For Quick Alerts
  ALLOW NOTIFICATIONS  
  For Daily Alerts

  ಸುನೀಲ್ ಕುಮಾರ್ ದೇಸಾಯಿ ಜೊತೆ ಮತ್ತೆ ಕೈ ಜೋಡಿಸುತ್ತಾರಾ ಸುದೀಪ್.?

  |

  ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕರ ಪೈಕಿ ಸುನೀಲ್ ಕುಮಾರ್ ದೇಸಾಯಿ ಕೂಡ ಒಬ್ಬರು. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಸುನೀಲ್ ಕುಮಾರ್ ದೇಸಾಯಿ ಎತ್ತಿದ ಕೈ.

  'ತರ್ಕ', 'ಉತ್ಕರ್ಷ', 'ನಿಷ್ಕರ್ಷ', 'ಬೆಳದಿಂಗಳ ಬಾಲೆ', 'ನಮ್ಮೂರ ಮಂದಾರ ಹೂವೆ', 'ಪ್ರತ್ಯರ್ಥ', 'ಸ್ಪರ್ಶ', 'ಪರ್ವ', 'ಮರ್ಮ' ಚಿತ್ರಗಳ ಮೂಲಕ ಕನ್ನಡ ಸಿನಿ ಪ್ರಿಯರ ಮನಸ್ಸಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ.

  ಇದೇ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ 'ಹೀರೋ' ಆಗಿ ಪರಿಚಿತರಾದವರು ಕಿಚ್ಚ ಸುದೀಪ್. ಅಂದು ಸೂಪರ್ ಹಿಟ್ ಸಿನಿಮಾಗಳ ಸರದಾರ ಸುನೀಲ್ ಕುಮಾರ್ ದೇಸಾಯಿ, ನವ ನಟ ಕಿಚ್ಚ ಸುದೀಪ್ ಗೆ 'ಪ್ರತ್ಯರ್ಥ' ಮತ್ತು 'ಸ್ಪರ್ಶ' ಚಿತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿದ್ದರು.

  ಇಂದು ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಯಶಸ್ವಿ ನಟನಾಗಿ ಬೆಳೆದು ನಿಂತಿದ್ದಾರೆ. ಬರೀ ಸ್ಯಾಂಡಲ್ ವುಡ್ ಮಾತ್ರ ಅಲ್ಲ, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಜನಪ್ರಿಯತೆ ಗಳಿಸಿದ್ದಾರೆ. ಇಂತಿಪ್ಪ ಸುದೀಪ್ ಮತ್ತೆ ಸುನೀಲ್ ಕುಮಾರ್ ದೇಸಾಯಿ ಜೊತೆಗೆ ಕೈ ಜೋಡಿಸುತ್ತಾರಾ.?

  ಹೊಸ ಚಿತ್ರದ ಪ್ಲಾನಿಂಗ್ ನಲ್ಲಿ ಸುನೀಲ್ ಕುಮಾರ್ ದೇಸಾಯಿ

  ಹೊಸ ಚಿತ್ರದ ಪ್ಲಾನಿಂಗ್ ನಲ್ಲಿ ಸುನೀಲ್ ಕುಮಾರ್ ದೇಸಾಯಿ

  2007 ರಲ್ಲಿ ತೆರೆಕಂಡ 'ಕ್ಷಣ ಕ್ಷಣ' ಚಿತ್ರದ ಬಳಿಕ ಲಾಂಗ್ ಗ್ಯಾಪ್ ತೆಗೆದುಕೊಂಡ ಸುನೀಲ್ ಕುಮಾರ್ ದೇಸಾಯಿ 2016 ರಲ್ಲಿ '..ರೇ' ಚಿತ್ರದ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟರು. ಕಳೆದ ವರ್ಷ 'ಉದ್ಘರ್ಷ' ಚಿತ್ರವನ್ನು ಸುನೀಲ್ ಕುಮಾರ್ ದೇಸಾಯಿ ತೆರೆಗೆ ತಂದಿದ್ದರು. ಇದೀಗ ಮತ್ತೊಂದು ಚಿತ್ರವನ್ನು ನಿರ್ದೇಶಿಸುವ ಪ್ಲಾನ್ ಮಾಡುತ್ತಿದ್ದಾರೆ ಸುನೀಲ್ ಕುಮಾರ್ ದೇಸಾಯಿ.

  ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿ ಸುದೀಪ್: ಹೃದಯ ತುಂಬಿ ಮಾತಾಡಿದ ನಿರ್ದೇಶಕರುಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿ ಸುದೀಪ್: ಹೃದಯ ತುಂಬಿ ಮಾತಾಡಿದ ನಿರ್ದೇಶಕರು

  ಸುದೀಪ್ ಜೊತೆಗೆ ಸುನೀಲ್ ಕುಮಾರ್ ದೇಸಾಯಿ ಸಿನಿಮಾ.?

  ಸುದೀಪ್ ಜೊತೆಗೆ ಸುನೀಲ್ ಕುಮಾರ್ ದೇಸಾಯಿ ಸಿನಿಮಾ.?

  'ಪ್ರತ್ಯರ್ಥ' ಮತ್ತು 'ಸ್ಪರ್ಶ' ಚಿತ್ರಗಳ ಬಳಿಕ ಸುನೀಲ್ ಕುಮಾರ್ ದೇಸಾಯಿ ಮತ್ತು ಸುದೀಪ್ ಒಟ್ಟಿಗೆ ಸಿನಿಮಾ ಮಾಡಿಲ್ಲ. ಈ ಇಬ್ಬರು ಪ್ರತಿಭಾವಂತರು ಸಿನಿಮಾಗಾಗಿ ಒಂದಾಗಿ 20 ವರ್ಷಗಳು ಕಳೆದಿವೆ. ಸುದೀಪ್ ಜೊತೆಗೆ ಒಂದು ಸಿನಿಮಾ ಮಾಡುವ ಪ್ಲಾನ್ ಸುನೀಲ್ ಕುಮಾರ್ ದೇಸಾಯಿ ಅವರಿಗೂ ಇದೆ. ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟರೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷಿಸಬಹುದು.

  ಸುದೀಪ್ ಮುಚ್ಚಿಟ್ಟಿದ್ದ 'ಆ' ವಿಷಯವನ್ನು ಬಿಚ್ಚಿಟ್ಟ ಸುನೀಲ್ ಕುಮಾರ್ ದೇಸಾಯಿ.!ಸುದೀಪ್ ಮುಚ್ಚಿಟ್ಟಿದ್ದ 'ಆ' ವಿಷಯವನ್ನು ಬಿಚ್ಚಿಟ್ಟ ಸುನೀಲ್ ಕುಮಾರ್ ದೇಸಾಯಿ.!

  'ಫಿಲ್ಮಿಬೀಟ್ ಕನ್ನಡ'ದ ಜೊತೆ ಸುನೀಲ್ ಕುಮಾರ್ ದೇಸಾಯಿ ಮಾತು

  'ಫಿಲ್ಮಿಬೀಟ್ ಕನ್ನಡ'ದ ಜೊತೆ ಸುನೀಲ್ ಕುಮಾರ್ ದೇಸಾಯಿ ಮಾತು

  ''ಸುದೀಪ್ ಜೊತೆ ಸಿನಿಮಾ ಮಾಡಿ ಎಂದು ಸಾವಿರಾರು ಜನ ನನ್ನನ್ನು ಕೇಳಿದ್ದಾರೆ. ನನ್ನ ಮನಸ್ಸಿನಲ್ಲೂ ಒಂದು ಕಥೆ ಇದೆ. ಈಗಾಗಲೇ ಒಂದೆರಡು ಬಾರಿ ನಾನು ಅವರಿಗೆ ಕಥೆ ಹೇಳಿದ್ದೇನೆ. ಪೂರ್ಣಪ್ರಮಾಣದಲ್ಲಿ ಆ ಕಥೆ ನನ್ನ ಮನಸ್ಸನ್ನು ಆವರಿಸಿಕೊಂಡಿದೆ. ಎರಡು ಮೂರು ವರ್ಷದಿಂದ ಪ್ಲಾನ್ ನಡೆಯುತ್ತಿದೆ. ಈಗ ಅದಕ್ಕೆ ಕಾಲ ಕೂಡಿ ಬರುತ್ತದೆ ಅಂತ ಅಂದುಕೊಂಡಿದ್ದೇನೆ. ಈಗ ಮಾಡಬೇಕಾಗಿದೆ. ಮತ್ತೆ ಸಾಧಿಸಬೇಕಾಗಿದೆ'' ಎಂದು ಸುದೀಪ್ ಜೊತೆಗೆ ಸಿನಿಮಾ ಮಾಡುವ ಕುರಿತು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡುವಾಗ ಸುನೀಲ್ ಕುಮಾರ್ ದೇಸಾಯಿ ಹೇಳಿದರು.

  ಹಠ-ಛಲ ಇದೆ.!

  ಹಠ-ಛಲ ಇದೆ.!

  ಸುನೀಲ್ ಕುಮಾರ್ ದೇಸಾಯಿ ಅವರ ಮಾತುಗಳನ್ನು ಕೇಳಿದರೆ, ಮತ್ತೊಂದು ಸೂಪರ್ ಡ್ಯೂಪರ್ ಹಿಟ್ ಕೊಟ್ಟು ಸ್ಯಾಂಡಲ್ ವುಡ್ ನಲ್ಲಿ ಯಶಸ್ಸು ಸಾಧಿಸುವ ಹಠ, ಛಲ ಅವರಲ್ಲಿ ಇರುವುದು ಸ್ಪಷ್ಟ. ಸದ್ಯಕ್ಕೆ ಸುದೀಪ್ ಕೈಯಲ್ಲಿ 'ಕೋಟಿಗೊಬ್ಬ-3', 'ಫ್ಯಾಂಟಮ್', 'ಬಿಲ್ಲ ರಂಗ ಬಾಷಾ' ಚಿತ್ರಗಳಿವೆ. ಇವೆಲ್ಲದರ ಮಧ್ಯೆ ಸುನೀಲ್ ಕುಮಾರ್ ದೇಸಾಯಿ ಜೊತೆಗೆ ಸುದೀಪ್ ಕೈಜೋಡಿಸುವ ಮನಸ್ಸು ಮಾಡ್ತಾರಾ.? ಕಾದು ನೋಡೋಣ.

  English summary
  Kannada Director Sunil Kumar Desai is planning to work with Kiccha Sudeep again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X