»   » 'ಮುಸ್ಸಂಜೆ ಗೆಳತಿ'ನಿರ್ಮಾಪಕ ಶ್ರೀನಿವಾಸ್ ಬಂಧನ

'ಮುಸ್ಸಂಜೆ ಗೆಳತಿ'ನಿರ್ಮಾಪಕ ಶ್ರೀನಿವಾಸ್ ಬಂಧನ

Posted By:
Subscribe to Filmibeat Kannada

ಬೆಂಗಳೂರು ಸಿಸಿಬಿ ಪೊಲೀಸರು 'ಮುಸ್ಸಂಜೆ ಗೆಳತಿ' ಚಿತ್ರದ ನಿರ್ಮಾಪಕ ಬಿ ಪಿ ಶ್ರೀನಿವಾಸ್ ಅವರನ್ನು ಬಂಧಿಸಿದ್ದಾರೆ. ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿರುವ ಗೋವಾ ಮೂಲದ ಪ್ರಿನ್ಸಿಪಾಲ್ ಎನ್ ಕೆ ದಿವಾನ್ ಎಂಬುವವರು ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದರು. ತಮ್ಮ ಶಿಕ್ಷಣ ಸಂಸ್ಥೆಗೆ ಸಾಲ ಕೊಡಿಸುವುದಾಗಿ ಹೇಳಿದ್ದ ಶ್ರೀನಿವಾಸ್ ದೊಡ್ಡ ಮೊತ್ತದ ಮುಂಗಡ ಹಣವನ್ನು ದಿವಾನ್ ಅವರಿಂದ ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಶ್ರೀನಿವಾಸ್ ಮೇಲೆ ವಂಚನೆ ಆರೋಪ ಬಂದ ಹಿನ್ನ್ನೆಲೆಯಲ್ಲಿ ಅವರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದರು.ಇದೀಗ ಮತ್ತೊಂದು ವಂಚನೆ ಆರೋಪದ ಹಿನ್ನೆಲೆಯಲ್ಲಿ ಮತ್ತ್ತೊಮ್ಮೆ ಶ್ರೀನಿವಾಸ್ ನನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

ಬಿ ಪಿ ಶ್ರೀನಿವಾಸ್ ನಿರ್ದೇಶಿಸಿ ಮುಖ್ಯಪಾತ್ರವನ್ನು ಪೋಷಿಸಿರುವ ಚಿತ್ರ 'ಮುಸ್ಸಂಜೆಯ ಗೆಳತಿ'.ಈ ಚಿತ್ರದಲ್ಲಿ ತಂದೆ ಮತ್ತು ಮಗಳು ಪ್ರೇಮಿಗಳಾಗಿ ನಟಿಸಿರುವುದು ಗೊತ್ತೇ ಇದೆ. ತಂದೆ ಮತ್ತು ಮಗಳು ಪ್ರೇಮಿಗಳಾಗಿ ಅಭಿನಯಿಸಿರುವುದು ಹಲವು ಸಂಘನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ಅನೈತಿಕ ಸಂಬಂಧಗಳನ್ನು ಪ್ರೇರೇಪಿಸುತ್ತದೆ ಎಂಬ ಕಾರಣಕ್ಕೆ ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada