»   »  ಶೈನಿ ಜಾಮೀನು ಅರ್ಜಿ ತಿರಸ್ಕೃತ

ಶೈನಿ ಜಾಮೀನು ಅರ್ಜಿ ತಿರಸ್ಕೃತ

Posted By:
Subscribe to Filmibeat Kannada

ಮುಂಬೈ, ಜು. 8 : ಮನೆಗೆಲಸದ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಬಾಲಿವುಡ್ ನಟ ಶೈನಿ ಅಹುಜಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 16ರ ವರೆಗೆ ವಿಸ್ತರಿಸಿದೆ.

ಬುಧವಾರ ನಗರದ ಅಂಧೇರಿಯಲ್ಲಿರುವ ಮೆಟ್ರೋಪಾಲಿಟಿನ್ ಕೋರ್ಟ್ ಗೆ ಶೈನಿ ಹಾಜರಾಗಿದ್ದು, ಅತ್ಯಾಚಾರದಂತಹ ಹೀನ ಕೃತ್ಯ ಎಸಗಿ ಆರೋಪಿಯಾಗಿರುವ ಶೈನಿ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಡಿಕೊಂಡು ಮನವಿಯನ್ನು ಪುರಷ್ಕರಿಸಿದೆ. ಬಂಧನದ ಅವಧಿಯನ್ನು ಜುಲೈ 16ರವರೆಗೆ ವಿಸ್ತರಿಸಿ ಆದೇಶ ನೀಡಿದೆ. ಜೂನ್ 13 ರಂದು ಮನೆಗೆಲಸದ ಯುವತಿ ಮೇಲೆ ಶೈನಿ ಅತ್ಯಾಚಾರ ಎಸಗಿದ್ದರು. ನಂತರ ಅವರನ್ನು ಬಂಧಿಸಿದ್ದ ಪೊಲೀಸರು ಜೂನ್ 18ರ ವರೆಗೆ ನ್ಯಾಯಾಂಗ ಬಂಧನದಲ್ಲಿಟ್ಟಿದ್ದರು.

ತದನಂತರ ಜುಲೈ 2ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿತ್ತು. ಇದೀಗ ಈ ಅವಧಿ ಮುಗಿದಿದ್ದು, ಜುಲೈ 16ರ ವರೆಗೆ ವಿಸ್ತರಣೆ ಮಾಡಲಾಗಿದೆ. ಅತ್ಯಾಚಾರ ಮಾಡಿರುವುದನ್ನು ಶೈನಿ ಒಪ್ಪಿಕೊಂಡಿದ್ದಾರೆ. ಡಿಎನ್ಎ ಪರೀಕ್ಷೆ ಮತ್ತಷ್ಟು ವೈದ್ಯಕೀಯ ತಪಾಸಣೆಯಿಂದಲೂ ಅತ್ಯಾಚಾರ ಮಾಡಿದ್ದು ದೃಢಪಟ್ಟಿದೆ. ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada