twitter
    For Quick Alerts
    ALLOW NOTIFICATIONS  
    For Daily Alerts

    ರಾಜಮೌಳಿ ಸಿನಿಮಾ ಚಿತ್ರೀಕರಣಕ್ಕೆ ಬಳಸುವ ಕ್ಯಾಮೆರಾ ಯಾವುದು? ವಿಶೇಷತೆ ಏನು? ಬೆಲೆ ಎಷ್ಟು?

    |

    'ಕತೆ ಹೇಳಬೇಕಷ್ಟೆ, ಅದಕ್ಕೆ ಬಳಸುವ ಟೂಲ್ಸ್ ಯಾವುದಾದರೂ ಆಗಿರಲಿ' ಎಂಬುದು ಸಿನಿಮಾ ಬಗ್ಗೆ ಹೇಳಲಾಗುತ್ತಿದ್ದ ಹಳೆಯ ಮಾತಾಯಿತು. ಈಗಿನ ಸಿನಿಮಾ ನಿರ್ಮಾಣ ಶೈಲಿಯಲ್ಲಿ ತಂತ್ರಜ್ಞಾನ ಮುನ್ನಲೆಯಲ್ಲಿದೆ. ಹಾಗಾಗಿ ಉತ್ತಮ ಕತೆಯ ಜೊತೆಗೆ ಅತ್ಯುತ್ತಮ ತಂತ್ರಜ್ಞಾನವೂ ಇರಲೇ ಬೇಕಾಗುತ್ತದೆ.

    ಕತೆ ಹೇಳಲು ತಂತ್ರಜ್ಞಾನವನ್ನು ಅದ್ಭುತವಾಗಿ ದುಡಿಸಿಕೊಳ್ಳುವ ನಿರ್ದೇಶಕರಲ್ಲಿ ರಾಜಮೌಳಿ ಮೊದಲಿಗರು. ಸಿನಿಮಾ ಶೂಟಿಂಗ್ ಪ್ರಾರಂಭಿಸುವ ಮುನ್ನವೇ ಬೇರೆ-ಬೇರೆ ದೇಶಗಳಿಗೆ ಭೇಟಿ ಕೊಟ್ಟು ತಮ್ಮ ಸಿನಿಮಾಕ್ಕೆ ಬಳಸಬಹುದಾದ ಅಲ್ಲಿನ ಬೆಸ್ಟ್ ತಂತ್ರಜ್ಞಾನಗಳನ್ನು ಹುಡುಕಿ ಅದನ್ನು ಶಕ್ತವಾಗಿ ಬಳಸಿಕೊಳ್ಳುತ್ತಾರೆ.

    ಅವರ ಇತ್ತೀಚಿನ 'RRR' ಸಿನಿಮಾಕ್ಕೆ ಹಲವು ನವೀನ ತಂತ್ರಜ್ಞಾನಗಳನ್ನು ರಾಜಮೌಳಿ ಬಳಸಿ ತೆರೆಯ ಮೇಲೆ ಸಿನಿಮಾ ಅತ್ಯದ್ಭುತವಾಗಿ ಕಾಣುವಂತೆ ಮಾಡಲು ಸಫಲರಾಗಿದ್ದಾರೆ. ಅವರ ಸಿನಿಮಾದ ದೃಶ್ಯಗಳು ತೀಕ್ಷ್ಣವಾಗಿಯೂ, ಬಣ್ಣಗಳಿಂದ ತುಂಬಿರುವಂತೆಯೂ ಕಾಣುತ್ತವೆ. ಇದಕ್ಕಾಗಿ ವಿಶೇಷ ಕ್ಯಾಮೆರಾವನ್ನು ರಾಜಮೌಳಿ ಹಾಗೂ ಅವರ ಕ್ಯಾಮೆರಾಮನ್ ಸೆಂಥಿಲ್‌ಕುಮಾರ್ ಬಳಸಿದ್ದಾರೆ. ಅದ್ಯಾವ ಕ್ಯಾಮೆರಾ? ಅದರ ವಿಶೇಷತೆ ಏನು? ಮುಂದೆ ತಿಳಿಯೋಣ.

    RRR ಗೆ ಬಳಸಿರುವುದು ಯಾವ ಕ್ಯಾಮೆರಾ?

    RRR ಗೆ ಬಳಸಿರುವುದು ಯಾವ ಕ್ಯಾಮೆರಾ?

    ಒಂದೇ ತಂತ್ರಜ್ಞರ ತಂಡದೊಂದಿಗೆ ಕೆಲಸ ಮಾಡುವುದು ರಾಜಮೌಳಿಯ ಶೈಲಿ. ತಮ್ಮ ನಂಬುಗೆಯ ತಂತ್ರಜ್ಞರನ್ನು ಅವರು ಬದಲಿಸುವುದಿಲ್ಲ. ಅವರ ನಿರ್ದೇಶನದ 'ಸೈ' ಸಿನಿಮಾದಿಂದಲೂ ಈವರೆಗಿನ ಅವರ ಎಲ್ಲ ಸಿನಿಮಾಕ್ಕೂ ಸೆಂಥಿಲ್‌ಕುಮಾರ್ ಅವರೇ ಕ್ಯಾಮೆರಾಮನ್. 'RRR'ಗೂ ಸಹ ಅವರೇ ಕ್ಯಾಮೆರಾ ಹಿಡಿದಿರುವುದು. ಸೆಂಥಿಲ್ ಕುಮಾರ್, 'RRR' ಸಿನಿಮಾದ ಚಿತ್ರೀಕರಣಕ್ಕೆ ಬಳಸಿರುವುದು 'ARRI' ನ 'Alexa LF' ಕ್ಯಾಮೆರಾವನ್ನು. ಇದು ಸಾಮಾನ್ಯ ಕ್ಯಾಮೆರಾ ಅಲ್ಲ. ಹಲವು ವಿಶಿಷ್ಟತೆಗಳುಳ್ಳ ಅತ್ಯಂತ ದುಬಾರಿ ಕ್ಯಾಮೆರಾ.

    ಸೆಂಥಿಲ್ ಕುಮಾರ್ ಅನುಭವ ಏನು?

    ಸೆಂಥಿಲ್ ಕುಮಾರ್ ಅನುಭವ ಏನು?

    ರಾಜಮೌಳಿಯ ಮೆಚ್ಚಿನ ಕ್ಯಾಮೆರಾಮನ್ ಸೆಂಥಿಲ್ ಕುಮಾರ್ ಹೇಳಿರುವಂತೆ, 2018 ರಲ್ಲಿ ಮೊದಲ ಭಾರಿಗೆ 'RRR' ಸಿನಿಮಾ ಘೋಷಣೆಯಾದಾಗಲೇ ಅವರು ಎಲೆಕ್ಸಾ ಎಲ್‌ಎಫ್‌ನ ಹೊಸ ಕ್ಯಾಮೆರಾದೊಟ್ಟಿಗೆ ಈ ಸಿನಿಮಾವನ್ನು ಚಿತ್ರೀಕರಿಸಲು ನಿರ್ಧರಿಸಿದ್ದರಂತೆ. ಚಿತ್ರೀಕರಣಕ್ಕೆ ಸಿಗ್ನೇಚರ್ ಲೆನ್ಸ್‌ ಬಳಸಿದ್ದಾರೆ. ಈ ಕ್ಯಾಮೆರಾದ ತೀಕ್ಷ್ಣ ಚಿತ್ರಗಳು, ಶಾರ್ಪ್‌ ಆದ ಫೋಕಸ್ ಅದ್ಭುತ ಎನ್ನುತ್ತಾರೆ ಅವರು. ಜೊತೆಗೆ ಹೆಚ್ಚು ವಿಎಫ್‌ಎಕ್ಸ್‌ ಇರುವ ದೃಶ್ಯಗಳನ್ನು ಚಿತ್ರೀಕರಿಸಲು ಈ ಕ್ಯಾಮೆರಾದಲ್ಲಿ ಬಹಳ ಅವಕಾಶಗಳಿವೆ. ಕ್ಯಾಮೆರಾದ ಫೋಕಲ್ ಪಾಯಿಂಟ್ ಅತ್ಯಂತ ನಿಖರವಾಗಿ ಸೆಟ್‌ ಮಾಡಬೇಕು. ಹಾಗಿದ್ದಾಗ ಅತ್ಯುತ್ತಮ ರಿಸಲ್ಟ್‌ ಅನ್ನು ಪಡೆಯಬಹುದು'' ಎಂಬುದು ಸೆಂಥಿಲ್‌ರ ಅನುಭವ.

    ಯಾವ ಲೆನ್ಸ್‌ ಬಳಸಲಾಗಿದೆ?

    ಯಾವ ಲೆನ್ಸ್‌ ಬಳಸಲಾಗಿದೆ?

    ಅಲೆಕ್ಸಾ ಎಲ್‌ಎಫ್‌, ಬಿಗ್‌ಬಜೆಟ್ ಸಿನಿಮಾ ನಿರ್ಮಿಸುವವರ ಮೆಚ್ಚಿನ ಕ್ಯಾಮೆರಾ. ಹಾಲಿವುಡ್‌ನಲ್ಲಿಯೂ ಈ ಕ್ಯಾಮೆರಾ ಹೆಚ್ಚಿಗೆ ಬಳಕೆಯಾಗುತ್ತದೆ. ಹಲವು ಗುಣವೈಶಿಷ್ಟ್ಯತೆಗಳ ಜೊತೆಗೆ ನವೀನ ತಂತ್ರಜ್ಞಾನ, ಸರಳ ಬಳಕೆಯ ಹೆಚ್ಚುಗಾರಿಕೆ ಈ ಕ್ಯಾಮೆರಾನದ್ದು. ಕ್ಯಾಮೆರಾ ಜೊತೆಗೆ ಹಲವು ಭಿನ್ನ ಲೆನ್ಸ್‌ಗಳನ್ನು ಬಳಸುವ ಅವಕಾಶವೂ ಇದೆ. 'RRR' ಸಿನಿಮಾಕ್ಕೆ ಈ ಕ್ಯಾಮೆರಾ ಜೊತೆಗೆ ಸಿಗ್ನೇಚರ್ ಲೆನ್ಸ್‌ ಗಳನ್ನು ಬಳಸಲಾಗಿದೆ. ಸಿನಿಮಾದ ನೈಟ್ ಎಫೆಕ್ಟ್, ಆಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿರಲು ಪ್ರಮುಖ ಕಾರಣ ಈ ಸಿಗ್ನೇಚರ್ ಲೆನ್ಸ್‌ ಎನ್ನಬಹುದು.

    ಯಾವ ಸಿನಿಮಾಗಳ ಚಿತ್ರೀಕರಣ ಮಾಡಲಾಗಿದೆ?

    ಯಾವ ಸಿನಿಮಾಗಳ ಚಿತ್ರೀಕರಣ ಮಾಡಲಾಗಿದೆ?

    ಅರೆ (ARRI) ಸಂಸ್ಥೆಯವರು ಹೊಸ ಅಲೆಕ್ಸಾ ಎಲ್‌ಎಫ್‌ ಜೊತೆಗೆ ಅಲೆಕ್ಸಾ ಮಿನಿ ಎಲ್‌ಎಫ್‌ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಆಸ್ಕರ್‌ ವಿಜೇತ ದೃಶ್ಯ ಕಾವ್ಯ 'ಡ್ಯೂನ್', 'ದಿ ಪವರ್ ಆಫ್ ಡಾಗ್' ಹಾಗೂ ಬಹುತೇಕ ನೈಟ್ ಶೂಟ್‌ಗಳೇ ಇರುವ 'ದಿ ಬ್ಯಾಟ್‌ಮ್ಯಾನ್' (2022), ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿರುವ ವಿಶ್ವದ ಅತಿ ದೊಡ್ಡ ಬಜೆಟ್‌ನ ವೆಬ್ ಸರಣಿ 'ಲಾರ್ಡ್‌ ಆಫ್ ರಿಂಗ್ಸ್‌; ದಿ ಪವರ್ ಆಫ್ ರಿಂಗ್ಸ್‌'ಗಳನ್ನು ಹೊಸ ಅಲೆಕ್ಸಾ ಎಲ್‌ಎಫ್‌ ಹಾಗೂ ಎಲ್‌ಎಫ್‌ ಮಿನಿ ಬಳಸಿ ಚಿತ್ರೀಕರಿಸಲಾಗಿದೆ. ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ, ಪ್ರಭಾಸ್ ನಟನೆಯ 'ಸಲಾರ್' ಸಿನಿಮಾಕ್ಕೂ ಇದೇ ಕ್ಯಾಮೆರಾ ಬಳಸಲಾಗುತ್ತಿದೆಯಂತೆ.

    ಕ್ಯಾಮೆರಾದ ಬೆಲೆ ಎಷ್ಟು?

    ಕ್ಯಾಮೆರಾದ ಬೆಲೆ ಎಷ್ಟು?

    ಈ ಕ್ಯಾಮೆರಾ ಬಹಳ ದುಬಾರಿ. ಅಲೆಕ್ಸಾ ಎಲ್‌ಎಫ್‌ ಕ್ಯಾಮೆರಾದ ಬೆಲೆ ಭಾರತದಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚಾಗುತ್ತದೆ. ಇನ್ನು ಸಿಗ್ನೇಚರ್ ಪ್ರೈಂ ಲೆನ್ಸ್‌ನ ಬೆಲೆ 20 ಲಕ್ಷ ರುಪಾಯಿಗೂ ಹೆಚ್ಚು. ರಾಜಮೌಳಿ ತಮ್ಮ ಸಿನಿಮಾ ಚಿತ್ರೀಕರಣಕ್ಕೆ ಕೇವಲ ಒಂದು ಕ್ಯಾಮೆರಾ ಬಳಸುವುದಿಲ್ಲ. ಹಾಗೆಂದು ಎಲ್ಲ ಕ್ಯಾಮೆರಾವನ್ನು ಅವರು ಖರೀದಿಸಿಯೇ ಚಿತ್ರೀಕರಣ ಮಾಡುವುದಿಲ್ಲ. ಈ ರೀತಿಯ ಕ್ಯಾಮೆರಾಗಳನ್ನು ಬಾಡಿಗೆಗೆ ನೀಡುವ ಹಲವು ಸಂಸ್ಥೆಗಳಿವೆ ಅವುಗಳಿಂದ ಬಾಡಿಗೆಗೆ ಪಡೆದು ಚಿತ್ರೀಕರಣ ಮಾಡುವುದು ಅಭ್ಯಾಸ. ಬಹುತೇಕ ಸಿನಿಮಾಗಳನ್ನು ಹೀಗೆ ಬಾಡಿಗೆ ಆಧಾರದಲ್ಲಿ ಕ್ಯಾಮೆರಾ ಪಡೆದು ಚಿತ್ರೀಕರಣ ಮಾಡಲಾಗುತ್ತದೆ.

    ಅದಕ್ಕಿಂತಲೂ ಉತ್ತಮ ಕ್ಯಾಮೆರಾಗಳಿವೆ

    ಅದಕ್ಕಿಂತಲೂ ಉತ್ತಮ ಕ್ಯಾಮೆರಾಗಳಿವೆ

    ಅಲೆಕ್ಸಾ ಎಲ್‌ಎಫ್‌ ಅತ್ಯುತ್ತಮ ಕ್ಯಾಮೆರಾ ಆದರೂ ಇದಕ್ಕಿಂತಲೂ ಶಕ್ತಿಯುತವಾದ, ದುಬಾರಿಯಾದ ಕ್ಯಾಮೆರಾಗಳು ಸಿನಿಮಾ ಚಿತ್ರೀಕರಣಕ್ಕೆ ಲಭ್ಯವಿದೆ. ಬಳಕೆಯೂ ಆಗುತ್ತಿವೆ. 2020ರಲ್ಲಿ ಬಿಡುಗಡೆ ಆದ ಕ್ರಿಸ್ಟೊಫರ್ ನೋಲನ್‌ ನಿರ್ದೇಶನದ 'ಟೆನೆಟ್' ಸಿನಿಮಾಕ್ಕಾಗಿ ಐಮ್ಯಾಕ್ಸ್‌ನ ವಿಶೇಷ ಕ್ಯಾಮೆರಾವನ್ನು ಬಳಸಲಾಗಿತ್ತು. ಇನ್ನು 'ಟೈಟ್ಯಾನಿಕ್' ನಿರ್ದೇಶಕ ಜೇಮ್ಸ್‌ ಕ್ಯಾಮರನ್, ಅತ್ಯಾಧುನಿಕ, ನವೀನ ತಂತ್ರಜ್ಞಾನದ ಕ್ಯಾಮೆರಾಗಳನ್ನು ಬಳಸುವುದರಲ್ಲಿ ನಿಸ್ಸೀಮರು. ಅವರ ಮುಂಬರಲಿರುವ ಸಿನಿಮಾ 'ಅವತಾರ್; ದಿ ವೇ ಆಫ್ ವಾಟರ್'ನ ಚಿತ್ರೀಕರಣಕ್ಕಾಗಿ ಹೊಸ ರೀತಿಯ ಕ್ಯಾಮೆರಾವನ್ನು ತಜ್ಞರ ಸಹಾಯದಿಂದ ಅಭಿವೃದ್ಧಿಪಡಿಸಿ ಬಳಸಿದ್ದಾರೆ. ಮುಂದಿನ ಅವತಾರ್ ಸರಣಿಗೂ ಅದೇ ಕ್ಯಾಮೆರಾ ಬಳಸುವ ಸಾಧ್ಯತೆ ಇದೆ.

    English summary
    Which Camera did used in filming Rajamouli's RRR movie. What is it specification and price.
    Saturday, October 15, 2022, 11:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X