»   »  ಜೀವನ್ ಸಾಥಿ ಡಾಮ್ ಕಾಂನಲ್ಲಿ ಲಕ್ಷ್ಮಿಗೋಪಾಸ್ವಾಮಿ!

ಜೀವನ್ ಸಾಥಿ ಡಾಮ್ ಕಾಂನಲ್ಲಿ ಲಕ್ಷ್ಮಿಗೋಪಾಸ್ವಾಮಿ!

Subscribe to Filmibeat Kannada

ಹೆಸರು: ಲಕ್ಷ್ಮಿ ಗೋಪಾಲಸ್ವಾಮಿ
ವಯಸ್ಸು: 34 ವರ್ಷಗಳು
ಎತ್ತರ: 5 ಅಡಿ 3 ಇಂಚು
ಲಿಂಗ: ಸ್ತ್ರೀ
ಧರ್ಮ: ಹಿಂದು
ಜಾತಿ: ಬ್ರಾಹ್ಮಣ
ಮಾತೃಭಾಷೆ: ಕನ್ನಡ/ಕರ್ನಾಟಕ
ವೈವಾಹಿಕ ಸ್ಥಾನಮಾನ: ಅವಿವಾಹಿತೆ
ಪೋಸ್ಟ್ ಮಾಡಿದವರು: ಸ್ವತಃ ತಾವೇ
ವಿದ್ಯಾರ್ಹತೆ: ಎಂ.ಎ
ವೃತ್ತಿ:ನಿರೂಪಕಿ/ಟಿವಿ/ಚಲನಚಿತ್ರ
ಸ್ಥಳ: ಬೆಂಗಳೂರು
ವಾರ್ಷಿಕ ಆದಾಯ: ರು.10,00,001ದಿಂದ ರು.15,00,000
ಜನ್ಮದಿನಾಂಕ:ಜನವರಿ 7, 1975
ಹುಟ್ಟಿದ ದೇಶ: ಭಾರತ
ಹುಟ್ಟಿದ ಊರು: ಬೆಂಗಳೂರು
ಸಮುದಾಯ: ಸ್ಮಾರ್ತ
ಕುಟುಂಬ: ಮಧ್ಯಮ ವರ್ಗ/ವಿಭಕ್ತ ಕುಟುಂಬ

ಆನ್ ಲೈನ್ ವಧುವರರ ಅನ್ವೇಷಣಾ ತಾಣಗಳಲ್ಲಿ ಮತ್ತೊಬ್ಬರ ಹೆಸರು ಹೇಗೆ ದುರುಪಯೋಗವಾಗುತ್ತದೆ ಎಂಬುದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ಭರತನಾಟ್ಯ ಪ್ರವೀಣೆ ಹಾಗೂ ನಟಿ ಲಕ್ಷ್ಮ್ನಿ ಗೋಪಾಲ ಸ್ವಾಮಿ ಅವರ ಹೆಸರಿನಲ್ಲಿ ಕಾಣದ ಕೈಯೊಂದು ವರ ಬೇಕೆಂದು ಅರ್ಜಿ ಗುಜರಾಯಿಸಿದೆ. ಅವರ ಇತ್ತೀಚಿನ ಭಾವಚಿತ್ರ, ಹೆಚ್ಚೂ ಕಡಿಮೆ ಅವರ ಸಂಪೂರ್ಣ ವಿವರಗಳನ್ನು ಆಗಂತುಕರು ಜೀವನ್ ಸಾಥಿ ಡಾಮ್ ಕಾಂನಲ್ಲಿ ದಾಖಲಿಸಿದ್ದಾರೆ!

ವರನಾಗುವವನು 'ಹುಟ್ಟು ಅಂಗವಿಕಲನಾಗಿರಬೇಕು ಅಥವಾ ಅಪಘಾತದಲ್ಲಿ ಅಂಗವಿಕಲನಾಗಿರಬೇಕು ಅಥವಾ ಬೌದ್ಧಿಕ ವಿಕಲಚೇತನನಾಗಿರಬೇಕು ಅಥವಾ ಅಪಘಾತದಲ್ಲಿ ಬೌದ್ಧಿಕ ವಿಕಲಚೇತನನಾಗಿರಬೇಕು' ಎಂಬ ವಿವರಗಳನ್ನು ನೀಡಲಾಗಿದೆ. ಸದ್ಯಕ್ಕಂತೂ ನನಗೆ ಮದುವೆಯಾಗುವ ಆಲೋಚನೆಯೇ ಇಲ್ಲ. ಯಾರೋ ಇದನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಈಗ ನನ್ನ ಜಾತಕವನ್ನು ಅಲ್ಲಿಂದ ತೆಗೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

''ಮದುವೆಯನಂತರವೂ ಉದ್ಯೋಗ ಮಾಡಬೇಕೆಂದಿದ್ದೇನೆ. ಸಹೋದರಿಯರಿಲ್ಲ ಒಬ್ಬ ತಮ್ಮ ಇದ್ದಾನೆ. ತಾಯಿ ನಿವೃತ್ತರಾಗಿದ್ದಾರೆ. ತಂದೆ ವ್ಯಾಪಾರ ನೋಡಿಕೊಳ್ಳುತ್ತಾರೆ. ಇವಿಷ್ಟು ವಿವರಗಳನ್ನು ಜೀವನ್ ಸಾತಿ ಡಾಕ್ ಕಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಈ ವಿವರಗಳನ್ನು ಪೋಸ್ಟ್ ಮಾಡಿರುವವರು ಯಾರು ಎಂಬುದು ಗೊತ್ತಿಲ್ಲ. ತಾವಂತೂ ಪೋಸ್ಟ್ ಮಾಡಿಲ್ಲ. ನನ್ನ ಹೆಸರಿನಲ್ಲಿ ಈ ಸುಳ್ಳು ವಿವರಗಳನ್ನು ದಾಖಲಿಸಿದ್ದಾರೆ'' ಎಂದು ಲಕ್ಷ್ಮಿ ಗೋಪಾಲ ಸ್ವಾಮಿ ತಿಳಿಸಿದ್ದಾರೆ.

ವೆಬ್ ಸೈಟಿಗೆ ನೀಡಲಾಗಿರುವ ಕೆಲವೊಂದು ವಿವರಗಳು ವಿಕಿಪೀಡಿಯಾದಲ್ಲೂ ಲಭ್ಯವಿಲ್ಲ. ಹಾಗಿದ್ದೂ ಇಷ್ಟೆಲ್ಲಾ ವಿವರಗಳನ್ನು ನೀಡಲು ಯಾರಿಗೆ ತಾನೆ ಸಾಧ್ಯ? ಗೋಪಾಲಸ್ವಾಮಿ ಅವರ ಹತ್ತಿರದವರು ಯಾರೋ ಈ ರೀತಿ ಮಾಡಿರಬಹುದು ಎಂಬ ಗುಮಾನಿಯೂ ವ್ಯಕ್ತವಾಗಿದೆ. ಜೀವನ್ ಸಾಥಿ ಡಾಟ್ ಕಾಂ ನಲ್ಲಿ ನೀಡಿದ್ದ ವಿವರಗಳನ್ನು ಸದ್ಯಕ್ಕೆ ಅಲ್ಲಿಂದ ತೆಗೆಯಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada