For Quick Alerts
  ALLOW NOTIFICATIONS  
  For Daily Alerts

  ನಟ ರಘುವೀರ್‌ ಪತ್ನಿ-ಮಗಳು ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ?

  |

  'ಚೈತ್ರದ ಪ್ರೇಮಾಂಜಲಿ', 'ಶೃಂಗಾರ ಕಾವ್ಯ' ಚಿತ್ರಗಳ ಮೂಲಕ ರಘುವೀರ್ ಎಂಬ ನಾಯಕನಟ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದ್ದು ಈಗ ಇತಿಹಾಸ. ಘಟಾನುಘಟಿ ಹೀರೋಗಳು ಮಿಂಚುತ್ತಿದ್ದ ಸಮಯದಲ್ಲಿ ಚಿತ್ರರಂಗ ಪ್ರವೇಶಿಸಿದ ರಘವೀರ್ ಯಾರೂ ನಿರೀಕ್ಷೆ ಮಾಡದ ರೀತಿ ಗೆದ್ದು ಬೀಗಿದ್ದರು. ಹೀಯಾಳಿಸಿದ್ದವರ ಮುಂದೆ ದೊಡ್ಡ ಮಾರುಕಟ್ಟೆ ಸೃಷ್ಟಿಸಿಕೊಂಡು ಅಚ್ಚರಿಯಾಗಿ ನಿಂತರು.

  ರಘುವೀರ್ ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ದುರಂತ ನಾಯಕನಾಗಿ ಉಳಿದುಬಿಟ್ಟರು. ನಟಿ ಸಿಂಧು ಜೊತೆ ಮದುವೆ, ತನ್ನ ತಂದೆಯ ಜೊತೆ ಭಿನ್ನಾಭಿಪ್ರಾಯ, ಸಿಂಧು ಸಾವು, ಸಿನಿಮಾಗಳ ಸೋಲಿನಿಂದ ಬಹಳ ನೋವು ಅನುಭವಿಸಿದರು. ಇಂತಹ ಸಂದರ್ಭದಲ್ಲಿ ರಘುವೀರ್ ಅವರ ಕೈ ಹಿಡಿದಿದ್ದು ಗೌರಿ. ಮೊದಲ ಪತ್ನಿ ನಿಧನದ ಬಳಿಕ ಗೌರಿ ಜೊತೆ ಸಪ್ತಪದಿ ತುಳಿದ ರಘುವೀರ್‌ಗೆ ಮಗಳು ಸಹ ಇದ್ದಾರೆ.

  ಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯ

  ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದರೂ ಎಲ್ಲರಿಂದಲೂ ದೂರು ಉಳಿದು ಬದುಕಿದರು ರಘುವೀರ್. ಸ್ನೇಹಿತರು, ತನ್ನವರು ಎನಿಸಿಕೊಂಡವರು ಹಣಕ್ಕಾಗಿ, ಮೋಜು ಮಸ್ತಿಗಾಗಿ ತನ್ನೊಂದಿಗೆ ಬಂದರೇ ಹೊರತು ಕಷ್ಟದಲ್ಲಿದ್ದಾಗ ಯಾರೂ ಜೊತೆ ನಿಲ್ಲಲಿಲ್ಲ ಎಂದು ರಘುವೀರ್ ಹೇಳಿಕೊಂಡಿದ್ದರು. ಮೇ 8ಕ್ಕೆ ರಘುವೀರ್ ಅವರು ಅಗಲಿ ಏಳು ವರ್ಷ ಕಳೆದಿದೆ. ರಘುವೀರ್ ಅವರ ಪತ್ನಿ ಈಗ ಎಲ್ಲಿದ್ದಾರೆ? ಅವರ ಮಕ್ಕಳು ಏನ್ ಮಾಡ್ತಿದ್ದಾರೆ? ಮುಂದೆ ಓದಿ...

  ರಘುವೀರ್ ಬದುಕಿನಲ್ಲಿ ಗೌರಿ ಪ್ರವೇಶ

  ರಘುವೀರ್ ಬದುಕಿನಲ್ಲಿ ಗೌರಿ ಪ್ರವೇಶ

  'ಶೃಂಗಾರ ಕಾವ್ಯ' ಸಿನಿಮಾ ನಟಿ ಸಿಂಧು ಅವರನ್ನು ಪ್ರೀತಿಸಿ ರಘುವೀರ್ ವಿವಾಹವಾದರು. 1992 ನವೆಂಬರ್ 15 ರಂದು ಈ ಮದುವೆ ನಡೆದಿತ್ತು. ಇವರಿಬ್ಬರಿಗೆ ಒಂದು ಹೆಣ್ಣು ಮಗು ಸಹ ಜನಿಸಿತು. ಆರೋಗ್ಯ ಸಮಸ್ಯೆಗೆ ತುತ್ತಾದ ನಟಿ ನಟಿ ಸಿಂಧು 2003ರಲ್ಲಿ ವಿಧಿವಶರಾದರು. ಅದಾದ ಬಳಿಕ ಒಬ್ಬಂಟಿಯಾಗಿದ್ದ ರಘುವೀರ್ ಬದುಕಿನಲ್ಲಿ ಗೌರಿ ಪ್ರವೇಶ ಆಯಿತು.

  ಸೋದರತ್ತೆ ಮಗಳ ಜೊತೆ ರಘುವೀರ್ ಕಲ್ಯಾಣ

  ಸೋದರತ್ತೆ ಮಗಳ ಜೊತೆ ರಘುವೀರ್ ಕಲ್ಯಾಣ

  ಸಂಬಂಧದಲ್ಲಿ ಸೋದರತ್ತೆ ಮಗಳಾಗಿದ್ದ ಗೌರಿ ಅವರನ್ನು ರಘುವೀರ್ ಅವರು ಎರಡನೇ ವಿವಾಹವಾದರು. ಚಿಕ್ಕ ವಯಸ್ಸಿನಲ್ಲಿಯೇ ಇಬ್ಬರಿಗೂ ಮದುವೆ ಮಾಡಬೇಕೆಂದು ಮನೆಯವರು ಆಸೆ ಪಟ್ಟಿದ್ದರು. ಆದರೆ, ಚಿತ್ರರಂಗ ಪ್ರವೇಶಿಸಿದ್ದ ರಘುವೀರ್ ಬದುಕಿನಲ್ಲಿ 'ಸಿಂಧು' ಆಗಮನವಾಗಿತ್ತು. ಎರಡನೇ ಅವಕಾಶದಲ್ಲಿ ರಘುವೀರ್ ಅವರು ಗೌರಿ ಕೈ ಹಿಡಿದರು. ಗೌರಿ ಮತ್ತು ರಘುವೀರ್ ದಂಪತಿಗೆ ಮೋಕ್ಷಾ ಎಂಬ ಹೆಣ್ಣು ಮಗಳಿದ್ದಾರೆ.

  ನಟ ರಘುವೀರ್ ಬಾಳಿಗೆ ಮುಳ್ಳಾದವರು ಯಾರು?ನಟ ರಘುವೀರ್ ಬಾಳಿಗೆ ಮುಳ್ಳಾದವರು ಯಾರು?

  ಬಿಟಿಎಂ ಲೇಔಟ್‌ನಲ್ಲಿ ಗೌರಿ-ಮೋಕ್ಷಾ ರಘುವೀರ್

  ಬಿಟಿಎಂ ಲೇಔಟ್‌ನಲ್ಲಿ ಗೌರಿ-ಮೋಕ್ಷಾ ರಘುವೀರ್

  ರಘುವೀರ್ ಅವರ ಎರಡನೇ ಮಗಳು ಮೋಕ್ಷಾ ಈಗ ತಾಯಿಯ ಜೊತೆ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಇದ್ದಾರೆ. ಮೋಕ್ಷಾ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೆ ನಿರ್ದೇಶಕ ರಘುರಾಮ್ ಅವರು ಗೌರಿ ರಘುವೀರ್ ಮತ್ತು ಮೋಕ್ಷಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಆ ಆಡಿಯೋ ಕ್ಲಿಪ್‌ನ್ನು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಂಡಿದ್ದಾರೆ.

  Recommended Video

  Bigg Boss ಮನೆಯಿಂದ ಬಂದ ತಕ್ಷಣ Shubha Poonja ಮಾಡ್ತಿರೋ ಕೆಲಸ ನೋಡಿ | Filmibeat Kannada
  ಸಿಂಧು-ರಘುವೀರ್ ಮಗಳು

  ಸಿಂಧು-ರಘುವೀರ್ ಮಗಳು

  ಈ ಮೊದಲೇ ಹೇಳಿದಂತೆ ರಘುವೀರ್ ಮತ್ತು ಸಿಂಧು ದಂಪತಿಗೂ ಒಬ್ಬ ಹೆಣ್ಣು ಮಗಳಿದ್ದರು. ಸದ್ಯದ ಮಾಹಿತಿ ಪ್ರಕಾರ, ಅವರು ಚೆನ್ನೈನಲ್ಲಿ ಸಿಂಧು ಅವರ ತಂದೆ-ತಾಯಿ ಕುಟುಂಬದವರ ಜೊತೆ ಇದ್ದಾರೆ. ಸಿಂಧು-ರಘುವೀರ್ ಮಗಳ ಫೋಟೋವೊಂದು ಲಭ್ಯವಾಗಿದ್ದು, ಹೆಚ್ಚಿನ ಮಾಹಿತಿ ಇಲ್ಲ.

  English summary
  Where is late kannada actor Raghuveer's daughter?
  Thursday, May 13, 2021, 14:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X