»   »  ವೇಶ್ಯಾವಾಟಿಕೆ : ನಟಿ ಭುವನೇಶ್ವರಿ ಬಂಧನ

ವೇಶ್ಯಾವಾಟಿಕೆ : ನಟಿ ಭುವನೇಶ್ವರಿ ಬಂಧನ

Subscribe to Filmibeat Kannada

ವೇಶ್ಯಾವಾಟಿಕೆ ನಡೆಸುತ್ತಿದ್ದ ತಮಿಳಿನ ಜನಪ್ರಿಯ ನಟಿ ಭುವನೇಶ್ವರಿ ಸೇರಿದಂತೆ ಇಬ್ಬರು ಹದಿಹರಯದ ಹುಡುಗಿಯರನ್ನು ಚೆನ್ನೈಪೊಲೀಸರು ದಸ್ತಗಿರಿ ಮಾಡಿದ್ದಾರೆ. ಚೆನ್ನೈ ನಗರದ ಅಡ್ಯಾರ್ ನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಭುವನೇಶ್ವರಿ ಈ ದಂಧೆ ನಡೆಸುತ್ತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭುವನೇಶ್ವರಿ ಅವರ ಚಲನವಲನಗಳ ಬಗ್ಗೆ ಅನುಮಾನಗೊಂಡ ನೆರೆಹೊರೆಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಈ ಸಂಬಂಧ ಆಕೆಯ ಅಪಾರ್ಟ್ ಮೆಂಟ್ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದಾಗ ಆಕೆ ವೇಶ್ಯಾವಾಟಿಕೆ ನಡೆಸುತ್ತಿರುವುದು ಬಯಲಾಗಿದೆ.

ತಮಿಳಿನ ಖ್ಯಾತ ನಾಮರಾದ ಶಂಕರ್, ಭಾರತಿರಾಜ ಅವರ ಚಿತ್ರಗಳಲ್ಲಿ ಭುವನೇಶ್ವರಿ ನಟಿಸಿದ್ದಾರೆ. ತಮಿಳಿನ ಜನಪ್ರಿಯ 'ಬಾಯ್ಸ್' ಮತ್ತು 'ಥೇರ್ ಕತಿ ಪಣ್ಣು 'ಚಿತ್ರಗಳಲ್ಲಿ ಬೋಲ್ಡ್ ಮತ್ತು ಬ್ಯುಟಿಫುಲ್ ಆಗಿ ನಟಿಸಿ ಉತ್ತಮ ನಟಿ ಎಂದೂ ಗುರುತಿಸಿಕೊಂಡಿದ್ದರು. ಈಕೆ ಬಂಧನಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2002ರಲ್ಲೂ ಈಕೆ ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿದ್ದರು.

ಕಳೆದ ಕೆಲವು ವರ್ಷಗಳಿಂದಲೂ ಭುವನೇಶ್ವರಿ ವೇಶ್ಯಾವಾಟಿಕೆ ಜಾಲವನ್ನು ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದರು. ಗಿರಾಕಿಗಳಿಗೆ ಅವರು ರು.10,000 ರಿಂದ ರು.1 ಲಕ್ಷದವರೆಗೂ ಚಾರ್ಚ್ ಮಾಡುತ್ತಿದ್ದರು ಎಂದು ಚೆನ್ನೈ ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.

ಈ ದಂಧೆಯಲ್ಲಿ ಇನ್ನೂ ಹಲವಾರು ಖ್ಯಾತ ನಟಿಯರು ಭಾಗಿಯಾಗಿದ್ದಾರೆ ಎಂದು ನಟಿ ಭುವನೇಶ್ವರಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಭಾಗಿಯಾಗಿರುವ ಇತರೆ ನಟಿಯರ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ವೇಶ್ಯಾವಾಟಿಕೆ ಜಾಲದಲ್ಲಿ ಭಾಗಿಯಾಗಿರುವ ನಟಿಯರ ಹೆಸರುಗಳು ಬಹಿರಂಗವಾದರೆ ಅವರ ನಿಜವಾದ ಬಣ್ಣವೂ ಬಯಲಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada