For Quick Alerts
  ALLOW NOTIFICATIONS  
  For Daily Alerts

  ಕನ್ನಡದ 8 ಸ್ಟಾರ್ ನಟರ ಮಕ್ಕಳು, ಅವರ ಹೆಸರುಗಳು

  |

  ಸಿನಿಮಾ ನೋಡುವ ಅಭಿಮಾನಿಗಳಿಗೆ ಸ್ಟಾರ್ ಗಳ ಕುಟುಂಬದ ಸದಸ್ಯರ ಪರಿಚಯ ಕಡಿಮೆ ಇರುತ್ತದೆ. ಅದರಲ್ಲಿಯೂ ಎಷ್ಟೋ ಸ್ಟಾರ್ ಗಳ ಮಕ್ಕಳನ್ನು ಅವರ ಅಭಿಮಾನಿಗಳು ನೋಡಿಯೇ ಇರುವುದಿಲ್ಲ.

  ಈ ಮಕ್ಕಳ ದಿನಾಚರಣೆಯ ವಿಶೇಷವಾಗಿ ಕನ್ನಡದ ಸ್ಟಾರ್ ನಟರ ಮಕ್ಕಳನ್ನು ನಾನು ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ. ನಟ ಪುನೀತ್ ರಾಜ್ ಕುಮಾರ್, ಉಪೇಂದ್ರ, ಸುದೀಪ್, ದರ್ಶನ್, ಪ್ರೇಮ್, ಶ್ರೀಮುರಳಿ, ಗಣೇಶ್, ಶ್ರೀ ಮುರಳಿ ಸೇರಿದಂತೆ ಸ್ಯಾಂಡಲ್ ವುಡ್ ಅನೇಕ ಸ್ಟಾರ್ ಗಳ ಮಕ್ಕಳ ಹೆಸರು ಹಾಗೂ ಅವರ ವಿವರ ಇಲ್ಲಿದೆ.

  ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡದ ಸ್ಟಾರ್ ನಟರ ಮಕ್ಕಳು.!ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡದ ಸ್ಟಾರ್ ನಟರ ಮಕ್ಕಳು.!

  ಅಂದಹಾಗೆ, ಮಕ್ಕಳ ದಿನಾಚರಣೆಯ ವಿಶೇಷವಾಗಿ ಕನ್ನಡದ ಸ್ಟಾರ್ ನಟನ ಮಕ್ಕಳ ಫೋಟೋಗಳು ಮುಂದಿವೆ ನೋಡಿ...

  ವಂದಿತಾ ಹಾಗೂ ದ್ರಿತಿ

  ವಂದಿತಾ ಹಾಗೂ ದ್ರಿತಿ

  ಪುನೀತ್ ರಾಜ್ ಕುಮಾರ್ ಅಂದರೆ ಮಕ್ಕಳಿಗೆ ತುಂಬ ಇಷ್ಟ. ಇನ್ನು ಮಗುವಿನ ಮನಸ್ಸಿನ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ವಂದಿತಾ ಹಾಗೂ ದ್ರಿತಿ ಅಪ್ಪು ಮತ್ತು ಅಶ್ವಿನಿ ದಂಪತಿಯ ಪ್ರೀತಿಯ ಪುತ್ರಿಯರು. ಪುನೀತ್ ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಮಕ್ಕಳಿಗೆ ಕೊಡುವ ಪ್ರೀತಿಯನ್ನು ಕಡಿಮೆ ಮಾಡುವುದಿಲ್ಲ.

  ಆಯುಷ್ ಮತ್ತು ಐಶ್ವರ್ಯ

  ಆಯುಷ್ ಮತ್ತು ಐಶ್ವರ್ಯ

  ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರತಿಗೆ ಒಬ್ಬ ಮಗಳು, ಕೀರ್ತಿಗೆ ಒಬ್ಬ ಮಗ ಎನ್ನುವ ಹಾಗೆ ಒಬ್ಬ ಮಗಳು ಹಾಗೂ ಒಬ್ಬ ಮಗ ಉಪ್ಪಿಗೆ ಮನೆ ಮನ ತುಂಬಿದ್ದಾರೆ. ಉಪ್ಪಿ ಮಗಳು ಐಶ್ವರ್ಯ ತಮ್ಮ ತಾಯಿಯ ಜೊತೆಗೆ 'ಹೌರ ಬ್ರಿಡ್ಜ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ನಿಮ್ಮ ಅಭಿಮಾನಕ್ಕೊಂದು ಸಣ್ಣ ಸವಾಲು: ಈ ಸ್ಟಾರ್ ನಟರನ್ನ ಗುರುತಿಸಿ ನಿಮ್ಮ ಅಭಿಮಾನಕ್ಕೊಂದು ಸಣ್ಣ ಸವಾಲು: ಈ ಸ್ಟಾರ್ ನಟರನ್ನ ಗುರುತಿಸಿ

  ಕಿಚ್ಚನ ಏಕೈಕ ಪುತ್ರಿ ಸಾನ್ವಿ

  ಕಿಚ್ಚನ ಏಕೈಕ ಪುತ್ರಿ ಸಾನ್ವಿ

  ನಟ ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿಯ ಏಕೈಕ ಪುತ್ರಿ ಸಾನ್ವಿ. ಸಾನ್ವಿ ಅಪ್ಪನ ಪ್ರೀತಿಯ ಮಗಳು. ಸುದೀಪ್ ಕೂಡ ಸಿನಿಮಾ, ಕ್ರಿಕೆಟ್, ರಿಯಾಲಿಟಿ ಶೋ, ಜಾಹಿರಾತು ಸೇರಿದಂತೆ ಎಷ್ಟೇ ಕೆಲಸ ಇದ್ದರೂ ಮಗಳ ಜೊತೆಗೆ ಆದಷ್ಟು ಸಮಯ ಕಳೆಯುತ್ತಾರೆ. ಸಾನ್ವಿ ಹುಟ್ಟುಹಬ್ಬವನ್ನು ಕಿಚ್ಚ ಮಿಸ್ ಮಾಡದೆ ಆಚರಣೆ ಮಾಡುತ್ತಾರೆ.

  ಜೂನಿಯರ್ ಡಿ ಬಾಸ್

  ಜೂನಿಯರ್ ಡಿ ಬಾಸ್

  ಜೂನಿಯರ್ ಡಿ ಬಾಸ್ ವಿನೀಶ್ ಇತ್ತೀಚಿಗಷ್ಟೆ ತಮ್ಮ ಹುಟ್ಟಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಗೆ ವಿನೀಶ್ ಒಬ್ಬನೇ ಮಗ. ಈ ಹಿಂದೆ 'ಐರಾವತ' ಸಿನಿಮಾದಲ್ಲಿ ಅಪ್ಪನ ಜೊತೆಗೆ ನಟನೆ ಮಾಡಿದ್ದ ವಿನೀಶ್ ಈಗ ಯಜಮಾನ ಸಿನಿಮಾದ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

  ಚಾರಿತ್ಯ, ವಿಹಾನ್

  ಚಾರಿತ್ಯ, ವಿಹಾನ್

  ಗಣೇಶ್ ಅವರ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಫಾಲೋ ಮಾಡುತ್ತಿರುವವರಿಗೆ ಅವರ ಮಕ್ಕಳ ಪರಿಚಯ ಇರುತ್ತದೆ. ಆಗಾಗ ತಮ್ಮ ಮಕ್ಕಳ ತಮಾಷೆಯ ವಿಡಿಯೋಗಳನ್ನು ಗಣೇಶ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಚಾರಿತ್ಯ ಹಾಗೂ ವಿಹಾನ್ ಗಣೇಶ್ ಅವರ ಪ್ರೀತಿಯ ಮಕ್ಕಳಾಗಿದ್ದಾರೆ. ಚಾರಿತ್ಯ 'ಚಮಕ್' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು.

  ಅಗಸ್ತ್ಯ ಹಾಗೂ ಅಥೀವಾ

  ಅಗಸ್ತ್ಯ ಹಾಗೂ ಅಥೀವಾ

  ದೊಡ್ಡವರನ್ನು ಕೂಡ ಸಣ್ಣ ಮಕ್ಕಳಂತೆ ಪ್ರೀತಿಯಿಂದ ಮಾತನಾಡಿಸುವ ನಟ ಶ್ರೀಮುರಳಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅಗಸ್ತ್ಯ ಹಾಗೂ ಅಥೀವಾ ಶ್ರೀ ಮುರಳಿ ಹಾಗೂ ವಿದ್ಯಾ ಅವರ ಮಕ್ಕಳು. 'ಉಗ್ರಂ' ಸಿನಿಮಾದ ತಮ್ಮ ಪಾತ್ರದ ಹೆಸರನ್ನೇ ಮುರಳಿ ತಮ್ಮ ಮಗನಿಗೆ ಇಟ್ಟಿರುವುದು ವಿಶೇಷ.

  ಅಪ್ಪನ ಹಾದಿಯಲ್ಲಿ ಏಕಾಂತ್

  ಅಪ್ಪನ ಹಾದಿಯಲ್ಲಿ ಏಕಾಂತ್

  ಲವ್ಲಿ ಸ್ಟಾರ್ ಪ್ರೇಮ್ ಅವರಿಗೆ ಒಬ್ಬ ಹೆಣ್ಣು ಹಾಗೂ ಒಬ್ಬ ಗಂಡು ಮಕ್ಕಳಿದ್ದಾರೆ. ಅವರ ಮಗ ಏಕಾಂತ್ ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 'ಮಾಮು ಟೀ ಅಂಗಡಿ', 'ಸಾಹೇಬ' 'ರಾಮರಾಜ್ಯ-ಗಾಂಧಿ ತಾತನ ಕನಸು' ಎಂಬ ಚಿತ್ರಗಳಲ್ಲಿ ಏಕಾಂತ್ ನಟಿಸುತ್ತಿದ್ದಾರೆ.

  'ಲವ್ಲಿಸ್ಟಾರ್' ಪ್ರೇಮ್ ಗೆ ಮಗ ಕೊಟ್ಟ ದೊಡ್ಡ ಸರ್ಪ್ರೈಸ್.! 'ಲವ್ಲಿಸ್ಟಾರ್' ಪ್ರೇಮ್ ಗೆ ಮಗ ಕೊಟ್ಟ ದೊಡ್ಡ ಸರ್ಪ್ರೈಸ್.!

  ಕಿಟ್ಟಿ ಪುತ್ರಿ ಪರಿಣಿತಾ

  ಕಿಟ್ಟಿ ಪುತ್ರಿ ಪರಿಣಿತಾ

  ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಮತ್ತು ಭಾವನಾ ದಂಪತಿಯ ಮುದ್ದು ಮಗಳು ಪರಿಣಿತಾ. ಈಗಾಗಲೇ ಪರಿಣಿತಾ ಚಂದನವನದಲ್ಲಿ ಮಿಂಚಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಮಾಸ್ ಲೀಡರ್' ಚಿತ್ರದಲ್ಲಿ ಶಿವಣ್ಣನ ಮಗಳ ಪಾತ್ರದಲ್ಲಿ ಈ ಪುಟ್ಟ ಹುಡುಗಿ ಮೋಡಿ ಮಾಡಿದ್ದರು.

  English summary
  Check out pictures kannada star actors childrens photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X