»   »  ಐಡಿಬಿಐ ಸಾಲದ ಸುಳಿಗೆ ಸಿಲುಕಿದ 'ಜೊತೆಗಾರ'

ಐಡಿಬಿಐ ಸಾಲದ ಸುಳಿಗೆ ಸಿಲುಕಿದ 'ಜೊತೆಗಾರ'

Posted By:
Subscribe to Filmibeat Kannada
Ramya and Prem Kumar
'ಜೊತೆಗಾರ' ಚಿತ್ರಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ರಮ್ಯಾ ಮತ್ತು ಲವ್ಲಿ ಸ್ಟಾರ್ ಪ್ರೇಮ್ ನಟನೆಯ 'ಜೊತೆಗಾರ'ಚಿತ್ರ ಈ ವಾರ(ಜೂನ್ 5) ತೆರೆಕಾಣುತ್ತಿಲ್ಲ. ಕಾರಣ ಐಡಿಬಿಐ ಸಾಲ ಮರುಪಾವತಿ ಯಾಗದೇ ಇರುವುದು. ಮೊದಲು ಸಾಲವನ್ನುಮರುಪಾವತಿ ಮಾಡಿ. ಆ ಬಳಿಕನಿಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎನ್ನುತ್ತ್ತಿದೆ ಐಡಿಬಿಐ.

ಇಷ್ಟುದಿನ ರಮ್ಯಾ ರಂಪಾಟ, ಪ್ರೇಮ್ ಪರಚಾಟ ಮತ್ತು ಅಶ್ವಿನಿರಾಮ್ ಪ್ರಸಾದ್ ಅರಚಾಟದಿಂದ ಸುದ್ದಿಯಾಗಿತ್ತು. 'ಜೊತೆಗಾರ' ಈಗ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ .ಚಿತ್ರರಂಗದ ಮೂಲಗಳ ಪ್ರಕಾರ, ಜೊತೆಗಾರ ಚಿತ್ರಕ್ಕೆ ಬರೋಬ್ಬರಿ ರು.2.15 ಕೋಟಿಗಳನ್ನು ಐಡಿಬಿಐ ಸಾಲದ ರೂಪದಲ್ಲಿ ಕೊಟ್ಟಿದೆ. ಸಾಲ ತೀರಿಸದ ಹೊರತು ಚಿತ್ರ ಬಿಡುಗಡೆ ಮಾಡಲ್ಲ ಎಂದು ಐಡಿಬಿಐ ಪಟ್ಟು ಹಿಡಿದಿದೆ. ಹಾಗಾಗಿ 'ಜೊತೆಗಾರ' ಬಾಕ್ಸ್ ನಲ್ಲೇ ಕೊಳೆಯುವಂತಾಗಿದೆ.

ಐಡಿಬಿಐ ಸಾಲದ ಸುಳಿಗೆ ಸಿಲುಕುತ್ತಿರುವ ಐದನೇ ಕನ್ನಡ ಚಿತ್ರ ಜೊತೆಗಾರ. ತಿಪ್ಪ್ಪಾರಳ್ಳಿ ತರ್ಲೆಗಳು (ಎಸ್ ನಾರಾಯಣ್, ಕೋಮಲ್ ಕುಮಾರ್, ಓಂ ಪ್ರಕಾಶ್ ರಾವ್ ನಟನೆಯ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ), ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ (ಉಪೇಂದ್ರ, ಪಾರ್ವತಿ ಮೆಲ್ಟನ್, ರಮ್ಯಾ ನಟನೆಯ ಎಸ್ ವಿ ರಾಜೇಂದ್ರ ಸಿಂಗ್ ಬಾವು ನಿರ್ದೇಶನ) , ಬಾಸ್(ದರ್ಶನ್ ನಟನೆಯ ಚಿತ್ರ), ರಾಜ್ ದಿ ಶೋ ಮ್ಯಾನ್(ಪುನೀತ್ ರಾಜ್ ಕುಮಾರ್, ನಿಶಾ ಕೊಠಾರಿ ನಟನೆಯ ಪ್ರೇಮ್ ನಿರ್ದೇಶನದ) ಚಿತ್ರಗಳು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರು ಇತರೆ ಚಿತ್ರಗಳು.

ಜೊತೆಗಾರ ಇಂದು ಬಿಡುಗಡೆಯಾಗುತ್ತದೆ ಎಂದು ಪ್ರಕಟಿಸಲಾಗಿತ್ತು. ತಮ್ಮ ನೆಚ್ಚಿನ ಚಿತ್ರ ಮಂದಿರಗಳಲ್ಲಿ ಚಿತ್ರ ನೋಡಲು ಕಾತುರದಿಂದ ಹೋದ ಪ್ರೇಕ್ಷಕರಿಗೆ ತೀವ್ರ ನಿರಾಶೆ ಕಾದಿತ್ತು.ಚಿತ್ರದ ನಾಯಕ ಪ್ರೇಮ್ ಮಾತನಾಡುತ್ತಾ, ಚಿತ್ರ ಬಿಡುಗಡೆಗೆ ಅಡ್ಡಿಯಾಗಿರುವ ಕಾರಣ ಪೋಸ್ಟರ್ ಗಳನ್ನು ಅಂಟಿಸಲಿಲ್ಲ. ಹಾಗಾಗಿ ಬೆಂಗಳೂರಿನಲ್ಲಿ ಎಲ್ಲೂ ಜೊತೆಗಾರ ಪೋಸ್ಟರ್ ಗಳು ಇಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಸಾಲ ಮರುಪಾವತಿ ಆಗುವವರೆಗೂ ಚಿತ್ರ ತೆರೆಕಾಣುವುದು ಅನುಮಾನ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada