twitter
    For Quick Alerts
    ALLOW NOTIFICATIONS  
    For Daily Alerts

    ತುಳು ಚಿತ್ರರಂಗದ 'ದೇವದಾಸ್ ಕಾಪಿಕಾಡ್' ಕನ್ನಡದಲ್ಲೂ ಫೇಮಸ್!

    By ಪೂರ್ವ
    |

    ಕೋಸ್ಟಲ್‌ವುಡ್‌ನಲ್ಲಿ ಹೊಸ ಹೊಸ ಸಿನಿಮಾಗಳ ಪ್ರಯೋಗಗಳು ಇದೀಗ ಮೂಡಿ ಬರಲು ಶುರುವಾಗಿದೆ. ನಗುವಿನ ಜೊತೆ ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅನೇಕ ಸಿನಿಮಾಗಳ ನಿರ್ದೇಶನ ಮಾಡುತ್ತಾ ಅನೇಕ ಜನರನ್ನು ನಾಟಕ ತಂಡದಲ್ಲಿ ಸೇರಿಸಿಕೊಂಡು ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಟ್ಟ 'ತೆಲಿಕೆದ ಬೊಳ್ಳಿ' ಎಂದೇ ಖ್ಯಾತಿ ಪಡೆದ ನಟ ದೇವದಾಸ್ ಕಾಪಿಕಾಡ್.

    ನಾಟಕಗಳ ಪ್ರದರ್ಶನದ ಮೂಲಕ ಜನ ಮನ ಗೆದ್ದಿರುವ ಇವರು ಅನೇಕ ನಟ ನಟಿಯರನ್ನು ಕೋಸ್ಟಲ್‌ವುಡ್‌ಗೆ ಪರಿಚಯ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನೇಕ ಸಿನಿಮಾಗಳ ಮೂಲಕ ಜನರನ್ನು ರಂಜಿಸುತ್ತಾ ತುಳು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾ ನಿರ್ದೇಶನ ಮಾಡುತ್ತಾ ತುಳು ಭಾಷೆಯನ್ನು ಉತ್ತುಂಗಕ್ಕೆ ಏರಿಸುವಲ್ಲಿ ಸಫಲರಾಗಿದ್ದಾರೆ. ದೇವದಾಸ್ ಕಾಪಿಕಾಡ್ ಹುಟ್ಟಿದ್ದು ಮಂಗಳೂರಿನ ಕಾಪಿಕಾಡ್‌ನಲ್ಲಿ. ನವರಸಗಳನ್ನು ಸೇರಿಸಿ ಅಭಿನಯ ಮಾಡಿ ಜನರ ಮನ ಗೆದ್ದಿದ್ದಾರೆ.

    ನವರಸಗಳ ನಾಯಕ ಬೋಜರಾಜ ವಾಮಂಜೂರು ತುಳುನಾಡಿನ ಜನರ ಮನಗೆದ್ದ ಕಾಮಿಡಿಯನ್ನವರಸಗಳ ನಾಯಕ ಬೋಜರಾಜ ವಾಮಂಜೂರು ತುಳುನಾಡಿನ ಜನರ ಮನಗೆದ್ದ ಕಾಮಿಡಿಯನ್

    ತುಳು ಭಾಷೆಯ ಜೊತೆಗೆ ಮಲಯಾಳಂ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಛಾಪು ಮೂಡಿಸಿದ್ದಾರೆ. ಇವರು 2012ರಲ್ಲಿ 'ತೆಲಿಕೆದ ಬೊಳ್ಳಿ' ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ್ದರು. 'ಬಳಿಕ ರಂಗ್', 'ಚಾಲಿಪೋಲಿಲು', 'ಸೂಂಬೆ', 'ಚಂಡಿಕೋರಿ' ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    ಜನರ ಮನರಂಜಿಸುತ್ತಿರುವ ನಟ

    ಜನರ ಮನರಂಜಿಸುತ್ತಿರುವ ನಟ

    ಇವರು 'ವೆಂಕಟ ಇನ್ ಸಂಕಟ', 'ನಾವೆಲ್ರೂ ಹಾಫ್ ಬಾಯ್ಲ್ಡ್' ಎಂಬ ಕನ್ನಡ ಸಿನಿಮಾದಲ್ಲಿಯೂ ನಟನೆ ಮಾಡಿದ್ದಾರೆ. ಇವರಿಗೆ ಸಿನಿಮಾದಲ್ಲಿ ಹಲವಾರು ಪ್ರಶಸ್ತಿಗಳು ಬಂದಿದೆ. ಅತ್ಯುತ್ತಮ ನಟ ಪ್ರಶಸ್ತಿ, ಬೆಸ್ಟ್ ಡೈಲಾಗ್, ಮಂಗಳೂರು ವಿಶ್ವದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರೆತಿದೆ. ದೇವದಾಸ್ ಕಾಪಿಕಾಡ್ ಅನೇಕ ಕಲಾವಿದರ ಗುರು ಕೂಡ ಹೌದು.

    ತುಳು ಚಿತ್ರರಂಗ ಇತಿಹಾಸ: ಸಾಗಿ ಬಂದ ಹಾದಿ ಹೂವ ಹಾಸಿಗೆಯಲ್ಲತುಳು ಚಿತ್ರರಂಗ ಇತಿಹಾಸ: ಸಾಗಿ ಬಂದ ಹಾದಿ ಹೂವ ಹಾಸಿಗೆಯಲ್ಲ

    ನಾಟಕರಂಗದಲ್ಲಿ ಸಕ್ರಿಯರಾದ ನಟ

    ನಾಟಕರಂಗದಲ್ಲಿ ಸಕ್ರಿಯರಾದ ನಟ

    ದೇವದಾಸ್ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ನಟನಾಗಬೇಕು ಎಂಬ ಕನಸನ್ನು ಕಂಡಿದ್ದರು. ಅದಕ್ಕಾಗಿ ಸಾಕಷ್ಟು ಕಷ್ಟಪಡುತ್ತಿದ್ದರು. ಮೈಸೂರಿನಲ್ಲಿ ದೊಡ್ಡ ಕೆಲಸಕ್ಕೆ ಸೇರಿದ್ದರು ಆದರೆ ಒಳ ಮನಸ್ಸು ನುಡಿಯುತ್ತಿತ್ತು. ನೀನು ಏನಾದರೂ ಸಾಧನೆ ಮಾಡು ಎಂದು ಆ ಕೆಲಸವನ್ನು ಬಿಟ್ಟು ನಾಟಕ ತಂಡವನ್ನು ಕಟ್ಟಿದ್ದೇನೆ ಎಂದು ದೇವದಾಸ್ ಕಾಪಿಕಾಡ್ ಹೇಳುತ್ತಾರೆ.

    ಸಿನಿಮಾದ ಜೊತೆಗೆ ನಾಟಕದಲ್ಲಿ ಆಸಕ್ತಿ!

    ಸಿನಿಮಾದ ಜೊತೆಗೆ ನಾಟಕದಲ್ಲಿ ಆಸಕ್ತಿ!

    ದೇವದಾಸ್ ಅವರು ರಂಗಭೂಮಿಯನ್ನು ಸೇರಿ ಸುಮಾರು 34 ವರುಷಗಳೇ ಸಂದಿದೆ. ದೇವದಾಸ್ ಕಾಪಿಕಾಡ್ ತಾವೇ ಸ್ವತಃ ನಾಟಕಗಳನ್ನು ರಚಿಸುತ್ತಿದ್ದರು. ಹಾಗೆಯೇ ಸಿನಿಮಾಗಳ ಸ್ಕ್ರಿಪ್ಟ್‌ಗಳನ್ನು ಬರೆಯುತ್ತಿದ್ದರು ಇವರ ತಂಡ ಇವರಿಗೆ ಸಪೋರ್ಟ್ ಮಾಡುತ್ತಿದ್ದರು. ಇದರಿಂದ ದಾವದಾಸ್ ಕಾಪಿಕಾಡ್ ಅವರು ಉತ್ತುಂಗಕ್ಕೆ ಏರಲು ಸಾಧ್ಯವಾಯಿತು.

    ನಾನು, ಸಂಚಾರಿ ವಿಜಯ್ ಹಾಗೂ ರಾಷ್ಟ್ರೀಯ ಹೆದ್ದಾರಿ 4: ಮಂಸೋರೆಯ ನೆನೆಪುಗಳಿಂದನಾನು, ಸಂಚಾರಿ ವಿಜಯ್ ಹಾಗೂ ರಾಷ್ಟ್ರೀಯ ಹೆದ್ದಾರಿ 4: ಮಂಸೋರೆಯ ನೆನೆಪುಗಳಿಂದ

    ನಟನೆ ಜೊತೆಗೆ ನಿರ್ದೇಶನಕ್ಕೂ ಸೈ!

    ನಟನೆ ಜೊತೆಗೆ ನಿರ್ದೇಶನಕ್ಕೂ ಸೈ!

    ಕಲಾವಿದ ಆದವನು ತನ್ನನ್ನು ತಾನು ತಿದ್ದಿಕೊಂಡಿರಬೇಕು. ಎಲ್ಲಾ ಕಲಾವಿದರನು ನೋಡಿ ಕಲಿಯಬೇಕು ಎಂದು ದೇವದಾಸ್ ಹೇಳುತ್ತಾರೆ. 'ಬಲೆ ಚಾ ಪರ್ಕ' ನಾಟಕ ತಂಡವನ್ನು ಕಟ್ಟಿಕೊಂಡಿದ್ದಾರೆ. ದೇವದಾಸ್ ಅವರ ಮಗನಾದ ಅರ್ಜುನ್ ಕಾಪಿಕಾಡ್ ಕೂಡ ಕೋಸ್ಟಲ್‌ವುಡ್‌ಗೆ ಪರಿಚಯ ಮಾಡಿಕೊಟ್ಟಿದ್ದಾರೆ.

    English summary
    Know About Tulu Film Actor Devadas Kapikad Biography And Lifestyle,
    Sunday, June 19, 2022, 19:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X