Don't Miss!
- Sports
ಟೆಸ್ಟ್ ಮಾದರಿಗೆ ಕಮ್ಬ್ಯಾಕ್ ಮಾಡುವ ಬಗ್ಗೆ ಹಾರ್ದಿಕ್ ಪಾಂಡ್ಯ ಕುತೂಹಲಕಾರಿ ಪ್ರತಿಕ್ರಿಯೆ
- Automobiles
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- News
ಶ್ರೀರಾಮುಲು-ಸಂತೋಷ್ ಲಾಡ್ ಆಲಿಂಗನ: ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯಲು ಹೊಸ ತಂತ್ರ?
- Technology
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲತಾ ಮಂಗೇಶ್ಕರ್ ಮದುವೆಯಾಗಲಿಲ್ಲ ಏಕೆ? ಲತಾರ ಅದ್ಭುತ ಪ್ರೇಮಕತೆ
ಲತಾ ಮಂಗೇಶ್ಕರ್ ಎಂದೊಡನೆ ತಟ್ಟನೆ ನೆನಪಾಗುವುದು ಬಣ್ಣದ ಅಂಚುಳ್ಳ ಬಿಳಿಯ ಸೀರೆ, ಕೃಷ ದೇಹ, ಮೆದು ಮಾತು, ಮುಗುಳ್ನಗು. ಆಡಂಭರವಿಲ್ಲದ ಸರಳ ಜೀವನ ಲತಾ ದೀದಿಯವರದ್ದು. ಇಷ್ಟೋಂದು ಸರಳವಾಗಿದ್ದ ಲತಾ ಮಂಗೇಶ್ಕರ್ ರಾಜ್ಯವೊಂದರ ರಾಣಿ ಆಗಬೇಕಿತ್ತು ಎಂದು ನಂಬಲೇ ಬೇಕು.
ಲತಾ ಮಂಗೇಶ್ಕರ್‌ಗೆ ರಾಜರೊಬ್ಬರೊಟ್ಟಿಗೆ ಪ್ರೇಮಾಂಕುರವಾಗಿತ್ತು. ಅವರೇ ರಾಜಸ್ಥಾನದ ಡುಂಗರ್‌ಪುರ್ ಖಾಂದಾನ್‌ನ ರಾಜ ರಾಜ್ ಸಿಂಗ್ ಡುಂಗರ್‌ಪುರ್. ಆದರೆ ಲತಾ ಮಂಗೇಶ್ಕರ್ ಅವರ ಸರಳ ವ್ಯಕ್ತಿತ್ವ, ಸಾಮಾನ್ಯ ಹಿನ್ನೆಲೆಯಿಂದಾಗಿಯೇ ಅವರ ಪ್ರೀತಿಗೆ ಮದುವೆಗೆ ಮೊಹರು ಬೀಳಲಿಲ್ಲ.
ರಾಜ್ ಸಿಂಗ್ ಡುಂಗರ್‌ಪುರ್ ಮಹಾನ್ ಕ್ರಿಕೆಟ್ ಪ್ರಿಯರಾಗಿದ್ದರು ಹಲವು ವರ್ಷಗಳ ಕಾಲ ಬಿಸಿಸಿಐ ಜೊತೆ ನಂಟು ಸಹ ಹೊಂದಿದ್ದರು. ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಸಹ ಕ್ರಿಕೆಟ್ ಪ್ರೇಮಿಯಾಗಿದ್ದರು. ರಾಜ್ ಸಿಂಗ್ ಡುಂಗರ್‌ಪುರ್ ಹಾಗೂ ಹೃದಯನಾಥ್ ಪರಸ್ಪರ ಬಹಳ ಆತ್ಮೀಯ ಗೆಳೆಯರಾಗಿದ್ದರು. ಇಬ್ಬರೂ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದರು.
ಸಹೋದರ ಹೃದಯನಾಥ್ ಅವರ ಆತ್ಮೀಯ ಗೆಳೆಯ ರಾಜ್ ಸಿಂಗ್ ಡುಂಗರ್‌ಪುರ್ ಅವರ ಮೇಲೆ ಲತಾ ಮಂಗೇಶ್ಕರ್ ಅವರಿಗೆ ಪ್ರೇಮವಿತ್ತು, ರಾಜ್ ಸಿಂಗ್ ಸಹ ಲತಾ ಮಂಗೇಶ್ಕರ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದರು. ರಾಜ್ ಸಿಂಗ್, ಲತಾ ಅವರನ್ನು ಪ್ರೀತಿಯಿಂದ 'ಮೀಟು' (ಸಿಹಿ) ಎಂದು ಕರೆಯುತ್ತಿದ್ದರು.

ರಾಜ್ ಸಿಂಗ್ ಪೋಷಕರು ಒಪ್ಪಲಿಲ್ಲ
ಆದರೆ ರಾಜ್ ಸಿಂಗ್ ಡುಂಗರ್‌ಪುರ್ ಅವರ ಪೋಷಕರು ಈ ಮದುವೆಗೆ ಸುತಾರಾಂ ಒಪ್ಪಿಗೆ ನೀಡಲಿಲ್ಲ. ರಾಜ ಮನೆತನಕ್ಕೆ ಸಾಮಾನ್ಯ ಕುಟುಂಬದ ಯುವತಿಯನ್ನು ಸೊಸೆಯಾಗಿ ತರುವುದು ಅವರಿಗೆ ಇಷ್ಟವಿರಲಿಲ್ಲ. ಸಾಮಾನ್ಯ ಮನೆಯ ಯುವತಿಯನ್ನು ಮದುವೆಯಾಗಬಾರದೆಂದು ರಾಜ್ ಸಿಂಗ್ ಬಳಿ ಪ್ರಮಾಣವನ್ನೂ ಪೋಷಕರು ಮಾಡಿಸಿಕೊಂಡರು.

ಲತಾ ಅವರನ್ನು ಕರೆಸಿಕೊಂಡು ಎಚ್ಚರಿಕೆ ಸಹ ನೀಡಲಾಗಿತ್ತು
ರಾಜ್ ಸಿಂಗ್‌ರ ಮೂವರು ಸಹೋದರಿಯರು ಹಾಗೂ ಸಹೋದರ ರಾಜ ಕುಟುಂಬದವರನ್ನೇ ಮದುವೆಯಾಗಿದ್ದರು. ರಾಜ್ ಸಿಂಗ್‌ನ ಪೋಷಕರು ರಾಜ್ ಸಿಂಗ್ ಸಹ ರಾಜ ಕುಟುಂಬದವರನ್ನೇ ಮದುವೆ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಬಿಕಾನೆರ್‌ನ ಅರಮನೆಗೆ ಒಮ್ಮೆ ಲತಾ ಮಂಗೇಶ್ಕರ್ ಅವರನ್ನು ಕರೆಸಿಕೊಂಡಿದ್ದ ರಾಜ್ ಸಿಂಗ್‌ರ ಹಿರಿಯ ಸಹೋದರಿ, ತಮ್ಮನನ್ನು ಬಿಟ್ಟುಬಿಡುವಂತೆ ಎಚ್ಚರಿಕೆ ನೀಡಿದ್ದರು. ರಾಜ್ ಸಿಂಗ್ ಹಾಗೂ ಲತಾ ಮಂಗೇಶ್ಕರ್ ಅವರ ಪ್ರೇಮಕತೆಯ ಬಗ್ಗೆ ರಾಜ್ ಸಿಂಗ್‌ರ ಸಹೋದರಿಯ ಮಗಳು ಬಿಕಾನೆರ್‌ನ ರಾಣಿ ರಾಜ್ಯಶ್ರೀ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಇಬ್ಬರೂ ಕೊನೆಯವರೆಗೂ ವಿವಾಹವಾಗಲೇ ಇಲ್ಲ
ಇದೇ ಕಾರಣಕ್ಕೆ ರಾಜ್ ಸಿಂಗ್, ಲತಾ ಮಂಗೇಶ್ಕರ್ ಅವರನ್ನು ಮದುವೆ ಆಗಲಿಲ್ಲ. ಆದರೆ ಲತಾ ಮಂಗೇಶ್ಕರ್ ತಮ್ಮ ಜೀವನ ಪೂರ್ತಿ ಯಾರನ್ನೂ ಮದುವೆಯಾಗಲಿಲ್ಲ. ಲತಾ ಮಾತ್ರವೇ ಅಲ್ಲ ರಾಜ್ ಸಿಂಗ್ ಸಹ ಜೀವನ ಪೂರ್ತಿ ಯಾರನ್ನೂ ವಿವಾಹವಾಗಲಿಲ್ಲ. ಆದರೆ ಪರಸ್ಪರ ಇಬ್ಬರೂ ಗೆಳೆಯರಾಗಿದ್ದರು. ರಾಜ್ ಸಿಂಗ್ ಕಾರಣದಿಂದ ಆಗಿನ ಕಾಲದ ಹಲವು ಕ್ರಿಕೆಟರುಗಳ ಪರಿಚಯ ಲತಾ ಮಂಗೇಶ್ಕರ್‌ಗಿತ್ತು. 1983ರ ವಿಶ್ವಕಪ್ ತಂಡ ಲತಾ ಮಂಗೇಶ್ಕರ್ ಮನೆಯಲ್ಲಿ ಊಟ ಮಾಡಿ ನಂತರ ಟೂರ್ನಮೆಂಟ್‌ಗೆ ಹೊರಟಿತ್ತು.

ಅವರಿಬ್ಬರೂ ಗುಪ್ತ ಮದುವೆ ಆಗಿರಲಿಲ್ಲ: ರಾಜ್ಯಶ್ರೀ
ರಾಜ್ ಸಿಂಗ್ ಹಾಗೂ ಲತಾ ಗುಪ್ತವಾಗಿ ವಿವಾಹವಾಗಿದ್ದಾರೆ ಎಂಬ ಗಾಳಿಸುದ್ದಿಯ ಬಗ್ಗೆಯೂ ರಾಜ್ಯಶ್ರೀ ತಮ್ಮ ಪುಸ್ತಕದಲ್ಲಿ ಬರೆದಿದ್ದು, ''ರಾಜ್ ಸಿಂಗ್‌ರ ಸಹೋದರ, ಸಹೋದರಿಯರ ಮಕ್ಕಳು ರಾಜ್ ಸಿಂಗ್ ಹಾಗೂ ಲತಾ ಮಂಗೇಶ್ಕರ್ ಪ್ರೇಮಕ್ಕೆ ಸಾಕಷ್ಟು ಬೆಂಬಲ ನೀಡಿದರು. ಆದರೆ ರಾಜ್ ಸಿಂಗ್ ಪೋಷಕರಿಗೆ ಮಾತು ಕೊಟ್ಟಿದ್ದರಾದ್ದರಿಂದ ವಿವಾಹ ಸಾಧ್ಯವಾಗಲಿಲ್ಲ. ಅವರು ಗುಪ್ತವಾಗಿ ಮದುವೆ ಆಗಿರಲಿಲ್ಲ'' ಎಂದಿದ್ದಾರೆ.

ಲತಾ ಮಂಗೇಶ್ಕರ್ ಸರಳ ಜೀವಿ ಆಗಿದ್ದರು: ರಾಜ್ಯಶ್ರೀ
''ನಾನು ಭಾರತಕ್ಕೆ ಬಂದಾಗಲೆಲ್ಲ ಲತಾ ಮಂಗೇಶ್ಕರ್ ಹಾಗೂ ಅವರ ಕುಟುಂಬದ ಇತರರನ್ನು ಭೇಟಿ ಮಾಡಿಯೇ ಹೋಗುತ್ತಿದ್ದೆ. ನಾನು ಹೋದಾಗ ನಮ್ಮ ಮನೆಯವರ ಬಗ್ಗೆ ಲತಾ ಮಂಗೇಶ್ಕರ್ ವಿಚಾರಿಸುತ್ತಿದ್ದರು. ಅವರು ಬಹಳ ಅದ್ಭುತ ವ್ಯಕ್ತಿ. ಬಹಳ ಸರಳ ಜೀವಿ ಆಗಿದ್ದರು'' ಎಂದು ರಾಜ್ಯಶ್ರೀ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಲತಾ ಮಂಗೇಶ್ಕರ್ ಹಾಗೂ ರಾಜ್ ಸಿಂಗ್ ಆ ಬಳಿಕವೂ ಗೆಳೆಯರಾಗಿಯೇ ಇದ್ದರು. ಪರಸ್ಪರರ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಸಹ ಭಾಗವಹಿಸುತ್ತಿದ್ದರು. ರಾಜ್‌ಸಿಂಗ್ 2009 ರಲ್ಲಿ ನಿಧನರಾದರು.