»   »  'ಮಗಧೀರ' ವಿತರಕ ವಿಜಯಕುಮಾರ್ ತಲೆದಂಡ

'ಮಗಧೀರ' ವಿತರಕ ವಿಜಯಕುಮಾರ್ ತಲೆದಂಡ

Posted By:
Subscribe to Filmibeat Kannada

ಕನ್ನಡ ಚಿತ್ರ ನಿರ್ಮಾಪಕರ ಒತ್ತಡಕ್ಕೆ ಮಣಿದ ಚಲನಚಿತ್ರ ವಾಣಿಜ್ಯ ಮಂಡಲಿ ಚೇಂಬರ್ ನ ಸದಸ್ಯತ್ವದಿಂದ ಕೆ ವಿ ವಿಜಯಕುಮಾರ್ ಅವರನ್ನು ಇಂದು ವಜಾಗೊಳಿಸಿತು. ಪರಭಾಷಾ ಚಿತ್ರಗಳ ವಿರುದ್ಧ ಧ್ವನಿಯೆತ್ತಿದ್ದಕ್ಕೆ ನಿರ್ಮಾಪಕರ ಸಂಘಕ್ಕೆ ಕೊಂಚ ಮಟ್ಟಿಗೆ ಜಯ ಸಿಕ್ಕಂತಾಗಿದೆ. ವಿಜಯಕುಮಾರ್ ತೆಲುಗಿನ 'ಮಗಧೀರ' ಚಿತ್ರದ ವಿತರಕರು.

ಸದಸ್ಯ ಸ್ಥಾನದಿಂದ ವಿಜಯಕುಮಾರ್ ಅವರನ್ನು ವಜಾ ಮಾಡದಿದ್ದರೆ ನಾವು ಬೀದಿಗೆ ಇಳಿದು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ನಿರ್ಮಾಪಕರ ಸಂಘ ಚೇಂಬರ್ ಗೆ ಒತ್ತಾಯ ಹೇರಿತ್ತು. ಅವರ ಒತ್ತಾಯಕ್ಕೆ ಮಣಿದ ಚೇಂಬರ್ ಕಡೆಗೂ ವಿಜಯಕುಮಾರ್ ಅವರನ್ನು ವಜಾಗೊಳಿಸಿದೆ.

ಕೆಎಫ್ ಸಿಸಿ ಅಧ್ಯಕ್ಷೆ ಜಯಮಾಲಾ ಅವರು ಇಂದು ಪದಾಧಿಕಾರಿಗಳ ಸಭೆ ಕರೆದು ಮಾತನಾಡಿದ ನಂತರ ವಾಣಿಜ್ಯ ಮಂಡಳಿ ಸಭೆಯಲ್ಲಿ ಈ ಮೇರೆಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಲು ವಿಜಯಕುಮಾರ್ ಮಾತಿಗೆ ಸಿಗುತ್ತಿಲ್ಲ. ಪರಭಾಷಾ ಚಿತ್ರಗಳ ವಿತರಣೆಗೆ ಸಂಬಂಧಿಸಿದಂತೆ ನಿರ್ಮಾಪಕ ಸಂಘ ಏಳು ಪ್ರಮುಖ ಬೇಡಿಕೆಗಳನ್ನು ಮಂಡಳಿಗೆ ಸಲ್ಲಿಸಿತು.

''ಕೆಎಫ್ ಸಿಸಿಯ ಕಾರ್ಯದರ್ಶಿಯಾಗಿದ್ದೂ ಕೆ ವಿ ವಿಜಯ್ ಕುಮಾರ್ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಕೆಎಫ್ ಸಿಸಿ ನಿಯಮಗಳ ಪ್ರಕಾರ, ಬೆಂಗಳೂರಿನಲ್ಲಿ ಪರಭಾಷಾ ಚಿತ್ರವೊಂದು ಕೇವಲ 17 ಚಿತ್ರಮಂದಿರಗಳಲ್ಲಿ ಹಾಗೂ ರಾಜ್ಯದ ಇತರೆಡೆ 4 ಚಿತ್ರಮಂದಿರಗಳಲ್ಲಿ ಮಾತ್ರಬಿಡುಗಡೆಯಾಗಬೇಕು. ಆದರೆ ವಿತರಕ ವಿಜಯ್ ಕುಮಾರ್ ಈ ಎಲ್ಲಾ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಿ'' ಎಂದು ನಿರ್ಮಾಪಕರ ಸಂಘ ಆಗ್ರಹಿಸಿತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada