»   »  ಅತ್ಯಾಚಾರ ಪ್ರಕರಣ : ಶೈನಿ ಅಹುಜಾಗೆ ಜಾಮೀನು

ಅತ್ಯಾಚಾರ ಪ್ರಕರಣ : ಶೈನಿ ಅಹುಜಾಗೆ ಜಾಮೀನು

Subscribe to Filmibeat Kannada

ಮುಂಬೈ, ಅ. 1 : ಮನೆಗೆಲಸದ ಯುವತಿಯನ್ನು ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಬಾಲಿವುಡ್ ನಟ ಶೈನಿ ಅಹುಜಾ ಅವರಿಗೆ ಕೊನೆಗೂ ಜಾಮೀನು ದೊರೆತಿದೆ. ಕಳೆದ ಮೂರು ತಿಂಗಳಿಂದ ಜೈಲಿನಲ್ಲಿದ್ದ ಶೈನಿ ಅವರಿಂದ 50 ಸಾವಿರ ರುಪಾಯಿ ಭದ್ರತಾ ಠೇವಣಿ ಪಡೆದುಕೊಂಡು ನ್ಯಾಯಾಲಯ, ಜಾಮೀನು ಮಂಜೂರು ಮಾಡಿದೆ.

ಮುಂಬೈ ಬಿಟ್ಟು ತೆರಳದಂತೆ ನಿರ್ದೇಶನ ನೀಡಿದೆ. ಅಲ್ಲದೆ ಪಾಸ್ ಪೋರ್ಟ್ ನ್ನು ಪೊಲೀಸ್ ಠಾಣೆಯ ವಶಕ್ಕೆ ನೀಡುವಂತೆ ತಿಳಿಸಿದೆ. ಪ್ರತಿ ವಾರಕ್ಕೊಮ್ಮೆ ಪೊಲೀಸ್ ಠಾಣೆ ಭೇಟಿ ನೀಡಬೇಕು ಎಂದು ಆದೇಶಿಸಿದೆ. ಆರ್ಥರ್ ರಸ್ತೆಯ ಜೈಲಿನಲ್ಲಿ ಶೈನಿಯನ್ನು ಇರಿಸಲಾಗಿತ್ತು. ಇತ್ತೀಚೆಗೆ ಬೆನ್ನು ನೋವಿನಿಂದ ಬಳಲಿದ್ದರಿಂದ ಅವರನ್ನು ನಗರದ ಜೆಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಜೂನ್ 13 ರಂದು ಮನೆಗೆಲಸದ ಯುವತಿ ಮೇಲೆ ಶೈನಿ ಅತ್ಯಾಚಾರ ಎಸಗಿದ್ದರು. ನಂತರ ಅವರನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದರು. ಜಾಮೀನಿಗಾಗಿ ಅನೇಕ ಬಾರಿ ಶೈನಿ ಪ್ರಯತ್ನ ನಡೆಸಿದ್ದರೂ ಸಿಕ್ಕಿರಲಿಲ್ಲ. ಜೈಲಿನಲ್ಲಿದ್ದ ಶೈನಿ ತೀವ್ರ ಅಸ್ವಸ್ಥಗೊಂಡು ಇತ್ತೀಚೆಗೆ ನ್ಯಾಯಾಲಯಕ್ಕೆ ಹಾಜರಾದಾಗ ಕೋರ್ಟ್ ಆವರಣದಲ್ಲೇ ಕುಸಿದು ಬಿದ್ದಿದ್ದರು. ಅತ್ಯಾಚಾರ ಮಾಡಿರುವುದನ್ನು ಶೈನಿ ಒಪ್ಪಿಕೊಂಡಿದ್ದರು. ಡಿಎನ್ಎ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆಯಿಂದಲೂ ಅತ್ಯಾಚಾರ ಮಾಡಿದ್ದು ದೃಢಪಟ್ಟಿತ್ತು. ಓಶಿಯಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada