»   »  ಕಿರಣ್ ಬೇಡಿಗೆ ಯು ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ?

ಕಿರಣ್ ಬೇಡಿಗೆ ಯು ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ?

Subscribe to Filmibeat Kannada
How Kiran Bedi got U certificate
ಕನ್ನಡದ ಕಿರಣ್ ಬೇಡಿ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿರುವ ಬಗ್ಗೆ ಗಾಂಧಿನಗರದಲ್ಲಿ ವಿವಾದ ತಲೆಯೆತ್ತಿದೆ. ಲಾಂಗು, ಮಚ್ಚು, ರಕ್ತಪಾತ ಇದ್ದರೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾರ ಮುಲಾಜಿಗೂ ಒಳಗಾಗದೆ 'ಎ' ಸರ್ಟಿಫಿಕೇಟ್ ಕೊಡುವುದು ಮಾಮೂಲು. ಆದರೆ ಕಿರಣ್ ಬೇಡಿಗೆ ಏಕೆ ಯು ಸರ್ಟಿಫಿಕೇಟ್ ಕೊಟ್ಟಿದೆ? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ.

ಕಿರಣ್ ಬೇಡಿ ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ತೋರಿರುವ ಮೃದು ದೋರಣೆಗೆ ಕಾರಣ ಏನು? ಲಾಂಗು, ಮಚ್ಚು, ರಕ್ತಪಾತ...ಕ್ರೌರ್ಯ ...ಹೀಗೆ ಯಾವುದರಲ್ಲೂ ಕಿರಣ್ ಬೇಡಿ ಕಡಿಮೆ ಇಲ್ಲ. ಈ ಚಿತ್ರಕ್ಕೆ ಎ ಸರ್ಟಿಫಿಕೇಟ್ ಅಲ್ಲದಿದ್ದರೂ ಕನಿಷ್ಠ ಯು/ಎ ಪ್ರಮಾಣ ಪತ್ರವನ್ನಾದರೂ ಕೊಡಬೇಕಿತ್ತು ಎಂಬುದು ಗಾಂಧಿನಗರದ ವಾದ.

ಸಾಮಾನ್ಯವಾಗಿ ರಕ್ತಪಾತದ ಚಿತ್ರಗಳಿಗೆ ನೂರೆಂಟು ಪ್ರಶ್ನೆಗಳನ್ನು ಕೇಳಿ ಮುಲಾಜಿಲ್ಲದೆ ಎ ಸರ್ಟಿಫಿಕೇಟ್ ಕೊಡುತ್ತಿತ್ತು . ರಕ್ತಪಾತದ ಚಿತ್ರಗಳಿಗೆ ಪ್ರಮಾಣ ಪತ್ರ ನೀಡಲು ಸೆನ್ಸಾರ್ ಮಂಡಳಿ ನಿರ್ಮಾಪಕರನ್ನು ದಿನಗಟ್ಟಲೆ ಅಲೆಯುವಂತೆ ಮಾಡುತ್ತಿತ್ತು. ಆದರೆ ಕಿರಣ್ ಬೇಡಿ ಬಗ್ಗೆ ಯಾಕೆ ಈ ಸಾಫ್ಟ್ ಕಾರ್ನರ್?

ದಕ್ಷ ಅಧಿಕಾರಿ ಎಂದು ಹೆಸರು ಮಾಡಿರುವ ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಬಗ್ಗೆ ಬೆರಳು ತೋರಿಸುವಂತಿಲ್ಲ. ಆದರೂ ಸೆನ್ಸಾರ್ ಮಂಡಳಿಯ ಈ ಮೃದು ಧೋರಣೆ ಹಲವರ ಹುಬ್ಬೇರಿಸುವಂತೆ ಮಾಡಿದೆ. ಈ ಪ್ರಶ್ನೆಗಳಿಗೆಲ್ಲಾ ಸೆನ್ಸಾರ್ ಮಂಡಳಿಯೆ ಉತ್ತರಿಸಬೇಕು? ಏನಂತೀರಾ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್
ಪ್ರೇಕ್ಷಕರ ಎದೆ ಝಲ್ಲೆನ್ನಿಸಲಿದ್ದಾರೆ ಮಾಲಾಶ್ರೀ
ಕನ್ನಡ ಚಿತ್ರರಂಗದ ದುಸ್ಥಿತಿಯ ಬಗ್ಗೆ ರಾಮು ವಿಷಾದ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada