»   »  ತಮಿಳಿಗೆ ಬಂದ ಮೌಶ್ಮಿಗೆ ರಕ್ತಚುಂಬನ

ತಮಿಳಿಗೆ ಬಂದ ಮೌಶ್ಮಿಗೆ ರಕ್ತಚುಂಬನ

Subscribe to Filmibeat Kannada

ರೂಪದರ್ಶಿ, ಐಟಂ ಹುಡುಗಿ ಮೌಶ್ಮಿ ಉದೇಶಿ ಮಧುರೈ ಬಳಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ, ಅನಾಮಿಕನೊಬ್ಬ ದಿಢೀರ್ ಎಂದು ಪ್ರತ್ಯಕ್ಷನಾಗಿ ಮೌಶ್ಮಿಯ ತುಟಿಗಳನ್ನು ಕಚ್ಚಿ, ರಕ್ತಬರುವಂತೆ ಚುಂಬಿಸಿದ ಘಟನೆ ನಡೆದಿದೆ.

ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ನೂರಾರು ಜನ ಸೇರಿದ್ದರು. ಮೌಶ್ಮಿ ಸಹ ನರ್ತಕಿಯರ ಜೊತೆ ಹೆಜ್ಜೆ ಹಾಕಲು ಅಣಿಯಾಗಿದ್ದರು. ನಾಯಕ ವಿರುದ್ಧ ದಿಕ್ಕಿನಿಂದ ಮೌಶ್ಮಿ ಬಳಿಗೆ ಹಾಡಿಕೊಂಡು ಬರುವ ದೃಶ್ಯವನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಅನಾಮಿಕನೊಬ್ಬ ಮೌಶ್ಮಿ ಬಳಿಗೆ ಬಂದು ಅನುಚಿತವಾಗಿ ವರ್ತಿಸಿ, ಚುಂಬಿಸಿ, ಎಳೆದಾಡಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಮಿಲಗ ಎಂಬ ಹೆಸರಿನ ತಮಿಳು ಚಿತ್ರದ ಐಟಂ ಹಾಡೊಂದಕ್ಕೆ ಕುಣಿಯಲು ಬಂದಿದ್ದ ಮೌಶ್ಮಿಗೆ ರಕ್ತ ಚುಂಬನ ಕೊಟ್ಟ ಭೂಪನಿಗೆ ನಂತರ ಮೌಶ್ಮಿ ಸೇರಿದಂತೆ ಚಿತ್ರತಂಡ ಹಿಗ್ಗಾ ಮುಗ್ಗಾ ಹೊಡೆದು ಚಿತ್ರತಂಡ ಏನಾಗುತ್ತಿದೆ ನೋಡುವಷ್ಟರಲ್ಲಿ ಮೌಶ್ಮಿ ಆಗಲೇ ರಕ್ತಚುಂಬನ ಕೊಟ್ಟವನಿಗೆ ಮೂಗು ಮುಖದಲ್ಲಿ ರಕ್ತ ಸೋರುವಂತೆ ಹೊಡೆದಿದ್ದಳಂತೆ, ಚಿತ್ರತಂಡ ಆತನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಟ್ಟ ನಂತರ ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮೌಶ್ಮಿ ಆಕ್ರೋಶ ನೋಡಿ ಚಿತ್ರತಂಡ ಬೆಚ್ಚಿಬಿದ್ದಿದೆ ಎಂಬ ಸುದ್ದಿಯಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada