For Quick Alerts
  ALLOW NOTIFICATIONS  
  For Daily Alerts

  ಮೆಗಾ ಹೀರೋ ಮಾಡಬೇಕಿದ್ದ 'ಜಯಂ' ನಿತಿನ್ ಪಾಲಾಗಿದ್ದು ಹೇಗೆ?

  |

  ತೆಲುಗು ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಚಿತ್ರ ಜಯಂ. 2002ರಲ್ಲಿ ತೆರೆಕಂಡ ಈ ಚಿತ್ರ ಸಂಪೂರ್ಣವಾಗಿ ಹೊಸಬರಿಂದ ಕೂಡಿತ್ತು. ನಾಯಕ ನಿತಿನ್‌ಗೆ ಮೊದಲ ಸಿನಿಮಾ. ನಟಿ ಸದಾಗೂ ಚೊಚ್ಚಲ ಚಿತ್ರ. ಗೋಪಿಚಂದ್ ಒಂದು ಸಿನಿಮಾದಲ್ಲಿ ಮಾತ್ರ ಅಭಿನಯಿಸಿದ್ದರು. ಛಾಯಾಗ್ರಾಹಕರಾಗಿ ಜೊತೆಗೆ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ತೇಜ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು.

  ಹೀಗೆ, ಹೊಸ ಕಲಾವಿದರಿಂದಲೇ ತಯಾರಾದ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯಿತು. ಕಲೆಕ್ಷನ್ ವಿಚಾರದಲ್ಲಿ ಟ್ರೆಂಡ್ ಸೃಷ್ಟಿಸಿತು. ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡಿತು. ಅಂದ್ಹಾಗೆ, ಜಯಂ ಚಿತ್ರದಲ್ಲಿ ನಿತಿನ್ ನಟಿಸುವುದಕ್ಕೂ ಮೊದಲು ಮೆಗಾ ಕುಟುಂಬದ ಹುಡುಗನನ್ನು ಹೀರೋ ಮಾಡಲು ಯೋಜಿಸಲಾಗಿತ್ತು. ಆದರೆ, ಆ ಸಿನಿಮಾ ನಿತಿನ್ ಪಾಲಾಯ್ತು. ಯಾರದು ಮೆಗಾ ಹೀರೋ? ಮುಂದೆ ಓದಿ...

  ಸಂಭಾವನೆ ಕೊಟ್ಟಿಲ್ಲ ಅಂತ ತಾವೇ ನಿರ್ಮಿಸಿದರು

  ಸಂಭಾವನೆ ಕೊಟ್ಟಿಲ್ಲ ಅಂತ ತಾವೇ ನಿರ್ಮಿಸಿದರು

  ಚಿತ್ರಂ, ನುವ್ವು ನೇನು, ಫ್ಯಾಮಿಲಿ ಸರ್ಕಸ್, ಹೇ ದಿಲ್ ಅಂತಹ ಹಿಟ್ ಚಿತ್ರಗಳನ್ನ ತೇಜ್ ನಿರ್ದೇಶನ ಮಾಡಿದ್ದರು. ಆದ್ರೆ, ನಿರ್ಮಾಪಕರು ಸರಿಯಾದ ಸಂಭಾವನೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಜಯಂ ಚಿತ್ರವನ್ನು ಖುದ್ದೇ ತೇಜ್ ನಿರ್ಮಿಸಿದರು.

  ಮದ್ರಾಸ್‌ ರೈಲ್ವೆ ಸ್ಟೇಷನ್‌ನಲ್ಲಿ ರಜನಿಕಾಂತ್‌ಗೆ ಅಡ್ಡ ಹಾಕಿದ್ದು ಯಾರು? ಏಕೆ?ಮದ್ರಾಸ್‌ ರೈಲ್ವೆ ಸ್ಟೇಷನ್‌ನಲ್ಲಿ ರಜನಿಕಾಂತ್‌ಗೆ ಅಡ್ಡ ಹಾಕಿದ್ದು ಯಾರು? ಏಕೆ?

  ಅಲ್ಲು ಅರ್ಜುನ್ ಮುಂಚೂಣಿಯಲ್ಲಿದ್ದರು

  ಅಲ್ಲು ಅರ್ಜುನ್ ಮುಂಚೂಣಿಯಲ್ಲಿದ್ದರು

  ಕೇವಲ ತನ್ನ ಬ್ರ್ಯಾಂಡ್‌ನಿಂದಲೇ ಸಿನಿಮಾ ಮಾಡುತ್ತಿದ್ದ ತೇಜ್ ಹೊಸಬರನ್ನು ಪರಿಚಯಿಸುವ ಉದ್ದೇಶ ಹೊಂದಿದ್ದರು. ನಿತಿನ್‌ಗೂ ಮೊದಲು ಬಹಳಷ್ಟು ಜನರನ್ನು ಆಡಿಷನ್ ಮಾಡಿದರು. ಅದರಲ್ಲಿ ಅಲ್ಲು ಅರ್ಜುನ್ ಸಹ ಒಬ್ಬರು. 'ಜಯಂ' ಸಿನಿಮಾ ಮಾಡುವ ವೇಳೆ ಅಲ್ಲು ಅರ್ಜುನ್ ನಾಯಕನಾಗಿರಲಿಲ್ಲ. ಖ್ಯಾತ ನಿರ್ಮಾಪಕನ ಪುತ್ರ ಅಲ್ಲು ಅರ್ಜುನ್‌ರನ್ನು ಪರಿಚಯ ಮಾಡಬೇಕು ಎಂಬ ಕಾರಣಕ್ಕಾಗಿ ತೇಜ್ ಆಲೋಚಿಸಿದರು. ಆದರೆ, ಅಲ್ಲು ಅರ್ಜುನ್ ವಿಚಾರದಲ್ಲಿ ತೇಜ್ ಸಮಾಧಾನವಾಗಿಲ್ಲ.

  ನಿತಿನ್ ಆಯ್ಕೆಯಾಗಿದ್ದು ಹೇಗೆ?

  ನಿತಿನ್ ಆಯ್ಕೆಯಾಗಿದ್ದು ಹೇಗೆ?

  ತೇಜ್ ನಿರ್ದೇಶನದ 'ನುವ್ವು ನೇನು' ಚಿತ್ರದ ಬಿಡುಗಡೆ ವೇಳೆ ವಿತರಕ ಸುಧಾಕರ್ ರೆಡ್ಡಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಈ ನಡುವೆ ಎರಡ್ಮೂರು ಕಾರ್ಯಕ್ರಮದಲ್ಲಿ ಸುಧಾಕರ್ ರೆಡ್ಡಿ ಪುತ್ರ ನಿತಿನ್ ನೋಡಿದ್ದ ತೇಜ್, ನಟನೆ ಕುರಿತು ಆಸಕ್ತಿ ವಿಚಾರಿಸಿದ್ದರು. ಫೋಟೋ ತರಿಸಿಕೊಂಡು, ಸ್ಕ್ರೀನ್ ಪರೀಕ್ಷೆ ಸಹ ಮಾಡಿದರು. ನಿತಿನ್ ನಟನೆ ಬಗ್ಗೆ ಇಂಪ್ರೆಸ್ ಆದ ತೇಜ್ ಜಯಂ ಚಿತ್ರಕ್ಕೆ ಹೀರೋ ಆಗಿ ಪರಿಚಯಿಸಿದರು.

  3 ವರ್ಷ ನಟಿಸಿಲ್ಲ, ಅಣ್ಣಾವ್ರ ಮನೆ ಮುಂದೆ ನಡೆದಿತ್ತು ಅಭಿಮಾನದ ಪ್ರತಿಭಟನೆ3 ವರ್ಷ ನಟಿಸಿಲ್ಲ, ಅಣ್ಣಾವ್ರ ಮನೆ ಮುಂದೆ ನಡೆದಿತ್ತು ಅಭಿಮಾನದ ಪ್ರತಿಭಟನೆ

  ಗೋಪಿಚಂದ್ ಮೊದಲ ಆಯ್ಕೆಯಲ್ಲ

  ಗೋಪಿಚಂದ್ ಮೊದಲ ಆಯ್ಕೆಯಲ್ಲ

  ಜಯಂ ಚಿತ್ರದ ವಿಲನ್ ಪಾತ್ರದಲ್ಲಿ ಅಬ್ಬರಿಸಿದ ಗೋಪಿಚಂದ್‌ಗೂ ಮೊದಲು ಬಾಲಿವುಡ್ ನಟನನ್ನು ಕರೆತರುವ ಚಿಂತನೆ ನಡೆದಿತ್ತು. ಆದರೆ ನಿರ್ದೇಶಕ ತೇಜ್‌ಗೆ ಹಿಂದಿ ನಟ ಇಷ್ಟ ಆಗ್ಲಿಲ್ಲ. ಗೋಪಿಚಂದ್ ತಂದೆ ಟಿ-ಕೃಷ್ಣ ಬಳಿ ತೇಜ್ ಸಹಾಯಕ ನಿರ್ದೇಶಕರಾಗಿದ್ದರು. ಆಗಿನಿಂದಲೂ ಗೋಪಿಚಂದ್ ಕುರಿತು ತಿಳಿದಿದ್ದ ತೇಜ್, ಜಯಂ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು.

  1.65 ಕೋಟಿ ಬಜೆಟ್

  1.65 ಕೋಟಿ ಬಜೆಟ್

  ನಿರ್ದೇಶನದ ಜೊತೆ ನಿರ್ಮಾಣ ಮಾಡಿದ್ದ ತೇಜ್ ಈ ಚಿತ್ರಕ್ಕಾಗಿ ಖರ್ಚು ಮಾಡಿದ್ದು 1.65 ಕೋಟಿ. ಸುಮಾರು 65 ದಿನ ಚಿತ್ರೀಕರಣ ಮಾಡಿದರು. ಹೇಗೋ ಕಷ್ಟಪಟ್ಟು ಸಿನಿಮಾ ಮುಗಿಸಿದ ಚಿತ್ರತಂಡಕ್ಕೆ ಆರ್‌ಪಿ ಪಟ್ನಾಯಕ್ ಸಂಗೀತ ಜೋಶ್ ನೀಡಿತು. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸುವಂತೆ ಮಾಡಿತು. ಒಟ್ಟು 30 ಜನ ಕಲಾವಿದರೊಂದಿಗೆ ಸಿನಿಮಾ ತಯಾರಾಯಿತು.

  ಜಯಂ ಗಳಿಸಿದ್ದೆಷ್ಟು?

  ಜಯಂ ಗಳಿಸಿದ್ದೆಷ್ಟು?

  2002 ಜೂನ್ 14 ರಂದು ತೆರೆಕಂಡ ಜಯಂ ಸಿನಿಮಾ ದೊಡ್ಡ ಹಿಟ್ ಆಯಿತು. ಮೊದಲು 40 ಪ್ರಿಂಟ್ ಆಗಿತ್ತು, ಆಮೇಲೆ ಅದರ ಸಂಖ್ಯೆ 150ಕ್ಕೆ ಏರಿತು. ಸುಮಾರು 70 ಸೆಂಟರ್‌ನಲ್ಲಿ ಜಯಂ ಸಿನಿಮಾ ಶತದಿನ ಆಚರಿಸಿದೆ. ಕಲೆಕ್ಷನ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ ಜಯಂ ಒಟ್ಟಾರೆ 32 ಕೋಟಿ ಬಿಸಿನೆಸ್ ಮಾಡಿತು ಎಂದು ವರದಿ ಹೇಳಿದೆ.

  English summary
  Telugu actor Nithin was not first choice for Jayam film. before nithin, one of the mega hero was to do this project said report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X