For Quick Alerts
  ALLOW NOTIFICATIONS  
  For Daily Alerts

  ಟಿಕ್ ಟಾಕ್ ನಿಷೇಧದ ಸುತ್ತ: ಗೆದ್ದವರು ಯಾರು? ಸೋತವರು ಯಾರು?

  |

  ಟಿಕ್ ಟಾಕ್ ಬ್ಯಾನ್! ಇದು ದೇಶದ ಲಕ್ಷಾಂತರ ಮಂದಿಗೆ ಖುಷಿ ಕೊಟ್ಟ ಹಾಗೆಯೇ ಲಕ್ಷಾಂತರ ಟಿಕ್ ಟಾಕ್ ಪ್ರಿಯರಿಗೆ ಬೇಸರ ಮೂಡಿಸಿರುವ ಸಂಗತಿ. ಒಂದಷ್ಟು ವರ್ಗ ಸ್ವಾಗತಿಸಿದ್ದರೆ, ಇನ್ನೊಂದು ವರ್ಗ ಟಿಕ್ ಟಾಕ್ ನಿಷೇಧದ ಕ್ರಮವನ್ನು ಖಂಡಿಸಿವೆ. ಮನರಂಜನೆಯ ವೇದಿಕೆಯಾಗಿ ಸೃಷ್ಟಿಯಾದ ಈ ಆಪ್, ಕೊನೆಗೆ ದೇಶಪ್ರೇಮ ಪ್ರದರ್ಶನದ ಸಂಗತಿಯೂ ಆಗಿ ಬದಲಾಗಿದೆ. ಒಂದು ಆಪ್ ಇಷ್ಟೆಲ್ಲ ಸಂಚಲನ ಮೂಡಿಸಿದ್ದು ಹೇಗೆ ಮತ್ತು ಏಕೆ?

  Shivanna in Farm House,ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

  ಚೀನಾ ಮತ್ತು ಭಾರತದ ಸಂಘರ್ಷದ ಸಂಗತಿ ಮುನ್ನೆಲೆಗೆ ಬಂದ ವೇಳೆ ಚೀನಾದ ವಸ್ತುಗಳು, ಆಪ್‌ಗಳು ಮುಂತಾದವುಗಳ ನಿಷೇಧ, ಬಹಿಷ್ಕಾರದ ಮಾತು ಕೇಳಿಬರುತ್ತಿತ್ತು. ಈಗ ಚೀನಾ ಮೂಲದಲ್ಲಿ ತಯಾರಾದ ಟಿಕ್ಟಾಕ್ ಸೇರಿದಂತೆ 59 ಆಪ್‌ಗಳನ್ನು ನಿಷೇಧಿಸಿರುವುದು ಚರ್ಚೆಯನ್ನು ತೀವ್ರಗೊಳಿಸಿದೆ.

  ಟಿಕ್‌ಟಾಕ್ ಬ್ಯಾನ್ ಮಾಡುವುದು ಬೇಡ ಎಂದ 'ಕಿರಿಕ್ ಹುಡುಗಿ'

  ಅಂದಹಾಗೆ, ಟಿಕ್ ಟಾಕ್ ಆಪ್ ನಿಷೇಧ ಮತ್ತು ಅದರ ವಿರುದ್ಧದ ಅಭಿಪ್ರಾಯಗಳು ಚೀನಾ ಸಂಘರ್ಷದಾಚೆಗೂ ಚರ್ಚೆಯಾಗಿದ್ದವು. ಟಿಕ್ ಟಾಕ್ ಮನರಂಜನಾ ಮಾಧ್ಯಮ ಎಂದು ಪರಿಗಣಿಸಿದ್ದರೂ, ಅದರಿಂದ ಜನರ ಮೇಲೆ ಮಾನಸಿಕ ಮತ್ತು ದೈಹಿಕ ಪರಿಣಾಮಗಳು ಉಂಟಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಏಕೆಂದರೆ ಅನೇಕ ಟಿಕ್ ಟಾಕ್ ಬಳಕೆದಾರರ ಪಾಲಿಗೆ ಅದೊಂದು ದಿನಚರಿಯ ಭಾಗವಾಗಿತ್ತು. ಇನ್ನು ಕೆಲವರಿಗೆ ಟಿಕ್ ಟಾಕ್ ಸರ್ವಸ್ವವೂ ಆಗಿಬಿಟ್ಟಿತ್ತು. ಅನೇಕರಿಗೆ ಆದಾಯದ ಮೂಲವೂ ಆಗಿತ್ತು. ಮುಂದೆ ಓದಿ...

  ಟಿಕ್ ಟಾಕ್ ಜನಪ್ರಿಯವಾಗಿದ್ದು ಹೇಗೆ?

  ಟಿಕ್ ಟಾಕ್ ಜನಪ್ರಿಯವಾಗಿದ್ದು ಹೇಗೆ?

  ಟಿಕ್ ಟಾಕ್ ಪರ ವಿರೋಧದ ಚರ್ಚೆ ಅದು ಭಾರತದಲ್ಲಿ ಜನಪ್ರಿಯವಾಗತೊಡಗಿದ ಸಂದರ್ಭದಿಂದಲೂ ಇದೆ. ಟಿಕ್ ಟಾಕ್ ಜನಪ್ರಿಯವಾಗಲು ಕಾರಣ ನಮ್ಮದೇ ಭಾಷೆಯ ತಮ್ಮ ನೆಚ್ಚಿನ ಹೀರೋ-ಹೀರೋಯಿನ್‌ನ ಹಾಡು, ಡೈಲಾಗ್‌ಗಳಿಗೆ ತುಟಿ ಚಲನೆ ಮಾಡಬಹುದು ಮತ್ತು ಅದಕ್ಕೆ ತಕ್ಕಂತೆ ವೇಷಭೂಷಣಗಳನ್ನು ಮಾಡಿಕೊಳ್ಳಬಹುದು ಎನ್ನುವುದು. ಸ್ಮಾರ್ಟ್ ಫೋನ್ ಹೊಂದಿರುವ ಪ್ರತಿಯೊಬ್ಬರಿಗೂ ಇದು ಮುಕ್ತವಾಗಿ ಸಿಗತೊಡಗಿತು. ದೇಶದ ಯಾವುದೋ ಮೂಲೆಯಲ್ಲಿ ಬಳಕೆದಾರ ಮಾಡಿದ ವಿಡಿಯೋಕ್ಕೆ ಇನ್ಯಾವುದೋ ಮೂಲೆಯಲ್ಲಿರುವ ವ್ಯಕ್ತಿ, ಲೈಕ್-ಕಾಮೆಂಟ್ ನೀಡುವುದು ಇಷ್ಟವಾಗತೊಡಗಿತು. ಹೀಗೆ ವಿಡಿಯೋಗಳು ಜನಪ್ರಿಯವಾಗುತ್ತಿದ್ದಂತೆಯೇ ಅದರ ಮೇಲೆ ಜನರ ಆಸಕ್ತಿಯೂ ಹೆಚ್ಚತೊಡಗಿತು.

  ಟಿಕ್ ಟಾಕ್ ಎಂಬ ವ್ಯಸನ

  ಟಿಕ್ ಟಾಕ್ ಎಂಬ ವ್ಯಸನ

  ಜನಸಾಮಾನ್ಯರು ಮಾತ್ರವಲ್ಲ, ಅನೇಕ ತಾರೆಯರು ಕೂಡ ಟಿಕ್ ಟಾಕ್ ಬಳಸತೊಡಗಿದರು. ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್, ತೆಲುಗು ಮತ್ತು ಹಿಂದಿ ಹಾಡುಗಳಿಗೆ ತನ್ನ ಹೆಂಡತಿ ಮಕ್ಕಳ ಜತೆ ನರ್ತಿಸುವ ವಿಡಿಯೋಗಳನ್ನು ಪ್ರತಿದಿನವೂ ಮಾಡುತ್ತಿರುವುದನ್ನು ನೋಡಿದಾಗ ಇದು ಯಾವ ಮಟ್ಟಕ್ಕೆ ಜನರ ಮನಸ್ಸನ್ನು ಆವರಿಸಿಕೊಂಡಿದೆ ಎನ್ನುವುದು ಅರ್ಥವಾಗುತ್ತದೆ.

  ಭಾರತದಲ್ಲಿಯೇ ಟಿಕ್ ಟಾಕ್ ಬಳಕೆದಾರರ ಸಂಖ್ಯೆ 200 ಮಿಲಿಯನ್‌ಗೂ ಅಧಿಕವಿತ್ತು. ಟಿಕ್ ಟಾಕ್‌ ನಿಷೇಧ ಮುಂದುವರಿದರೆ ಈ ಬಳಕೆದಾರರು ಬೇರೆ ಆಪ್‌ಗಳತ್ತ ಮುಖಮಾಡುವ ಸಾಧ್ಯತೆ ಇದೆ. ಅದಕ್ಕೆ ಪೂರಕವೆಂಬಂತೆ ದೇಶಿ ಆಪ್ 'ಚಿಂಗಾರಿ'ಗೆ ಭಾರಿ ಬೇಡಿಕೆ ಉಂಟಾಗಿದೆ. ಅಂದರೆ ಜನರು, ಈ ಪ್ರಕಾರದ ಮನರಂಜನಾ ವೇದಿಕೆಯನ್ನು ತೊರೆಯಲು ಬಯಸುತ್ತಿಲ್ಲ ಎನ್ನುವುದು ಸ್ಪಷ್ಟ. ಅಷ್ಟರಮಟ್ಟಿಗೆ ಟಿಕ್‌ಟಾಕ್‌ಗೆ ಅಡಿಕ್ಟ್ ಆಗಿದ್ದರು. ಟಿಕ್ ಟಾಕ್ ಮಾಡದೆ, ಅದರಲ್ಲಿ ಒಮ್ಮೆ ಕಣ್ಣಾಡಿಸದೆ, ತಮ್ಮ ನೆಚ್ಚಿನ 'ಸ್ಟಾರ್' ಯಾವ ವಿಡಿಯೋ ಹಾಕಿದ್ದಾರೆ ಎಂಬುದನ್ನು ನೋಡದೆ ದಿನ ಕಳೆಯುವುದಿಲ್ಲ ಎನ್ನುವಷ್ಟು ಅದಕ್ಕೆ ದಾಸರಾಗಿದ್ದರು. ಆದರೆ ಅದಕ್ಕಿಂತಲೂ ಅಪಾಯಕಾರಿಯಾದ ಮತ್ತೊಂದು ವಿಚಾರವಿತ್ತು.

  ಟ್ರೋಲ್ ಪುಟಗಳ ದಾಳಿ

  ಟ್ರೋಲ್ ಪುಟಗಳ ದಾಳಿ

  ಅದು 'ಸಂಸ್ಕೃತಿ ಸಂರಕ್ಷಣೆ'ಯ ಹೋರಾಟ! ಟಿಕ್ ಟಾಕ್‌ ಬಳಕೆದಾರರಲ್ಲಿ ಹೆಚ್ಚಿನವರು ಯುವತಿಯರು, ವಿವಾಹಿತ ಮಹಿಳೆಯರೂ ಇದ್ದಾರೆ. ಕೆಲವರಿಗೆ ತಮ್ಮ ಪ್ರತಿಭೆ ತೋರಿಸುವ ಬಯಕೆ, ಕೆಲವರಿಗೆ ಗೀಳು, ಇನ್ನು ಅನೇಕರಿಗೆ ತಮ್ಮ ನೋವು ಮರೆಯುವ ಮಾರ್ಗ. ಇಲ್ಲಿನ ಮುಕ್ತತೆ ಕಂಡ ಅನೇಕರು ಎಗ್ಗುಸಿಗ್ಗಿಲ್ಲದೆ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳಲು ಶುರುಮಾಡಿದರು. ನಮ್ಮ ವಿಡಿಯೋಸ್‌ಗೂ ಲೈಕ್ ಕೊಡಿಸಿ ಎಂದು ಬೇಡತೊಡಗಿದರು. ಇವೆಲ್ಲವೂ ಟ್ರೋಲ್ ಪೇಜ್‌ಗಳಿಗೆ ಆಹಾರವಾಗತೊಡಗಿತು. ಟ್ರೋಲ್ ಪುಟಗಳು ಹೆಚ್ಚು ಟಾರ್ಗೆಟ್ ಮಾಡಲು ಆರಂಭಿಸಿದ್ದು ಹೆಣ್ಣುಮಕ್ಕಳನ್ನು.

  ಅಶ್ಲೀಲ ನಿಂದನೆಗಳಿಗೆ ದಾರಿ

  ಅಶ್ಲೀಲ ನಿಂದನೆಗಳಿಗೆ ದಾರಿ

  ಟಿಕ್ ಟಾಕ್ ವಿಡಿಯೋಗಳ ಜತೆಗೆ ಇತರೆ ವಿಡಿಯೋಗಳನ್ನು ಜೋಡಿಸಿ ಅಶ್ಲೀಲ ಕಾಮೆಂಟ್ ಹಾಕತೊಡಗಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದಷ್ಟೂ ಟಿಕ್ ಟಾಕ್ ಬಳಕೆದಾರರು ಮತ್ತಷ್ಟು ಟ್ರೋಲ್‌ಗೆ ಒಳಗಾದರು. ಹೆಣ್ಣುಮಕ್ಕಳು ಹೀಗೆಯೇ ಬಟ್ಟೆ ಹಾಕಬೇಕು, ಇಂತಹದ್ದೇ ವಿಡಿಯೋಗಳನ್ನು ಮಾಡಬೇಕು ಎಂದು ನಿರ್ದೇಶಿಸುವ ಸಂಸ್ಕೃತಿ ಪ್ರತಿಪಾದಕರು ಮೀಸೆ ತಿರುವಿದರು. 'ವಿಡಿಯೋ ಡಿಲೀಟ್ ಮಾಡೇ' ಎಂದು ಅಬ್ಬರಿಸಿ ಬೆದರಿಸಿದರು. ತಮ್ಮನ್ನು ಅಶ್ಲೀಲವಾಗಿ ನಿಂದಿಸಿದ ವಿಡಿಯೋಗಳನ್ನು ಕಂಡು ಟಿಕ್ ಟಾಕ್ ಬಳಕೆದಾರರು ಕಣ್ಣೀರಿಟ್ಟರೆ ಅದನ್ನೂ ಲೇವಡಿ ಮಾಡಿದರು. ಇಲ್ಲಿಯೂ ನೈತಿಕ ಪೊಲೀಸ್‌ಗಿರಿ ಪ್ರದರ್ಶನವಾಗುತ್ತಿತ್ತು. ಅದು ಹಲ್ಲೆ ಅಥವಾ ಬೆದರಿಕೆ ರೂಪದಲ್ಲಿ ಮಾತ್ರವಲ್ಲ, ಅಶ್ಲೀಲ ಬೈಗುಳ ಮತ್ತು ವಿಡಿಯೋಗಳ ಮೂಲಕ. ಟಿಕ್ ಟಾಕ್ ಮಾಡುವ ಯುವತಿಯರನ್ನು ವ್ಯಭಿಚಾರಿಗಳು ಎಂದು ನಿಂದಿಸುವ ನೀಚ ಮಟ್ಟಕ್ಕೂ ಇಳಿದರು.

  ಅಪರಾಧದ ಮಾರ್ಗ

  ಅಪರಾಧದ ಮಾರ್ಗ

  ಟಿಕ್ ಟಾಕ್ ಜನರು ತಮ್ಮ ಖುಷಿಯನ್ನು ಕಂಡುಕೊಳ್ಳುವ ಮಾಧ್ಯಮವಷ್ಟೇ. ಆದರೆ ಅಷ್ಟಾಗಿಯೇ ಉಳಿದಿದ್ದರೆ ಅದು ಇಷ್ಟೊಂದು ಚರ್ಚೆಗೆ ಒಳಗಾಗುತ್ತಿರಲಿಲ್ಲ. ಟಿಕ್ ಟಾಕ್ ವಿಡಿಯೋಗಳು ಹಿಂಸೆ, ಅಪರಾಧ, ಲೈಂಗಿಕ ಪ್ರಚೋದನೆ, ವಂಚನೆ, ಆಸಿಡ್ ದಾಳಿಯಂತಹ ಗಂಭೀರ ಮತ್ತು ಆಘಾತಕಾರಿ ಸಂಗತಿಗಳಿಗೂ ಜಾಗ ಒದಗಿಸಿತ್ತು. ಇದರಿಂದ ಹೆಸರು ಮಾಡಿದವರು ಬೆದರಿಕೆಗಳಿಗೂ ಒಳಗಾಗುತ್ತಿದ್ದರು. ಬಳಕೆದಾರರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಘಟನೆಗಳೂ ನಡೆದಿದ್ದವು.

  ಇತ್ತೀಚೆಗೆ ಸಿಯಾ ಕಕ್ಕರ್ ಎಂಬ 16ರ ತರುಣಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಗೆ ಟಿಕ್‌ಟಾಕ್‌ನಲ್ಲಿಯೇ 2 ಮಿಲಿಯನ್ ಫಾಲೋವರ್‌ಗಳಿದ್ದರು. ಇದರ ಮೂಲಕವೇ ಆಕೆ ಚಿಕ್ಕವಯಸ್ಸಿನಲ್ಲಿಯೇ ಲಕ್ಷಗಟ್ಟಲೆ ಸಂಪಾದನೆಯನ್ನೂ ಮಾಡಿದ್ದಳು. ಆಕೆಯ ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಆಕೆಗೆ ಒತ್ತಡ ಮತ್ತು ಬೆದರಿಕೆ ಕರೆಗಳು ಬರುತ್ತಿದ್ದವು ಎನ್ನಲಾಗಿದೆ.

  ಟಿಕ್ ಟಾಕ್‌ನಂತಹ ಆಪ್ ಬೇಕೇ?

  ಟಿಕ್ ಟಾಕ್‌ನಂತಹ ಆಪ್ ಬೇಕೇ?

  ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಹಲವು ಬಗೆಯ ಚರ್ಚೆಗಳಾಗುತ್ತಿವೆ. ಟ್ರೋಲ್ ಪುಟಗಳಿಗೆ ಇನ್ನು ಹೆಚ್ಚು ವಿಷಯಗಳು ಸಿಗುವುದಿಲ್ಲ ಎಂಬ ಮೀಮ್‌ಗಳು ಹರಿದಾಡುತ್ತಿವೆ. ಹಾಗೆಯೇ ಟಿಕ್ ಟಾಕ್ ಮಾಡಲು ದೊಡ್ಡುಕೊಟ್ಟು ಖರೀದಿ ಮಾಡಿದ್ದ ಉಡುಪು, ಆಭರಣ ಮತ್ತು ವಸ್ತುಗಳು ವ್ಯರ್ಥವಾಗಲಿವೆ ಪಾಪ ಎಂದು ಟ್ರೋಲ್ ಪುಟಗಳು ತಮಾಷೆ ಮಾಡುತ್ತಿವೆ. 'ಟಿಕ್ ಟಾಕ್ ಒಂದು ಮನರಂಜನಾ ಆಪ್. ಇದರಿಂದ ಅನೇಕರು ನಿರುದ್ಯೋಗಿಗಳಾಗಲಿದ್ದಾರೆ. ಅಪನಗದೀಕರಣದಂತೆಯೇ ಜನರು ಸಂಕಷ್ಟಪಡಲಿದ್ದಾರೆ' ಎಂದು ನಟಿ, ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.

  ಕಿರುತೆರೆ, ಸಿನಿಮಾಗಳಂತೆಯೇ ಟಿಕ್ ಟಾಕ್ ಮನರಂಜನೆಯ ವೇದಿಕೆಯಾಗಿತ್ತೇ? ಇದರಿಂದ ಪ್ರತಿಭೆಗಳು ಹೊರಬರುತ್ತಿದ್ದರೇ? ಅಥವಾ ಇದು ಸಮಯ ಹಾಳು ಮಾಡುವ ನಿಷ್ಪ್ರಯೋಜಕ ಆಪ್ ಆಗಿತ್ತೇ? ಇದರಿಂದ ತೊಂದರೆಗಳೇ ಹೆಚ್ಚಿದ್ದವೇ? ಟಿಕ್ ಟಾಕ್ ಬ್ಯಾನ್ ಬಳಿಕ ಮುಂದೇನು? ಅದಕ್ಕೆ ಪರ್ಯಾಯ ಆಪ್‌ಗಳು ಜನರ ದಾಹ ತಣಿಸಲಿವೆಯೇ? ಪ್ರಶ್ನೆ ಮತ್ತು ಚರ್ಚೆಗಳು ಮುಂದುವರಿಯಲಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

  English summary
  TikTok is one of the most debated app in India. Many thinks it was a platform for talents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X