Don't Miss!
- Sports
IND vs NZ: ಮುಂದಿನ 2 ಪಂದ್ಯಗಳು ಈತನಿಗೆ ನಿರ್ಣಾಯಕ; ದಿನೇಶ್ ಕಾರ್ತಿಕ್ ಎಚ್ಚರಿಕೆ
- News
Breaking; ನಂದಿ ಹಿಲ್ಸ್ನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ 112 ತಂಡ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅಮಿತಾಭ್ ಬಚ್ಚನ್' ಸಿನಿಮಾ ಎದುರು ಗೆದ್ದ ರಘುವೀರ್ 'ಪ್ರೇಮಾಂಜಲಿ'
''ಇವನು ಹೀರೋನಾ, ಇದು ಮುಖನಾ, ಯಾವನೋ ನೋಡ್ತಾನೆ ಈ ಚಿತ್ರನಾ'' ಎಂದು ಗಾಂಧಿನಗರದಲ್ಲಿ ನಟ ರಘುವೀರ್ ಬಗ್ಗೆ ಬಹಳ ಹೀಯಾಳಿಸಿ ಮಾತನಾಡಿದ್ದರು. ಸಿನಿಮಾನೇ ಬಿಡುಗಡೆಯಾಗಲ್ಲ ಎನ್ನುವ ಸ್ಥಿತಿಯಲ್ಲಿ ಹೇಗೋ ಸಾಹಸ ಮಾಡಿ ಚಿತ್ರಮಂದಿರ ಪಡೆದು ರಿಲೀಸ್ ಮಾಡಿದ ಚಿತ್ರ ಇದು.
Recommended Video
ಬೆಂಗಳೂರಿನ ಅಪರ್ಣ ಚಿತ್ರಮಂದಿರ ಮಾಲೀಕರು ''ಮುಂದಿನ ವಾರ ಅಮಿತಾಭ್ ಬಚ್ಚನ್ (khuda gawah) ಸಿನಿಮಾ ಬರುತ್ತೆ, ನಿಮಗೆ ಒಂದು ವಾರ ಸಮಯ ಅಷ್ಟೇ'' ಅಂತ ಮೊದಲೇ ನಿರ್ಬಂಧ ಹಾಕಿದ್ರು. ಚಿತ್ರಮಂದಿರ ಸಿಕ್ಕಿದ್ದೆ ಪುಣ್ಯ ಅಂತ ಬಿಡುಗಡೆ ಮಾಡಲಾಯಿತು. ಆಮೇಲೆ 'ಚೈತ್ರದ ಪ್ರೇಮಾಂಜಲಿ' ಸಿನಿಮಾ 25 ವಾರ ಪ್ರದರ್ಶನ ಕಂಡಿದ್ದು ಇತಿಹಾಸ.
ನಟ
ರಘುವೀರ್
ಪತ್ನಿ-ಮಗಳು
ಎಲ್ಲಿದ್ದಾರೆ?
ಏನ್
ಮಾಡ್ತಿದ್ದಾರೆ?
'ಇವನು ಹೀರೋನಾ?' ಎಂದ ಅವಮಾನಿಸಿದ್ದವರು ಅಚ್ಚರಿಯಿಂದ ನೋಡಿದ್ರು. ನಂತರ ಬಂದ 'ಶೃಂಗಾರ ಕಾವ್ಯ' ಚಿತ್ರ ಖರೀದಿಸಿಲು ಮುಗಿಬಿದ್ದರು. ಆದರೆ, 25 ವಾರಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡರೂ ಈ ಚಿತ್ರ ಲಾಭ ಮಾಡಿಲ್ಲ. ಈ ಸಿನಿಮಾ ರಿಲೀಸ್‌ಗಾಗಿ ರಘುವೀರ್ ಮತ್ತು ಚಿತ್ರತಂಡ ಪಟ್ಟ ಕಷ್ಟದ ಅನುಭವ ಇಲ್ಲಿದೆ. ಮುಂದೆ ಓದಿ...

ಅವಮಾನ ಎದುರಿಸಿ ಎದ್ದು ನಿಂತ ರಘುವೀರ್
'ಚೈತ್ರದ ಪ್ರೇಮಾಂಜಲಿ' ಸಿನಿಮಾದ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿತ್ತು. ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಬಂದಿದ್ದವು. ಈ ಚಿತ್ರಕ್ಕೂ ಮೊದಲು ನಟ ರಘುವೀರ್ 'ಅಜಯ್-ವಿಜಯ್' ಸಿನಿಮಾ ಮಾಡಿದ್ದರು. ಈ ಚಿತ್ರ ಹಿನ್ನಡೆ ಅನುಭವಿಸಿತ್ತು. ಇಂಡಸ್ಟ್ರಿಗೆ ಅಷ್ಟಾಗಿ ಪರಿಚಯವಿಲ್ಲದ ರಘುವೀರ್ ನೋಡಿ ಅಂದು ಗಾಂಧಿನಗರದ ಮಂದಿ ಬಾಯಿಗೆ ಬಂದ ಹಾಗೆ ಮಾತನಾಡಿದ್ದರು. ಇವನೊಬ್ಬ ಹೀರೋನಾ, ಇದೊಂದು ಮುಖನಾ, ಇದೊಂದು ಸಿನಿಮಾ, ಯಾವನೋ ನೋಡ್ತಾನೋ ಎಂದು ಕಾಲೆಳೆದಿದ್ದರು ಎಂದು ಸ್ವತಃ ರಘುವೀರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. (ಕೃಪೆ-ನಿರ್ದೇಶಕ ರಘುರಾಮ್ ಸಾರಥ್ಯದಲ್ಲಿ, ತರುಣ್ ಸುಧೀರ್ ನಿರೂಪಣೆಯಲ್ಲಿ ಮೂಡಿಬಂದಿದ್ದ ಸಂದರ್ಶನ)

ಆಡಿಯೋ ಬಿಡುಗಡೆಗೆ ಒಂದೂವರೆ ಲಕ್ಷ ಖರ್ಚು ಮಾಡಿದ್ದರು
'ಆ ಸಮಯದಲ್ಲಿ ಚಿತ್ರದ ಬಗ್ಗೆ ಯಾರಿಗೂ ನಂಬಿಕೆ ಇರಲಿಲ್ಲ. ನಮಗೆ ವಿಶ್ವಾಸ ಇತ್ತು. ಆದರೆ, 25 ವಾರ ಪ್ರದರ್ಶನ ಕಾಣುತ್ತೆ ಅಂತ ನಾವು ಅಂದುಕೊಂಡಿರಲಿಲ್ಲ. ಹಾಡುಗಳು ಸೂಪರ್ ಹಿಟ್ ಆಗಿತ್ತು. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಗಿನ ಸಮಯದಲ್ಲಿ 1.50 ಲಕ್ಷ ಖರ್ಚು ಮಾಡಿದ್ವಿ. ಅಂಬರೀಶ್-ಮಾಲಾಶ್ರೀ ಆಡಿಯೋ ಬಿಡುಗಡೆ ಮಾಡಿದ್ದರು' ಎಂದು ರಘುವೀರ್ ಖುದ್ದು ಹೇಳಿದ್ದರು.
ಯಾರಿಗೂ
ಗೊತ್ತಿಲ್ಲದ
ರಘುವೀರ್
ಜೀವನದ
ಕರಾಳ
ಅಧ್ಯಾಯ

ಚಿತ್ರವನ್ನು ಯಾರೂ ಖರೀದಿ ಮಾಡಲು ಮುಂದಾಗಿಲ್ಲ
''ಚಿತ್ರದ ಮೊದಲ ಕಾಪಿ ಮುಗಿಸುವಷ್ಟರಲ್ಲಿ ನಮ್ಮ ಅರ್ಧ ಜೀವ ಹೋಗಿಬಿಟ್ಟಿತ್ತು. ಸುಮಾರು 35 ಸಲ ಪ್ರೊಜೆಕ್ಷನ್ ಹಾಕಿದ್ವಿ. ಯಾರೂ ಸಿನಿಮಾ ತಗೊಂಡಿಲ್ಲ. ಆಮೇಲೆ ರಾಮು ಅವರು ಹಾಡುಗಳು ಕೇಳಿ ಇಷ್ಟಪಟ್ಟು ಸಿನಿಮಾ ತೋರಿಸಿ ಅಂತ ಬಂದರು. ಸಿನಿಮಾ ನೋಡಿದ್ಮೇಲೆ 'ನಾನು ಸಿನಿಮಾ ತಗೊಳ್ಳುವುದಕ್ಕೆ ಆಗಲ್ಲ, ವಿತರಣೆ ಮಾಡ್ತೀನಿ' ಅಂತ ಅಂದ್ರು. ನಮಗೆ ಅಷ್ಟೇ ಸಾಕಾಗಿತ್ತು'' ಎಂದು ಬಿಡುಗಡೆಗಾಗಿ ತಾವು ಎದುರಿಸಿದ ಕಷ್ಟದ ಅನುಭವ ಹಂಚಿಕೊಂಡರು.

ಅಪೇರಾ ಥಿಯೇಟರ್‌ನಲ್ಲಿ ಹಿಟ್
''ಮೈಸೂರಿನಲ್ಲಿ ಚೈತ್ರದ ಪ್ರೇಮಾಂಜಲಿ ಚಿತ್ರಕ್ಕೆ ಯಾರೂ ಥಿಯೇಟರ್ ಕೊಡಲಿಲ್ಲ. ಆಗ ಮಲಯಾಳಂ ಸಿನಿಮಾಗಳನ್ನು ಹೆಚ್ಚು ಪ್ರದರ್ಶನ ಮಾಡ್ತಿದ್ದ ಅಪೇರಾ ಚಿತ್ರಮಂದಿರ ನಮ್ಮ ಸಿನಿಮಾ ಹಾಕ್ತೀವಿ ಅಂತ ಮುಂದೆ ಬಂದರು. ಒಂದೇ ವಾರದಲ್ಲಿ ಸೂಪರ್ ಹಿಟ್ ಆಯ್ತು'' ಎಂದು ಸ್ಮರಿಸಿಕೊಂಡರು.

ಟೈಂ ಪಾಸ್‌ಗೆ ಸಿನಿಮಾ ನೋಡಿದ್ದ ವಿತರಕ
''ಶಿವಮೊಗ್ಗ ವಿತರಕರೊಬ್ಬರು ಸಿನಿಮಾ ನೋಡ್ಬೇಕು ಅಂತ ಬಂದ್ರು. ಪ್ರೊಜೆಕ್ಷನ್ ಹಾಕೋಕೆ ನಮ್ಮ ಹತ್ರ ದುಡ್ಡು ಇರಲಿಲ್ಲ. ಆದರೂ ವ್ಯವಸ್ಥೆ ಮಾಡಿದ್ವಿ. ಆ ವ್ಯಕ್ತಿ ಒಂದು ಗಂಟೆ ಸಿನಿಮಾ ನೋಡಿ ಬಸ್‌ಗೆ ಟೈಂ ಆಯ್ತು ಅಂತ ಎದ್ದು ಹೋಗ್ಬಿಟ್ಟರು. ಟೈಂ ಪಾಸ್‌ಗೆ ಬಂದು ಕೂತ್ಕೊಂಡಿದ್ದರು. ಶೃಂಗಾರ ಕಾವ್ಯ ಚಿತ್ರದ ಹಕ್ಕು ಕೇಳಿದ್ರು. ಅವರಿಗೆ ಕೊಟ್ಟಿಲ್ಲ'' ಘಟನೆ ನೆನೆದರು.

ದುಡ್ಡು ಬಂತು, ಲಾಭ ಮಾಡಿಲ್ಲ
'ಚೈತ್ರದ ಪ್ರೇಮಾಂಜಲಿ ಸಿನಿಮಾ ದೊಡ್ಡ ಸಕ್ಸಸ್ ಆಯ್ತು. ಸಿನಿಮಾ ಹಿಟ್ ಆಯ್ತು. ಆದರೆ ಎಷ್ಟು ಬಜೆಟ್ ಆಗಿತ್ತೋ ಅಷ್ಟೇ ಹಣ ವಾಪಸ್ ಬಂದಿದ್ದು. ಲಾಭ ಮಾಡಿಲ್ಲ'' ಎಂದು ನಟ ರಘುವೀರ್ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.