2020: ಈ ವರ್ಷದ ಟಾಪ್ 5 ಕನ್ನಡ ಹಾಡುಗಳು ಇವು

ವಿಶ್ವ ಸಿನಿಮಾದಿಂದ ಭಾರತೀಯ ಸಿನಿಮಾವನ್ನು ವಿಶೇಷವಾಗಿಸುವುದು ಇಲ್ಲಿನ ಸಿನಿಮಾಗಳಲ್ಲಿನ ಸಂಗೀತ, ಹಾಡುಗಳು, ಕುಣಿತ ಮತ್ತು ಭಿನ್ನ ಮಾದರಿಯ ಕತೆಗಳು.

ಅದರಲ್ಲಿಯೂ ಹಾಡುಗಳು ಭಾರತೀಯ ಸಿನಿಮಾದ ಪ್ರಮುಖ ಭಾಗವೇ ಆಗಿವೆ. ಹಾಡುಗಳಲ್ಲಿದ ಸಿನಿಮಾಗಳು ವಿರಳಾತಿ ವಿರಳ. ಕನ್ನಡದಲ್ಲಿಯೂ ಸಹ ಹಾಡುಗಳಿಲ್ಲದ ಸಿನಿಮಾಗಳನ್ನು ಊಹಿಸಿಕೊಳ್ಳುವುದು ಕಷ್ಟ. ಹಾಡುಗಳ ಹೊರತಾಗಿ ಸಿನಿಮಾ ಮಾಡುವ ಕೆಲವು ಪ್ರಯತ್ನಗಳು ಕನ್ನಡದಲ್ಲಿ ಸಹ ಆಗಿವೆ. ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ.

ಈ ವರ್ಷ ಸಹ ಹಲವು ಕನ್ನಡ ಹಾಡುಗಳು ಪ್ರೇಕ್ಷಕನನ್ನು ಸೆಳೆದಿವೆ. ಹಾಡುಗಳನ್ನು ಪ್ರೇಕ್ಷಕನಿಗೆ ತಲುಪಿಸಲೆಂದೇ ಹಲವು ಆಪ್‌ಗಳು ಸಹ ಹುಟ್ಟಿಕೊಂಡಿವೆ. ಅದರಲ್ಲಿ ಪ್ರಮುಖವಾದುದು 'ಗಾನಾ'. ಈ ಆಪ್‌ನಲ್ಲಿ ಈ ವರ್ಷ ಅತಿ ಹೆಚ್ಚು ಕೇಳಲಾದ ಐದು ಕನ್ನಡ ಹಾಡುಗಳ ಪಟ್ಟಿ ಇಲ್ಲಿದೆ.

ಐದನೇ ಸ್ಥಾನದಲ್ಲಿ 'ದಿಯಾ' ಸಿನಿಮಾದ ಹಾಡು

ಐದನೇ ಸ್ಥಾನದಲ್ಲಿ 'ದಿಯಾ' ಸಿನಿಮಾದ ಹಾಡು

ದಿಯಾ ಸಿನಿಮಾದ 'ಹಾಯಾದ ನನ್ನ ಪುಟ್ಟ ಲೋಕ' ಹಾಡಿಗೆ ಐದನೇ ಸ್ಥಾನ. ಈ ಹಾಡನ್ನು 59 ಲಕ್ಷಕ್ಕೂ ಹೆಚ್ಚು ಜನ ಕೇಳಿದ್ದಾರೆ ಗಾನಾ ಆಪ್‌ನಲ್ಲಿ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್. ಹಾಡಿರುವವರು ಸಂಜಿತ್ ಹೆಗ್ಡೆ ಮತ್ತು ಚಿನ್ಮಯಿ. ಬರೆದವರು ಧನಂಜಯ್ ರಂಜನ್.

ನಾಲ್ಕನೇ ಸ್ಥಾನ ಮತ್ತೆ ಜಂಟಲ್‌ಮನ್‌ ಗೆ

ನಾಲ್ಕನೇ ಸ್ಥಾನ ಮತ್ತೆ ಜಂಟಲ್‌ಮನ್‌ ಗೆ

ಪ್ರಜ್ವಲ್ ದೇವರಾಜ್ ನಟನೆಯ 'ಜಂಟಲ್‌ಮನ್' ಸಿನಿಮಾದ 'ಅರೆರೆ ಶುರುವಾಯಿತು ಹೇಗೆ' ಹಾಡಿಗೆ. ಸಿನಿಮಾದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಹಾಡಿರುವವರು ವಿಜಯ್ ಪ್ರಕಾಶ್, ಹಾಡಿನ ಲೇಖಕರು ಜಯಂತ್ ಕಾಯ್ಕಿಣಿ.

ಮೂರನೇ ಸ್ಥಾನದಲ್ಲಿ 'ಲವ್ ಯೂ ಚಿನ್ನಾ'

ಮೂರನೇ ಸ್ಥಾನದಲ್ಲಿ 'ಲವ್ ಯೂ ಚಿನ್ನಾ'

ಸೂಪರ್ ಹಿಟ್ ಸಿನಿಮಾ 'ಲವ್‌ಮಾಕ್ಟೇಲ್‌' ನ 'ಲವ್ ಯೂ ಚಿನ್ನಾ' ಹಾಡಿಗೆ ಗಾನಾ ಆಪ್‌ನಲ್ಲಿ ಮೂರನೇ ಸ್ಥಾನ. ಹಾಡನ್ನು 69 ಲಕ್ಷಕ್ಕೂ ಹೆಚ್ಚು ಬಾರಿ ಕೇಳಲಾಗಿದೆ. ಹಾಡಿಗೆ ಸಂಗೀತ ನಿರ್ದೇಶನ ರಘು ದೀಕ್ಷಿತ್ ಅವರದ್ದು. ಹಾಡಿರುವವರು ನಕುಲ್ ಅಭ್ಯಂಕರ್ ಹಾಗೂ ಶ್ರುತಿ ವಿಎಸ್. ಬರೆದವರು ರಾಘವೇಂದ್ರ ವಿ ಕಾಮತ್. ಇದೇ ಹಾಡನ್ನು ಯೂಟ್ಯೂಬ್‌ನಲ್ಲಿ 23 ಕೋಟಿಗೂ ಹೆಚ್ಚು ಬಾರಿ ನೋಡಲಾಗಿದೆ.

ಎರಡನೇ ಸ್ಥಾನದಲ್ಲಿದೆ 'ಜಂಟಲ್‌ಮ್ಯಾನ್'

ಎರಡನೇ ಸ್ಥಾನದಲ್ಲಿದೆ 'ಜಂಟಲ್‌ಮ್ಯಾನ್'

ಇದೇ ವರ್ಷಾರಂಭದಲ್ಲಿ ಬಿಡುಗಡೆಯಾದ ಪ್ರಜ್ವಲ್ ದೇವರಾಜ್ ನಟನೆಯ ಸಿನಿಮಾ 'ಜಂಟಲ್‌ಮ್ಯಾನ್' ನ 'ಮರಳಿ ಮನಸಾಗಿದೆ' ಹಾಡು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೆಲೋಡಿ ಹಾಡಾದ ಇದನ್ನು 96 ಲಕ್ಷಕ್ಕೂ ಹೆಚ್ಚು ಬಾರಿ ಕೇಳಲಾಗಿದೆ. ಈ ಸಿನಿಮಾಕ್ಕೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಹಾಡಿನ ಸಾಹಿತ್ಯ ನಾಗಾರ್ಜುನ್ ಶರ್ಮಾ ಮತ್ತು ಕಿನ್ನಲ್ ರಾಜಾ. ಗಾಯಕರು ಸಂಜಿತ್ ಹೆಗ್ಡೆ ಮತ್ತು ಸಿಆರ್ ಬಾಬಿ.

Recommended Video

ಅವಸರ ಪಟ್ಟುಬಿಟ್ರಾ Rajinikanth | Filmibeat Kannada
'ಪೊಗರು' ಸಿನಿಮಾದ ಖರಾಬು

'ಪೊಗರು' ಸಿನಿಮಾದ ಖರಾಬು

ಇನ್ನೂ ಬಿಡುಗಡೆ ಆಗಿರದ 'ಪೊಗರು' ಸಿನಿಮಾದ 'ಖರಾಬು ಬಾಸು ಖರಾಬು' ಹಾಡು ಈ ವರ್ಷ ಗಾನಾ ಆಪ್‌ನಲ್ಲಿ ಹೆಚ್ಚು ಕೇಳಲ್ಪಟ್ಟ ಕನ್ನಡ ಹಾಡು. ಈ ಹಾಡನ್ನು ಒಂದು ಕೋಟಿಗೂ ಹೆಚ್ಚು ಬಾರಿ ಗಾನಾ ಆಪ್‌ನಲ್ಲಿ ಕೇಳಲಾಗಿದೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಚಂದನ್ ಶೆಟ್ಟಿ, ಹಾಡಿನ ಲೇಖಕರು ಹಾಗೂ ಗಾಯಕರು ಸಹ ಅವರೇ. ಯೂಟ್ಯೂಬ್‌ನಲ್ಲಿ ಈ ಹಾಡನ್ನು 18 ಕೋಟಿ ಬಾರಿ ವೀಕ್ಷಿಸಲಾಗಿದೆ.

More from Filmibeat

English summary
Here is the list of top 5 Kannada songs of 2020 in Gaana App. Pogaru movie song top the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X