For Quick Alerts
  ALLOW NOTIFICATIONS  
  For Daily Alerts

  ಆಧ್ಯಾತ್ಮ ಜೀವಿ ಕಲ್ಯಾಣ್ ಬಾಬು 'ಪವರ್ ಸ್ಟಾರ್' ಪವನ್ ಕಲ್ಯಾಣ್ ಆಗಿದ್ದು ಹೇಗೆ?

  By ರವೀಂದ್ರ ಕೊಟಕಿ
  |

  ಆತನಿಗೆ ಅನಾರೋಗ್ಯ ಕಾಡುತ್ತಿತ್ತು-ಓದಿನಲ್ಲಿ ದಡ್ಡ ವಿದ್ಯಾರ್ಥಿ, ಯಾವಾಗಲೂ ಫೇಲ್-ಏಕಾಂಗಿ, ಆಧ್ಯಾತ್ಮ ಜೀವಿ-ಜೀವನದ ವೈಫಲ್ಯಗಳಿಂದ ಆತ್ಮಹತ್ಯೆಗೆ ಯತ್ನ, ಪುಸ್ತಕ ಬದಲಾಯಿಸಿದ ಜೀವನ, ಕೋಟಿಗಟ್ಟಲೆ ಸಂಪಾದನೆಯಿದ್ದರೂ ಲಕ್ಷಗಳಲ್ಲಿಲ್ಲ ಬ್ಯಾಂಕ್ ಬ್ಯಾಲೆನ್ಸ್! ಆತ ಇಂದು ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಪವರ್ ಸ್ಟಾರ್!

  ಇಂದು (ಸೆಪ್ಟೆಂಬರ್ 2) ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ 50ನೇ ಹುಟ್ಟುಹಬ್ಬ. ತೆಲುಗು ಸಿನೆಮಾ ರಂಗದಲ್ಲಿ ಯಾವುದೇ ನಟನೆಗೆ ಇಲ್ಲದಷ್ಟು ಹೆಚ್ಚು ಅಭಿಮಾನಿಗಳು ಮತ್ತು ಫ್ಯಾನ್ಸ್ ಕ್ರೇಜ್ ಇರುವ ನಟ. ಆದರೆ ಇದೇ ಪವರ್ ಸ್ಟಾರ್ ಜೀವನದಲ್ಲಿ ಒಂದು ಹಂತದಲ್ಲಿ ಅನಾರೋಗ್ಯ ಪೀಡಿತರಾಗಿದ್ದರು. ಜೀವನದ ಬಗ್ಗೆ ಜಿಗುಪ್ಸೆ ಕೂಡ ಇದರಿಂದ ಹೊಂದಿದ್ದ ಕಲ್ಯಾಣ್ ಹೆಚ್ಚು ಆಧ್ಯಾತ್ಮ ಜೀವಿಯಾಗಿ ರೂಪ ಗೊಂಡಿದ್ದರು.

  ಪವನ್ ಕಲ್ಯಾಣ್ ಕಂಬ್ಯಾಕ್ ಗೆ ಭಾರಿ ಸಂಭಾವನೆ ಜೊತೆ ಷರತ್ತು!ಪವನ್ ಕಲ್ಯಾಣ್ ಕಂಬ್ಯಾಕ್ ಗೆ ಭಾರಿ ಸಂಭಾವನೆ ಜೊತೆ ಷರತ್ತು!

  ಕೊಣೆದಾಲ ವೆಂಕಟರಾವ್, ಅಂಜನಾದೇವಿ ದಂಪತಿಗಳ ಐದು ಮಕ್ಕಳಲ್ಲಿ ಕೊನೆಯ ಸುಪುತ್ರ. ತಂದೆ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿದ್ದರು. ಸಾಧಾರಣ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕಲ್ಯಾಣ್ ಮೊದಲಿಂದಲೂ ಯಾರ ಜೊತೆಯನ್ನು ಬೆರೆಯುತ್ತಿರಲಿಲ್ಲ. ಒಂದಡೆ ಅನಾರೋಗ್ಯದ ಕಾರಣದಿಂದ ಏಕಾಂಗಿಯಾಗಿ ಹೆಚ್ಚಿನ ಕಾಲ ಕಳೆಯುತ್ತಿದ್ದರು. ಇನ್ನೊಂದೆಡೆ ತನ್ನ ಅನಾರೋಗ್ಯದ ಕಾರಣದಿಂದ ಕುಟುಂಬದವರಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂಬ ಭಾವನೆ ಕೂಡ ಅವರಿಗೆ ಹೆಚ್ಚಿಗೆ ಕಾಡುತ್ತಿತ್ತು. ಮುಂದೆ ಓದಿ..

  ಎಸೆಸೆಲ್ಸಿ ಫೇಲಾಗಿ ಪಾಸಾಗಿದ್ದು ಹೇಗೆ?

  ಎಸೆಸೆಲ್ಸಿ ಫೇಲಾಗಿ ಪಾಸಾಗಿದ್ದು ಹೇಗೆ?

  ಅನಾರೋಗ್ಯದ ಸಮಸ್ಯೆಗಳಿಂದ ಓದಿನ ಕಡೆಗೆ ಹೆಚ್ಚಿಗೆ ಗಮನ ಕೊಡಲಾಗದ ಕಲ್ಯಾಣ್ ಓದಿನಲ್ಲಿ ತೀರಾ ಹಿಂದುಳಿದಿದ್ದರು. ನೆಲ್ಲೂರಿನ ಸೆಂಟ್ ಜೋಸೆಫ್ ಇಂಗ್ಲಿಷ್ ಶಾಲೆಯಲ್ಲಿ ಓದಿದ ಪವನ್ 10ನೇ ತರಗತಿಯಲ್ಲಿ ಅನುತ್ತೀರ್ಣರಾದರು. ಆದರೆ ಅದೃಷ್ಟಕ್ಕೆ ಆ ವರ್ಷ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ನೀಡಿದ 5 ಮಾರ್ಕ್ಸ್ ಗಳ ಗ್ರೇಸ್ ನಿಂದ ಪಾಸಾದರು.

  ಅಧ್ಯಾತ್ಮ ಜೀವಿಯಾಗಿ ಬದಲಾದ ಪವನ್

  ಅಧ್ಯಾತ್ಮ ಜೀವಿಯಾಗಿ ಬದಲಾದ ಪವನ್

  ಎಸೆಸೆಲ್ಸಿ ನಂತರ ವಿಆರ್ ಕಾಲೇಜಿಗೆ ಸೇರಿದ ಅವರು ಪಠ್ಯಪುಸ್ತಕಗಳನ್ನು ಓದೋದು ಬಿಟ್ಟು ಆಧ್ಯಾತ್ಮದ ಪುಸ್ತಕಗಳ ಕಡೆಗೆ ಮುಖ ಮಾಡಿದ್ದರು. ಪರಮಹಂಸ ಯೋಗಾನಂದ 'ಒಂದು ಯೋಗಿಯ ಆತ್ಮಕಥೆ' ಗಾಂಧೀಜಿಯವರ 'ಸತ್ಯ ಶೋಧನೆ', ಶೇಷoದ್ರ ಶರ್ಮ 'ಆಧುನಿಕ ಮಹಾಭಾರತಂ' ಕಲ್ಯಾಣ್ ಅವರ ನೆಚ್ಚಿನ ಪುಸ್ತಕ ಗಳಾಗಿದ್ದವು. ಇದರೊಂದಿಗೆ ರಾಮಕೃಷ್ಣ ಪರಮಹಂಸ ವಿವೇಕಾನಂದ, ರಮಣ ಮಹರ್ಷಿ, ಓಶೋ, ಯು. ಜಿ. ಕೃಷ್ಣಮೂರ್ತಿ,ಬಡೇ ಬಾಬಾ, ಚೆಗುವೇರ ಪವನ್ ಅವರನ್ನು ಪ್ರಭಾವಿಸಿದ ವ್ಯಕ್ತಿಗಳಾಗಿದ್ದರು.

  ಎದೆಯ ಭಾಗದಲ್ಲಿ ಪವನ್ ಕಲ್ಯಾಣ್ ಹೆಸರು ಟ್ಯಾಟೂ ಹಾಕಿಸಿಕೊಂಡ ನಟಿಎದೆಯ ಭಾಗದಲ್ಲಿ ಪವನ್ ಕಲ್ಯಾಣ್ ಹೆಸರು ಟ್ಯಾಟೂ ಹಾಕಿಸಿಕೊಂಡ ನಟಿ

  ಅಣ್ಣನ ಸೂಪರ್ ಸ್ಟಾರ್ ಪಟ್ಟದ ಕಿರಿಕಿರಿ!

  ಅಣ್ಣನ ಸೂಪರ್ ಸ್ಟಾರ್ ಪಟ್ಟದ ಕಿರಿಕಿರಿ!

  ಹಿರಿಯಣ್ಣ ಚಿರಂಜೀವಿ ಇದೇ ಸಮಯದಲ್ಲಿ 'ಖೈದಿ' ಎಂಬ ಚಿತ್ರದ ಮೂಲಕ ಸೂಪರ್ಸ್ಟಾರ್ ಆಗಿ ಬದಲಾಗಿದ್ದರು. ಹೀಗಾಗಿ ಕಾಲೇಜಿನಲ್ಲಿ ತಮ್ಮನನ್ನು ನೋಡುವ ರೀತಿಯೇ ಬೇರೆಯಾಗಿತ್ತು. ಎಲ್ಲರೂ ವಿಶೇಷ ಗೌರವ ಕೊಡುವುದು ಇವರಿಗೆ ತೀರಾ ಕಿರಿಕಿರಿಯ ವಿಷಯವಾಗಿತ್ತು. ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಕಲಿಯುತ್ತಿದ್ದ ಪವನ್ ಸಿನಿಮಾಗೆ ಬರುವ ಆಲೋಚನೆ ಮಾತ್ರ ಯಾವತ್ತೂ ಹೊಂದಿರಲಿಲ್ಲ.

  ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ

  ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ

  ಅಣ್ಣ ಚಿರಂಜೀವಿ ಎಂದರೆ ಅವನಿಗೆ ಪಂಚಪ್ರಾಣ ಹಾಗಂತ ಅಣ್ಣನ ಸೆಲೆಬ್ರಿಟಿ ಸ್ಟೇಟಸ್ ಮೇಲೆ ಬದುಕುವ ಆಲೋಚನೆ ಮಾತ್ರ ಪವನ್ ಹೊಂದಿರಲಿಲ್ಲ. ಪರೀಕ್ಷೆಗಳು ಮುಗಿದ ನಂತರ ಒಂದು ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡು, ತನ್ನ ಸಾಮರ್ಥ್ಯದ ಮೇಲೆ ಜೀವನ ಕಂಡುಕೊಳ್ಳಲು ಮುಂದಾದ.

  ಮೈಕೊಡವಿಕೊಂಡು ಎದ್ದ ಪವನ್ ಕಲ್ಯಾಣ್, ಪಕ್ಷದ ಮುಖವಾಣಿಗೆ ಚಾಲನೆಮೈಕೊಡವಿಕೊಂಡು ಎದ್ದ ಪವನ್ ಕಲ್ಯಾಣ್, ಪಕ್ಷದ ಮುಖವಾಣಿಗೆ ಚಾಲನೆ

  ಆತ್ಮಹತ್ಯೆಗೆ ಮುಂದಾಗಿದ್ದ ಪವನ್!

  ಆತ್ಮಹತ್ಯೆಗೆ ಮುಂದಾಗಿದ್ದ ಪವನ್!

  ಇದರ ಮಧ್ಯೆ ಪಿಯುಸಿ ರಿಸಲ್ಟ್ ಬಂತು. ಇಲ್ಲಿ ಕೂಡ ಫೇಲ್. ಮನೆಗೆ ಹೋದರೆ ಅಪ್ಪ ಬೈತಾರೆ, ಅಣ್ಣ ಕೋಪಗೊಳ್ಳುತ್ತಾರೆ. ಅಂತ ಭಯದಿಂದಲೇ ಮನೆಗೆ ಹೋದರೆ ಮನೆಯಲ್ಲಿ ಯಾರೂ ಕೂಡ ಆ ತರ ವರ್ತಿಸಲಿಲ್ಲ. ಕನಿಷ್ಠ ನಾಲ್ಕು ಮಾತು ಬೈದಿದ್ದರೆ, ಒಂದು ಗಂಟೆ ಜೋರಾಗಿ ಅತ್ತು ಅತ್ತು ಸಮಾಧಾನ ಮಾಡಿಕೊಳ್ಳಬಹುದಿತ್ತು. ಆದರೆ ಯಾರು ಏನು ಹೇಳದೆ ಹೋದಾಗ ಅಪರಾಧದ ಮನೋಭಾವ ಅವರಲ್ಲಿ ಬೆಳೆಯಿತು. ಪದೇ ಪದೇ ಪಿಯುಸಿನಲ್ಲಿ ಅವರು ಫೇಲ್ ಆಗ್ತಾ ಹೋದರು. ತನ್ನ ಜೊತೆ ಓದಿದವರೆಲ್ಲ ಉನ್ನತ ವಿದ್ಯೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ತಾನು ಮಾತ್ರ ಪದೇ ಪದೇ ಪಿಯುನಲ್ಲಿ ಫೇಲ್ ಆಗ್ತಾ ಇದ್ದಿದ್ದರಿಂದ ಮನನೊಂದು ತಾನು ಜೀವನದಲ್ಲಿ ಬೇರೆ ಏನೂ ಸಾಧಿಸಲು ಸಾಧ್ಯವಿಲ್ಲ ಅಂತ ನಿರ್ಣಯಕ್ಕೆ ಬಂದು, ಬದುಕೋದೆ ವ್ಯರ್ಥವೆಂದು ಭಾವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಸ್ವಲ್ಪ ತಡವಾಗಿದ್ದರೂ ಪ್ರಾಣ ಹೋಗುತ್ತಿತ್ತು ಅಷ್ಟರೊಳಗೆ ಕುಟುಂಬದ ಸದಸ್ಯರು ನೋಡಿ ಅವರ ಜೀವ ಉಳಿಸಿದರು.

  ಜೀವನ ಬದಲಾಯಿಸಿದ ದೊಡ್ಡಣ್ಣನ ಮಾತು, ಚಿಕ್ಕಣ್ಣ ಕೊಟ್ಟ ಪುಸ್ತಕ

  ಜೀವನ ಬದಲಾಯಿಸಿದ ದೊಡ್ಡಣ್ಣನ ಮಾತು, ಚಿಕ್ಕಣ್ಣ ಕೊಟ್ಟ ಪುಸ್ತಕ

  ಆತ್ಮಹತ್ಯೆ ಯತ್ನದ ನಂತರ ರಾತ್ರಿ ಇಡೀ ಮನೆಯಲ್ಲಿ ನೀರವವಾದ ಮೌನ. ಹಿರಿಯಣ್ಣ ಚಿರಂಜೀವಿ ಅತ್ತಿಗೆ ಸುರೇಖಾ, ಕಿರಿಯಣ್ಣ ನಾಗಬಾಬು ಇಡೀ ರಾತ್ರಿ ಎಚ್ಚರಿಕೆಯಿಂದ ಪವನ್ ಜೊತೆಗೆ ಇದ್ದು ಕಾಪಾಡಿಕೊಂಡರು. ಹಿರಿಯಣ್ಣ ಚಿರಂಜೀವಿ ಹೇಳಿದ ಮಾತು 'ಓದು ಮಾತ್ರವೇ ವ್ಯಕ್ತಿಯನ್ನು ರೂಪಿಸುವುದಿಲ್ಲ ಓದಿಗಿಂತ ಒಂದು ವ್ಯಕ್ತಿತ್ವ ಮುಖ್ಯ. ನಿನಗೆ ಇಷ್ಟವಾದ ರಂಗವನ್ನು ನೀನು ಆಯ್ಕೆ ಮಾಡಿಕೊಂಡು ಅದರಲ್ಲಿ ಬೆಳೆಯಲು ಮುಂದಾಗು, ಹಗಲು-ರಾತ್ರಿ ಅದರ ಮೇಲೆ ನೀನು ಏಕಾಗ್ರತೆಯಿಂದ ಕೆಲಸ ಮಾಡು ನಾವೆಲ್ಲರೂ ನಿನ್ನ ಜೊತೆಗೆ ಸದಾ ಇರುತ್ತೇವೆ' ಅಂತ ಬುದ್ಧಿವಾದ ಹೇಳಿದರು. ಇನ್ನು ಕಿರಿಯಣ್ಣ ನಾಗಬಾಬು ಒಂದು ಪುಸ್ತಕವನ್ನ ತಮ್ಮನಿಗೆ ತಂದುಕೊಟ್ಟರು ' ಸಾವಿರ ಜೀವನಗಳು- ಸಾವಿರ ಯಶಸ್ವಿಗಳು. ಆ ಪುಸ್ತಕ ಅವರ ಜೀವನವನ್ನು ಬದಲಾಯಿಸಿತು. ಮುಖ್ಯವಾಗಿ ಲಿಯೋ ಡಾವಿಂಚಿ ಜೀವನ ಇವರನ್ನ ವಿಶೇಷವಾಗಿ ಆಕರ್ಷಿಸಿತು. ಇಲ್ಲಿಂದ ತಮ್ಮ ಜೀವನವಿಧಾನವನ್ನು ಬದಲಾಯಿಸಿಕೊಂಡ ಪವನ್ ಮುಂದೆ ಮಾರ್ಷಲ್ ಆರ್ಟ್ಸ್ ನಲ್ಲಿ ವಿಶೇಷ ಶಿಕ್ಷಣವನ್ನು ಪಡೆಯಲು ಮುಂದಾದರು.

  ಕುಟುಂಬದವರ ಒತ್ತಾಸೆಗೆ ಮಣಿದು ಸಿನಿಮಾರಂಗಕ್ಕೆ

  ಕುಟುಂಬದವರ ಒತ್ತಾಸೆಗೆ ಮಣಿದು ಸಿನಿಮಾರಂಗಕ್ಕೆ

  1993 ಸಮಯ, ಚಿರಂಜೀವಿಗೆ ತನ್ನ ತಮ್ಮನನ್ನು ಸಿನಿಮಾರಂಗಕ್ಕೆ ಪರಿಚಯಿಸಬೇಕು ಎಂಬ ಭಾವನೆ ಮೂಡಿತು. ಸಹಜವಾಗಿ ಕುಟುಂಬದವರು ಕೂಡ ಇದಕ್ಕೆ ಬೆಂಬಲವಾಗಿ ನಿಂತರು. ಆದರೆ ಸದಾ ಏಕಾಂಗಿಯಾಗಿ ಯಾರ ಜೊತೆಯು ಹೆಚ್ಚಿಗೆ ಬೆರೆಯದ ವ್ಯಕ್ತಿಯನ್ನು ಸಿನಿಮಾರಂಗಕ್ಕೆ ಪರಿಚಯಿಸುವುದು ಹೇಗೆ? ಸತ್ಯಾನಂದ ಎಂಬ ನಟರನ್ನು ರೂಪಿಸುವ ಶಿಲ್ಪಿಯ ಕೈಗೆ ಪವನ್ ಎಂಬ ಕಲ್ಲನ್ನು ಕೊಟ್ಟರು. ಸತ್ಯಾನಂದ ಪವನ್ ಒಳಗಿನ ಎಲ್ಲಾತರದ ಹಿಂಜರಿಕೆ ಗಳ ಧೋರಣೆಯನ್ನು ಬದಲಾಯಿಸಿ ಒಂದು ಶಿಲೆಯ ರೂಪದಲ್ಲಿ ಮತ್ತೆ ಚಿರಂಜೀವಿ ಕೈಗೆ ಒಪ್ಪಿಸಿದರು. 1996 ರಲ್ಲಿ 'ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರು. ಮೊದಲನೇ ಸಿನಿಮಾ ಫ್ಲಾಪ್ ಆಯಿತು.

  ಹೆಸರು ಬದಲಾವಣೆ ತಂದುಕೊಟ್ಟ ಅದೃಷ್ಟ

  ಹೆಸರು ಬದಲಾವಣೆ ತಂದುಕೊಟ್ಟ ಅದೃಷ್ಟ

  ಮೊದಲ ಚಿತ್ರ ಮಾಡುವಾಗ ಅವರ ನಿಜ ಹೆಸರು ಕಲ್ಯಾಣ್ ಆಗಿತ್ತು. ಚಿತ್ರ ಫ್ಲಾಪ್ ಆದಮೇಲೆ ಹನುಮಂತನ ಮಹಾಭಕ್ತರಾದ ಕುಟುಂಬ, ವರಪ್ರಸಾದ್ ಚಿರಂಜೀವಿಯಾಗಿ ಬೆಳೆದಂತೆ, ತಮ್ಮ ಕೂಡ ಬೆಳೆಯಲಿ ಅಂತ ಪವನ್ ಕಲ್ಯಾಣ್ ಅಂತ ನಾಮಕರಣ ಮಾಡಿದರು. ಅಲ್ಲಿಂದ ಮುಂದಿನದು ಇತಿಹಾಸವಾಯಿತು.

  ಸಂಭಾವನೆ ಕೋಟಿಗಳು ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಲಕ್ಷಗಳು

  ಸಂಭಾವನೆ ಕೋಟಿಗಳು ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಲಕ್ಷಗಳು

  ಇಡೀ ಭಾರತದಲ್ಲಿ ರಜನಿಕಾಂತ್ ಗೆ ಬಿಟ್ಟರೆ ಅತಿ ಹೆಚ್ಚು ಡೈ ಹಾರ್ಡ್ ಫ್ಯಾನ್ಸ್ ಅಂತ ಇರೋದು ಪವನ್ ಕಲ್ಯಾಣ್ ಗೆ ಮಾತ್ರ! ಆ ಹೆಸರೇ ಒಂದು ಸಂಚಲನ. ಸಿನಿಮಾವೊಂದಕ್ಕೆ ಸುಮಾರು 45ರಿಂದ 50 ಕೋಟಿ ಪಡೆಯುವ ಪವನ್ ಕಲ್ಯಾಣ್ ಗೆ ಆಸ್ತಿ ಅಂತ ಇರುವುದು ಒಂದು ಫಾರ್ಮ್ ಹೌಸ್ ಮಾತ್ರ! ಇದು ನಂಬಲೇಬೇಕಾದ ಸತ್ಯ, ತಮ್ಮ ಇಡೀ ಸಂಪಾದನೆಯನ್ನು ದಾನ ಧರ್ಮ ಮಾಡುವುದರಲ್ಲಿ ಅವರು ಹೆಚ್ಚು ಸಂತೃಪ್ತಿಯನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದರು ಲಕ್ಷಗಳಲ್ಲಿ ಕೂಡ ಅವರ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ. ಇಂದಿಗೂ ಅವರ ಕೈಗೆ ಬರುವ ಎಲ್ಲಾ ಹಣ ದಾನ ಧರ್ಮಗಳಿಗೆ ಹೋಗುತ್ತದೆ, ಕುಟುಂಬಕ್ಕೆ ಅಂತ ಕೂಡ ಹಣ ಉಳಿಸುವುದಿಲ್ಲ. ಒಂದು ಸಾಧಾರಣ ವ್ಯಕ್ತಿಯೊಬ್ಬ ಅಸಾಧಾರಣವಾಗಿ ಬೆಳೆದಿದ್ದರೂ ಕೂಡ ಸಾಧಾರಣವಾಗಿ ಬದುಕುತ್ತಿದ್ದಾನೆ. ಇಂತಹ ವ್ಯಕ್ತಿಗೆ ಇವತ್ತು 50 ವರ್ಷಗಳ ವಸಂತ. One india, kannada filmibeat ಪರವಾಗಿ ಹ್ಯಾಪಿ ಬರ್ತಡೇ ಪವನ್ ಸ್ಟಾರ್ ಪವನ್ ಕಲ್ಯಾಣ್, Long live.

  English summary
  Telugu actor Pawan Kalyan Birthday: Power star Biography, Facts and Real Life Story in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X