ರಾಮ್ ಚರಣ್ ತೇಜಾ ಹಾಗೂ ಜೂ.ಎನ್‌ಟಿಆರ್ ಕಾಣಿಸಿಕೊಂಡಿದ್ದರು. ಭಾರತದಲ್ಲಿ ರಾಮ್ ಚರಣ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತ್ತು.

ಸಮಂತಾ
IMDb ಟಾಪ್ 5 ಸ್ಥಾನದಲ್ಲಿರೋದು ಸಮಂತಾ. ಕಳೆದ ವರ್ಷದ ಕೊನೆಯಲ್ಲಿ 'ಪುಷ್ಪ' ರಿಲೀಸ್ ಆಗಿತ್ತು. ಅಲ್ಲಿಂದ ಸಮಂತಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದರು. ಈ ಕಾರಣಕ್ಕೆ ಸಮಂತಾ ಟಾಪ್ 5 ಸ್ಥಾನದಲ್ಲಿದ್ದಾರೆ.

ಹೃತಿಕ್ ರೋಷನ್
ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ 2022ನೇ ಸಾಲಿನ ಟಾಪ್ 6ನೇ ಸ್ಥಾನದಲ್ಲಿರೋ ಬಾಲಿವುಡ್ ನಟ. ಈ ವರ್ಷ ಹೃತಿಕ್ ರೋಷನ್ ನಟಿಸಿದ ಏಕೈಕ ಸಿನಿಮಾ ತೆರೆಕಂಡಿತ್ತು. ಅದುವೇ 'ವಿಕ್ರಂ ವೇದ'. ಈ ಸಿನಿಮಾ ಕೂಡ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಆದರೂ, ಟಾಪ್ 6ನೇ ಸ್ಥಾನದಲ್ಲಿದ್ದಾರೆ.

ಕಿಯಾರಾ ಅಡ್ವಾನಿ
2022ರಲ್ಲಿ ಬಾಲಿವುಡ್‌ನ ಸಕ್ಸಸ್‌ಪುಲ್ ನಟಿ ಕೈರಾ ಅದ್ವಾನಿ. ಈ ವರ್ಷ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಜಗ್‌ಜುಗ್‌ಜಿಯೋ' ಮತ್ತು 'ಭೂಲ್ ಭುಲಯ್ಯಾ 2' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ.

ಜೂ.ಎನ್‌ಟಿಆರ್
RRR ಸಿನಿಮಾದ ಮೂಲಕ ವಿಶ್ವದಲ್ಲಿ ಫೇಮಸ್ ಆದ ನಟ ಜೂ.ಎನ್‌ಟಿಆರ್. ರಾಜಮೌಳಿ ನಿರ್ದೇಶಿಸಿದ ಈ ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ರಾಮ್ ಚರಣ್ ಭಾರತದಲ್ಲಿ ಮೆಚ್ಚುಗೆ ಗಳಿಸಿದ್ರೆ, ಜೂ.ಎನ್‌ಟಿಆರ್ ವಿದೇಶದಲ್ಲಿ ಜನಪ್ರಿಯರಾಗಿದ್ದರು.

ಅಲ್ಲು ಅರ್ಜುನ್
ಟಾಲಿವುಡ್‌ನಲ್ಲಿ ಯಶಸ್ಸು ಗಳಿಸಿದ ಮೂರನೇ ನಟ ಅಲ್ಲು ಅರ್ಜುನ್. ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡಿದ್ದ 'ಪುಷ್ಪ' ಸಿನಿಮಾದ ಮೂಲಕ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದರು. ಆ ಸಿನಿಮಾದ ಮೂಲಕವೇ ಟಾಪ್ 9ನೇ ಸ್ಥಾನದಲ್ಲಿದ್ದಾರೆ.

ಯಶ್
2022ರಲ್ಲಿ ಯಶ್ ನಟಿಸಿದ 'ಕೆಜಿಎಫ್ 2' ಸಿನಿಮಾ ಭಾರತೀಯ ಬಾಕ್ಸಾಫೀಸ್ ಅನ್ನೇ ಕೊಳ್ಳೆ ಹೊಡೆದಿತ್ತು. ವಿಶ್ವದಾದ್ಯಂತ ಸುಮಾರು 1250 ಕೋಟಿ ರೂ. ಲೂಟಿ ಮಾಡಿತ್ತು. ಅಲ್ಲದೆ 19ನೇ ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದ್ದಾರೆ. ಹೀಗಾಗಿ ಇಡೀ ವರ್ಷ ಸುದ್ದಿಯಲ್ಲಿದ್ದ ಯಶ್ IMDb ಟಾಪ್ 10 ಸ್ಥಾನದಲ್ಲಿದ್ದಾರೆ.