twitter
    For Quick Alerts
    ALLOW NOTIFICATIONS  
    For Daily Alerts

    ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾಪ್‌ಕಾರ್ನ್ ದುಬಾರಿ ಏಕೆ? ಇದರ ಹಿಂದಿದೆ ಆಸಕ್ತಿಕರ ಗುಟ್ಟು!

    |

    ಇದು ಮಲ್ಟಿಪ್ಲೆಕ್ಸ್‌ಗಳ ಜಮಾನಾ, ಮೆಟ್ರೊ ಸಿಟಿಗಳನ್ನು ದಾಟಿ ಪಟ್ಟಣ ಪ್ರದೇಶಗಳಿಗೂ ಮಲ್ಟಿಪ್ಲೆಕ್ಸ್‌ಗಳು ಕಾಲಿಡುತ್ತಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಿಸುವ ಅನುಭವವೇನೋ ಚೆನ್ನಾಗಿರುತ್ತದೆ ಆದರೆ ಸಮಸ್ಯೆಯೆಂದರೆ ಅವುಗಳ ದುಬಾರಿ ಬೆಲೆ.

    ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಹೋಲಿಸಿದರೆ ಮಲ್ಟಿಪ್ಲೆಕ್ಸ್‌ಗಳು ದುಬಾರಿ. ಅದರಲ್ಲೂ ಅಲ್ಲಿನ ಪಾಪ್‌ ಕಾರ್ನ್‌ಗಳ ಬೆಲೆಯಂತೂ ಟಿಕೆಟ್‌ ಬೆಲೆಗಿಂತಲೂ ಹೆಚ್ಚಿರುತ್ತದೆ.

    ಟಿಕೆಟ್ ಬೆಲೆ ಏರಿಸಿದ ಪಿವಿಆರ್‌: 110 ಹೊಸ ಸ್ಕ್ರೀನ್ ಅಳವಡಿಕೆಟಿಕೆಟ್ ಬೆಲೆ ಏರಿಸಿದ ಪಿವಿಆರ್‌: 110 ಹೊಸ ಸ್ಕ್ರೀನ್ ಅಳವಡಿಕೆ

    ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಿಗೆ ಹೋಲಿಸಿದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆ ತುಸುವಷ್ಟೆ ಹೆಚ್ಚು. ಮಲ್ಟಿಪ್ಲೆಕ್ಸ್‌ಗಳ ಗುಣಮಟ್ಟದ ಸ್ಕ್ರೀನ್, ದೃಶ್ಯ ಕ್ವಾಲಿಟಿ, ಸೀಟು ವ್ಯವಸ್ಥೆ, ಸೌಂಡ್ ಸಿಸ್ಟಮ್, ಪ್ರೊಜೆಕ್ಷನ್ ಕ್ವಾಲಿಟಿಗಳನ್ನು ಗಣನೆಗೆ ತೆಗೆದುಕೊಂಡರೆ ಅದು ಹೆಚ್ಚೇನು ದುಬಾರಿ ಎನಿಸದೆ ವ್ಯಾಲ್ಯೂ ಫಾರ್ ಮನಿ ಎನಿಸಿಕೊಳ್ಳುತ್ತದೆ. ಆದರೆ ನಿಜವಾಗಿಯೂ ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಆಗಿರುವುದು ಪಾಪ್‌ಕಾರ್ನ್ ಹಾಗೂ ಇತರೆ ತಿನಿಸುಗಳು. ಹೊರಗಡೆಗಿಂತಲೂ ಕನಿಷ್ಟ 10 ಪಟ್ಟು ಹೆಚ್ಚು ಬೆಲೆಗೆ ಪಾಪ್‌ಕಾರ್ನ್ ಹಾಗೂ ಇತರೆ ತಿನಿಸುಗಳನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಇದರ ಹಿಂದೊಂದು ಕಾರಣವಿದೆ.

    1938 ರಲ್ಲಿ ಮೊದಲ ಬಾರಿಗೆ ಚಿತ್ರಮಂದಿರದ ಒಳಗೆ ಪಾಪ್‌ಕಾರ್ನ್‌ ಅನ್ನು ಮಾರಾಟ ಮಾಡಲು ಶುರು ಮಾಡಲಾಯಿತು. ಸುಲಭವಾಗಿ ತಯಾರಿಸಬಹುದಾದ, ವಿವಿಧ ಫ್ಲೇವರ್‌ಗಳನ್ನು ನೀಡಬಹುದಾದ, ಹೆಚ್ಚು ಸಮಯ ತಿನ್ನಬಹುದಾದ, ಸ್ಪೂನು, ಪ್ಲೇಟುಗಳ ಅವಶ್ಯತೆ ಇಲ್ಲದೆ ಹೆಚ್ಚು ನಿಗಾ ವಹಿಸದೆ, ಸ್ಕ್ರೀನ್‌ ಕಡೆ ನೋಡುತ್ತಲೂ ತಿನ್ನಬಹುದಾದ ಈ ತಿನಿಸು ಬಹು ಬೇಗ ಫೇಮಸ್ ಆಗಿಬಿಟ್ಟಿತು. ಬರು ಬರುತ್ತಾ ಇದು ಲಕ್ಷಾಂತರ ಕೋಟಿ ಮೌಲ್ಯದ ವ್ಯವಹಾರವೂ ಆಯಿತು.

    ಕಡಿಮೆ ಬೆಲೆಗೆ ಮಾರಬಹುದು, ಆದರೆ ಮಾರುವುದಿಲ್ಲ!

    ಕಡಿಮೆ ಬೆಲೆಗೆ ಮಾರಬಹುದು, ಆದರೆ ಮಾರುವುದಿಲ್ಲ!

    ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾಪ್‌ಕಾರ್ನ್‌ ಅನ್ನು ಕಡಿಮೆ ಬೆಲೆಗೆ ಮಾರಬಹುದು ಆದರೆ ಮಲ್ಟಿಪ್ಲೆಕ್ಸ್‌ ಚೈನ್‌ಗಳು ಬೇಕೆಂದೇ ಕಡಿಮೆ ಬೆಲೆಗೆ ಪಾಪ್‌ಕಾರ್ನ್ ಮಾರುವುದಿಲ್ಲ. ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಹೆಚ್ಚು ಜನ ಖರೀದಿಸುವುದಿಲ್ಲವಲ್ಲ, ಆಗ ಹೆಚ್ಚು ಲಾಭವೂ ಆಗದು ಎಂದು ಕೇಳಬಹುದು. ಅಸಲಿಗೆ ಹೆಚ್ಚು ಮಂದಿ ಪಾಪ್ ಕಾರ್ನ್‌ ಅನ್ನು ಖರೀದಿಸಬಾರದೆಂದೇ ಅದನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿವೆ ಮಲ್ಟಿಪ್ಲೆಕ್ಸ್‌ ಚೈನ್‌ಗಳು! ಆದರೆ ಇದರಿಂದ ಜನರಿಗೆ ಒಳ್ಳೆಯದೇ ಆಗುತ್ತಿದೆ!

    ಟಿಕೆಟ್ ಹಣದಲ್ಲಿ ಹೆಚ್ಚು ಉಳಿಯುವುದಿಲ್ಲ

    ಟಿಕೆಟ್ ಹಣದಲ್ಲಿ ಹೆಚ್ಚು ಉಳಿಯುವುದಿಲ್ಲ

    ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನವಾಗುವ ಸಿನಿಮಾಗಳ ಟಿಕೆಟ್ ದರದ ಅರ್ಧದಷ್ಟು, ಒಮ್ಮೊಮ್ಮೆ ಅರ್ಧಕ್ಕಿಂತಲೂ ಹೆಚ್ಚು ಹಣವನ್ನು ಸಿನಿಮಾ ಪ್ರೊಡಕ್ಷನ್ ಹೌಸ್‌ಗಳಿಗೆ ನೀಡಬೇಕಾಗುತ್ತದೆ. ಉಳಿದ ಅರ್ಧ ಹಣದಲ್ಲಿ ಸಿನಿಮಾ ಪ್ರದರ್ಶಿಸಲು ಮಾಡಿರುವ ಖರ್ಚು, ಸ್ಥಳದ ಮೌಲ್ಯ ಅಥವಾ ಬಾಡಿಗೆ, ಸಿಬ್ಬಂದಿ ಸಂಬಳ, ಪ್ರೊಜೆಕ್ಷನ್ ಮೇಂಟೆನೆನ್ಸ್, ಏಸಿ, ವಿದ್ಯುತ್ ಬಿಲ್, ತೆರಿಗೆ ಇನ್ನಿತರೆಗಳನ್ನು ನೀಡಬೇಕಾಗುತ್ತದೆ. ಅಲ್ಲಿಗೆ ಸಿನಿಮಾ ಟಿಕೆಟ್ ಮಾರಾಟ ಗಳಿಸಿದ ಹಣದಲ್ಲಿ ಮಲ್ಟಿಪ್ಲೆಕ್ಸ್‌ ಚೈನ್‌ಗಳಿಗೆ ಬಹಳ ಕಡಿಮೆ ಉಳಿಯುತ್ತದೆ.

    ಇನ್ನೊಂದು ಕಾರಣವೂ ಇದೆ

    ಇನ್ನೊಂದು ಕಾರಣವೂ ಇದೆ

    ಹೆಚ್ಚು ಹಣ ಗಳಿಸಲೆಂದು ಮಲ್ಟಿಪ್ಲೆಕ್ಸ್‌ಗಳು ಸಿನಿಮಾ ಟಿಕೆಟ್ ಜೊತೆಗೆ ಪಾಪ್‌ಕಾರ್ನ್ ಸೇರಿದಂತೆ ಇತರೆ ತಿನಿಸುಗಳನ್ನು ಮಾರಾಟ ಮಾಡುತ್ತಾರೆ. ತಿನಿಸುಗಳ ಮಾರಾಟದಿಂದ ಬಂದ ಪೂರ್ಣ ಹಣ ಮಲ್ಟಿಪ್ಲೆಕ್ಸ್‌ ಚೈನ್‌ಗಳಿಗೆ ಮಾತ್ರವೇ ಸೇರುತ್ತದೆ. ಹಾಗಾಗಿ ಹೆಚ್ಚಿನ ಬೆಲೆಗೆ ಪಾಪ್‌ ಕಾರ್ನ್‌ ಅನ್ನು ಮಾರಾಟ ಮಾಡುತ್ತಾರೆ. ಆದರೆ ಇದೊಂದೆ ಕಾರಣಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾಪ್‌ ಕಾರ್ನ್‌ ಹಾಗೂ ಇತರೆ ತಿನಿಸುಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುವುದಿಲ್ಲ ಅದಕ್ಕೆ ಮತ್ತೊಂದು ಪ್ರಮುಖ ಕಾರಣವೂ ಇದೆ.

    ಹೆಚ್ಚು ಜನ ಖರೀದಿಸಬಾರದೆಂದು ಪಾಪ್‌ಕಾರ್ನ್ ಬೆಲೆ ಹೆಚ್ಚು

    ಹೆಚ್ಚು ಜನ ಖರೀದಿಸಬಾರದೆಂದು ಪಾಪ್‌ಕಾರ್ನ್ ಬೆಲೆ ಹೆಚ್ಚು

    ಹೆಚ್ಚು ಜನ ಪಾಪ್‌ಕಾರ್ನ್ ಖರೀದಿಸಬಾರದು ಎಂಬ ಕಾರಣಕ್ಕೆ ಪಾಪ್‌ಕಾರ್ನ್‌ ಅನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತದೆ. ಪಾಪ್‌ ಕಾರ್ನ್ ಅಥವಾ ಇತರೆ ತಿನಿಸುಗಳ ಬೆಲೆ ಕಡಿಮೆ ಇದ್ದರೆ ಸಿನಿಮಾ ನೋಡಲು ಬಂದವರೆಲ್ಲ ಖರೀದಿಸಲು ಬರುತ್ತಾರೆ ಆಗ ಅಲ್ಲಿ ಹೆಚ್ಚು ಜನಸಂದಣಿ ಆಗುತ್ತದೆ ಲೈನ್ ಉದ್ದ ಆಗುತ್ತದೆ. (ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚು ಸ್ಕ್ರೀನ್‌ಗಳಿರುತ್ತವೆ ಎಂಬುದನ್ನೂ ಗಮನಿಸಬೇಕು) ಇಂಟರ್ವೆಲ್ ಸಮಯ ಮೀರಿದರೂ ಜನರ ಪಾಪ್ ಕಾರ್ನ್ ಖರೀದಿ ಮುಗಿದಿರುವುದಿಲ್ಲ, ಹಾಗಾದಾಗ ದೊಡ್ಡ ಅವಧಿಯ ಇಂಟರ್ವೆಲ್ ಬ್ರೇಕ್ ನೀಡಬೇಕಾಗುತ್ತದೆ. ಹೀಗೆ ಮಾಡಿದರೆ ಸಮಯದ ಅಭಾವದಿಂದ ಹೆಚ್ಚು ಸಿನಿಮಾಗಳನ್ನು ಪ್ರದರ್ಶಿಸಲು ಆಗುವುದಿಲ್ಲ. ಒಂದು ವೇಳೆ ಅಷ್ಟು ಜನರಿಗೆ ಕಡಿಮೆ ಅವಧಿಯಲ್ಲಿ ಪಾಪ್‌ಕಾರ್ನ್ ನೀಡಬೇಕು ಎಂದರೆ ಹೆಚ್ಚು ಕೌಂಟರ್ ತೆರೆಯಬೇಕು ಅದಕ್ಕೆ ಹೆಚ್ಚು ಸ್ಥಳ ಬೇಕು, ಹೆಚ್ಚು ಸಿಬ್ಬಂದಿ ಬೇಕು ಇದೆಲ್ಲ ಬಹಳ ಖರ್ಚಿನ ಬಾಬತ್ತು. ಅದಕ್ಕೆ ಹೆಚ್ಚು ಜನರಿಗೆ ಹೆಚ್ಚು ಪಾಪ್‌ಕಾರ್ನ್ ಮಾರಿ ಗಳಿಸಬಹುದಾದ ಹಣವನ್ನು ಕಡಿಮೆ ಜನಕ್ಕೆ ಹೆಚ್ಚಿನ ಬೆಲೆಯಲ್ಲಿ ಮಾರಿ ಸಂಪಾದಿಸುತ್ತಿವೆ ಮಲ್ಟಿಪ್ಲೆಕ್ಸ್‌ಗಳು.

    ಸಿನಿಮಾ ಪ್ರಿಯರಿಗೆ ಒಳ್ಳೆಯದೇ ಆಗಿದೆ

    ಸಿನಿಮಾ ಪ್ರಿಯರಿಗೆ ಒಳ್ಳೆಯದೇ ಆಗಿದೆ

    ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾಪ್‌ ಕಾರ್ನ್ ಅನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುವುದರಿಂದ ಸಿನಿಮಾ ಪ್ರಿಯರಿಗೆ ಒಳ್ಳೆಯದೇ ಆಗಿದೆ. ಒಂದೊಮ್ಮೆ ಮಲ್ಟಿಪ್ಲೆಕ್ಸ್‌ಗಳು ಪಾಪ್‌ಕಾರ್ನ್‌ ಬೆಲೆಯನ್ನು ಇಳಿಸಿದರೆ, ಕೇವಲ ಟಿಕೆಟ್ ದರದಿಂದ ಮಲ್ಟಿಪ್ಲೆಕ್ಸ್‌ ನಡೆಸಲಾಗುವುದಿಲ್ಲ ಆಗ ಅದು ನಷ್ಟ ಅನುಭವಿಸಬೇಕಾಗುತ್ತದೆ ಆಗ ಟಿಕೆಟ್ ಬೆಲೆಯನ್ನು ಹೆಚ್ಚಿಸಬೇಕಾಗುತ್ತದೆ. ಪಾಪ್‌ಕಾರ್ನ್ ಬೆಲೆ ಹೆಚ್ಚಿದೆಯಾದ್ದರಿಂದಲೇ ಮಲ್ಟಿಪ್ಲೆಕ್ಸ್‌ಗಳು ಸಿನಿಮಾ ಟಿಕೆಟ್‌ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿವೆ. ಇದರಿಂದ ಹೆಚ್ಚು ಜನರು ಮಲ್ಟಿಪ್ಲೆಕ್ಸ್‌ಗಳಲ್ಲಿ ಕಡಿಮೆ ದರಕ್ಕೆ ಸಿನಿಮಾ ನೋಡುವಂತಾಗಿದೆ. ಹಾಗಾಗಿ ಮುಂದಿನ ಬಾರಿ ನೀವು ಮಲ್ಟಿಪ್ಲೆಕ್ಸ್‌ಗಳಿಗೆ ಹೋದಾಗ ಅಲ್ಲಿನ ಪಾಪ್‌ಕಾರ್ನ್ ಬೆಲೆ ನೋಡಿ ಶಾಪ ಹಾಕಬೇಡಿ ಬದಲಿಗೆ ಖುಷಿ ಪಡಿ.

    English summary
    Why Popcorn are costly in Multiplex theaters. There is a reason for that. Multiplex theaters sell popcorn with high price intentionally.
    Sunday, August 14, 2022, 18:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X