For Quick Alerts
  ALLOW NOTIFICATIONS  
  For Daily Alerts

  ಚಂದ್ರನಲ್ಲಿ ಜಾಗ ಖರೀದಿಸಿದ್ದ ಭಾರತದ ಏಕೈಕ ನಟ: ಸುಶಾಂತ್ ಸಿಂಗ್ ಆಸ್ತಿ ಎಷ್ಟು?

  By Avani Malnad
  |

  ಸುಶಾಂತ್ ಸಿಂಗ್ ರಜಪೂತ್ ಒಬ್ಬ ಕನಸುಗಾರ. ಚಿತ್ರರಂಗಕ್ಕೆ ಬಾರದೆ ಓದನ್ನೇ ಮುಂದುವರಿಸಿದ್ದರೆ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಬಲ್ಲವರಾಗಿದ್ದ ಮೇಧಾವಿ. ಖಗೋಳಶಾಸ್ತ್ರ, ಭೌತಶಾಸ್ತ್ರದ ಬಗ್ಗೆ ಸುಶಾಂತ್‌ಗೆ ಅಪಾರ ಜ್ಞಾನವಿತ್ತು. ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿ ಮನರಂಜನಾ ಜಗತ್ತಿನ ವೈಭೋಗಗಳನ್ನು ಕಂಡ ಬಳಿಕವೂ ಅವರು ತಮ್ಮ ಆಸಕ್ತಿಯ ಕ್ಷೇತ್ರವನ್ನು ಮರೆತಿರಲಿಲ್ಲ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದ ಪೋಸ್ಟ್‌ಗಳು ಇದಕ್ಕೆ ಸಾಕ್ಷಿಯಾಗಿದ್ದವು.

  Sushanth Singh Rajput's dad collapsed after hearing his son's news | Filmibeat Kannada

  ತಮ್ಮ ಬದುಕಿನಲ್ಲಿ ಮಾಡಬೇಕಾಗಿದ್ದ ಮತ್ತು ಸಾಧಿಸಬೇಕಾಗಿದ್ದ ಸುಮಾರು 50 ಅಂಶಗಳ ಪಟ್ಟಿಯನ್ನು ಅವರು ಸಿದ್ಧಪಡಿಸಿಕೊಂಡಿದ್ದರು. ಬದುಕು ಮತ್ತು ಕನಸಿನ ಸಂಗತಿಗಳ ಬಗ್ಗೆ ವಿಪರೀತ ವ್ಯಾಮೋಹವುಳ್ಳ ಅವರು ಹೀಗೆ ಮರೆಯಾಗಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆರಂಭದಲ್ಲಿ ಆರ್ಥಿಕ ಪರಿಸ್ಥಿತಿ ಕಾರಣವಿರಬಹುದೇ ಎಂಬ ಅನುಮಾನ ಮೂಡಿತ್ತು. ಆದರೆ ಸುಶಾಂತ್ ಹಣಕಾಸಿನ ತೊಂದರೆಯನ್ನು ಅನುಭವಿಸಿದವರಲ್ಲ. ಕಷ್ಟ ಎಂದವರಿಗೆ ಉದಾರವಾಗಿ ಸಹಾಯ ಮಾಡುವ ಕೊಡುಗೈ ದಾನಿಯಾಗಿದ್ದರು.

  ಸುಶಾಂತ್ ಸಿಂಗ್ ರಜಪೂತ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

  ಅವರ ಬಳಿ ಇದ್ದ ಸಂಪತ್ತು ಕೂಡ ಅವರಿಗೆ ಮಾನಸಿಕ ನೆಮ್ಮದಿ, ಖುಷಿಯನ್ನು ಕೊಡುವಲ್ಲಿ ವಿಫಲವಾಗಿದ್ದವು. ಅವರ ಆಸ್ತಿ ಪಾಸ್ತಿ ಏನೇನಿತ್ತು? ಇಲ್ಲಿದೆ ವಿವರ.

  59 ಕೋಟಿ ರೂ ಆಸ್ತಿ

  59 ಕೋಟಿ ರೂ ಆಸ್ತಿ

  ವರದಿಗಳ ಪ್ರಕಾರ, ಸುಶಾಂತ್ ಸಿಂಗ್ ರಜಪೂತ್ ಅವರ ಬಳಿಯಿದ್ದ ಒಟ್ಟು ಸಂಪತ್ತಿನ ಮೌಲ್ಯ 59 ಕೋಟಿ ರೂ. ಚಿತ್ರವೊಂದಕ್ಕೆ ಅವರು 5-7 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಸಾಮಾನ್ಯವಾಗಿ ಉತ್ಪನ್ನಗಳ ಜಾಹೀರಾತುಗಳಿಗೆ 1 ಕೋಟಿ ರೂ. ಪಡೆಯುತ್ತಿದ್ದರು.

  ಐಷಾರಾಮಿ ವಾಹನಗಳು

  ಐಷಾರಾಮಿ ವಾಹನಗಳು

  ಅವರ ಬಳಿ ಐಷಾರಾಮಿ ವಾಹನಗಳಿದ್ದವು. ಅವುಗಳಲ್ಲಿ ಸುಮಾರು 25 ಲಕ್ಷ ರೂ ಮೌಲ್ಯದ ಬಿಎಂಡಬ್ಲ್ಯೂ ಕೆ 1300 ಆರ್ ಮೋಟಾರ್ ಸೈಕಲ್, 1.5 ಕೋಟಿ ರೂ ಬೆಲೆ ಬಾಳುವ ಮಸರಟಿ ಕ್ವಾಟ್ರೊಪೋರ್ಟ್ ಹಾಗೂ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿ ಸೇರಿದ್ದವು. ರಿಯಲ್ ಎಸ್ಟೇಟ್ ಆಸ್ತಿಗಳ ಮೇಲೆ ಸುಶಾಂತ್ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

  ಸುಶಾಂತ್ ಆತ್ಮಹತ್ಯೆ ಬೆನ್ನಲ್ಲೇ ದೀಪಿಕಾ, ಆಲಿಯಾ, ಕರಣ್ ಜೋಹರ್ ವಿರುದ್ಧ ಆಕ್ರೋಶ: ಕಾರಣವೇನು?

  4.5 ಲಕ್ಷ ರೂ ಬಾಡಿಗೆ ಮನೆ

  4.5 ಲಕ್ಷ ರೂ ಬಾಡಿಗೆ ಮನೆ

  ಮುಂಬೈನಲ್ಲಿ ಸುಮಾರು 20 ಕೋಟಿ ರೂ ವೆಚ್ಚದ ಪೆಂಟ್ ಹೌಸ್ ಹೊಂದಿದ್ದರು. ಈ ಐಷಾರಾಮಿ ಮನೆಯನ್ನು ವಿವಿಧ ಪೇಂಟಿಂಗ್‌ಗಳು ಮತ್ತು ಅಲಂಕಾರಿಕ ಸಾಮಗ್ರಿಗಳಿಂದ ಅಂದಗೊಳಿಸಿದ್ದರು. ಇತ್ತೀಚೆಗೆ ಅವರು ಬಾಂದ್ರಾದ ಮನೆಗೆ ಆರು ತಿಂಗಳ ಹಿಂದಷ್ಟೇ ಶಿಫ್ಟ್ ಆಗಿದ್ದರು. ಈ ಹೊಸ ಮನೆಗೆ ತಿಂಗಳಿಗೆ 4.5 ಲಕ್ಷ ರೂ ಬಾಡಿಗೆ ನೀಡುತ್ತಿದ್ದರು. 2022ರ ಡಿಸೆಂಬರ್‌ವರೆಗೆ ಮನೆ ಬಾಡಿಗೆ ಕರಾರು ಮಾಡಿಕೊಳ್ಳಲಾಗಿತ್ತು. ಈ ಡುಪ್ಲೆಕ್ಸ್ ಫ್ಲಾಟ್‌ನಲ್ಲಿ ಅವರೊಂದಿಗೆ ನಾಲ್ವರು ಸಹಾಯಕರು ಹಾಗೂ ಒಬ್ಬ ಕಲಾ ನಿರ್ದೇಶಕ ವಾಸಿಸುತ್ತಿದ್ದರು.

  ದುಬಾರಿ ಟೆಲಿಸ್ಕೋಪ್ ಖರೀದಿಸಿದ್ದರು

  ದುಬಾರಿ ಟೆಲಿಸ್ಕೋಪ್ ಖರೀದಿಸಿದ್ದರು

  ನಕ್ಷತ್ರ, ಚಂದ್ರ, ಗ್ರಹಗಳು... ಹೀಗೆ ನಮ್ಮ ಸೌರವ್ಯವಸ್ಥೆಯ ಬಗ್ಗೆ ಸುಶಾಂತ್ ಅವರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಆಸಕ್ತಿ. ಅದನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ವೈಜ್ಞಾನಿಕ ಸಂಗತಿಗಳು ಹಾಗೂ ಪ್ರಯೋಗಗಳ ಬಗ್ಗೆ ಬರೆಯುತ್ತಿದ್ದರು. ಅತ್ಯಂತ ದುಬಾರಿ ಮತ್ತು ಅತ್ಯಾಧುನಿಕ ಟೆಲಿಸ್ಕೋಪನ್ನು ಖರೀದಿಸಿದ್ದರು. ಆ ಟೆಲಿಸ್ಕೋಪ್ ಅನ್ನು ಮನೆಯಿಂದ ಸಮುದ್ರ ಕಾಣುವ ದಿಕ್ಕಿನತ್ತ ಇರಿಸಿದ್ದರು. ಬಿಡುವಿನ ಸಮಯದಲ್ಲಿ ಅಲ್ಲಿಂದ ಶನಿಯ ಉಂಗುರುಗಳನ್ನು ಮತ್ತು ಇತರೆ ಗ್ರಹಗಳನ್ನು ವೀಕ್ಷಿಸುತ್ತಿದ್ದರು.

  ಚಂದ್ರನ ಮೇಲೆ ಜಾಗ ಖರೀದಿ

  ಚಂದ್ರನ ಮೇಲೆ ಜಾಗ ಖರೀದಿ

  ವಿಶೇಷವೆಂದರೆ ಚಂದ್ರನ ಮೇಲೆಯೂ ಸುಶಾಂತ್ ಜಾಗ ಖರೀದಿಸಿದ್ದರು. ಈ ಸಾಧನೆ ಮಾಡಿದ್ದ ಭಾರತದ ಏಕೈಕ ನಟ ಅವರು. ಇಂಟರ್ ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ರಿಜಿಸ್ಟ್ರಿ ಮೂಲಕ ಅವರು ಈ ಆಸ್ತಿ ಖರೀದಿಸಿದ್ದರು. 2018ರ ಜೂನ್ 25ರಂದು ಅವರ ಆಸ್ತಿ ನೋಂದಣಿಯಾಗಿತ್ತು. ಇದು ಚಂದ್ರನ 'ಸೀ ಆಫ್ ಮಸ್ಕೋವಿ' ಎಂಬ ಪ್ರದೇಶದಲ್ಲಿತ್ತು. ಶಾರುಖ್ ಖಾನ್ ಅವರಿಗೆ ಅಭಿಮಾನಿಯೊಬ್ಬರು ಚಂದ್ರನಲ್ಲಿನ ಭೂಮಿಯ ತುಣುಕೊಂದನ್ನು ಉಡುಗೊರೆಯಾಗಿ ನೀಡಿದ್ದರು.

  ಸುಶಾಂತ್ ಕಷ್ಟದಲ್ಲಿದ್ದಾಗ ಯಾರು ಕೇಳಲಿಲ್ಲ: ಬಾಲಿವುಡ್ ವಿರುದ್ಧ ಕೆಂಡಕಾರಿದ ಕೇಶ ವಿನ್ಯಾಸಕಿ

  ಸುಶಾಂತ್ ಸಿಂಗ್ ಕನಸುಗಳು

  ಸುಶಾಂತ್ ಸಿಂಗ್ ಕನಸುಗಳು

  ತಮ್ಮ ಮಕ್ಕಳನ್ನು ನಾಸಾದ ವರ್ಕ್‌ ಶಾಪ್‌ಗೆ ಕಳುಹಿಸುವುದು ಸುಶಾಂತ್ ಅವರ 50 ಕನಸುಗಳಲ್ಲಿ ಒಂದು. ದೃಷ್ಟಿ ದೋಷ ಹೊಂದಿರುವ ವ್ಯಕ್ತಿಗಳೂ ವಿಮಾನ ಚಾಲನೆ ಮಾಡುವುದನ್ನು ಕಲಿಯುವಂತೆ ಕೋಡಿಂಗ್ ಮಾಡುವ ಬಯಕೆ ಅವರಲ್ಲಿತ್ತು. ಇತ್ತೀಚೆಗೆ ಕಂಪ್ಯೂಟರ್ ಗೇಮಿಂಗ್ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ಅವುಗಳ ಕೋಡಿಂಗ್ ಅರಿತುಕೊಳ್ಳುವ ಪ್ರಯತ್ನ ಆರಂಭಿಸಿದ್ದವು. ಅವರು ಲ್ಯಾಪ್‌ಟಾಪ್, ಗ್ಯಾಡ್ಜೆಟ್‌ಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸಂಗತಿಗಳೇ ತುಂಬಿಕೊಂಡಿದ್ದವು.

  English summary
  Sushant Singh Rajput has bought a piece of land on moon two years back. Here is the details of his property value.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X