»   » ಚಿತ್ರನಟಿ ನಮಿತಾ ಆತ್ಮಹತ್ಯೆಗೆ ಯತ್ನಿಸಿದ್ದು ನಿಜವೇ?

ಚಿತ್ರನಟಿ ನಮಿತಾ ಆತ್ಮಹತ್ಯೆಗೆ ಯತ್ನಿಸಿದ್ದು ನಿಜವೇ?

Posted By:
Subscribe to Filmibeat Kannada

"ಮಾನಸಿಕ ಒತ್ತಡದಿಂದ ಬಳಲುತ್ತಿರುವ ಸೆಕ್ಸಿ ತಾರೆ ನಮಿತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಆತ್ಮಹತ್ಯೆತ ಯತ್ನ ವಿಫಲವಾಗಿದ್ದು ಆಕೆ ಬದುಕುಳಿದಿದ್ದಾರೆ" ಎಂಬ ಸುದ್ದಿ ಮಾಧ್ಯಗಳಲ್ಲಿ ಸುಳಿದಾಡಿತ್ತು. ಆದರೆ ಇದೆಲ್ಲಾ ಅಂತೆಕಂತೆಗಳ ಸಂತೆ ಎಂಬುದು ಕೊಂಚ ತಡವಾಗಿ ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಈ ರೀತಿಯ ವದಂತಿಯಿಂದ ನಮಿತಾ ಅಭಿಮಾನಿಗಳು ದಿಗ್ಭ್ರಾಂತರಾಗಿದ್ದಾರೆ.

ತಮ್ಮ ಆತ್ಮಹತ್ಯೆ ಯತ್ನದ ಬಗ್ಗೆ ನಟಿ ನಮಿತಾ ಮಾತನಾಡುತ್ತಾ, ಮುಂಬೈನ ಅಂಬೆ ವ್ಯಾಲಿ ಮನೆಯಲ್ಲಿ ನಾನು ಆರಾಮವಾಗಿದ್ದೇನೆ. ತಳಬುಡವಿಲ್ಲದ ಈ ರೀತಿಯ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೋ ಆ ದೇವರೇ ಬಲ್ಲ. ಇದರಿಂದ ಅವರಿಗಾಗುವ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಶೀಘ್ರದಲ್ಲೆ ಚೆನ್ನೈಗೆ ಹಿಂತಿರುಗುತ್ತಿದ್ದೇನೆ. ನಾನು ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ. ಇದೆಲ್ಲಾ ಯಾರೋ ಹಬ್ಬಿಸಿರುವ ಕಟ್ಟುಕತೆ ಎಂದು ನಮಿತಾ ಹೇಳಿದ್ದಾರೆ. ಸದ್ಯಕ್ಕೆ ಆಕೆ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ನಮಿತಾ ಬಿಕಿನಿ ಪಾತ್ರಗಳಲ್ಲಿ ನಟಿಸುವುದಿಲ್ಲೆ ಎಂದಿದ್ದರು. ಅಷ್ಟರಲ್ಲೇ ಆಕೆ ಆತ್ಮಹತ್ಯೆಗೆ ಯತ್ನಿಸಿದ ವದಂತಿ ಬಂದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada