»   » ಅಮೂಲ್ಯ, ರತ್ನಜ ಪ್ರೀತಿ, ಪ್ರೇಮ, ಪ್ರಣಯ ನಿಜವೇ?

ಅಮೂಲ್ಯ, ರತ್ನಜ ಪ್ರೀತಿ, ಪ್ರೇಮ, ಪ್ರಣಯ ನಿಜವೇ?

Posted By: *ಉದಯರವಿ
Subscribe to Filmibeat Kannada

ಈ ಪ್ರಶ್ನೆಗೆ ಉತ್ತರ ಹೇಳುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಒಂದು ವೇಳೆ ಇದು ನಿಜವಿರಲೂ ಬಹುದು ಅಥವಾ ಕಿಡಿಗೇಡಿಗಳ ಕೃತ್ಯವಿರಲೂ ಬಹುದು. ಆದರೆ ಚುಂಬನದ ಚಿತ್ರಗಳನ್ನು ನೋಡಿದರೆ ಎಂಥವರಿಗೂ ನಂಬಿಕೆ ಬಂದೇ ಬರುತ್ತದೆ. ಇಷ್ಟಕ್ಕೂ ಈ ಕೃತ್ಯದ ಹಿಂದಿನ ಉದ್ದೇಶವೇನು? ಈ ಚುಂಬನದ ಹಿಂದೆ ಯಾರ ಕೈವಾಡವಿದೆ?

ವಿಜಯ ಕೃಷ್ಣ ಎಂಬಾತ ನಿರ್ದೇಶಕ ರತ್ನಜ ಅವರಿಗೆ ಫೋನಾಯಿಸಿ ನಿಮ್ಮ ಹಾಗೂ ಅಮೂಲ್ಯ ಬಿಸಿಬಿಸಿ ಚಿತ್ರಗಳು ನನ್ನ ಬಳಿ ಇವೆ. ಒಂದಷ್ಟು ದುಡ್ಡು ಕೊಟ್ಟರೆ ಈ ನಿಮ್ಮ ಪ್ರಣಯಸದೃಶ್ಯ ಚಿತ್ರಗಳು ಸೈಲೆಂಟಾಗಿ ಕಸದಬುಟ್ಟಿಗೆ ಸೇರುತ್ತವೆ. ಇಲ್ಲವಾದರೆ ಮೊಬೈಲ್ ಫೋನುಗಳ ಇನ್ ಬಾಕ್ಸ್ ಸೇರುತ್ತವೆ ಎಂದು ಬೆದರಿಸಿದ್ದ.

ಈ ಬೆದರಿಕೆಗೆ ಸೊಪ್ಪು ಹಾಕದೆ ರತ್ನಜ ಅವರು ಸುಮ್ಮನಾಗಿದ್ದಾರೆ. ಅಷ್ಟರಲ್ಲೇ ಈ ಪ್ರಣಯ ದೃಶ್ಯಗಳು ಮೊಬೈಲ್ ಫೋನ್ ಗಳಲ್ಲಿ ಸರಿದಾಡಿವೆ. ವಿಜಯ ಕೃಷ್ಣ ಎಂಬಾತ ತನಗೆ ಕರೆ ಮಾಡಿ ನನ್ನ ಇ-ಮೇಲ್ ವಿಳಾಸ ಕೇಳಿದ್ದ. ಆತನ ಬಗ್ಗೆ ಅಷ್ಟಾಗಿ ನಾನು ತಲೆಕೆಡಿಸಿಕೊಳ್ಳಲಿಲ್ಲ ಎಂದಿರುವ ರತ್ನಜ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾರೆ.

ವಿಡಿಯೋ : ಅಮೂಲ್ಯ, ರತ್ನಜ ಚುಂಬನ ದೃಶ್ಯಗಳು

ಕಳೆದ ಕೆಲ ದಿನಗಳಿಂದ ಈ ಅಸಹ್ಯ ಫೋಟೋ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ. ತಕ್ಷಣ ನಾನು ಪೊಲೀಸರಿಗೆ ದೂರು ನೀಡಲಿಲ್ಲ. ಅನಾವಶ್ಯಕವಾಗಿ ಅಮೂಲ್ಯ ಅವರು ಇಕ್ಕಟ್ಟಿಗೆ ಸಿಲುಕಿಸಲು ನನಗೆ ಇಷ್ಟವಿರಲಿಲ್ಲ. ಈ ಕಾರಣಕ್ಕೆ ಪೊಲೀಸರಿಗೆ ತಕ್ಷಣ ದೂರು ಕೊಡಲಿಲ್ಲ ಎಂದು ರತ್ನಜ ಪ್ರತಿಕ್ರಿಯಿಸಿದ್ದಾರೆ.

ಪ್ರೇಮಿಸಂ ಚಿತ್ರೀಕರಣ ವೇಳೆ ಮೈಸೂರಿನಲ್ಲಿ ರತ್ನಜ ತಮ್ಮ ಮೊಬೈಲ್ ಫೋನನ್ನು ಕಳೆದುಕೊಂಡಿದ್ದರು. ಶಿವಾಜಿನಗರ ಸೇರಿದ ಆ ಮೊಬೈಲ್ ಫೋನ್ ಮತ್ತೊಬ್ಬರ ಕೈಗೆ ರವಾನೆಯಾಗಿದೆ. ಅದರಲ್ಲಿ ಈ ದೃಶ್ಯಗಳಿಗೆ ಎನ್ನಲಾಗಿದ್ದು. ಮೊಬೈಲ್ ಸಿಕ್ಕಿರುವ ವ್ಯಕ್ತಿಯೇ ಈ ಚಿತ್ರಗಳನ್ನು ರವಾನಿಸುತ್ತಿದ್ದಾನೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ಪ್ರೇಮಿಸಂ ಚಿತ್ರೀಕರಣ ವೇಳೆ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂಬ ಸುದ್ದಿಯೂ ಇದೆ. ಒಟ್ಟು ಒಂಭತ್ತು ಚಿತ್ರಗಳ ಜೊತೆಗೆ ವಿಡಿಯೋ ಸಹ ಇದೆ ಎನ್ನಲಾಗಿದೆ. ಚಿತ್ರೀಕರಣ ವೇಳೆ ನಿರ್ದೇಶಕರು ಕೆಲವು ಸನ್ನಿವೇಶಗಳನ್ನು ಹೀಗೆ ಎಂದು ಸ್ವತಃ ತೋರಿಸುವಾಗ ತೆಗೆದ ಚಿತ್ರಗಳಾಗಿರಬಹುದು ಎಂಬ ಗುಮಾನಿಯನ್ನು ವ್ಯಕ್ತಪಡಿಸಲಾಗಿದೆ.

ರತ್ನಜ ಹಾಗೂ ಅಮೂಲ್ಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರುವ ವ್ಯಕ್ತಿ ರು.3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ಒಂದೇ ಒಂದು ಚುಂಬನದ ಛಾಯಾಚಿತ್ರ ಹೊರಬಿದ್ದಿದೆ. ಮೊಬೈಲ್ ನಲ್ಲಿ ಪ್ರಣಯ ಸದೃಶ್ಯ ವಿಡಿಯೋ ಸಹ ಇದೆ ಎನ್ನಲಾಗಿದೆ. ಕನ್ನಡ ಚಿತ್ರೋದ್ಯಮದಲ್ಲಿ ತಲ್ಲಣ ಉಂಟು ಮಾಡಿರುವ ಈ ಸಮಸ್ಯೆಯನ್ನು ಪೊಲೀಸರು ಮಧ್ಯ ಪ್ರವೇಶಿಸಿ ಸತ್ಯಾಸತ್ಯತೆಗಳನ್ನು ಬಹಿರಂಗಪಡಿಸಬೇಕಾಗಿದೆ.

ಈ ಚುಂಬನ ದೃಶ್ಯಗಳು ಮಾಧ್ಯಮಗಳಲ್ಲಿ ಸಂಚಲನ ಉಂಟು ಮಾಡಿವೆ. ಈ ವಿವಾದ ತಲೆದೋರಿರುವ ಕಾರಣ ರತ್ನಜ ಅವರ ಮದುವೆ ನಿಶ್ಚಿತಾರ್ಥವೂ ಮುರಿದು ಬಿದ್ದಿದೆ ಎಂಬ ಸುದ್ದಿಯೂ ಇದೆ. ಒಟ್ಟಿನಲ್ಲಿ ರತ್ನಜ ಹಾಗೂ ಅಮೂಲ್ಯ ಅವರ ನೆಮ್ಮದಿಗೆ ಈ ಚುಂಬನ ದೃಶ್ಯಗಳು ಭಂಗ ತಂದಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada