For Quick Alerts
  ALLOW NOTIFICATIONS  
  For Daily Alerts

  ಪ್ರಶಸ್ತಿಗಳ ಬಗ್ಗೆ ಅಮೀರ್ ಖಾನ್ ಬೇಸರಗೊಳ್ಳಲು ಈ ಘಟನೆಯೇ ಕಾರಣ!

  |

  ಪ್ರಶಸ್ತಿ ಎನ್ನುವುದು ಒಬ್ಬ ಕಲಾವಿದನ ಬದುಕಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಕೆಲವರಿಗೆ ಪ್ರಶಸ್ತಿ ಎನ್ನುವುದು ಕನಸು. ಕೆಲವರಿಗೆ ಅದೊಂದು ಜವಾಬ್ದಾರಿ. ಪ್ರಶಸ್ತಿ ಇನ್ನಷ್ಟು ಒಬ್ಬ ಕಲಾವಿದನಿಗೆ ಇನ್ನಷ್ಟು ಕೆಲಸಗಳನ್ನು ಮಾಡಲು ಶಕ್ತಿ ನೀಡುವ ಟಾನಿಕ್.

  ಆದರೆ, ಇಂತಹ ಪ್ರಶಸ್ತಿಗಳನ್ನು ಕೆಲವು ನಟ, ನಟಿಯರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬಾಲಿವುಡ್ ನಲ್ಲಿ ಕೆಲವು ಸ್ಟಾರ್ ಗಳು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಹೋಗುವುದೇ ಇಲ್ಲ. ಬಾಲಿವುಡ್ ಬಾಕ್ಸ್ ಆಫೀಸ್ ಕಿಂಗ್ ಅಮೀರ್ ಖಾನ್ ಪ್ರಶಸ್ತಿ ಕಾರ್ಯಕ್ರಮಗಳಿಂದ ಬಹು ಇರಲು ಬಯಸುತ್ತಾರೆ.

  ಆಮೀರ್ ಖಾನ್ ಹೀರೋ ಆದ ಚೊಚ್ಚಲ ಚಿತ್ರಕ್ಕೆ ಸಿಕ್ಕ ಸಂಭಾವನೆ ಎಷ್ಟು.?ಆಮೀರ್ ಖಾನ್ ಹೀರೋ ಆದ ಚೊಚ್ಚಲ ಚಿತ್ರಕ್ಕೆ ಸಿಕ್ಕ ಸಂಭಾವನೆ ಎಷ್ಟು.?

  ಕೆಲವೊಂದು ಬಾರಿ ಪ್ರಶಸ್ತಿಗಳು ಪ್ರತಿಭೆ ಮಾತ್ರವಲ್ಲದೆ, ಬೇರೆ ಬೇರೆ ಅಂಶಗಳನ್ನು ಒಳಗೊಂಡಿರುತ್ತದೆ. ಕೊನೆಯ ಕ್ಷಣದಲ್ಲಿಯೂ ಪ್ರಶಸ್ತಿ ಬದಲಾಗುತ್ತವೆ. ಹೀಗಾಗಿ ಅಮೀರ್ ಪ್ರಶಸ್ತಿಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲವಂತೆ. ಜನ ನನ್ನ ಪಾತ್ರವನ್ನು ನೋಡಿ ಮೆಚ್ಚಿಕೊಂಡರೆ ಅದೇ ದೊಡ್ಡ ಪ್ರಶಸ್ತಿ ಎನ್ನುತ್ತಾರೆ ಅವರು.

  1996ರ ನಂತರ ಅಮೀರ್ ಖಾನ್ ಯಾವುದೇ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನು ಕಾಣಿಸಿಕೊಳ್ಳುವುದಿಲ್ಲ. ಕಾರಣ ಒಂದು ಘಟನೆ ಅವರಿಗೆ ಅವಾರ್ಡ್ ಗಳ ಬಗ್ಗೆ ಬೇಸರ ಬರುವಂತೆ ಮಾಡಿತ್ತು.

  1996ರಲ್ಲಿ ನಡೆದ ಆ ಘಟನೆ

  1996ರಲ್ಲಿ ನಡೆದ ಆ ಘಟನೆ

  1996ರಲ್ಲಿ ಅಮೀರ್ ಖಾನ್ 'ರಂಗೀಲಾ' ಸಿನಿಮಾದ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ತಮ್ಮ ಕೆಲಸಕ್ಕೆ ಪ್ರಶಸ್ತಿ ಬರುತ್ತದೆ ಎನ್ನುವ ನಂಬಿಕೆಯಲ್ಲಿ ಇದ್ದರು. ಆದರೆ, ಆ ವರ್ಷ ಶಾರೂಖ್ ಖಾನ್ ಪ್ರಶಸ್ತಿ ಪಡೆದರು. 'ಡಿ ಡಿ ಎಲ್ ಜೆ' ಸಿನಿಮಾ ದೊಡ್ಡ ಹಿಟ್ ಎಂಬ ಕಾರಣಕ್ಕೆ ಶಾರೂಖ್ ಖಾನ್ ರಿಗೆ ಅವಾರ್ಡ್ ನೀಡಲಾಯಿತು.

  ಅಂದಿನಿಂದ ಬೇಸರಗೊಂಡ ಅಮೀರ್

  ಅಂದಿನಿಂದ ಬೇಸರಗೊಂಡ ಅಮೀರ್

  'ರಂಗೀಲಾ' ಸಿನಿಮಾದ ತಮ್ಮ ನಟನೆಗೆ ಪ್ರಶಸ್ತಿ ಬರುತ್ತದೆ ಎನ್ನುವ ನಂಬಿಕೆ ಹೊಂದಿದ್ದ ಅಮೀರ್ ಗೆ ನಿರಾಸೆ ಆಯ್ತು. ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಲ್ಲಿ ನಡೆಯುವ ಪಕ್ಷಪಾತ ಅವರ ಅರಿವಿಗೆ ಬಂತು. ನಂತರ ಯಾವುದೇ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧಾರ ಮಾಡಿದರು. ರಾಷ್ಟ್ರ ಪ್ರಶಸ್ತಿ ಹಾಗೂ ಆಸ್ಕರ್ ಪ್ರಶಸ್ತಿ ಬಗ್ಗೆ ಮಾತ್ರ ಭರವಸೆ ಇಟ್ಟುಕೊಂಡರು.

  ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ವಿವಾದದ ಸರಮಾಲೆಗೆ ಮತ್ತೊಂದು ಸೇರ್ಪಡೆಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ವಿವಾದದ ಸರಮಾಲೆಗೆ ಮತ್ತೊಂದು ಸೇರ್ಪಡೆ

  ನಂಬಿಕೆ ಇಲ್ಲ, ಅದಕ್ಕೆ ಹೋಗುವುದಿಲ್ಲ

  ನಂಬಿಕೆ ಇಲ್ಲ, ಅದಕ್ಕೆ ಹೋಗುವುದಿಲ್ಲ

  ಈ ಹಿಂದೆ ಒಂದು ಸಂದರ್ಶನದಲ್ಲಿ ಪ್ರಶಸ್ತಿಗಳ ಬಗ್ಗೆ ಮಾತನಾಡಿದ್ದ ಅಮೀರ್ ಖಾನ್ ''ನಾನು ಪ್ರಶಸ್ತಿ ಕಾರ್ಯಕ್ರಮಗಳನ್ನು ವಿರೋಧ ಮಾಡುವುದಿಲ್ಲ. ಆದರೆ, ನನಗೆ ಪ್ರಶಸ್ತಿ ಕಾರ್ಯಕ್ರಮಗಳ ಮೇಲೆ ನಂಬಿಕೆ ಇಲ್ಲ. ಹೀಗಿರುವಾಗ ಯಾಕೆ ನಾನು ಅಲ್ಲಿಗೆ ಹೋಗಬೇಕು ಎನ್ನುವುದು ಅಷ್ಟೇ ನನ್ನ ಭಾವನೆ''. ಎಂದು ಹೇಳಿದ್ದರು.

  ಇದೇ ವಿಷಯ ವಿವಾದಕ್ಕೆ ಕಾರಣ ಆಗಿತ್ತು

  ಇದೇ ವಿಷಯ ವಿವಾದಕ್ಕೆ ಕಾರಣ ಆಗಿತ್ತು

  ಬಳಿಕ ಪ್ರಶಸ್ತಿಗಳ ಮೇಲಿನ ಇನ್ನಷ್ಟು ಆಸಕ್ತಿಯನ್ನು ಅಮೀರ್ ಖಾನ್ ಕಳೆದುಕೊಂಡರು. 2017 ರಲ್ಲಿ 'ದಂಗಲ್' ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಅವರಿಗೆ ಘೋಷಣೆ ಆಯ್ತು. ಆದರೆ, ಅದನ್ನು ನಿರಾಕರಿಸಿದ ಕಾರಣ, ಅಕ್ಷಯ್ ಕುಮಾರ್ ರಿಗೆ 'ರುಸ್ತುಂ' ಸಿನಿಮಾಗಾಗಿ ನೀಡಲಾಯಿತು. ಇದು ದೊಡ್ಡ ವಿವಾದಕ್ಕೆ ಕಾರಣ ಆಗಿತ್ತು.

  ರೀಮೇಕ್ ಸಿನಿಮಾದಲ್ಲಿ ಅಮೀರ್ ಖಾನ್: ಪಾತ್ರಕ್ಕಾಗಿ 20 ಕೆ.ಜಿ ಇಳಿಸಿಕೊಂಡ ನಟರೀಮೇಕ್ ಸಿನಿಮಾದಲ್ಲಿ ಅಮೀರ್ ಖಾನ್: ಪಾತ್ರಕ್ಕಾಗಿ 20 ಕೆ.ಜಿ ಇಳಿಸಿಕೊಂಡ ನಟ

  ಪ್ರೇಕ್ಷಕರ ಪ್ರೀತಿಯೇ ದೊಡ್ಡ ಪ್ರಶಸ್ತಿ

  ಪ್ರೇಕ್ಷಕರ ಪ್ರೀತಿಯೇ ದೊಡ್ಡ ಪ್ರಶಸ್ತಿ

  ಅಮೀರ್ ಖಾನ್ ಪ್ರಶಸ್ತಿಗಳು ಬೇಸರ ಹೊಂದಿದ್ದು, ಪ್ರೇಕ್ಷಕರ ಪ್ರೀತಿಯೇ ದೊಡ್ಡ ಪ್ರಶಸ್ತಿ ಎಂದು ಹೇಳುತ್ತಾರೆ. ಒಂದು ಸಿನಿಮಾ, ಒಂದು ಪಾತ್ರಕ್ಕಾಗಿ ಅಮೀರ್ ಎಷ್ಟೊಂದು ಶ್ರಮ ಹಾಕುತ್ತಾರೆ. ಆ ಸಿನಿಮಾ ನೋಡಿ ತಮ್ಮ ಕೆಲಸವನ್ನು ಜನ ಮೆಚ್ಚಿದರೆ, ಅದೇ ದೊಡ್ಡ ಪ್ರಶಸ್ತಿ ಎನ್ನುವುದು ಅಮೀರ್ ಅಭಿಪ್ರಾಯ. ಅದೇ ರೀತಿ ಅವರ ಸಾಕಷ್ಟು ಪಾತ್ರಗಳು ಅಭಿಮಾನಿ ಮನಸ್ಸಿನಲ್ಲಿವೆ.

  ಅಮೀರ್ ಪಡೆದ ಪ್ರಶಸ್ತಿಗಳು ಸಂಖ್ಯೆ 65

  ಅಮೀರ್ ಪಡೆದ ಪ್ರಶಸ್ತಿಗಳು ಸಂಖ್ಯೆ 65

  ಅಮೀರ್ ಪ್ರಶಸ್ತಿಗಳ ಬಗ್ಗೆ ಗಮನ ಹರಿಸದೆ ಇದ್ದರೂ, ಅವರಿಗೆ 65 ವಿವಿಧ ಪ್ರಶಸ್ತಿಗಳು ಬಂದಿವೆ. ಪದ್ಮ ಶ್ರೀ, ಪದ್ಮ ಭೂಷಣ, ನಟನೆ, ನಿರ್ದೇಶನ ನಿರ್ಮಾಣಕ್ಕೆ 5 ರಾಷ್ಟ್ರ ಪ್ರಶಸ್ತಿ, 9 ಫಿಲ್ಮ್ ಫೇರ್, 3 ಐಫಾ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿ ಕಾರ್ಯಕ್ರಮಕ್ಕೆ ಹೋಗದೆ ಇರುವುದು ಎಷ್ಟೋ ಪ್ರಶಸ್ತಿಗಳು ಅವರ ಕೈ ತಪ್ಪಲು ಕಾರಣ ಆಗಿವೆ.

  English summary
  Why Aamir Khan doesn't attend award functions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X