For Quick Alerts
  ALLOW NOTIFICATIONS  
  For Daily Alerts

  ರಜನಿ-ವಿಜಯ್ ಆ ಚಿತ್ರ ಮಾಡಲ್ಲ ಅಂದ್ರು, ಅರ್ಜುನ್ ಸರ್ಜಾ ಮಾಡಿ ಗೆದ್ದರು

  |

  ಸಿನಿಮಾ ಅಂದ್ರೆ ನಿರ್ದೇಶಕ ಶಂಕರ್‌ಗೆ ಫ್ಯಾಶನ್. ಎಲ್ಲಿಯೂ ರಾಜಿ ಮಾಡಿಕೊಳ್ಳದೇ ಅಂದುಕೊಂಡಿದ್ದನ್ನು ಮಾಡುವುದರಲ್ಲಿ ಶಂಕರ್ ಖ್ಯಾತಿ. ಭಾರತೀಯ ಚಿತ್ರರಂಗ ತಿರುಗಿನೋಡುವಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಶಂಕರ್ ಪ್ರಸ್ತುತ ರಾಮ್ ಚರಣ್ ಜೊತೆ ಸಿನಿಮಾ ಮಾಡ್ತಿದ್ದಾರೆ.

  1993ರಲ್ಲಿ 'ಜಂಟಲ್‌ಮ್ಯಾನ್' ಚಿತ್ರದ ಮೂಲಕ ನಿರ್ದೇಶನಕ್ಕಿಳಿದ ಶಂಕರ್ ಚೊಚ್ಚಲ ಪ್ರಾಜೆಕ್ಟ್‌ನಲ್ಲಿ ಹಿಟ್ ಬಾರಿಸಿದರು. ಅದಾದ ಮೇಲೆ ಕಾದಲನ್, ಇಂಡಿಯನ್ ಹಾಗೂ ಜೀನ್ಸ್ ಅಂತಹ ಚಿತ್ರಗಳೊಂದಿಗೆ ಸ್ಟಾರ್ ಪಟ್ಟಕ್ಕೇರಿದರು. 1999ರಲ್ಲಿ ರಾಜಕೀಯ ಥ್ರಿಲ್ಲರ್ ಆಧರಿಸಿ ಕಥೆ ಮಾಡಿದರು. ಆ ಚಿತ್ರವೇ 'ಮೊದಲ್ವನ್'. ಅರ್ಜುನ್ ಸರ್ಜಾ, ರಘುವರನ್, ಮನಿಶಾ ಕೊಯಿರಾಲ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಚಿತ್ರ ಬಾಕ್ಸ್ ಆಫೀಸ್ ಹಿಟ್ ಆಯಿತು.

  ವಿಜಯ್ ರಿಜೆಕ್ಟ್ ಮಾಡಿದ್ದ 6 ಚಿತ್ರಗಳೂ ಸೂಪರ್ ಹಿಟ್ ಆಯ್ತುವಿಜಯ್ ರಿಜೆಕ್ಟ್ ಮಾಡಿದ್ದ 6 ಚಿತ್ರಗಳೂ ಸೂಪರ್ ಹಿಟ್ ಆಯ್ತು

  ಟಿವಿ ಪತ್ರಕರ್ತನೊಬ್ಬ (ಅರ್ಜುನ್ ಸರ್ಜಾ) ತನ್ನ ಚೊಚ್ಚಲ ಸಂದರ್ಶನದಲ್ಲಿಯೇ ಮುಖ್ಯಮಂತ್ರಿಯನ್ನು (ರಘುವರನ್) ಸಂದರ್ಶನ ಮಾಡುವ ಅವಕಾಶ ಪಡೆದುಕೊಳ್ಳುತ್ತಾನೆ. ಕಷ್ಟವಾದ ಪ್ರಶ್ನೆಗಳನ್ನು ಕೇಳುವ ಮೂಲಕ ಸಿಎಂಗೆ ಕಿರಿಕಿರಿ ಉಂಟಾಗುವಂತೆ ಮಾಡ್ತಾನೆ. ಇದರಿಂದ ಕೋಪಿತಗೊಂಡ ಸಿಎಂ 'ಒಂದೇ ಒಂದು ದಿನ ಸಿಎಂ ಕುರ್ಚಿ ಮೇಲೆ ಕೂತ್ಕೊಂಡು ನೋಡು, ಎಷ್ಟು ಕಷ್ಟ ಅಂತಾ ಗೊತ್ತಾಗುತ್ತೆ 'ಅಂತ ಚಾಲೆಂಜ್ ಹಾಕ್ತಾನೆ. ಅದಕ್ಕೆ ಪತ್ರಕರ್ತನೂ ಒಪ್ಪಿಕೊಳ್ತಾನೆ. ಹೀಗೆ ಒಂದು ದಿನ ಮುಖ್ಯಮಂತ್ರಿಯಾಗಿ ಆ ಪತ್ರಕರ್ತ ಕರ್ತವ್ಯ ನಿಭಾಯಿಸುವುದು, ಎದುರಾಳಿಗಳಿಂದ ಯಾವ ರೀತಿ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದು ರೋಚಕ ಕಥೆ. ಸಿನಿಮಾ ಶತದಿನ ಆಚರಿಸಿಕೊಂಡಿತ್ತು.

  ಅರ್ಜುನ್ ಸರ್ಜಾ ಕನಸಿನ ದೇವಸ್ಥಾನದ ಹಿಂದಿದೆ ಕನ್ನಡಿಗರ ಶ್ರಮ, ಪ್ರತಿಭೆಅರ್ಜುನ್ ಸರ್ಜಾ ಕನಸಿನ ದೇವಸ್ಥಾನದ ಹಿಂದಿದೆ ಕನ್ನಡಿಗರ ಶ್ರಮ, ಪ್ರತಿಭೆ

  ಅನೇಕರಿಗೆ ತಿಳಿಯದ ವಿಚಾರ ಅಂದ್ರೆ ಅರ್ಜುನ್ ಸರ್ಜಾಗೂ ಮೊದಲು ಈ ಚಿತ್ರವನ್ನು ರಜನಿಕಾಂತ್ ಮತ್ತು ವಿಜಯ್‌ ಮಾಡಬೇಕಿತ್ತು. ಆದರೆ ಈ ಇಬ್ಬರು ನಿರಾಕರಿಸಿದ್ದರು. ಅದು ಏಕೆ ಎನ್ನುವ ಕಾರಣ ಇಲ್ಲಿದೆ. ಮುಂದೆ ಓದಿ...

  ಸ್ವಲ್ಪ ದಿನ ಕಾಯಲು ಹೇಳಿದ್ದ ರಜನಿ

  ಸ್ವಲ್ಪ ದಿನ ಕಾಯಲು ಹೇಳಿದ್ದ ರಜನಿ

  ಮೊದಲ್ವನ್ ಸಿನಿಮಾದ ಕಥೆ ಮಾಡಿಕೊಂಡಿದ್ದ ಶಂಕರ್ ಮೊದಲ ರಜನಿಕಾಂತ್ ಬಳಿ ಸ್ಕ್ರಿಪ್ಟ್ ಹೇಳಿದ್ದರು. ಕಥೆ ಕೇಳಿದ ತಲೈವಾ, ಸಿನಿಮಾ ಮಾಡೋಣ. ಆದರೆ ಸ್ವಲ್ಪ ದಿನ ಕಾಯಬೇಕು ಎಂದು ಸೂಚಿಸಿದರಂತೆ. ಆಮೇಲೆ ಶಂಕರ್ ಕಾಯಲು ಒಪ್ಪದೇ ಸರ್ಜಾ ಜೊತೆ ಸಿನಿಮಾ ಮಾಡಿದರು. ಅಷ್ಟಕ್ಕೂ, ರಜನಿ ಕಾಯಲು ಹೇಳಿದ್ದು ಏಕೆ ಎನ್ನುವ ವಿಚಾರವನ್ನು ಶಂಕರ್ ಬಳಿ ಸಹಾಯಕ ನಿರ್ದೇಶಕರಾಗಿದ್ದ ಮುತ್ತು ವಡುಗು ಯೂಟ್ಯೂಬ್ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

  ಡಿಎಂಕೆ ಪಕ್ಷ ಗೆಲುವು ಕಂಡಿತ್ತು

  ಡಿಎಂಕೆ ಪಕ್ಷ ಗೆಲುವು ಕಂಡಿತ್ತು

  ''ಆಗಷ್ಟೇ ವಿಧಾನಸಭೆ ಚುನಾವಣೆ ನಡೆದು ಕರುಣಾನಿಧಿ ಸಾರಥ್ಯದ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿತ್ತು. ಚುನಾವಣೆ ಸಂದರ್ಭದಲ್ಲಿ ರಜನಿಕಾಂತ್ ಡಿಎಂಕೆ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದರು. ಸರ್ಕಾರ ರಚನೆಯಾಗಿ ಆರು ತಿಂಗಳಲ್ಲಿ ಈ ಚಿತ್ರ ಆರಂಭಿಸಿದರೆ ವೈಯಕ್ತಿಕ ಸಂಬಂಧಕ್ಕೆ ಸರಿಹೋಗಲ್ಲ. ಹಾಗಾಗಿ, ಡಿಎಂಕೆ ಅಧಿಕಾರ ಮುಗಿಯವರೆಗೂ ಕಾಯೋಣ ಅಂದಿದ್ದರಂತೆ. ಶಂಕರ್ ಕಾಯಲು ನಿರಾಕರಿಸಿ ವಿಜಯ್ ಬಳಿ ಹೋದರು'' ಎಂದು ಶಂಕರ್ ಸಹಾಯಕ ವಿವರಿಸಿದರು.

  ವಿಜಯ್ ಜೊತೆಯೂ ವರ್ಕೌಟ್ ಆಗಿಲ್ಲ

  ವಿಜಯ್ ಜೊತೆಯೂ ವರ್ಕೌಟ್ ಆಗಿಲ್ಲ

  ರಜನಿಕಾಂತ್ ನಂತರ ವಿಜಯ್ ಬಳಿ ಮೊದಲ್ವನ್ ಸ್ಕ್ರಿಪ್ಟ್ ಹೋಯ್ತು. ಆದರೆ ಅಲ್ಲಿಯೂ ವರ್ಕೌಟ್ ಆಗಿಲ್ಲ ಎಂದು ಸ್ವತಃ ಶಂಕರ್ ಈ ಕುರಿತು ಹೇಳಿಕೊಂಡಿದ್ದರು. 'ಮೊದಲ್ವನ್' ಚಿತ್ರಕ್ಕಾಗಿ ವಿಜಯ್ ತಂದೆ ಎಸ್‌ಎ ಚಂದ್ರಶೇಖರ್ ಅವರ ಸಹಾಯಕರನ್ನು ಸಂಪರ್ಕಿಸಲಾಯಿತು. ಆದರೆ, ಸಂಭಾವನೆ ವಿಚಾರದಲ್ಲಿ ಮಾತುಕತೆ ಸಫಲವಾಗಿಲಿಲ್ಲ ಎಂದು ಶಂಕರ್ ಬಹಿರಂಗಪಡಿಸಿದ್ದರು. ಮೊದಲ್ವನ್ ಸ್ಕ್ರಿಪ್ಟ್ ಕೈತಪ್ಪಿದ ವಿಚಾರ ತಿಳಿದ ಎಸ್‌ಎ ಚಂದ್ರಶೇಖರ್, ''ನೀವು ನೇರವಾಗಿ ನಮ್ಮನ್ನೇ ಸಂಪರ್ಕಿಸಬಹುದಿತ್ತು, ಸಹಾಯಕರಿಂದ ಈ ಚಿತ್ರ ಕೈತಪ್ಪಿತು'' ಎಂದು ನಿರಾಸೆ ವ್ಯಕ್ತಪಡಿಸಿದ್ದರಂತೆ.

  'ಜಂಟಲ್‌ಮ್ಯಾನ್' ಹೀರೋ ಕೈಹಿಡಿದರು

  'ಜಂಟಲ್‌ಮ್ಯಾನ್' ಹೀರೋ ಕೈಹಿಡಿದರು

  ಶಂಕರ್ ಮೊದಲ ಸಿನಿಮಾದ ಹೀರೋ ಅರ್ಜುನ್ ಸರ್ಜಾ. 'ಜಂಟಲ್‌ಮ್ಯಾನ್' ಮೂಲಕ ಹಿಟ್ ಬಾರಿಸಿದ ಈ ಜೋಡಿ 'ಮೊದಲ್ವನ್' ಚಿತ್ರಕ್ಕಾಗಿ ಮತ್ತೆ ಒಂದಾಯಿತು. ಈ ಸಿನಿಮಾ ಸರ್ಜಾ ವೃತ್ತಿ ಜೀವನದಲ್ಲೂ ದೊಡ್ಡ ಜಯಭೇರಿ ಬಾರಿಸಿತು.

  English summary
  Unknown Facts of mudhalvan Movie: Why Rajinikanth and Vijay was reject Shankar's Hit project?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X