»   »  ಸೆನ್ಸಾರ್ ಮಂಡಳಿಯೊಂದಿಗೆ 'ಹೊಡಿಮಗ' ಗುದ್ದಾಟ

ಸೆನ್ಸಾರ್ ಮಂಡಳಿಯೊಂದಿಗೆ 'ಹೊಡಿಮಗ' ಗುದ್ದಾಟ

Posted By:
Subscribe to Filmibeat Kannada
Hodimaga title controversary
'ಹೊಡಿಮಗ' ಚಿತ್ರದ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಚಿತ್ರದ ನಿರ್ಮಾಪಕ ವಿ ಎಸ್ ರಾಜ್ ಕುಮಾರ್ ಮತ್ತು ನಿರ್ದೇಶಕ ಪಿ ಸತ್ಯ ಸ್ಪಷ್ಟಪಡಿಸಿದ್ದಾರೆ. ಆದರೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮಾತ್ರ ತನ್ನ ಹಿಡಿತವನ್ನು ಸಡಿಲಿಸಿಲ್ಲ. ಮೊದಲು ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿ ನಂತರ 'A' ಪ್ರಮಾಣ ಪತ್ರ ಕೊಡುತ್ತೇವೆ ಎಂದು ಪಟ್ಟುಹಿಡಿದಿದೆ.

ಹೊಡಿಮಗ ಚಿತ್ರದ ನಾಯಕ ನಟ ಶಿವರಾಜ್ ಕುಮಾರ್ ಪ್ರಸ್ತುತ ಜೋರ್ಡಾನ್ ನಲ್ಲಿದ್ದು ಈ ಕುರಿತು ಸೆನ್ಸಾರ್ ಮಂಡಳಿಯೊಂದಿಗೆ ಚರ್ಚಿಸಲು ಶನಿವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಿರ್ಮಾಪಕ ಮತ್ತು ಸೆನ್ಸಾರ್ ಮಂಡಳಿಯೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಸ್ಥಿಕೆ ವಹಿಸಲಿದೆ. ಒಂದು ವೇಳೆ ಸೆನ್ಸಾರ್ ಮಂಡಳಿಯೊಂದಿನ ಮಾತುಕತೆ ವಿಫಲವಾದರೆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರುಸೆನ್ಸಾರ್ ಮಂಡಳಿ ಮುಂದೆ ಧರಣಿ ಸತ್ಯಾಗ್ರಹ ಕೂರುವುದಾಗಿ ತಿಳಿದಿದ್ದಾರೆ. ನ್ಯಾಯ ದೊರೆಯುವವರೆಗೂ ಧರಣಿ ಸತ್ಯಾಗ್ರಹ ಮುಂದುವರೆಸುವುದಾಗಿ ಅವರು ತೀರ್ಮಾನಿಸಿದ್ದಾರೆ.

ಚಿತ್ರದ ಶೀರ್ಷಿಕೆಯನ್ನು ಎರಡು ವರ್ಷ ಹಿಂದೆಯೇ ರಿಜಿಸ್ಟರ್ ಮಾಡಿಕೊಳ್ಳಲಾಗಿತ್ತು. ಆಗ ಯಾರೊಬ್ಬರೂ ಶೀರ್ಷಿಕೆ ಬಗ್ಗೆ ಕ್ಯಾತೆ ತೆಗೆಯಲಿಲ್ಲ. ಮುಹೂರ್ತದ ಸಂದರ್ಭದಲ್ಲೂ ಯಾರೂ ಕ್ಯಾರೆ ಎನ್ನಲಿಲ್ಲ. ಚಿತ್ರದ ಟ್ರೈಲರ್ ಗಳಿಗೆ ಸಹ ಸೆನ್ಸಾರ್ ಮಂಡಳಿ ಕ್ಲೀನ್ ಚಿಟ್ ನೀಡಿತ್ತು. ಈಗ ಚಿತ್ರದ ವಿತರಣೆ ಹಕ್ಕುಗಳು ರಾಜ್ಯಾದ್ಯಂತ ಮಾರಾಟವಾಗಿವೆ. ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವುದರಿಂದ ವ್ಯಾಪಾರ ವಹಿವಾಟಿಕೆ ಹೊಡೆತ ಬೀಳುತ್ತದೆ. ಹೊಡಿಮಗ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲು ವಿತರಕರು ಒಪ್ಪುತ್ತಿಲ್ಲ ಎಂಬುದು ರಾಜ್ ಕುಮಾರ್ ಮತ್ತು ಸತ್ಯ ಅವರ ವಾದ. ಆದರೆ ಈ ವಾದವನ್ನು ಕೇಳುವ ಸ್ಥಿತಿಯಲ್ಲಿ ಸೆನ್ಸಾರ್ ಮಂಡಳಿ ಇಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ
ಚೆಲುವೆಯೆ ನಿನ್ನ ನೋಡಲು ಚಿತ್ರದಲ್ಲಿ ಸೋನಾಲ್
ಪುನೀತ್ ರಿಂದ ರಾಜ್ ಕುರಿತು ಅಪರೂಪ ಪುಸ್ತಕ
ಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'
'ಹೊಡಿಮಗ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ತಡೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada