For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಯಾರು ಏನು ಓದಿಕೊಂಡಿದ್ದಾರೆ ಗೊತ್ತಾ?

  |

  ಎಷ್ಟೋ ಜನರ ವಿದ್ಯಾಭ್ಯಾಸಕ್ಕೂ ಅವರು ಮಾಡುವ ಕೆಲಸಕ್ಕೂ ಸಂಬಂಧವೇ ಇರುವುದಿಲ್ಲ. ಅಚಾನಕ್ ಆಗಿ ಚಿತ್ರರಂಗಕ್ಕೆ ಬಂದವರು ಇದ್ದಾರೆ. ಇಂಜಿನಿಯರಿಂಗ್, ಡಿಗ್ರಿ, ಪಿಯುಸಿ, ಡಾಕ್ಟರ್ ಹೀಗೆ ಏನೇನೋ ಓದಿಕೊಂಡವರು ಬಣ್ಣ ಹಚ್ಚಿ ನಟಿಸುತ್ತಿದ್ದಾರೆ. ವಿದ್ಯಾಭ್ಯಾಸಕ್ಕೂ ನಟನೆಗೂ ಸಂಬಂಧ ಇಲ್ಲದೇ ಇರಬಹುದು. ಆದರೂ ಜ್ಞಾನಕ್ಕಾಗಿ ವಿದ್ಯಾಭ್ಯಾಸ ಬಹಳ ಅವಶ್ಯಕ. ದಕ್ಷಿಣ ಭಾರತದ ಖ್ಯಾತ ನಟಿಯರು ಏನು ಓದಿಕೊಂಡಿದ್ದಾರೆ ಬನ್ನಿ ನೋಡೋಣ.

  ಓದುವ ಸಮಯದಲ್ಲೇ ಸಾಕಷ್ಟು ನಟಿಯರು ಮಾಡೆಲಿಂಗ್ ಫೀಲ್ಡ್‌ಗೆ ಎಂಟ್ರಿ ಕೊಡುತ್ತಾರೆ. ಅಲ್ಲಿಂದ ಚಿತ್ರರಂಗಕ್ಕೆ ಬರುವುದು ಕಷ್ಟ ಏನು ಆಗುವುದಿಲ್ಲ. ಕೆಲವರು ನಟನೆಯನ್ನು ಕಲಿಯದೇ ಇದ್ದರೂ ಕ್ಯಾಮರಾ ಮುಂದೆ ನಟಿಸಿ ಗೆಲ್ಲುತ್ತಾರೆ. ಮತ್ತೆ ಕೆಲವರು ಹೀರೊಯಿನ್ ಆಗಬೇಕು ಎನ್ನುವ ಆಸೆಯಿಂದ ಏನೇನೊ ಸರ್ಕಸ್ ಮಾಡಿ ಬಣ್ಣದಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಕೆಲವರು ಆಕ್ಟಿಂಗ್ ಸ್ಕೂಲ್‌ಗಳಲ್ಲಿ ನಟನೆಯ ಪಟ್ಟುಗಳನ್ನು ಸಂಪೂರ್ಣ ತಯಾರಿ ನಡೆಸಿಕೊಂಡು ಬರುತ್ತಾರೆ. ಶಾಲಾ ಕಾಲೇಜಿನಲ್ಲಿ ಟಾಪರ್ ಆಗಿದ್ದವರು ಕೂಡ ಆಕಸ್ಮಿಕವಾಗಿ ರಂಗೀನ್ ಪ್ರಪಂಚಕ್ಕೆ ಬಂದುಬಿಟ್ಟಿದ್ದಾರೆ.

  ಕೆಲ ನಟಿಯರು ಅವಕಾಶ ಸಿಕ್ಕಿದ ಕೂಡಲೇ ಒಂದು ಸಿನಿಮಾದಲ್ಲಿ ನಟಿಸೋ ನೋಡೋಣ ಎಂದು ಪ್ರಯತ್ನಿಸ್ತಾರೆ. ಅದೃಷ್ಟ ಚೆನ್ನಾಗಿದ್ದರೆ ಉಳಿದುಕೊಳ್ಳುತ್ತಾರೆ. ಇಲ್ಲ ಅಂದರೆ ಬಂದ ದಾರಿಗೆ ಸುಂಕವಿಲ್ಲ ಎಂದು ಚಿತ್ರರಂಗದಿಂದ ದೂರಾಗುತ್ತಾರೆ. ಅನುಷ್ಕಾ ಶೆಟ್ಟಿ, ನಯನತಾರಾ, ಸಮಂತಾ, ಪೂಜಾ ಹೆಗ್ಡೆ, ಕಾಜಲ್ ಅಗರ್‌ವಾಲ್ ಹೀಗೆ ದಕ್ಷಿಣ ಭಾರತದ ಟಾಪ್ ನಟಿಯರು ಏನು ಓದಿಕೊಂಡಿದ್ದಾರೆ ಎನ್ನುವ ಕುತೂಹಲ ಸಹಜ.

  ಯೋಗ ಟೀಚರ್ ಆಗಿದ್ದ ಸ್ವೀಟಿ

  ಯೋಗ ಟೀಚರ್ ಆಗಿದ್ದ ಸ್ವೀಟಿ

  ದಕ್ಷಿಣ ಭಾರತದ ಟಾಪ್ ನಟಿಯರು ಅಂದಾಕ್ಷಣ ಮೊದಲಿಗೆ ನೆನಪು ಬರುವುದು ಕನ್ನಡದ ಚೆಲುವೆ ಅನುಷ್ಕಾ ಶೆಟ್ಟಿ. ಮಂಗಳೂರು ಹುಟ್ಟಿಗೆ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಸ್ವೀಟಿ ಓದಿ ಬೆಳೆದವರು. ಕಂಪ್ಯೂಟರ್ ಸೈನ್ಸ್‌ನಲ್ಲಿ ಅನುಷ್ಕಾ ಶೆಟ್ಟಿ ಡಿಗ್ರಿ ಒಡೆದುಕೊಂಡಿದ್ದಾರೆ. ಯೋಗ ಟೀಚರ್ ಆಗಿಯೂ ಕೆಲಸ ಮಾಡಿದ್ದರು. ನಾಗಾರ್ಜುನ ನಟನೆಯ ತೆಲುಗಿನ 'ಸೂಪರ್' ಚಿತ್ರದ ಮೂಲಕ ಬಣ್ಣದಲೋಕಕ್ಕೆ ಬಂದರು. ಟಾಪ್ ಹೀರೊಯಿನ್ ಆಗಿ ಮೆರೆದರು.

  ಚೆನ್ನೈ ಚೆಲುವೆ ಓದಿನಲ್ಲೂ ಮುಂದು

  ಚೆನ್ನೈ ಚೆಲುವೆ ಓದಿನಲ್ಲೂ ಮುಂದು

  ಚಿಕ್ಕಂದಿನಿಂದಲೂ ನಟಿ ಸಮಂತಾ ಓದಿನಲ್ಲಿ ತುಂಬಾ ಮುಂದು. ಚೆನ್ನೈನಲ್ಲಿ ಸ್ಯಾಮ್ ಬಿಕಾಂ ಓದಿಕೊಂಡಿದ್ದರು. 'ಏ ಮಾಯ ಚೇಸಾವೆ' ಚಿತ್ರದ ಮೂಲಕ ಚೆಲುವೆ ಬಣ್ಣ ಹಚ್ಚಲು ಆರಂಭಿಸಿದರು. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇದೀಗ ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಸೆಟ್ಲ್ ಆಗಿದ್ದಾರೆ.

  ಕಾಜಲ್ ಏನು ಓದಿಕೊಂಡಿದ್ದಾರೆ?

  ಕಾಜಲ್ ಏನು ಓದಿಕೊಂಡಿದ್ದಾರೆ?

  'ಮಗಧೀರ'ನ ಮನದನ್ನೆ ಮಿತ್ರಾವಿಂದಾ ಕಾಜಲ್ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಆದರೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿ ಸೈ ಅನ್ನಿಸಿಕೊಂಡವರು. ಮಾರ್ಕೆಟಿಂಗ್ ಹಾಗೂ ಅಡ್ವರ್ಟೈಸಿಂಗ್‌ ವಿಭಾಗದಲ್ಲಿ ಮಾಸ್ ಮೀಡಿಯಾ ಡಿಗ್ರಿ ಪಡೆದುಕೊಂಡಿದ್ದಾರೆ. 2 ವರ್ಷದ ಹಿಂದೆ ಗೌತಮ್ ಕಿಚ್ಲು ಎಂಬ ಉದ್ಯಮಿಯನ್ನು ಮದುವೆಯಾದ ಕಾಜಲ್‌ಗೆ ಒಬ್ಬ ಮಗ ಕೂಡ ಇದ್ದಾನೆ. ಮದುವೆಯ ನಂತರವೂ ಕಾಜಲ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಬಿಎಂ ಮುಗಿಸಿರುವ ತಮನ್ನಾ

  ಬಿಎಂ ಮುಗಿಸಿರುವ ತಮನ್ನಾ


  ಮಿಲ್ಕಿ ಬ್ಯೂಟಿ ತಮನ್ನಾ ಬ್ಯಾಚುಲರ್ ಆಫ್ ಆರ್ಟ್ಸ್ ಡಿಗ್ರಿ ಕಂಪ್ಲೀಟ್ ಮಾಡಿದ್ದಾರೆ. 2005ರಲ್ಲಿ ಬಿಡುಗಡೆಯಾದ 'ಚಾಂದ್ ಸಾ ರೋಷನ್ ಚೆಹ್ರಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತಮನ್ನಾ ಕೂಡ ಹುಟ್ಟಿ ಬೆಳೆದಿದ್ದು ಮುಂಬೈ ಮಹಾ ನಗರದಲ್ಲಿ. ಮೊದಲಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ ಪ್ರಯೋಜನವಾಗಿರಲಿಲ್ಲ. ತಮಿಳಿನ 'ಪಯ್ಯಾ' ಸಿನಿಮಾ ಈ ಮುಂಬೈ ಬೆಡಗಿಗೆ ಬ್ರೇಕ್ ಕೊಡ್ತು.

  ಕೇರಳದಲ್ಲಿ ನಯನತಾರಾ ಕಾಲೇಜು ವಿದ್ಯಾಭ್ಯಾಸ

  ಕೇರಳದಲ್ಲಿ ನಯನತಾರಾ ಕಾಲೇಜು ವಿದ್ಯಾಭ್ಯಾಸ

  ಲೇಡಿ ಸೂಪರ್ ಸ್ಟಾರ್ ನಯನತಾರಾ ಬಿಎ ಇಂಗ್ಲೀಷ್ ಲಿಟ್‌ರೇಚರ್‌ ಓದಿಕೊಂಡಿದ್ದಾರೆ. ತಂದೆ ಇಂಡಿಯನ್ ಏರ್‌ಪೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಚಿಕ್ಕಂದಿನಲ್ಲಿ ಗುಜರಾತ್, ದೆಹಲಿಯನ್ನೂ ಹೋಗಿ ನೆಲೆಸಬೇಕಾಯಿತು. ಅಲ್ಲೇ ಶಾಲೆ ಓದು ಮುಗಿಸಿದ ನಯನ್ ಕೇರಳದಲ್ಲಿ ಕಾಲೇಜು ಮೆಟ್ಟಿಲು ಏರಿದ್ದರು. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಫೀಲ್ಡ್‌ನಲ್ಲಿ ಗುರ್ತಿಸಿಕೊಂಡಿದ್ದರು. 2003ರಲ್ಲಿ ಮಲಯಾಳಂನ 'ಮನಸ್ಸಿನಕ್ಕರೆ' ಚಿತ್ರದ ಮೂಲಕ ನಟನೆ ಆರಂಭಿಸಿದರು.

  ಟಾಪ್ ನಟಿಯರ ವಿದ್ಯಾಭ್ಯಾಸ ಏನು?

  ಟಾಪ್ ನಟಿಯರ ವಿದ್ಯಾಭ್ಯಾಸ ಏನು?


  ಪೂಜಾ ಹೆಗ್ಡೆ ಎಂಕಾಂ ಓದಿಕೊಂಡಿದ್ದಾರೆ. ರಕುಲ್ ಪ್ರೀತ್ ಸಿಂಗ್ ಬಿಎಸ್ಸಿ, ರಶ್ಮಿಕಾ ಮಂದಣ್ಣ ಸೈಕಾಲಜಿ ಜನರ್ಲಿಸಂ, ಇಂಗ್ಲೀಷ್ ಲಿಟ್‌ಲೇಚರ್‌ ಡಿಗ್ರಿ ಕಂಪ್ಲೀಟ್ ಆಗಿದೆ. ಶೃತಿ ಹಾಸನ್ ಬಿಎಸ್ಸಿ, ಸಾಯಿ ಪಲ್ಲವಿ ಎಂಬಿಬಿಎಸ್, ಕೀರ್ತಿ ಸುರೇಶ್ ಫ್ಯಾಷನ್ ಡಿಸೈನಿಂಗ್‌ನಲ್ಲಿ ಡಿಗ್ರಿ ಕಂಪ್ಲೀಟ್ ಮಾಡಿದ್ದಾರೆ.

  English summary
  Top South Indian Actress Educational Qualification. Let us know what educational qualifications our gorgeous Actresses have and from where did they complete their studies. Know More.
  Friday, November 11, 2022, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X