»   » ನಟಿ ರಮ್ಯಾ ಬಾರ್ನೆಗೆ ನಿರೀಕ್ಷಣಾ ಜಾಮೀನು

ನಟಿ ರಮ್ಯಾ ಬಾರ್ನೆಗೆ ನಿರೀಕ್ಷಣಾ ಜಾಮೀನು

Posted By:
Subscribe to Filmibeat Kannada

ಕನ್ನಡ ಚಿತ್ರನಟಿ ರಮ್ಯಾ ಬಾರ್ನೆ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ವರದಕ್ಷಿಣೆ ಕಿರುಕುಳ ಕೇಸು ಎದುರಿಸುತ್ತಿರುವ ನಟ ಆನಂದ್ ಅವರೊಂದಿಗೆ ಅಕ್ರಮ ಸಂಬಂಧ ಆರೋಪವನ್ನು ನಟಿ ರಮ್ಯಾ ಬಾರ್ನೆ ಎದುರಿಸುತ್ತಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ 2ನೇ ಎಸಿಎಂಎಂ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.

ರು.25 ಸಾವಿರ ಬಾಂಡ್ ಪೇಪರ್ ಹಾಗೂ ವ್ಯಕ್ತಿಯೊಬ್ಬರ ಶ್ಯೂರಿಟಿ ಪಡೆದ ನ್ಯಾಯಾಧೀಶರು ರಮ್ಯಾ ಬಾರ್ನೆಗೆ ಷರತ್ತುಬದ್ಧ ಜಾಮೀನು ನೀಡಿದ್ದಾರೆ. ಸಾಕ್ಷಿಗಳನ್ನು ತಿರುಚುವುದಾಗಲಿ, ನಾಶಪಡಿಸುವುದಾಗಲಿ, ಪಿರ್ಯಾದುದಾರರಿಗೆ ಬೆದರಿಸದಂತೆ ಹಾಗೂ ತನಿಖೆ ಸಹಕರಿಸುವಂತೆ ಸೂಚಿಸಲಾಗಿದೆ ಎಂದು ಆಕೆಯ ಪರ ವಕೀಲ ಧನರಾಜ್ ತಿಳಿಸಿದ್ದಾರೆ.

ನಟ ಆನಂದ್ ಜೊತೆ ರಮ್ಯಾ ಬಾರ್ನೆಗೆ ಅನೈತಿಕ ಸಂಬಂಧವಿದೆ ಎಂದು ಆನಂದ್ ಪತ್ನಿ ಭರಣಿ ಆರೋಪಿಸಿದ್ದರು. ಆನಂದ್ ಜೊತೆ 'ನನ್ನೆದೆಯ ಹಾಡು' ಚಿತ್ರದಲ್ಲಿ ರಮ್ಯಾ ಬಾರ್ನಾ ಅಭಿನಯಿಸಿದ್ದಾರೆ. ವರದಕ್ಷಿಣೆ ಕಿರುಕುಳ ಸೇರಿದಂತೆ ಪತ್ನಿಯ ಮೇಲೆ ದೌರ್ಜನ್ಯವೆಸಗಿದ ಆರೋಪಗಳನ್ನೂ ನಟ ಆನಂದ್ ಎದುರಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada