»   » ಪತ್ರಕರ್ತರ ಮೇಲೆ ಪ್ರಜ್ವಲ್ ದೇವರಾಜ್ ಪ್ರತಾಪ!

ಪತ್ರಕರ್ತರ ಮೇಲೆ ಪ್ರಜ್ವಲ್ ದೇವರಾಜ್ ಪ್ರತಾಪ!

Posted By:
Subscribe to Filmibeat Kannada
Prajwal Devraj furious on media
'ಏನ್ರೀ... ನಾವು ಕರೆದು ಪತ್ರಕರ್ತರಿಗೆ ಸಿನಿಮಾ ತೋರಿಸ್ತೀವಿ. ಆಮೇಲೆ ಗೆಟ್‌ಟುಗೆದರ್. ಸಿನಿಮಾ ಹೇಗಿದೆ ಅಂತ ಒಬ್ಬರೂ ಒಂದು ಮಾತು ಹೇಳಲಿಲ್ಲ. ಆಮೇಲೆ ಬಾಯಿಗೆ ಬಂದಂತೆ ಬೈಯ್ದರು. ಯಾಕಾದ್ರೂ ಸಿನಿಮಾ ತೋರಿಸ್ತೀವೋ ಅನ್ಸುತ್ತೆ..." ಇಂಥಾ ಧಾಟಿಯಲ್ಲಿ ನಾಯಕ ಪ್ರಜ್ವಲ್ ಮಾತಾಡಿದ್ದಾರೆ. ಅದು ಯಥಾವತ್ತಾಗಿ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಅಚ್ಚಾಗಿದೆ.

ಆತನನ್ನು ಮಾತಾಡಿಸಿರುವ ಇಂಗ್ಲಿಷ್ ಪತ್ರಕರ್ತೆ ಕೂಡ ಈ ಸಿನಿಮಾ ನೋಡಿದ್ದರು. ತಮಗೂ ಅನ್ವಯಿಸಿ ಪ್ರಜ್ವಲ್ ಈ ಮಾತು ಹೇಳುತ್ತಿದ್ದಾನೆ ಅನ್ನುವ ಪ್ರಜ್ಞೆಯೂ ಇಲ್ಲದೆ ಅವರು ಅವನು ಹೇಳಿದ್ದನ್ನೆಲ್ಲ ಗಿಳಿಪಾಠದಂತೆ ಬರೆದಿದ್ದಾರೆ. ಪತ್ರಿಕೆಯ ಸಂಪಾದಕರು ಸಣ್ಣ ಯೋಚನೆಯನ್ನೂ ಮಾಡದೆ ಅದನ್ನು ಅಚ್ಚುಮಾಡಿದ್ದಾರೆ. ಇದು ಇಂದಿನ ಪತ್ರಿಕೋದ್ಯಮದ ಧೋರಣೆ ಹಾಗೂ ಸಿನಿಮಾ ನಾಯಕರ ದುರಹಂಕಾರಕ್ಕೆ ಉದಾಹರಣೆ.

ಪ್ರಜ್ವಲ್ ಈ ಮಾತನ್ನು ಹೇಳಿದ್ದು 'ಗುಲಾಮ" ಚಿತ್ರದ ಕುರಿತು. ಲಾಂಗು, ಮಚ್ಚು ಹಿಡಿಯುವ ಪಾತ್ರ ಪ್ರಜ್ವಲ್‌ಗೆ ಒಗ್ಗುವುದಿಲ್ಲ ಎಂದು ಅನೇಕ ಪತ್ರಿಕೆಗಳು ವಿಮರ್ಶೆ ಮಾಡಿದ್ದವು. ಅದನ್ನು ನೋಡಿ ಬುದ್ಧಿ ಮಾಗದ ಪ್ರಜ್ವಲ್‌ಗೆ ಸಿಟ್ಟು ಬಂದಿರಲಿಕ್ಕೆ ಸಾಕು. ಅದನ್ನು ಕಾರಿಕೊಳ್ಳಲು ಅವರಿಗೆ ಇನ್ನೊಂದು ಪತ್ರಿಕೆಯಲ್ಲೇ ಜಾಗ ಸಿಗುತ್ತದೆ. ಇದು ಪರಿಸ್ಥಿತಿಯ ವ್ಯಂಗ್ಯ.

'ಗುಲಾಮ" ಚಿತ್ರ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ತೆವಳುತ್ತಿದೆ. ಶುಕ್ರವಾರ (ಜ.9) ಬೆಳಗಿನ ಆಟಕ್ಕೆ ಬಾಲ್ಕನಿಗೆ ಬಿಕರಿಯಾದ ಟಿಕೆಟ್‌ಗಳು ಬರೀ 23! ಸಿನಿಮಾ ಉದ್ದವಾಯಿತು ಅನ್ನುವ ಕಾರಣಕ್ಕೆ ಇಪ್ಪತ್ತು ನಿಮಿಷ ಕತ್ತರಿಸಿ, ಆಲ್ಟರ್ ಮಾಡಲಾಗಿದೆ. ಹಾಗಿದ್ದೂ ಯಾರೊಬ್ಬರೂ ಸಿನಿಮಾ ಮೂಸುತ್ತಿಲ್ಲ.

ಕಿತ್ತುಹೋದ ಸಂಗತಿಗಳನ್ನು, ಸವಕಲು ವಿಷಯಗಳನ್ನು ಇಟ್ಟುಕೊಂಡು ಕೆಟ್ಟಾತಿಕೆಟ್ಟ ಚಿತ್ರಗಳನ್ನು ಮಾಡಿ, ವಸ್ತುನಿಷ್ಠವಾಗಿ ಟೀಕಿಸಿದವರನ್ನು ಕುಟುಕುವ ಸ್ವಭಾವ ನಟರಿಗೆ ಇರುವುದು ಹೊಸತೇನಲ್ಲ. ಆದರೆ, ಪ್ರಜ್ವಲ್ ಇನ್ನೂ ಹುಡುಗ. ಉತ್ಸಾಹವಿದೆ. ಬೆಳೆಯುವ ಲಕ್ಷಣವಿದೆ. ಪತ್ರಿಕೆಗಳ ಹಂಗು ಅವರಿಗೆ ಬೇಕೋ, ಬೇಡವೋ ಅನ್ನೋದು ಬೇರೆ ಮಾತು.ಆದರೆ, ಯಾವುದಕ್ಕೂ ಒಂದು ಸಲ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು!
ವಿಮರ್ಶೆ: ಮಚ್ಚು ಲಾಂಗು ಸಂಗಮ ಗುಲಾಮ!
ಬಿಯಾಂಕ ದೇಸಾಯಿ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada