»   » ಆರಕ್ಷಣ್ ಚಿತ್ರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ

ಆರಕ್ಷಣ್ ಚಿತ್ರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ

Posted By:
Subscribe to Filmibeat Kannada

ಅಮಿತಾಬ್ ಬಚ್ಚನ್, ಸೈಫ್ ಆಲಿ ಖಾನ್, ದೀಪಿಕಾ ಪಡುಕೋಣೆ ಮುಖ್ಯಭೂಮಿಯಲ್ಲಿರುವ 'ಆರಕ್ಷಣ್' ಚಿತ್ರ ಶುಕ್ರವಾರ (ಆ.12) ಕರ್ನಾಟಕ ಸೇರಿದಂತೆ ದೇಶದಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರವನ್ನು ನಿಷೇಧಿಸಬೇಕು ಎಂದು ಬೆಂಗಳೂರಿನಲ್ಲಿ ಸಮತಾ ಸೈನಿಕ ದಳ ಇಂದು ಪ್ರತಿಭಟಿಸಿತು.

ಕೆ ಆರ್ ಮಾರುಕಟ್ಟೆ ಬಳಿಯ ಅಪ್ಸರಾ ಚಿತ್ರಮಂದಿರದ ಬಳಿ ಸಮತಾ ಸೈನಿಕ ದಳದ ಕಾರ್ಯಕರ್ತರು ಚಿತ್ರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಈ ಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಿದರು.

ಚಿತ್ರದಲ್ಲಿ ಜಾತಿ ವ್ಯವಸ್ಥೆ ಹಾಗೂ ಮೀಸಲಾತಿ ಬಗ್ಗೆ ವಿವಾದಾತ್ಮಕ ಅಂಶಗಳಿವೆ. ಹಾಗಾಗಿ ಈ ಚಿತ್ರದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕಾರ್ಯಕರ್ತರು ಆಗ್ರಹಿಸಿದರು. ಆದರೆ ಚಿತ್ರದಲ್ಲಿ ಅಂತಹ ಗಂಭೀರವಾದ ಸನ್ನಿವೇಶಗಳು, ಸಂಭಾಷಣೆಗಳು ಇಲ್ಲ ಎನ್ನಲಾಗಿದೆ.

ಚಿತ್ರದ ಬಗ್ಗೆ ಇಲ್ಲಸಲ್ಲದಅಂತೆಕಂತೆಗಳನ್ನು ಸೃಷ್ಟಿಸಿ, ಪ್ರೇಕ್ಷಕರು ಚಿತ್ರಮಂದಿರಕ್ಕೆ.ಸೆಳೆಯುವ ಪ್ರಯತ್ನವಿದು. ವಿವಾದಾತ್ಮಕ ಚಿತ್ರ ಎಂದರೆ ಪ್ರೇಕ್ಷಕರು ಏನೋ ಇರಬಹುದು ಎಂದುಕೊಂಡು ಚಿತ್ರವನ್ನು ನೋಡಲು ಮುಗಿಬೀಳುತ್ತಾರೆ. ಬಾಲಿವುಡ್‌ನಲ್ಲಿ ಇತ್ತೀಚೆಗೆ ಇದೊಂದು ಪರಿಪಾಠವಾಗಿದೆ ಎಂಬ ಮಾತುಗಳು ಕೇಳಿಬಂದಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
The activists of Samatha Sainik Dal (SSD) staged a protest here against the bollywood movie Aarakshan. They demanded that to impose ban on the movie. The protest took place at Apsara theate near KR Market, Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada