»   »  ಕೆಎಫ್ ಸಿಸಿ ನಿರ್ಲಕ್ಷ್ಯ ಧೋರಣೆಗೆ ದರ್ಶನ್ ಬೇಸರ

ಕೆಎಫ್ ಸಿಸಿ ನಿರ್ಲಕ್ಷ್ಯ ಧೋರಣೆಗೆ ದರ್ಶನ್ ಬೇಸರ

Subscribe to Filmibeat Kannada
Darshan upset with KFCC attitude
ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ, ನಮ್ಮೊಡನಿಲ್ಲದ ಎಪ್ಪತ್ತೈದು ಸಾಧಕರ ಕುರಿತ ಪುಸ್ತಕಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಿತ್ತು. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ ತೂಗುದೀಪ ಶ್ರೀನಿವಾಸ್ ಕುರಿತ ಪುಸ್ತಕ ಪ್ರಕಟಿಸದೇ ಇರುವ ಬಗ್ಗೆ ನಟ ದರ್ಶನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ತೂಗುದೀಪ ಶ್ರೀನಿವಾಸ್ ಕುರಿತ ಒಂದೇ ಒಂದು ಪುಸ್ತಕವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಟಿಸಿಲ್ಲ. ಹಾಗೆಯೇ 'ನವಗ್ರಹ' ಚಿತ್ರದಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರ ಮಕ್ಕಳು ತಮ್ಮ ತಂದೆಯವರ ಪುಸ್ತಕಗಳನ್ನು ಪ್ರಕಟಿಸದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ಅಮೃತ ಮಹೋತ್ಸವ ಪುಸ್ತಕ ಮಾಲೆ'ಯಲ್ಲಿ ಸಂಭಾಷಣೆಕಾರ ಬಿ.ಎ.ಮಧು ಬರೆದಿರುವ ಟೈಗರ್ ಪ್ರಭಾಕರ್ ಪುಸ್ತಕ ಮಾತ್ರ ಹೊರತರಲಾಗಿತ್ತು. ಈ ಪುಸ್ತಕಗಳನ್ನು ರಾಮೇಶ್ವರ ಠಾಕೂರ್ ಅಮೃತೋತ್ಸವದ ಎರಡನೇ ದಿನ ಬಿಡುಗಡೆ ಮಾಡಿದ್ದರು.

ಖಳ ಪಾತ್ರಗಳಿಗೆ ಜೀವ ತುಂಬುತ್ತಿದ್ದ ತೂಗುದೀಪ ಶ್ರೀನಿವಾಸ್, ಸುಂದರಕೃಷ್ಣ ಅರಸ್, ದಿನೇಶ್, ಸುದೀರ್...ಮುಂತಾದ ಕಲಾವಿದರಿಗೆ ಪುಸ್ತಕ ಪಟ್ಟಿಯಲ್ಲಿ ಏಕೆ ಸ್ಥಾನ ನೀಡಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯ ಈ ನಿರ್ಲಕ್ಷ್ಯ ಧೋರಣೆಯಿಂದ ನಾವು ತುಂಬ ನೊಂದುಕೊಂಡಿದ್ದೇವೆ. ಈ ಸಂಬಂಧ ಮಾರ್ಚ್ 9ರಂದು ಡಾ.ಜಯಮಾಲಾರನ್ನು ಭೇಟಿಯಾಗಲಿರುವುದಾಗಿ ಅವರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada