For Quick Alerts
  ALLOW NOTIFICATIONS  
  For Daily Alerts

  ಶಶಿಕುಮಾರ್ 'ಆಕ್ಸಿಡೆಂಟ್' ಹಿಂದಿನ ಕಾರಣ ಸುಳ್ಳು, ಸತ್ಯ ಏನೆಂದು ಬಹಿರಂಗಪಡಿಸಿದ ಪತ್ರಕರ್ತ

  |

  ಅದು 1998ರ ಸಮಯ. ಶಶಿಕುಮಾರ್ ದೊಡ್ಡ ಸ್ಟಾರ್ ನಟ ಆಗಿದ್ದರು. ಬರೀ ಏಳೆಂಟು ವರ್ಷದಲ್ಲಿ 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಯಶಸ್ಸಿನ ಉತ್ತುಂಗದಲ್ಲಿದ್ದರು. ಜುಲೈ 31ರ ರಾತ್ರಿ ಶೂಟಿಂಗ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಶಶಿಕುಮಾರ್ ಕಾರು ಅಪಘಾತವಾಯಿತು. ಈ ಅಪಘಾತ ಶಶಿಕುಮಾರ್ ಅವರ ಭವಿಷ್ಯವನ್ನೇ ಕಿತ್ತುಕೊಂಡಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

  ಮಗಳಿಗೆ ಐಸ್‌ಕ್ರೀಮ್ ತರಲು ಶಿವಾನಂದ ವೃತ್ತದ ಬಂದಾಗ ಎದುರುಗಡೆ ವೇಗವಾಗಿ ಬಂದ ವಾಹನವನ್ನು ತಪ್ಪಿಸುವ ಪ್ರಯತ್ನದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಅಪಘಾತ ಸಂಭವಿಸಿತು ಎಂದು ಸ್ವತಃ ಶಶಿಕುಮಾರ್ ಹೇಳಿಕೊಂಡಿದ್ದರು. ಇಲ್ಲಿಯವರೆಗೂ ಈ ಅಪಘಾತವನ್ನು ಹಾಗೆ ನಂಬಲಾಗಿದೆ. ಆದ್ರೆ, ಇದು ಸುಳ್ಳಿನ ಕಥೆ ಎಂದು ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಬಹಿರಂಗಪಡಿಸಿದ್ದಾರೆ. ಒಂದು ಸಮಯದಲ್ಲಿ ಶಶಿಕುಮಾರ್ ಅವರ ಸ್ನೇಹಿತರೂ ಆಗಿದ್ದ ಗಣೇಶ್ ಕಾಸರಗೋಡು ''ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನಲ್‌'' ಪ್ರಸಾರವಾಗಿರುವ ವಿಡಿಯೋದಲ್ಲಿ ಸತ್ಯದ ಪರಿಚಯ ಮಾಡಿದ್ದಾರೆ. ಮುಂದೆ ಓದಿ....

  (ಲೇಖಕರು- ಗಣೇಶ್ ಕಾಸರಗೋಡು, ಕೃಪೆ- ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನಲ್‌)

  ಕುಡಿದ ಅಮಲಿನಲ್ಲಿ ಅಪಘಾತ ಸಂಭವಿಸಿತ್ತು

  ಕುಡಿದ ಅಮಲಿನಲ್ಲಿ ಅಪಘಾತ ಸಂಭವಿಸಿತ್ತು

  ಶಶಿಕುಮಾರ್ ಅವರ ಹೇಳಿದಂತೆ ಮಗಳಿಗಾಗಿ ಐಸ್‌ಕ್ರೀಮ್‌ ತರಲು ಹೋದಾಗ ಈ ಅಪಘಾತ ಸಂಭವಿಸಿದ್ದಲ್ಲ. ಕುಡಿದ ಅಮಲಿನಲ್ಲಿ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು ಎಂದು ಗಣೇಶ್ ಕಾಸರಗೋಡು ಸತ್ಯದ ಪರಿಚಯ ಮಾಡಿದ್ದಾರೆ. ಅತಿಯಾಗಿ ಕುಡಿದು ಕಾರು ಚಲಾಯಿಸಿದ ಪರಿಣಾಮ ಈ ಅಪಘಾತ ಆಗಿದೆ ಎಂಬ ಆಘಾತಕಾರಿ ವಿಷಯ ಎರಡು ದಶಕಗಳ ಬಳಿಕ ಬಹಿರಂಗವಾಗಿದೆ.

  ಶಶಿಕುಮಾರ್ ಬದುಕಿನಲ್ಲೇ ಬಿರುಗಾಳಿ ಎಬ್ಬಿಸಿತ್ತು ಆ ದುರ್ಘಟನೆ!ಶಶಿಕುಮಾರ್ ಬದುಕಿನಲ್ಲೇ ಬಿರುಗಾಳಿ ಎಬ್ಬಿಸಿತ್ತು ಆ ದುರ್ಘಟನೆ!

  ಆಸ್ಪತ್ರೆಗೆ ಭೇಟಿ ನೀಡಿದ್ದ ಪತ್ರಕರ್ತ ಗೆಳೆಯ

  ಆಸ್ಪತ್ರೆಗೆ ಭೇಟಿ ನೀಡಿದ್ದ ಪತ್ರಕರ್ತ ಗೆಳೆಯ

  ಶಶಿಕುಮಾರ್ ಅಪಘಾತದ ವಿಚಾರ ತಿಳಿದು ಗಣೇಶ್ ಕಾಸರಗೋಡು ಆಸ್ಪತ್ರೆಗೆ ಭೇಟಿ ನೀಡಿದ್ದರು. ಶಶಿಕುಮಾರ್ ಇದ್ದ ಕೊಠಡಿ ಪೂರ್ತಿ ರಮ್ಮಿನ ವಾಸನೆ ಬರ್ತಿತ್ತಂತೆ. ಆ ದುರ್ವಾಸನೆಯನ್ನು ಸಹಿಸಿಕೊಂಡೇ ಏನಾಯಿತು ಗೆಳೆಯಾ ಎಂದು ಕೇಳಿದಾಗ ''ನಿನ್ನೆ ರಾತ್ರಿ ಸ್ವಲ್ಪ ಹೆಚ್ಚೇ ಕುಡಿದು ಬಿಟ್ಟಿದ್ದೆ. ಎಲ್ಲಿಂದ ಹೊರಟೆನೋ ಎಲ್ಲಿಗೆ ಬಂದು ತಲುಪಿದ್ದೇನೋ ಗೊತ್ತಿಲ್ಲ. ಗುಂಡು ಹಾಕಿ ಕಾರು ಹತ್ತಿದ್ದಷ್ಟೇ ಗೊತ್ತು. ಶಿವಾನಂದ ಸರ್ಕಲ್‌ ಹತ್ತಿರ ಬರುತ್ತಿರುವಂತೆಯೇ ಕಂಟ್ರೋಲ್ ತಪ್ಪಿತು. ಎಲ್ಲ ಎರಡೆರಡು ಕಾಣತೊಡಗಿತು. ಸ್ಟೇರಿಂಗ್ ತಿರುಗಿಸಿದ್ದಷ್ಟೇ ಗೊತ್ತು. ಕಾರು ಡಿವೈಡರ್ ಬಡಿದು ಆ ಕಡೆಯ ಪುಟ್ಪಾತ್ ಏರಿ ನಿಂತಿತ್ತು. ಅಷ್ಟರಲ್ಲಿ ಸ್ಟೇರಿಂಗ್ ಮುಖಕ್ಕೆ ಬಡಿದಿತ್ತು. ಆಮೇಲೆ ಏನಾಯಿತೋ ಗೊತ್ತಿಲ್ಲ. ಎಚ್ಚರವಾದಾಗ ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದೆ. ನೋಡು ಗೆಳೆಯಾ ಏನಾಗಿ ಹೋಯ್ತು'' ಎಂದು ಕಣ್ಣೀರಿಟ್ಟಿದ್ದರು ಎಂದು ತಿಳಿಸಿದ್ದಾರೆ.

  ಮಾರನೇ ದಿನ ಪತ್ರಿಕೆಯಲ್ಲಿ ಘಟನೆ ವರದಿಯಾಯಿತು

  ಮಾರನೇ ದಿನ ಪತ್ರಿಕೆಯಲ್ಲಿ ಘಟನೆ ವರದಿಯಾಯಿತು

  ಬಹಳ ಗಂಭೀರವಾಗಿ ಶಶಿಕುಮಾರ್ ಅವರ ಮುಖ ಗಾಯಗೊಂಡಿತ್ತು. ಆಪರೇಷನ್ ಮಾಡಿದರೂ ಮೊದಲಿನಂತೆ ಮುಖ ಕಾಣುವುದು ಅನುಮಾನ ಎನ್ನುವಷ್ಟು ಬದಲಾಗಿತ್ತು. ಇದನ್ನು ನೆನೆದು ಕಣ್ಣೀರಿಟ್ಟಿದ್ದರು ಶಶಿಕುಮಾರ್. ಆದ್ರೆ, ಮಾರನೇ ದಿನ ಪತ್ರಿಕೆಯಲ್ಲಿ ಘಟನೆಯ ವರದಿಯೇ ಬದಲಾಗಿತ್ತು. ''ಮಗಳಿಗೆ ಐಸ್‌ಕ್ರೀಮ್ ತರಲು ಶಿವಾನಂದ ವೃತ್ತದ ಬಂದಾಗ ಎದುರುಗಡೆ ವೇಗವಾಗಿ ಬಂದ ವಾಹನವನ್ನು ತಪ್ಪಿಸುವ ಪ್ರಯತ್ನದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಅಪಘಾತ ಸಂಭವಿಸಿತು'' ಎಂದು ಶಶಿಕುಮಾರ್ ಹೇಳಿಕೆಯ ಸಹಿತ ಸುದ್ದಿ ಪ್ರಕಟವಾಗಿತ್ತು.

  ಇದು ನಿಜವಾಗ್ಲೂ ಸತ್ಯನಾ ಅನ್ನೋ ಪ್ರಶ್ನೆ ಕಾಡ್ತಿದೆ | Filmibeat Kannada
  ಕುಡಿತದ ಚಟ ಶಶಿಕುಮಾರ್ ಜೀವನಕ್ಕೆ ಮುಳುವಾಯಿತೇ?

  ಕುಡಿತದ ಚಟ ಶಶಿಕುಮಾರ್ ಜೀವನಕ್ಕೆ ಮುಳುವಾಯಿತೇ?

  ಮೈಸೂರಿನಲ್ಲಿ ಒಂದು ದಿನ ಬೆಳಗ್ಗೆ 10 ಗಂಟೆಗೆ ಕಾರ್ಯ ಫೋನ್ ಇನ್ ಕಾರ್ಯಕ್ರಮದಲ್ಲಿ ಶಶಿಕುಮಾರ್ ಭಾಗವಹಿಸಬೇಕಿತ್ತು. ಹಿಂದಿನ ದಿನ ಮೈಸೂರಿನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಗುಂಡು ಪಾರ್ಟಿ ಮಾಡಿದ ನಟ 9 ಗಂಟೆಯಾದರೂ ಎದ್ದೇಳಲಿಲ್ಲ. ಅಳತೆ ಮೀರಿ ಕುಡಿದಿದ್ದ ನಟ ಪ್ರಜ್ಞೆ ತಪ್ಪಿದಂತೆ ನಿದ್ದೆ ಮಾಡುತ್ತಿದ್ದರು. ಐದಾರು ಬಕೆಟ್ ನೀರು ಮೇಲೆ ಸುರಿದರೂ ಏಳಲಿಲ್ಲ. ಕೊನೆಗೆ 10 ಗಂಟೆಯ ಕಾರ್ಯಕ್ರಮ 11ಕ್ಕೆ ಶುರುವಾಯಿತು'' ಎಂದು ಘಟನೆಯೊಂದನ್ನು ಗಣೇಶ್ ಕಾಸರಗೋಡು ವಿವರಿಸಿದ್ದಾರೆ.

  (ಶಶಿಕುಮಾರ್ ಕುರಿತು ಗಣೇಶ್ ಕಾಸರಗೋಡು ಹೇಳಿರುವ ವಿಷಯವನ್ನು ಪೂರ್ತಿ ತಿಳಿಯಲು ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನಲ್‌ ನೋಡಿ)

  English summary
  Senior Journalist Ganesh kasaragodu Reveals Facts About Shashi kumar's car Accident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X