twitter
    For Quick Alerts
    ALLOW NOTIFICATIONS  
    For Daily Alerts

    'ಕಾಂತಾರ' ಸಿನಿಮಾದ ಕತೆ ಹುಟ್ಟಿದ್ದು ಆ ಬರ್ತ್‌ ಡೇ ಪಾರ್ಟಿಯಲ್ಲಿ!

    |

    'ಕಾಂತಾರ' ಸಿನಿಮಾ ಐತಿಹಾಸಿಕ ಹಿಟ್ ದಾಖಲಿಸಿದೆ. ಐವತ್ತು ದಿನ ಪೂರೈಸುವ ಹೊಸ್ತಿಲಲ್ಲಿರುವ 'ಕಾಂತಾರ' ಸಿನಿಮಾ ಈಗಲೂ ರಾಜ್ಯ ಮಾತ್ರವೆ ಅಲ್ಲದೆ ಹೊರರಾಜ್ಯಗಳಲ್ಲಿಯೂ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ.

    ಸಿನಿಮಾ ನೋಡಿದವರೆಲ್ಲ ಅದ್ಭುತ ಎನ್ನುತ್ತಿದ್ದಾರೆ. ಸಿನಿಮಾದ ಕತೆ, ಚಿತ್ರಕತೆಯನ್ನು ಅತೀವವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ಸ್ವತಃ ರಿಷಬ್ ಶೆಟ್ಟಿಯೇ ಹೇಳಿರುವಂತೆ, ಅವರ ಈವರೆಗಿನ ಬೆಸ್ಟ್ ಕತೆ, ಚಿತ್ರಕತೆ 'ಕಾಂತಾರ' ಅಂತೆ.

    ಮುಹೂರ್ತ ಮುಗಿಸಿದ್ದ 'ಬೆಲ್ ಬಾಟಮ್ 2' ನಿಂತುಹೋಯ್ತಾ? ಬೆಳೆದ ರಿಷಬ್ ಶೆಟ್ಟಿ ಬಗ್ಗೆ ಜಯತೀರ್ಥ ಹೇಳಿದ್ದೇನು?ಮುಹೂರ್ತ ಮುಗಿಸಿದ್ದ 'ಬೆಲ್ ಬಾಟಮ್ 2' ನಿಂತುಹೋಯ್ತಾ? ಬೆಳೆದ ರಿಷಬ್ ಶೆಟ್ಟಿ ಬಗ್ಗೆ ಜಯತೀರ್ಥ ಹೇಳಿದ್ದೇನು?

    ಪ್ರತಿಯೊಂದು ಕತೆ ಹುಟ್ಟಿನ ಹಿಂದೆ ಒಂದು ಕತೆ ಇರುತ್ತದೆ, ಕತೆಯ ಹುಟ್ಟಿಗೆ ಕಾರಣ, ಸಮಯ, ಸ್ಪೂರ್ತಿ ಇದ್ದೇ ಇರುತ್ತದೆ. ಹಾಗೆಯೇ 'ಕಾಂತಾರ' ಸಿನಿಮಾದ ಕತೆ ಹುಟ್ಟಿಗೂ ಕಾರಣ ಇದೆ, ಸ್ಪೂರ್ತಿ ಇದೆ. ಈ ಸಿನಿಮಾದ ಕತೆಯ ಹುಟ್ಟಿನ ಹಿಂದೂ ಒಂದು ಕತೆ ಇದೆ. ಆ ಕತೆಯನ್ನು ರಿಷಬ್ ಶೆಟ್ಟಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

    ಮೊದಲ ಲಾಕ್‌ಡೌನ್‌ನಲ್ಲಿ 'ಹೀರೋ' ಸಿನಿಮಾ ಮುಗಿಸಿ ಸೆಕೆಂಡ್ ಲಾಕ್‌ಡೌನ್ ಸಮಯದಲ್ಲಿ ಒಬ್ಬರೇ ಇದ್ದರಂತೆ ರಿಷಬ್ ಶೆಟ್ಟಿ. ಆಗ ಗೆಳೆಯರ ಒತ್ತಾಯದ ಮೇರೆಗೆ ಗೆಳೆಯನ ಹುಟ್ಟುಹಬ್ಬಕ್ಕೆ ಹೋಗಿದ್ದರಂತೆ. ಅಲ್ಲಿಗೆ ಅವರ ಸಹೋದರ ಸಂಬಂಧಿಯೊಬ್ಬ ಬಂದಿದ್ದರಂತೆ. ಕ್ಯಾಟರಿಂಗ್ ಇಟ್ಟುಕೊಂಡಿದ್ದ ಆತ ಒಳ್ಳೆಯ ಅಡುಗೆ ಭಟ್ಟನೂ ಆಗಿದ್ದನಂತೆ. ಪಾರ್ಟಿಯಲ್ಲಿ ಗೆಳೆಯರೆಲ್ಲ ಮಾತನಾಡುತ್ತಿರುವಾಗ ಈ ಲಾಕ್‌ಡೌನ್ ಹೀಗೆಯೇ ಸೆಕೆಂಡ್, ಥರ್ಡ್‌, ಫೋರ್ತ್‌ ಎಂದುಕೊಂಡು ಮುಂದೆ ಹೋಗುತ್ತಲೇ ಇರುತ್ತದೆ. ಖಾಲಿ ಕೂರುವ ಬದಲಿಗೆ ಕೃಷಿ ಮಾಡೋಣ. ಹೊಸ ತಳಿಯ ಅಕ್ಕಿ ಬೆಳೆಯೋಣ ಎಂದು ಐಡಿಯಾ ಕೊಟ್ಟರಂತೆ.

    ಹೊಸ ತಳಿ ಅಕ್ಕಿ ಬೆಳೆಯಲು ಮುಂದಾಗಿದ್ದ ರಿಷಬ್!

    ಹೊಸ ತಳಿ ಅಕ್ಕಿ ಬೆಳೆಯಲು ಮುಂದಾಗಿದ್ದ ರಿಷಬ್!

    ಆಗ ರಿಷಬ್‌ರ ಅಡುಗೆ ಭಟ್ಟ ಗೆಳೆಯ, ಅಯ್ಯೋ ಈ ಹೊಸ ತಳಿ ಅಕ್ಕಿ ಬೆಳೆಯಲು ಹೋಗಿ ನನ್ನ ಅಪ್ಪ ಜೈಲು ಪಾಲಾಗುವಂತಾಯಿತು ಎಂದನಂತೆ. ಏನದು ಕತೆ ಎಂದು ಕೆದಕಿ ಕೇಳಿದಾಗ. ರಿಷಬ್‌ರ ಸಹೋದರ ಸಂಬಂಧಿಯ ಅಪ್ಪ ಹಾಗೂ ಅವರ ಗೆಳೆಯ ಸೇರಿ ಹೊಸ ತಳಿಯ ಭತ್ತ ನಾಟಿ ಮಾಡಿದ್ದರಂತೆ. ಆದರೆ ಅದಕ್ಕೆ ಕಾಡು ಹಂದಿ ಕಾಟ ಶುರುವಾಯ್ತಂತೆ. ಆ ಹಂದಿಯನ್ನು ಹೊಡೆಯಲು ಆತನ ಅಪ್ಪ ಹಾಗೂ ಆತನ ಗೆಳೆಯ ಸಜ್ಜಾದರಂತೆ. ಹಳೆಯ ಲೈಸೆನ್ಸ್‌ ಇದ್ದ ಬಂದೂಕಿಗೆ ಮದ್ದು ತುಂಬಿ ಕಾದರಂತೆ ಆದರೆ ಬರಲಿಲ್ಲ. ಆದರೆ ಇವರು ಅಕ್ರಮವಾಗಿ ಹಂದಿ ಹೊಡೆಯುತ್ತಿದ್ದಾರೆಂದು ಇವರಿಗಾಗದ ಒಬ್ಬ ಅರಣ್ಯ ಇಲಾಖೆಗೆ ದೂರು ನೀಡಿಬಿಟ್ಟನಂತೆ.

    ಅರ್ಧ ಗಂಟೆಯಲ್ಲಿ ಸಿನಿಮಾದ ಮೊದಲಾರ್ಧ ರೆಡಿ!

    ಅರ್ಧ ಗಂಟೆಯಲ್ಲಿ ಸಿನಿಮಾದ ಮೊದಲಾರ್ಧ ರೆಡಿ!

    ಆಗ ಪೊಲೀಸರು ಬಂದು ರಿಷಬ್‌ರ ಸಂಬಂಧಿಯ ಅಪ್ಪನನ್ನು, ಆತನ ಗೆಳೆಯನನ್ನು ವಶಕ್ಕೆ ಪಡೆದು ಆ ಬಂದೂಕನ್ನು ಅನ್‌ಲೋಡ್ ಮಾಡಲು ಆಕಾಶಕ್ಕೆ ಶೂಟ್ ಮಾಡಿದಾಗ, ಸಿನಿಮಾದಲ್ಲಿನಂತೆಯೇ ಬಂದೂಕಿನ ಚರೆ ಉಲ್ಟಾ ಹೊಡೆದು ಫಾರೆಸ್ಟ್‌ ಇನ್‌ಪೆಕ್ಟರ್‌ನ ಕಣ್ಣಿಗೆ ಡ್ಯಾಮೇಜ್ ಆಯಿತಂತೆ. ಅದೇ ಕೋಪಕ್ಕೆ ಆತ ಇವರಿಬ್ಬರ ಮೇಲೆ ನಾನಾ ಕೇಸು ದಾಖಲಿಸಿ ತಿಂಗಳಾನುಗಟ್ಟಲೆ ಜೈಲಿನಲ್ಲಿರುವಂತೆ ಮಾಡಿಬಿಟ್ಟಿದ್ದ. ಈ ಕತೆ ಕೇಳಿದ ರಿಷಬ್‌ಗೆ ಗ್ರಾಮ್ಯ ಹಿನ್ನೆಲೆಯಲ್ಲಿ ಇಂಥಹದ್ದೊಂದು ಕತೆ ಮಾಡಬಹುದು ಎನಿಸಿತ್ತು. ಮತ್ತೊಮ್ಮೆ ಅದೇ ಸೋದರ ಸಂಬಂಧಿ ಮನೆಗೆ ಬಂದಾಗ ಆತನೊಡನೆ ಮಾತನಾಡುತ್ತಾ ಕತೆಯನ್ನು ಡೆವೆಲಪ್ ಮಾಡಿ, ಫಾರೆಸ್ಟ್‌ ಇನ್‌ಸ್ಪೆಕ್ಟರ್‌ ಹಾಗೂ ಒರಟು ಹಳ್ಳಿ ಹುಡುಗನನ್ನು ಎದುರು-ಬದುರು ಮಾಡಿ ಕತೆ ಕಟ್ಟಿ ಕೇವಲ ಅರ್ಧ ಗಂಟೆಯಲ್ಲಿ ಸಿನಿಮಾದ ಮೊದಲಾರ್ಧದ ಔಟ್‌ಲೈನ್ ರೆಡಿ ಆಗಿಬಿಟ್ಟಿತಂತೆ!

    ಅರ್ಧಕ್ಕೆ ಬಂದು ನಿಂತಿದ್ದ ಕತೆ!

    ಅರ್ಧಕ್ಕೆ ಬಂದು ನಿಂತಿದ್ದ ಕತೆ!

    ಕೂಡಲೇ ತಡ ಮಾಡದೆ, ರಿಷಬ್ ಶೆಟ್ಟಿ, ತಮ್ಮ ಕ್ಯಾಮೆರಾಮನ್, ಸಂಗೀತ ನಿರ್ದೇಶಕ ಎಲ್ಲರಿಗೂ ಕರೆ ಮಾಡಿ ತಮಗೆ ಹೊಳೆದಿರುವ ಕತೆಯ ಬಗ್ಗೆ ಮಾತನಾಡಿದರಂತೆ. ಮಾತನಾಡಿದಂತೆ ಕತೆ ಇನ್ನಷ್ಟು ಜೀವ ತುಂಬಿಕೊಳ್ಳಲು ಪ್ರಾರಂಭವಾಯ್ತಂತೆ. ಆದರೆ ದ್ವೀತೀಯಾರ್ಧಕ್ಕೆ ಬಂದು ಕತೆ ಮುಂದೆ ಹೋಗಲಿಲ್ಲವಂತೆ. ರಿಷಬ್ ಸಹ ಹೆಚ್ಚು ಆ ಬಗ್ಗೆ ಯೋಚಿಸದೆ ಕತೆಯನ್ನು ಅಲ್ಲಿಗೆ ಬಿಟ್ಟಿದ್ದರು. ಆ ಬಳಿಕ ಮತ್ತೊಂದು ಸಿನಿಮಾದ ಕೆಲಸ ಮಾಡುವಾಗ, ನಾನು ನನ್ನದೇ ಗ್ರಾಮದ, ನನ್ನ ಭಾಗದ ಜನರ ಕತೆಯನ್ನು ಹೇಳೋಣ ಎನ್ನಿಸಿ. ಅಲ್ಲಿನ ಕೃಷಿ, ದೈವಾರಾಧನೆ ಬಗ್ಗೆ ಕತೆ ಹೇಳೋಣ ಎನಿಸಿತಂತೆ. ಅದೇ ನಿಟ್ಟಿನಲ್ಲಿ ಮೊದಲು ಹೊಳೆದಿದ್ದ ಕತೆ ಹಾಗೂ ಅದರೊಟ್ಟಿಗೆ ತನ್ನವರ ಕತೆಯನ್ನು ಬೆಸೆದು 'ಕಾಂತಾರ' ಸಿನಿಮಾದ ಕತೆ ರೆಡಿ ಮಾಡಿದರಂತೆ ರಿಷಬ್.

    ಪ್ರಕೃತಿ ಹಾಗೂ ಮನುಷ್ಯನ ಕತೆ

    ಪ್ರಕೃತಿ ಹಾಗೂ ಮನುಷ್ಯನ ಕತೆ

    ಒಟ್ಟಾರೆಯಾಗಿ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧ ಹಾಗೂ ವೈರುಧ್ಯದ ಬಗ್ಗೆ ಹೇಳುವ ಕತೆ ಮಾಡಲು ನಿಶ್ಚಯಿಸಿದೆ. ಸಿನಿಮಾದಲ್ಲಿ ಕಿಶೋರ್ ಪಾತ್ರ ನಿಸರ್ಗವನ್ನು, ಸರ್ಕಾರವನ್ನು ಪ್ರತಿನಿಧಿಸಿದರೆ ನಾನು ನಟಿಸಿರುವ ಶಿವನ ಪಾತ್ರ ಹಳ್ಳಿಯನ್ನು ಅಲ್ಲಿನ ಜನಗಳನ್ನು ಪ್ರತಿನಿಧಿಸುತ್ತದೆ. ಅಲ್ಲಿ ನಾವು ಪೂಜಿಸುವ ದೈವಗಳು ಪ್ರಕೃತಿ ಹಾಗೂ ಜನರು ಜೊತೆ-ಜೊತೆಯಾಗಿ ಸಾಗಬೇಕು ಎಂಬ ಪಾಠ ಮಾಡುತ್ತವೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ ರಿಷಬ್ ಶೆಟ್ಟಿ.

    English summary
    Rishab Shetty talks about how his super hit movie Kantara's story developed. He explains how the story came to him.
    Tuesday, November 15, 2022, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X