Just In
Don't Miss!
- News
ವಿಮಾನಯಾನ ಸಿಬ್ಬಂದಿಗೆ ಆದ್ಯತೆ ಮೇರೆಗೆ ಕೊರೊನಾ ಲಸಿಕೆ ನೀಡಲು ಮನವಿ
- Sports
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Finance
ಈ 4 ಕಂಪೆನಿಗಳ ಮಾರುಕಟ್ಟೆ ಮೌಲ್ಯ ರು. 1,15,758.53 ಕೋಟಿ ಹೆಚ್ಚಳ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020ರಲ್ಲಿ ಹೆಚ್ಚು ಸದ್ದು ಮಾಡಿದ ಬಾಲಿವುಡ್‌ನ ಪ್ರಮುಖ ವಿವಾದಗಳು
ಬಾಲಿವುಡ್ ಇಂಡಸ್ಟ್ರಿಯಲ್ಲಿ ಈ ವರ್ಷ ಹಲವು ಅಚ್ಚರಿ ಮತ್ತು ಆಘಾತಕಾರಿ ಘಟನೆಗಳು ವರದಿಯಾಗಿದೆ. ಕೆಲವು ಅನಿರೀಕ್ಷಿತ ಸಾವುಗಳು, ಕೊರೊನಾ ವೈರಸ್ ಪ್ರಕರಣಗಳು, ಟ್ವಿಟ್ಟರ್‌ನಲ್ಲಿ ನಡೆದ ಪರ-ವಿರೋಧ ಚರ್ಚೆಗಳು ಸಾಕಷ್ಟು ಹೆಡ್‌ಲೈನ್ ಆಗಿದೆ.
ಕಳೆದ ವರ್ಷಗಳಿಗೆ ಹೋಲಿಸಿಕೊಂಡರೆ ಈ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿಗಳು ವರದಿಯಾಗಿದೆ. ಹಾಗಾದ್ರೆ, 2020ರಲ್ಲಿ ಹೆಚ್ಚು ಗಮನ ಸೆಳೆದ ಪ್ರಮುಖ ವಿವಾದಗಳ ಸುತ್ತ ಒಂದು ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ...

ದೀಪಿಕಾ ಪಡುಕೋಣೆ ಜೆಎನ್‌ಯು ಭೇಟಿ
ದೀಪಿಕಾ ಪಡುಕೋಣೆ ನಟನೆಯ ಚಪಾಕ್ ಚಿತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸಿನಿಮಾ ರಿಲೀಸ್ ವೇಳೆ ಜೆಎನ್‌ಯು ವಿದ್ಯಾರ್ಥಿಗಳು ಪೊಲೀಸರ ಕ್ರಮ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ದೀಪಿಕಾ ಪಡುಕೋಣೆ ಭಾಗವಹಿಸಿ ಬೆಂಬಲ ನೀಡಿದ್ದರು. ಇದಾದ ಬಳಿಕ ದೀಪಿಕಾ ಅವರನ್ನು ಅನೇಕರು ವಿರೋಧಿಸಿದರು. ಚಪಾಕ್ ಸಿನಿಮಾ ನಿಷೇಧ ಮಾಡಲು ಕರೆ ನೀಡಿದರು.
ಈ ವರ್ಷ ಅತಿ ಹೆಚ್ಚು ಟ್ರೋಲ್ ಆದ ಸಿನಿಮಾಗಳು ಯಾವುವು ಗೊತ್ತೆ!?

ಕನಿಕಾ ಕಪೂರ್‌ಗೆ ಕೊವಿಡ್
ಲಂಡನ್‌ನಿಂದ ಭಾರತಕ್ಕೆ ಬಂದಿದ್ದ ಗಾಯಕಿ ಕನಿಕಾ ಕಪೂರ್ ಕ್ವಾರಂಟೈನ್‌ಗೆ ಒಳಗಾಗದೇ, ಸೆಲೆಬ್ರಿಟಿಗಳು-ರಾಜಕಾರಣಿಗಳು ಭಾಗವಹಿಸಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಪಾರ್ಟಿ ಮುಗಿಸಿದ ನಂತರದ ದಿನದಲ್ಲಿ ಕನಿಕಾಗೆ ಕೊರೊನಾ ಪಾಸಿಟಿವ್ ಬಂತು. ಆ ಪಾರ್ಟಿಯಲ್ಲಿದ್ದ ಘಟಾನುಘಟಿಗಳಿಗೆ ಇದು ಆತಂಕ ಸೃಷ್ಟಿಸಿತ್ತು. ಕೊರೊನಾ ಲಾಕ್‌ಡೌನ್ ಕಾನೂನು ಉಲ್ಲಂಘನೆ ಮಾಡಿದರು ಎಂಬ ಕಾರಣಕ್ಕೆ ಕನಿಕಾ ಕಪೂರ್ ವಿರುದ್ಧ ಕೇಸ್ ಸಹ ದಾಖಲಾಯಿತು.

ಸುಶಾಂತ್ ಸಿಂಗ್ ಸಾವು
ನಟ ಸುಶಾಂತ್ ಸಿಂಗ್ ಸಾವು ಚಿತ್ರರಂಗಕ್ಕೆ ಭಾರಿ ಆಘಾತ ನೀಡಿತು. ಈ ಸಾವಿನ ಸುತ್ತ ಹಲವು ರೀತಿಯ ಅನುಮಾನಗಳು ಹುಟ್ಟಿಕೊಂಡವು. ಪ್ರಭಾವಿ ವ್ಯಕ್ತಿಗಳೇ ಈ ಸಾವಿಗೆ ಕಾರಣ ಎಂದು ದೂಷಿಸಲಾಯಿತು. ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕೆಂದು ಅಭಿಮಾನಿಗಳು ಅಭಿಯಾನ ಮಾಡಿದರು. ಮುಂಬೈ ಮತ್ತು ಪಾಟ್ನಾ ಪೊಲೀಸರು ಕೇಸ್ ದಾಖಲಿಸಿಕೊಂಡರು. ಬಳಿಕ ಸಿಬಿಐ ತನಿಖೆ ಸಹ ವಹಿಸಿಕೊಂಡಿದೆ.
2020: ನೆಟ್ಫ್ಲಿಕ್ಸ್ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು

ರಿಯಾ ಚಕ್ರವರ್ತಿ ಅರೆಸ್ಟ್
ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಹಲವು ರೀತಿಯ ಟೀಕೆ ವ್ಯಕ್ತವಾಯಿತು. ರಿಯಾ ಮತ್ತು ಇತರೆ ಕೆಲವು ಪ್ರಭಾವಿ ವ್ಯಕ್ತಿಗಳಿಂದಲೇ ಸುಶಾಂತ್ ಸಾವಿಗೆ ಶರಣಾದರು ಎಂದು ಆರೋಪ ಮಾಡಿದರು. ಡ್ರಗ್ಸ್ ಆಯಾಮದಲ್ಲಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೌವಿಕ್ ಬಂಧವಾಯಿತು. ಸಿಬಿಐ, ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದರು. ನಂತರ ರಿಯಾಗೆ ಮುಂಬೈ ಹೈ ಕೋರ್ಟ್ ಜಾಮೀನು ನೀಡಿತು.

ಕಂಗನಾ ರಣಾವತ್ ಟ್ವೀಟ್ ಸಮರ
ಸುಶಾಂತ್ ಸಾವಿನ ಬಳಿಕ ಇಡೀ ಬಾಲಿವುಡ್ ವಿರುದ್ಧ ಕಂಗನಾ ರಣಾವತ್ ಸಮರ ಸಾರಿದರು. ಇಂಡಸ್ಟ್ರಿಯಲ್ಲಿ ನೆಪೋಟಿಸಂ ಅಟ್ಟಹಾಸ ಮಾಡ್ತಿದೆ ಎಂದು ಪ್ರಭಾವಿಗಳ ವಿರುದ್ಧ ಗುಡುಗಿದರು. ಶಿವಸೇನೆ ಸರ್ಕಾರದ ವಿರುದ್ಧ ಹರಿಹಾಯ್ದರು. ಇದರ ಪರಿಣಾಮ ಕಂಗನಾ ಕಚೇರಿ ನಿರ್ಮಾಣ ಅಕ್ರಮ ಎಂದು ಪಾಲಿಕೆ ಸಿಬ್ಬಂದಿ ಕಟ್ಟಡ ನೆಲಸಮ ಮಾಡಲು ಮುಂದಾದರು. ಕೇಂದ್ರ ಸರ್ಕಾರದ ವಿರುದ್ಧ ರೈತರು ಮಾಡಿದ ಪ್ರತಿಭಟನೆಯ ಬಗ್ಗೆ ವ್ಯಂಗ್ಯ ಮಾಡಿದರು. ಲಾಕ್‌ಡೌನ್ ಅವಧಿಯಲ್ಲಿ ಕಂಗನಾ ಮಾಡಿದ ಟ್ವೀಟ್ ಗಳನ್ನು ಅಧಾರಿಸಿ ಮೂರಕ್ಕೂ ಹೆಚ್ಚು ಕೇಸ್ ದಾಖಲಾಗಿದೆ.
2020; ಕೊರೊನಾ ವರ್ಷದಲ್ಲೂ ಗಮನ ಸೆಳೆದ ಕನ್ನಡದ ಸಿನಿಮಾಗಳಿವು

ಸ್ಟಾರ್ ಸೆಲೆಬ್ರಿಟಿಗಳ ತನಿಖೆ
ಡ್ರಗ್ಸ್ ಪ್ರಕರಣದಲ್ಲಿ ಹಲವು ಬಾಲಿವುಡ್ ತಾರೆಯರು ವಿಚಾರಣೆಗೆ ಒಳಪಟ್ಟರು. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್, ಅರ್ಜುನ್ ರಾಂಪಾಲ್ ಸೇರಿದಂತೆ ಹಲವರು ಎನ್‌ಸಿಬಿ ವಿಚಾರಣೆ ಎದುರಿಸಿದರು. ಡ್ರಗ್ಸ್ ಪೆಡ್ಲರ್‌ಗಳು ಅರೆಸ್ಟ್ ಆದರು.

ಸಿನಿಮಾಗಳು ಟ್ರೋಲ್
ಜಾಹ್ನವಿ ಕಪೂರ್ ನಟನೆಯ ಗುಂಜಾನ್ ಸಕ್ಸೇನಾ ಸಿನಿಮಾದಲ್ಲಿ ಏರ್‌ಪೋರ್ಸ್ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪ ಬಂತು. ನಂತರ ಹೈ ಕೋರ್ಟ್‌ನಲ್ಲಿ ಕೇಸ್ ದಾಖಲಾಗಿತ್ತು. ಆದ್ರೆ, ಹೈ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮಿ ಸಿನಿಮಾಗೆ ಮೊದಲು ಲಕ್ಷ್ಮಿ ಬಾಂಬ್ ಎಂದು ಟೈಟಲ್ ಇಡಲಾಗಿತ್ತು. ನಂತರ ಶೀರ್ಷಿಕೆಗೆ ವಿರೋಧ ಬಂದ ಮೇಲೆ ಬರಿ ಲಕ್ಷ್ಮಿ ಮಾಡಲಾಯಿತು. ನೆಪೋಟಿಸಂ ಎಂಬ ಕಾರಣಕ್ಕೆ ಮಹೇಶ್ ಭಟ್ ನಿರ್ದೇಶನದ ಸಡಕ್ 2 ಟ್ರೈಲರ್‌ಗೆ ಭಾರಿ ವಿರೋಧ ಆಯಿತು. ಅತಿ ಹೆಚ್ಚು ಡಿಸ್‌ಲೈಕ್ ಸಹ ಬಂತು.