»   » ಜೆನ್ನಿಯನ್ನು ಕೋತಿಮುಂಡೆ ಎಂದ ಓಂ ಪ್ರಕಾಶ್ ರಾವ್

ಜೆನ್ನಿಯನ್ನು ಕೋತಿಮುಂಡೆ ಎಂದ ಓಂ ಪ್ರಕಾಶ್ ರಾವ್

Posted By:
Subscribe to Filmibeat Kannada

ಚಿತ್ರ ನಿರ್ದೇಶಕ ಓಂ ಪ್ರಕಾಶ್ ರಾವ್ ತಮ್ಮ ಹಳೆ ಚಾಳಿಯನ್ನು ಇನ್ನೂ ಬಿಟ್ಟಿಲ್ಲ ಎಂಬುದಕ್ಕೆ ಇಲ್ಲಿದೆ ಒಂದು ನಿದರ್ಶನ. 'ಹುಲಿ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ರಾವ್ ಮಾಧ್ಯಮ ಮಿತ್ರರ ಮುಂದೆಯೇ ಕೆಟ್ಟ ಕೆಟ್ಟ ಪದಗಳ ಬಳಕೆ ಮಾಡಿದರು. "ಆ ಕೋತಿ ಮುಂಡೆ ಎಲ್ಲಿ?" ಎಂದು ಚಿತ್ರದ ನಾಯಕಿ ಜೆನ್ನಿಫರ್ ಕೊತ್ವಾಲ್ ರನ್ನು ಕರೆದರು.

ಪತ್ರಿಕಾಗೋಷ್ಠಿಗೆ ಜೆನ್ನಿಫರ್ ತಡವಾಗಿ ಬಂದರು ಎಂಬ ಕಾರಣಕ್ಕೆ ಓಂ ಸಿಕ್ಕಾಪಟ್ಟೆ ರಾಂಗಾಗಿದ್ದರು. ಕೋತಿ, ಡಬ್ಬಾ, ಅ...ನ್, ಅ...ನ್ ಎಂಬಂತಹ ಪದಗಳು ಅವರ ಬಾಯಿಂದ ಹೊರಬೀಳುತ್ತಿದ್ದವು. ಅಲ್ಲಿದ್ದ ಪತ್ರಕರ್ತರಂತೂ ಇರುಸುಮುರುಸು ಅನುಭವಿಸುವಂತಾಯಿತು. ಜೆನ್ನಿಫರ್ ಕೊತ್ವಾಲ್ ಮಾತ್ರ ಮುಸಿಮುಸಿ ನಗುತ್ತಿದ್ದರು.

ಜೆನ್ನಿಫರ್ ಕೊತ್ವಾಲ್ ಗೆ ಭಾಷೆ ಬರದ ಕಾರಣ ಆಕೆ ಕೂಲಾಗಿ ನಗುತ್ತಿದ್ದರು. ಒಂದು ವೇಳೆ ಅರ್ಥವಾಗಿದ್ದರೆ Mind Your Language ಎನ್ನುತ್ತಿದ್ದರೋ ಏನೋ? ಓಂ ಪ್ರಕಾಶ್ ರಾವ್ ಮಾತ್ರ ತಮ್ಮ ಬೈಗುಳವನ್ನು ಮುಂದುವರಿಸಿದ್ದರು. ಕಲಾವಿದರನ್ನು ಹೀಗೆಲ್ಲಾ ನಡೆಸಿಕೊಂಡರೆ ಹೇಗೆ? ಚಿತ್ರೀಕರಣ, ಸೆಟ್ ಗಳಲ್ಲಿ ಓಂ ಪ್ರಕಾಶ್ ರಾವ್ ಹೇಗೋ ಏನೋ? ಎಂಬ ಮಾತುಗಳು ಕೇಳಿಬಂದಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada