»   »  ಕಾಸರವಳ್ಳಿ ಆಯ್ಕೆ ಸಿನಿಮಾಗೆ ಕೇರಳದಲ್ಲಿ ವಿವಾದ

ಕಾಸರವಳ್ಳಿ ಆಯ್ಕೆ ಸಿನಿಮಾಗೆ ಕೇರಳದಲ್ಲಿ ವಿವಾದ

Subscribe to Filmibeat Kannada
Girish Kasaravalli
ಖ್ಯಾತ ಚಿತ್ರ ನಿರ್ದೇಶಕ ಗಿರೀಸ್ ಕಾಸರವಳ್ಳಿ ಅವರು ಮಲೆಯಾಳಿ ಚಿತ್ರಕ್ಕೆ ಪ್ರಶಸ್ತಿ ನೀಡುವ ಮೂಲಕ ಮತ್ತೊಮ್ಮೆ ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ.ಈ ಹಿಂದೆ ಅವರು ತಮ್ಮದೇ ನಿರ್ದೇಶನದ ಗುಲಾಬಿ ಟಾಕೀಸ್ ಚಿತ್ರಕ್ಕೆ ಪ್ರಶಸ್ತಿ ಪಡೆದು ವಿವಾದ ಎದುರಿಸಿದ್ದರು.

ಕೇರಳ ಚಿತ್ರೋತ್ಸವದ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಅವರು ಆಡೂರು ಗೋಪಾಲ ಕೃಷ್ಣನ್ ಅವರ 'ಒರು ಪೆಣ್ಣುಂ ರಂಡ್ ಅಣುಂ' ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ ನೀಡಿರುವುದು ವಿವಾದವಾಗಿ ಪರಿಣಮಿಸಿದೆ. ಎರಡನೇ ಅತ್ಯುತ್ತಮ ಪ್ರಶಸ್ತಿ ಪಡೆದ ಮತ್ತೊಬ್ಬ ನಿರ್ದೇಶಕ ಟಿ ವಿ ಚಂದ್ರನ್ ಅವರು ಗಿರೀಶ್ ವಿರುದ್ಧ ಸಿಡಿದೆದ್ದಿದ್ದಾರೆ.

ಆಡೂರು ನಿರ್ದೇಶಿಸಿರುವುದು ಸಿನಿಮಾನೇ ಅಲ್ಲ.ಅದೊಂದು ದೂರದರ್ಶನಕ್ಕೆ ನಿರ್ದೇಶಿಸಿದ ಸಾಕ್ಷ್ಯಚಿತ್ರ. ಅದಕ್ಕೆ ಪ್ರಶಸ್ತಿ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ ಚಂದ್ರನ್. ಗುಲಾಬಿ ಟಾಕೀಸ್ ಚಿತ್ರಕ್ಕೆ ಪ್ರಶಸ್ತಿ ಬಂದಾಗ ನಿರ್ಮಾಪಕ ಕೆ ಮಂಜು, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಅಗ್ನಿ ಶ್ರೀಧರ್ ವಿರೋಧ ವ್ಯಕ್ತಪಡಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada