»   »  ಶ್ರೀಶಾಂತ್ ರ ನಿದ್ದೆ ಕೆಡಿಸುತ್ತಿರುವ ಡೈಸಿ ಬೋಪಣ್ಣ

ಶ್ರೀಶಾಂತ್ ರ ನಿದ್ದೆ ಕೆಡಿಸುತ್ತಿರುವ ಡೈಸಿ ಬೋಪಣ್ಣ

Posted By:
Subscribe to Filmibeat Kannada
Daisy Bopanna
ಕ್ರಿಕೆಟ್ ಗಿಂತಲೂ ಹೆಚ್ಚಾಗಿ ಗಾಸಿಪ್ ಗಳಲ್ಲಿ ಮಿಂದೇಳುತ್ತಿರುವ ಆಟಗಾರನೆಂದರೆ ಶ್ರೀಶಾಂತ್. ಇಷ್ಟು ದಿನ ನಟಿ ನಮಿತಾರ ಹೆಸರಿನೊಂದಿಗೆ ಶ್ರೀಶಾಂತ್ ಹೆಸರು ತಳುಕು ಹಾಕಿಕೊಂಡಿತ್ತು. ಈಗ ಸ್ಪೈಸಿ ನಟಿ ಡೈಸಿ ಬೋಪಣ್ಣರೊಂದಿಗಿನ ಗುಸು ಗುಸು ಸುದ್ದಿಗೆ ರೆಕ್ಕೆ ಪುಕ್ಕ ಬಂದಿದೆ. ಪ್ರಸ್ತುತ ಐಪಿಎಲ್ ನಲ್ಲಿ ಮಗ್ನನಾಗಿರುವ ಶ್ರೀಶಾಂತ್ ಗೆ ಗೆಳೆಯರಿಂದ ಗುಸು ಗುಸು ಸುದ್ದಿ ನಿಜವೇ ಎಂದು ಒಂದರ ಮೇಲೊಂದು ದೂರವಾಣಿ ಕರೆಗಳು ಬರುತ್ತಿವೆಯಂತೆ!

''ಶ್ರೀಶಾಂತ್ ಮತ್ತು ನನ್ನ ನಡುವೆ ಗೆಳೆತನಕ್ಕೆ ಮೀರಿದ ಸಂಬಂಧವಿದೆ'' ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ಡೈಸಿ ಬೋಪಣ್ಣ ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ಅದೇ ಪತ್ರಿಕೆ ಶ್ರೀಶಾಂತ್ ರನ್ನು ಪ್ರಶ್ನಿಸಿದರೆ ಅವರು ಕೆಂಡಾಮಂಡಲವಾಗಿದ್ದಾರೆ. ನನ್ನ ಗೆಳೆಯರು, ಕುಟುಂಬದರಿಗೆ ಉತ್ತರ ಕೊಡುವಷ್ಟರಲ್ಲಿ ಸಾಕು ಬೇಕಾಯಿತು. ಇದೆಲ್ಲಾ ಅಪ್ಪಟ ಸುಳ್ಳು ಎಂದು ಹೇಳುವಷ್ಟರಲ್ಲಿ ಹೆಣ ಬಿದ್ದು ಹೋಯ್ತು. ಈ ಒಂಟಿ ಹುಡುಗಿಯರ ಬಗ್ಗೆ ನನ್ನ ಹೆಸರನ್ನು ಯಾಕೆ ಬೆರೆಸುತ್ತಾರೋ!? ಎಂದು ಶ್ರೀಶಾಂತ್ ಅಲವತ್ತುಕೊಂಡಿದ್ದಾರೆ.

ನನಗೆ ಯಾರು ಗರ್ಲ್ ಫ್ರೆಂಡ್ಸ್ ಇಲ್ಲ. ನನ್ನ ಗಮನವೆಲ್ಲಾ ಕ್ರಿಕೆಟ್ ಮೇಲಿದೆ. ಅದೇ ನನ್ನ ಸದ್ಯದ ಗರ್ಲ್ ಫ್ರೆಂಡ್ ಎನ್ನುತ್ತಾರೆ ಶ್ರೀಶಾಂತ್. ಯಾವುದೋ ಒಂದು ಜಾಹೀರಾತಿನಲ್ಲಿ ಡೈಸಿಯನ್ನು ಭೇಟಿಯಾಗಿದ್ದೆ. ಅದೇ ನನ್ನ ಕೊನೆಯ ಭೇಟಿ. ಇಲ್ಲಿಯವರೆಗೂ ಆಕೆಯೊಂದಿಗೆ ಯಾವುದೇ ಸಂಪರ್ಕವಿಲ್ಲ. ನಿಜ ಹೇಳಬೇಕೆಂದರೆ ಡೈಸಿಯ ಫೋನ್ ನಂಬರ್ ಸಹ ನನ್ನ ಬಳಿ ಇಲ್ಲ. ಎಸ್ ಎಂ ಎಸ್ ಕಳುಹಿಸಲು, ಆಕೆಯನ್ನು ಸಂಪರ್ಕಿಸಲು ಹೇಗೆ ತಾನೆ ಸಾಧ್ಯ? ಎಂದು ಪ್ರಶ್ನಿಸುತ್ತಾರೆ ಶ್ರೀಶಾಂತ್.

Daisy Bopanna
ಆದರೆ ಡೈಸಿ ಬೋಪಣ್ಣ ಹೇಳುವ ಕತೆಯೇ ಬೇರೆ. ಜಾಹೀರಾತಿನಲ್ಲಿ ನಟಿಸಿದ ನಂತರ ಶ್ರೀಶಾಂತ್ ತನಗೆ ರೋಸ್ ಕೊಟ್ಟಿದ್ದ. ಈಗಲೂ ಎಸ್ ಎಂ ಎಸ್ ಗಳನ್ನು ಕಳುಹಿಸುತ್ತಲೇ ಇದ್ದಾನೆ ಎನ್ನುತ್ತಾರೆ. ಆದರೆ ಶ್ರೀಶಾಂತ್ ಮಾತ್ರ ಇದ್ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ.

ಈ ರೀತಿಯ ಸುದ್ದಿಗಳಿಂದ ನನ್ನ ಮನಸ್ಸಿಗೆ ನಿಜಕ್ಕೂ ಬೇಸರವಾಗಿದೆ. ನಮ್ಮ ತಂದೆ ತಾಯಿ ಸಹ ನನ್ನನ್ನು ಅನುಮಾನದಿಂದ ನೋಡುವಂತಾಗಿದೆ. ಕೆಲವು ನಟಿಯರು ನನ್ನ ಬಗ್ಗೆ ಇಲ್ಲಸಲ್ಲದ ಸಂಬಂಧಗಳನ್ನು ಕಟ್ಟುತ್ತಿದ್ದಾರೆ. ನನಗೆ ಯಾವ ನಟಿಯೊಂದಿಗೂ ಸಂಬಂಧವಿಲ್ಲ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ ಎಂದು ಆಂಗ್ಲ ಪತ್ರಿಕೆಗಳಲ್ಲಿ ಶ್ರೀಶಾಂತ್ ಗೋಗರೆದಿದ್ದಾರೆ.ಒಟ್ಟಿನಲ್ಲಿ ಡೈಸಿ ಬೋಪಣ್ಣ ಸಿಡಿಸಿರುವ ಬಾಂಬ್ ಹುಸಿಯಾಗದೆ ಸರಿಯಾಗಿಯೇ ಸ್ಫೋಟಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಲಕ್ಷಲಕ್ಷ ದುಡ್ಡು ಎಣಿಸುವ ಕನ್ನಡ ಹಾಸ್ಯ ನಟರು!
ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಟಿ ಶ್ರುತಿ
ಚುನಾವಣಾ ಪ್ರಚಾರದಲ್ಲಿ ನಟಿ ತಾರಾಗೆ ಸಿಕ್ಕಿದ್ದೇನು?
ಅಗ್ನಿ ಶ್ರೀಧರ್ ಅವರ ಹೊಸ ಚಿತ್ರ 'ಕಳ್ಳರ ಸಂತೆ'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada