For Quick Alerts
  ALLOW NOTIFICATIONS  
  For Daily Alerts

  ಶ್ವೇತಾ-ಅಮಿತ್ ಒಲವಿನ ಸಿಂಚನ: 'ಸಿಂಪಲ್ ಹುಡುಗಿ'ಗೆ ಪತಿಯೇ ಪರದೈವ

  |

  'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡ ನಟಿ ಶ್ವೇತಾ ಶ್ರೀವಾತ್ಸವ್. 'ಸಿಂಪಲ್ ಹುಡುಗಿ' ಎಂದೇ ಖ್ಯಾತರಾದ ಶ್ವೇತಾ ಶ್ರೀವಾತ್ಸವ್ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಒಂದು ಮಗುವಿನ ತಾಯಿಯಾದ್ಮೇಲೆ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ಶ್ವೇತಾ ಶ್ರೀವಾತ್ಸವ್ ಈಗ 'ರಹದಾರಿ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

  Recommended Video

  ಹಾಟ್ ಪೋಟೋಶೂಟ್ ಬಗ್ಗೆ ಸಿಂಪಲ್ ಹುಡುಗಿಯ ಮಾತು | SHWETHA SRIVASTAV | SANDALWOOD | FILMIBEAT KANNADA

  ಅಂದ್ಹಾಗೆ, ನಟಿ ಶ್ವೇತಾ ಶ್ರೀವಾತ್ಸವ್ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಅಮಿತ್ ಶ್ರೀವಾತ್ಸವ್ ರನ್ನ ಶ್ವೇತಾ ಪ್ರೀತಿಸಿ ವಿವಾಹವಾಗಿದ್ದಾರೆ. ಪ್ರೇಮಿಗಳ ದಿನದ ಪ್ರಯುಕ್ತ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಲವ್ ಮತ್ತು ಮ್ಯಾರೇಜ್ ಸ್ಟೋರಿಯನ್ನ ಇದೇ ಮೊಟ್ಟ ಮೊದಲ ಬಾರಿಗೆ ಬಹಿರಂಗ ಪಡಿಸಿದ್ದಾರೆ.

  ನಿಮ್ಮ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ನಟಿ ಶ್ವೇತಾ ಶ್ರೀವಾತ್ಸವ್ ಹಂಚಿಕೊಂಡಿರುವ ತಮ್ಮ ಪ್ರೀತಿಯ ಸವಿ ಸವಿ ನೆನಪುಗಳು ಇಲ್ಲಿವೆ.. ಓದಿರಿ...

  ಶ್ವೇತಾ-ಅಮಿತ್ ಪ್ರೇಮ ಕಥನ

  ಶ್ವೇತಾ-ಅಮಿತ್ ಪ್ರೇಮ ಕಥನ

  ಶ್ವೇತಾ ಮತ್ತು ಅಮಿತ್ ಶ್ರೀವಾತ್ಸವ್ ಪ್ರೀತಿಸಿ ಮದುವೆಯಾದ ದಂಪತಿ. ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಲ್ಲೇ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆಯತೊಡಗಿತ್ತು. ವೃತ್ತಿ ಬದುಕಿನಲ್ಲಿ ಭದ್ರವಾಗಿ ನೆಲೆಯೂರಿದ ಮೇಲೆ ದಾಂಪತ್ಯ ಜೀವನಕ್ಕೆ ಶ್ವೇತಾ-ಅಮಿತ್ ಕಾಲಿಟ್ಟರು. ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಎಕ್ಸ್ ಕ್ಲೂಸಿವ್ ಆಗಿ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಲವ್ ಸ್ಟೋರಿ ಕುರಿತು ಮಾತನಾಡಿದ್ದಾರೆ.

  ಮುದ್ದು ಮಗಳ ಜೊತೆ ಸಿಂಪಲ್ ನಟಿಯ ಭರ್ಜರಿ ಫೋಟೋಶೂಟ್ಮುದ್ದು ಮಗಳ ಜೊತೆ ಸಿಂಪಲ್ ನಟಿಯ ಭರ್ಜರಿ ಫೋಟೋಶೂಟ್

  ಫಿಲ್ಮಿ ಸ್ಟೈಲ್ ಲವ್ ಸ್ಟೋರಿ

  ಫಿಲ್ಮಿ ಸ್ಟೈಲ್ ಲವ್ ಸ್ಟೋರಿ

  ''ನನ್ನದು ಸ್ವಲ್ಪ ಫಿಲ್ಮಿ ಸ್ಟೈಲ್ ಲವ್ ಸ್ಟೋರಿ. ಪತಿ ಮನೆ ಕಡೆಯಿಂದ ನಮ್ಮ ಪ್ರೀತಿಗೆ ವಿರೋಧ ಇತ್ತು. ಆದ್ರೆ, ನನ್ನ ತಂದೆ ತುಂಬಾ ಸಪೋರ್ಟ್ ಮಾಡಿದರು. ನಮ್ಮಿಬ್ಬರ ವಿದ್ಯಾಭ್ಯಾಸ ಮುಗಿಸಲು ನನ್ನ ತಂದೆ ಸಹಾಯ ಮಾಡಿದರು. ವಿದ್ಯಾಭ್ಯಾಸ ಮುಗಿದ ಮೇಲೆ ನಮಗೆ ಮದುವೆ ಮಾಡಿಕೊಟ್ಟರು'' - ಶ್ವೇತಾ ಶ್ರೀವಾತ್ಸವ್, ನಟಿ

  ರಹದಾರಿ ಮುಹೂರ್ತ: ಕಮ್ ಬ್ಯಾಕ್ ಮಾಡಿದ 'ಸಿಂಪಲ್ ಹುಡುಗಿ' ಶ್ವೇತಾರಹದಾರಿ ಮುಹೂರ್ತ: ಕಮ್ ಬ್ಯಾಕ್ ಮಾಡಿದ 'ಸಿಂಪಲ್ ಹುಡುಗಿ' ಶ್ವೇತಾ

  ಶ್ವೇತಾ-ಅಮಿತ್ ಮಧ್ಯೆ ಅನುರಾಗ ಅರಳಿದ್ದು ಹೇಗೆ.?

  ಶ್ವೇತಾ-ಅಮಿತ್ ಮಧ್ಯೆ ಅನುರಾಗ ಅರಳಿದ್ದು ಹೇಗೆ.?

  ''ಅಮಿತ್ ಮನೆಯನ್ನ ಶೂಟಿಂಗ್ ಗೆ ಅಂತ ಕೊಡುತ್ತಿದ್ದರು. ಅವರ ಮನೆಯಲ್ಲಿ 'ಲಕ್ಷ್ಮೀ ಕಟಾಕ್ಷ' ಅಂತ ನಾನೊಂದು ಟೆಲಿ ಫಿಲ್ಮ್ ಮಾಡುತ್ತಿದ್ದೆ. ಆ ಟೆಲಿ ಫಿಲ್ಮ್ ನಲ್ಲಿ ಲೀಡ್ ರೋಲ್ ಲಕ್ಷ್ಮೀ ನಾನೇ. ಆದ್ರೆ, ಆ ಲಕ್ಷ್ಮೀ ಯಾರು ಅಂದ್ರೆ ಮನೆ ಕೆಲಸದವಳು.! ಅವತ್ತು ಅಮಿತ್ ನನ್ನನ್ನ ಮೊಟ್ಟ ಮೊದಲ ಬಾರಿಗೆ ನೋಡಿದಾಗ, ನಾನು ಮನೆ ಕೆಲಸದವಳಾಗಿ ಕಾಣಿಸಿದ್ದೆ. ಅದೇ ಅವರಿಗೆ ಲವ್ ಅಟ್ ಫಸ್ಟ್ ಸೈಟ್ ಆಗಿತ್ತಂತೆ.!'' - ಶ್ವೇತಾ ಶ್ರೀವಾತ್ಸವ್, ನಟಿ

  ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ನ ಹುಡುಕಿಕೊಂಡು ಬಂದಿತ್ತು ಒಂಬತ್ತು ಆಫರ್ಸ್.!ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ನ ಹುಡುಕಿಕೊಂಡು ಬಂದಿತ್ತು ಒಂಬತ್ತು ಆಫರ್ಸ್.!

  ಅಮಿತ್-ಶ್ವೇತಾ ಮೊಟ್ಟ ಮೊದಲ ಭೇಟಿ

  ಅಮಿತ್-ಶ್ವೇತಾ ಮೊಟ್ಟ ಮೊದಲ ಭೇಟಿ

  ''ಮನೆಯಲ್ಲಿ ಅಮಿತ್ ಸಾಹುಕಾರ ಇದ್ದ ಹಾಗೆ. ಸ್ಟೈಲ್ ಆಗಿ ಕಾರ್ ನಲ್ಲಿ ಅಮಿತ್ ಹೋಗುತ್ತಿದ್ದರು. ನಾನು ಶಾಟ್ ನಲ್ಲಿ ಮನೆ ಕೆಲಸದವಳಾಗಿ ನೆಲ ಸಾರಿಸುತ್ತಿದ್ದೆ. ಅದೇ ನಮ್ಮ ಫಸ್ಟ್ ಮೀಟಿಂಗ್. ಇದಾದ ಮೇಲೆ ''ನನ್ನ ಕಾಸ್ಟ್ಯೂಮ್ ಬ್ಯಾಗ್ ನ ಇಲ್ಲೇ (ಶೂಟಿಂಗ್ ಮನೆಯಲ್ಲಿ) ಇಟ್ಟು ಹೋಗುವೆ'' ಅಂತ ಅಮಿತ್ ಬಳಿ ಹೇಳಿದ್ದೆ. ಅವರು ಓಕೆ ಎಂದಿದ್ದರು. ಅವತ್ತು ರಾತ್ರಿ ಅದೇ ಬ್ಯಾಗ್ ನ ಹಿಡಿದುಕೊಂಡು ಅಮಿತ್ ನಿದ್ದೆ ಮಾಡಿದ್ರಂತೆ. ಎಷ್ಟೋ ವರ್ಷ ಆದ್ಮೇಲೆ, ಈ ವಿಚಾರವನ್ನ ಅಮಿತ್ ನನಗೆ ಹೇಳಿದ್ದರು'' - ಶ್ವೇತಾ ಶ್ರೀವಾತ್ಸವ್, ನಟಿ

  <br />ಮಗು ಆದ್ಮೇಲೆ 22 ಕೆ.ಜಿ ತೂಕ ಇಳಿಸಿದ ನಟಿ, ಸೆಕೆಂಡ್ ಇನ್ನಿಂಗ್ಸ್ ಗಾಗಿ ಶ್ವೇತಾ ತಯಾರಿ!
  ಮಗು ಆದ್ಮೇಲೆ 22 ಕೆ.ಜಿ ತೂಕ ಇಳಿಸಿದ ನಟಿ, ಸೆಕೆಂಡ್ ಇನ್ನಿಂಗ್ಸ್ ಗಾಗಿ ಶ್ವೇತಾ ತಯಾರಿ!

  ಮೊದಲ ಪ್ರೇಮಿಗಳ ದಿನ

  ಮೊದಲ ಪ್ರೇಮಿಗಳ ದಿನ

  ''ಬಳಿಕ ಫ್ರೆಂಡ್ಸ್ ಆದ್ವಿ. ಮೀಟ್ ಮಾಡುತ್ತಿದ್ವಿ. ನನ್ನ ಫ್ಯಾಮಿಲಿಗೂ ಅಮಿತ್ ಹತ್ತಿರವಾದರು. ಒಂದಿನ ಪ್ರಪೋಸ್ ಮಾಡಿದರು. ನಾನು ಒಪ್ಪಿಕೊಂಡೆ. ನಮ್ಮಿಬ್ಬರ ಮೊದಲ ವ್ಯಾಲೆಂಟೈನ್ಸ್ ದಿನದಂದು ಲಾಲ್ ಬಾಗ್ ಗೆ ಹೋಗಿ ಫೋಟೋ ತೆಗೆಸಿಕೊಂಡಿದ್ವಿ. ಆ ಫೋಟೋನ ಈಗಲೂ ಜೋಪಾನವಾಗಿ ಇಟ್ಟುಕೊಂಡಿದ್ದೇವೆ'' ಅಂತಾರೆ ಶ್ವೇತಾ ಶ್ರೀವಾತ್ಸವ್.

  ಶ್ವೇತಾ ಶ್ರೀವಾತ್ಸವ್ ಅವರ ಪುಟ್ಟ ಕಂದಮ್ಮನ ಮುದ್ದಾದ ಕ್ಷಣಗಳುಶ್ವೇತಾ ಶ್ರೀವಾತ್ಸವ್ ಅವರ ಪುಟ್ಟ ಕಂದಮ್ಮನ ಮುದ್ದಾದ ಕ್ಷಣಗಳು

  ಶ್ವೇತಾಗೆ ಅಮಿತ್ ಕೊಟ್ಟಿದ್ದ ಉಡುಗೊರೆ

  ಶ್ವೇತಾಗೆ ಅಮಿತ್ ಕೊಟ್ಟಿದ್ದ ಉಡುಗೊರೆ

  ''ಮದುವೆಗೆ ಮೊದಲು ಅಮಿತ್ ಗೆ ಮೊದಲ ಸಂಬಳ ಬಂದಾಗ, ಚಿನ್ನದ ಉಂಗುರ ಮಾಡಿಸಿಕೊಟ್ಟಿದ್ದರು. ಅದು ನನಗೆ ತುಂಬಾ ವಿಶೇಷವಾದ್ದದ್ದು'' - ಶ್ವೇತಾ ಶ್ರೀವಾತ್ಸವ್

  ಮದುವೆ ಆದ್ಮೇಲೆ...

  ಮದುವೆ ಆದ್ಮೇಲೆ...

  ''ಮದುವೆ ಆದ ಮೇಲೆ ನನ್ನ ಲೈಫ್ ತುಂಬಾ ಚೇಂಜ್ ಆಯ್ತು. ನಮ್ಮ ನಿಜವಾದ ಪ್ರೀತಿ ಶುರುವಾಗಿದ್ದೇ ಮದುವೆ ಆದ್ಮೇಲೆ. ಆಗಷ್ಟೇ ನಮ್ಮಿಬ್ಬರ ಕೆರಿಯರ್ ಶುರುವಾಗಿತ್ತು. ನನಗೆ ಸಿನಿಮಾ ಮಾಡಲು ಇಷ್ಟ ಇತ್ತು. ಅದಕ್ಕೆ ನನ್ನ ಪತಿ ಬೆಂಬಲ ಕೊಟ್ಟರು. ಅಭಿನಯಿಸಲು ಉತ್ತೇಜನ ನೀಡಿದರು. ನನ್ನಲ್ಲಿದ್ದ ಪ್ರತಿಭೆ ಬಗ್ಗೆ ಅವರಿಗೆ ಭರವಸೆ ಇತ್ತು'' - ಶ್ವೇತಾ ಶ್ರೀವಾತ್ಸವ್

  ಪರಸ್ಪರ ಬಾಂಧವ್ಯ

  ಪರಸ್ಪರ ಬಾಂಧವ್ಯ

  ''ನಾನು ಗರ್ಭಿಣಿ ಆಗಿದ್ದಾಗ, ತುಂಬಾ ಸಿಟ್ಟು ಬರುತ್ತಿತ್ತು. ಭಾವುಕಳಾಗಿ ಕಿರುಚಾಡುತ್ತಿದ್ದೆ. ಆಗ ಅಮಿತ್ ಸ್ವಲ್ಪ ಕೂಡ ಬೇಜಾರು ಮಾಡಿಕೊಂಡಿಲ್ಲ. ನನ್ನನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರು ಬೇಜಾರಾಗಿದ್ದರೆ, ನನಗೂ ಅರ್ಥ ಆಗುತ್ತೆ. ಪರಸ್ಪರ ಅರ್ಥ ಮಾಡಿಕೊಂಡರೆ ಜೀವನ ಚೆನ್ನ'' - ಶ್ವೇತಾ ಶ್ರೀವಾತ್ಸವ್

  ಜವಾಬ್ದಾರಿ ಮುಖ್ಯ

  ಜವಾಬ್ದಾರಿ ಮುಖ್ಯ

  ''ಸಿನಿಮಾದಲ್ಲಿ ನಾನು ಬಿಜಿಯಿದ್ದರೂ, ಪತಿಗೆ ಏನು ಬೇಕು ಅನ್ನೋದನ್ನ ತಿಳಿದುಕೊಂಡು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದೆ. 'ಕಿರಗೂರಿನ ಗಯ್ಯಾಳಿಗಳು' ಸಿನಿಮಾ ಮಾಡುವಾಗ, ಬೆಳಗ್ಗೆ ಅಮಿತ್ ಗಾಗಿ ತಿಂಡಿ-ಅಡುಗೆ ಮಾಡಿಟ್ಟು ಹೋಗುತ್ತಿದ್ದೆ'' - ಶ್ವೇತಾ ಶ್ರೀವಾತ್ಸವ್

  ಖುಷಿ ಜೀವನದ ಮಂತ್ರ

  ಖುಷಿ ಜೀವನದ ಮಂತ್ರ

  ''ನಾನು ಯಾವತ್ತೂ ಕಾಸ್ಟ್ಲಿ ಗಿಫ್ಟ್ಸ್ ಗಾಗಿ ಎದುರು ನೋಡಿಲ್ಲ. ಅಲ್ಲಿ ಹೋಗಬೇಕು, ಇಲ್ಲಿ ಹೋಗಬೇಕು ಅಂತ ಒತ್ತಾಯ ಮಾಡಿಲ್ಲ. ನಮ್ಮಿಬ್ಬರದ್ದು ಎಟರ್ನಲ್ ಲವ್. ನಮ್ಮ ನಡುವಿನ ಪ್ರೀತಿ, ಸ್ನೇಹಕ್ಕೆ ತುಂಬಾ ಗೌರವ ಕೊಡುತ್ತೇವೆ. ಎಷ್ಟೇ ಬಿಜಿಯಿದ್ದರೂ, ಪ್ರತಿ ದಿನ ಒಂದು ಗಂಟೆಯಾದರೂ, ಇಬ್ಬರು ಒಟ್ಟಿಗೆ ಕೂತು ಮಾತನಾಡುತ್ತೇವೆ. ನಾವು ಒಬ್ಬರಿಗೊಬ್ಬರು ಯಾವತ್ತೂ ಬಿಟ್ಟು ಕೊಟ್ಟಿಲ್ಲ'' - ಶ್ವೇತಾ ಶ್ರೀವಾತ್ಸವ್

  ಪ್ರೇಮಿಗಳ ದಿನದ ಸ್ಪೆಷಲ್

  ಪ್ರೇಮಿಗಳ ದಿನದ ಸ್ಪೆಷಲ್

  ''ಪ್ರತಿ ವರ್ಷ ವ್ಯಾಲೆಂಟೈನ್ಸ್ ಡೇಗೆ ಎಲ್ಲಾದರೂ ಹೊರಗೆ ಹೋಗುತ್ತೇವೆ. ಲಕ್ಷುರಿ ರೆಸಾರ್ಟ್ ಗಳಿಗೆ ಹೋಗುವುದೆಂದರೆ ನನಗೆ ಇಷ್ಟ. ಹೀಗಾಗಿ, ಪ್ರತಿ ವರ್ಷ ನನ್ನನ್ನ ಅಮಿತ್ ವ್ಯಾಲೆಂಟೈನ್ಸ್ ಡೇಗಾಗಿ ರೆಸಾರ್ಟ್ ಗೆ ಕರೆದುಕೊಂಡು ಹೋಗುತ್ತಾರೆ'' - ಶ್ವೇತಾ ಶ್ರೀವಾತ್ಸವ್

  English summary
  Valentines Day Special: Shwetha Srivatsav-Amith Srivatsav love and Marriage story.
  Friday, February 14, 2020, 17:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X