ಬಿಕಿನಿನೂ ಇಲ್ಲ ದುಡ್ಡು ಕೇಳಿಲ್ಲ ಎಲ್ಲ ಸುಳ್ಳು : ತ್ರಿಷಾ

ಬಾಡಿಗಾರ್ಡ್ ರಿಮೇಕ್ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಗೆ ಜೋಡಿಯಾಗಿರುವ ತ್ರಿಷಾ, ಚಿತ್ರದ ನಿರ್ಮಾಪಕರಲ್ಲಿ ಸಂಭಾವನೆ ಜೊತೆಗೆ 25 ಲಕ್ಷ ಎಕ್ಟ್ರಾ ಕೊಟ್ಟರೆ ಬಿಕಿನಿ ತೊಡಲು ಸಿದ್ಧ ಎಂದಿದ್ದಾಳೆ. ದುಡ್ಡಿಗಾಗಿ ತ್ರಿಷಾ ಹಾತೊರೆಯುತ್ತಿದ್ದಾಳೆ ಎಂದು ಬಂದಿದ್ದ ವರದಿಯನ್ನು ಅಲ್ಲಗೆಳೆದಿರುವ ತ್ರಿಷಾ, ಮಲೆಯಾಳಂ ಹಾಗೂ ತಮಿಳು ಚಿತ್ರದಲ್ಲಿ ಇಲ್ಲದ ಬಿಕಿನಿ ದೃಶ್ಯ, ತೆಲುಗು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯ. ತಲೆ ಸರಿಯಿರುವ ಯಾವೊಬ್ಬನ್ನು ನಂಬುವಂಥ ವರದಿ ಇದಲ್ಲ. ಸುಮ್ಮನೆ ಇಲ್ಲದ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಧ್ಯಮಗಳು ಏನನ್ನಾದರೂ ಬರೆಯುವುದನ್ನು ನಿಲ್ಲಿಸಲಿ.
ಹಲವು ವರ್ಷಗಳಿಂದ ಇಂಡಸ್ಟ್ರೀಯಲ್ಲಿದ್ದೇನೆ. ನಂಬರ್ ಗೇಮ್ ನಲ್ಲಿ ನನಗೆ ನಂಬಿಕೆಯಿಲ್ಲ, ಆದ್ರೆ ಈಗ ನಾನಿರುವ ಸ್ಥಾನದಲ್ಲಿ ನನಗೆ ಬೇಕಾದ ಪಾತ್ರ ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಟಾಲಿವುಡ್ ಹಾಗೂ ಕಾಲಿವುಡ್ ನೀಡಿದೆ. ಜನರ ಮನಸ್ಸಿನಲ್ಲಿ ತ್ರಿಷಾ ಬಗ್ಗೆ ಇರುವ ಇಮೇಜ್ ಹಾಳುಗೆಡವುದಿಲ್ಲ ಎಂದಿದ್ದಾರೆ.
ತಮನ್ನಾ, ಸ್ನೇಹಾ ಕೂಡಾ ಇದೇ ರೀತಿ ಬಿಕಿನಿ ತೊಡುವುದಿಲ್ಲ ಎಂದು ಶಪಥ ಹಾಕಿದ್ದರು. ತ್ರಿಷಾ ಕೂಡಾ ನೋ ಟೂ ಪೀಸ್ ಎನ್ನುತ್ತಿದ್ದಾರೆ. ತ್ರಿಷಾಳ ಮೈಮಾಟಕ್ಕಿಂತ ನಟನೆಗೆ ಅಭಿಮಾನಿಗಳು ಹೆಚ್ಚಿನ ಮಾರ್ಕ್ಸ್ ನೀಡಿರುವುದರಿಂದ ತ್ರಿಷಾ ಸದ್ಯಕ್ಕೆ ಬಚಾವ್. ಬೇಡಿಕೆ ಕಡಿಮೆಯಾದರೆ ನಟಿಮಣಿಯರ ಉಡುಗೆ ಕೂಡಾ ಇಂಚಿಂಚು ಕಮ್ಮಿಯಾಗುವುದು ಸಿನಿಮಾ ಪ್ರಪಂಚ ಕಂಡ ನಗ್ನಸತ್ಯ.


Click it and Unblock the Notifications











