twitter
    For Quick Alerts
    ALLOW NOTIFICATIONS  
    For Daily Alerts

    ಟಿವಿ 9 : ಚಕ್ರವ್ಯೂಹದಲ್ಲಿ ಸಿಲುಕಿದ ಶ್ರುತಿ

    By Super
    |

    Shruthi
    ಕನ್ನಡ ಚಲನಚಿತ್ರದ ಪ್ರತಿಭಾವಂತ ನಟಿ ಎಂದೇ ಖ್ಯಾತರಾಗಿದ್ದ ಶ್ರುತಿ ಭಾನುವಾರ ಕನ್ನಡ ಟಿವಿಗಳಲ್ಲಿ ಕಾಣಿಸಿಕೊಂಡರು. ಪತಿ ನಿರ್ದೇಶಕ ಎಸ್ ಮಹೇಂದರ್ ಅವರಿಗೆ ವಿಚ್ಚೇದನ ನೀಡಿ ತ್ರಿವಿಕ್ರಮ ಸಾಧನೆ ಮಾಡಿದ ಹುಮ್ಮಸ್ಸಿನಿಂದ ಸ್ಟುಡಿಯೋದಲ್ಲಿ ಬಂದು ಕುಳಿತ ಪತ್ರಕರ್ತ ಮಿತ್ರರು ನೀರಿಳಿಸಿದರು.

    ಪ್ರತಿ ಮಾತು ಆಡುವಾಗಲೂ ಕಸಿವಿಸಿಗೊಳ್ಳುತ್ತಿದ್ದ ಶ್ರುತಿ ಅವರಿಗೆ ಮಾಧ್ಯಮದ ಮುಂದೆ ಬಂದು ನನ್ನ ಗಂಡನಿಗೆ ನಾನು ವಿಚ್ಚೇದನ ನೀಡಿದ್ದೇನೆ ಎಂದು ಹೇಳಿಕೊಳ್ಳಬೇಕಾ, ಬೇಡವಾ ಎಂದು ಪ್ರಶ್ನಿಸಿಕೊಳ್ಳಬೇಕಿತ್ತು. ವಿಚ್ಛೇದನ ನೀಡುತ್ತಿರುವುದು ಸ್ವತಂತ್ರಕ್ಕಾಗಿ, ವೈಯಕ್ತಿಕ ಜೀವನ ಸಂತೋಷದಿಂದ ಕಳೆಯಲು ಎಂದು ಹೇಳುತ್ತಿರುವ ವೈಯಕ್ತಿಕ ವಿಷಯವನ್ನು ಕೋಟ್ಯಂತರ ಜನ ಕನ್ನಡಿಗರು ನೋಡುವ ಟಿವಿಗಳ ಮುಂದೆ ಬಂದು ವಿವರಣೆ ನೀಡು ಹರಕತ್ತಾದರೂ ಏನಿತ್ತು ? ನಾನು ಸದ್ಯ ಸಂದರ್ಶನ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರೆ ಪತ್ರಕರ್ತರೇನು ಇವರ ಮನೆಯ ಮುಂದೆ ಧರಣಿ ಕೂಡುತ್ತಿದ್ದರಾ ? ಶ್ರುತಿ ತೆರೆ ಮೇಲೆ ಪ್ರತಿಭಾವಂತ ನಟಿ, ನಿಜ ಜೀವನದಲ್ಲಿ ಕೂಡಾ. ಭಾನುವಾರ ರಾತ್ರಿ 8.30ಕ್ಕೆ ಈಟಿವಿ ಕನ್ನಡದಲ್ಲಿ ಹಾಗೂ ರಾತ್ರಿ 9.30ಕ್ಕೆ ಕನ್ನಡದ ವಾರ್ತಾ ವಾಹಿನಿ ಟಿವಿ 9ಗೆ ಶ್ರುತಿ ನೀಡಿದ ಸಂದರ್ಶನ ಆಯ್ದ ಭಾಗ ಇಲ್ಲಿದೆ.

    ಚಿತ್ರನಟಿ ಹಾಗೂ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿ ತನ್ನ ಮತ್ತು ಮಹೇಂದರ್ ವಿವಾಹ ವಿಚ್ಛೇದನದ ವಿಷಯದ ಬಗ್ಗೆ ಮಾತನಾಡಿದರು. ನನಗೀಗ 33 ವರ್ಷ, ಆರೋಗ್ಯವಾಗಿದ್ದರೆ ಇನ್ನು 30 ವರ್ಷ ಬದುಕಬೇಕೆ೦ದಿದ್ದೇನೆ. ಉಳಿದ 30 ವರ್ಷಗಳನ್ನು ಚಕ್ರವರ್ತಿ ಜೊತೆ ಬಾಳಿ ನೆಮ್ಮದಿಯಾಗಿರಬೇಕೆಂದಿದ್ದೇನೆ. ನನ್ನ ಮಗಳ ಭವಿಷ್ಯದ ಬಗ್ಗೆ ತೀರ್ಮಾನಿಸಬೇಕಾಗಿದೆ, ಅವಳನ್ನು ಯಾವ ಕಾರಣಕ್ಕೂ ಮಹೇಂದರ್ ಜೊತೆ ಇರಲು ಬಿಡುವುದಿಲ್ಲ.

    ಮಹೇಂದರ್ ಒಬ್ಬ ಸ್ನೇಹಿತರಾಗಿದ್ದಾರೇ ಹೊರತು ಒಳ್ಳೆ ಗಂಡನಾಗಿರಲಿಲ್ಲ. ಇದು ಇಂದು ನಿನ್ನೆಯ ನಿರ್ಧಾರವಲ್ಲ, ಎಂಟು ವರ್ಷಗಳಿಂದ ದಾಂಪತ್ಯ ಜೀವನ ಸರಿ ಪಡಿಸಲು ಪ್ರಯತ್ನಿಸಿದ್ದೆ. ಮಹೇಂದರ್ ಕಡೆಯಿಂದ ತಕ್ಕ ಪ್ರತಿಕ್ರಿಯೆಬಾರದೇ ಇದ್ದ ಕಾರಣ ಇಂತಹ ನಿರ್ಧಾರ ಕೈಗೊಳ್ಳ ಬೇಕಾಯಿತು. ಚಕ್ರವರ್ತಿ ನನಗೆ ಮುಂಚಿನಿದಲೂ ಪರಿಚಯ. ಹಣದ ಸಮಸ್ಯೆ ಮಾತ್ರ ವಿಚ್ಛೇದನಕ್ಕೆ ಕಾರಣವಲ್ಲ.

    ಬಿಜೆಪಿ ಸೇರುವ ಮುಂಚೆ ನಾನು ಕಾಂಗ್ರೆಸ್ ಪಕ್ಷದ ಪ್ರಚಾರಕಿಯಾಗಿದ್ದೆ. ರಾಜಕೀಯ ಸೇರುವ ನಿರ್ಧಾರ ನನ್ನದಲ್ಲ ಅದು ಮಹೇಂದರ್ ಅವರದ್ದು. ಅವರ ಒತ್ತಾಯಕ್ಕೆ ಮಣಿದು ರಾಜಕೀಯ ಸೇರಿದೆ. ತೆರೆ ಮೇಲೆ ಅಂಜುಬುರುಕಿ, ಅಳುಬುರುಕಿ ಪಾತ್ರ ಮಾಡಿಕೊಂಡು ಬಂದಿದ್ದೇನೆ, ನಿಜ ಜೀವನದಲ್ಲೂ ಇದುವರೆಗಿನ ನನ್ನ ಜೀವನ ಅದೇ ರೀತಿ ಆಗಿದೆ. ಇನ್ನು ಮುಂದಾದರು ನೆಮ್ಮದಿಯಿಂದ ಬದುಕೋಣ ಎಂದು ಇಂತ ಗಟ್ಟಿ ನಿರ್ಧಾರ ತೆಗೆದುಕೊಂಡೆ. ನನ್ನ ವೈಯಕ್ತಿಕ ಜೀವನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಪಕ್ಷ ಈ ವಿಷಯದಲ್ಲಿ ಮೂಗು ತೂರಿಸದಿದ್ದರೆ ಒಳಿತು. ಇದು ರಾಜಕೀಯವಲ್ಲ ನನ್ನ ಜೀವನ.

    ನಾನೊಬ್ಬಳು ಚಿತ್ರನಟಿ, ಚಿತ್ರದಲ್ಲಿನ ನನ್ನ ನಟನೆ ಮತ್ತು ಪಾತ್ರದ ಬಗ್ಗೆ ಸಾರ್ವಜನಿಕರು ಮಾತನಾಡಲಿ. ವಿವಾಹ ವಿಚ್ಛೇದನಕ್ಕೆ ಏನೇನು ಕಾರಣಗಳಿದೆಯೋ, ಅದನ್ನು ನ್ಯಾಯಾಲಯಕ್ಕೆ ನೀಡಿದ್ದೇನೆ. ಸಾರ್ವಜನಿಕರಿಗೆ ಇದನ್ನು ತಿಳಿಸುವ ಅವಶ್ಯಕತೆ ನನಗಿಲ್ಲ. ನ್ಯಾಯಾಲಯಕ್ಕೂ ನೀಡಲಾಗದ ಕೆಲವೊಂದು ಕಾರಣಗಳಿವೆ. ಅದನ್ನು ನಾನು ಸಾರ್ವಜನಿಕವಾಗಿ ವಿವರಿಸಲು ಇಷ್ಟ ಪಡುವುದಿಲ್ಲ.

    ನನ್ನ ಮತ್ತು ಮಹೇಂದರ್ ನಡುವಣ ಸಂಬಂಧ ಮತ್ತೆ ಬೆರೆಸಲಾಗದಷ್ಟು ಹಳಸಿ ಹೋಗಿದೆ. ನನ್ನ ಈ ನಿರ್ಧಾರಕ್ಕೆ ನನ್ನ ಮನೆಯಿಂದ ಯಾರ ಬೆಂಬಲವೂ ಇಲ್ಲ, ಆದರೂ ನಾನು ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಇಷ್ಟು ವರ್ಷ ಮಹೇಂದರ್ ಅವರ ಎಲ್ಲ ಕಷ್ಟ ಕಾರ್ಪಣ್ಯಗಳಿಗೆ ಬೆಂಬಲವಾಗಿ ನಿಂತಿದ್ದೆ. ಅವರ ಜೊತೆಗಿನ ಜೀವನ ಸಾಕಾಗಿ ಹೋಗಿದೆ, ಹೀಗೆ ಶ್ರುತಿ ಮಾತಿನ ಲಹರಿ ನಾಲಾಲೋಟದಲ್ಲಿ ಸಾಗುತ್ತಾ ಹೋಯಿತು. ಇವರ ಚಿತ್ರವನ್ನು ನೋಡಿದ್ದ ಕನ್ನಡದ ಮಹಿಳೆಯರು ಮಮ್ಮಲ ಮರುಗಿದ್ದರು. ಇದೀಗ ಇವರು ಮಾತನಾಡುತ್ತಿರುವುದನ್ನು ಕೇಳಿ ಲಟಲಟ ಅಂತ ಕೈಬೆರಳು ಮುರಿದುಕೊಳ್ಳುತ್ತಿದ್ದರು.

    (ದಟ್ಸ್ ಕನ್ನಡ ಸಿನಿಮಾ ವಾರ್ತೆ)

    ಪೂರಕ ಓದಿಗೆ:
    ಮಹಿಳಾ ಅಭಿವೃದ್ದಿ ನಿಗಮದಿಂದ ಶ್ರುತಿ ಔಟ್ ?
    ಗ್ಯಾಲರಿ: ಶ್ರುತಿ ಚಿತ್ರ ಸಂಪುಟ

    Thursday, January 17, 2013, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X