»   »  ಜಗ್ಗೇಶ್ ವಿರುದ್ಧ ಬೆಂಗಳೂರಲ್ಲಿ ಕರವೇ ಪ್ರತಿಭಟನೆ

ಜಗ್ಗೇಶ್ ವಿರುದ್ಧ ಬೆಂಗಳೂರಲ್ಲಿ ಕರವೇ ಪ್ರತಿಭಟನೆ

Subscribe to Filmibeat Kannada
Actor Jaggesh
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯತ್ವದಿಂದ ನಟ ಜಗ್ಗೇಶ್ ಅವರನ್ನು ವಜಾ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಳಗ ಗುರುವಾರ ಬೆಂಗಳೂರಿನಲ್ಲಿ ಆಗ್ರಹಿಸಿತು. ನಟ ಅಂಬರೀಷ್ ವಿರುದ್ಧ ಜಗ್ಗೇಶ್ ಅವಹೇಳನಕಾರಿ ಹೇಳಿಕೆ ನೀಡಿರುವುದು ಕರವೇ ಆಗ್ರಹಕ್ಕೆ ಕಾರಣವಾಯಿತು. ಇಷ್ಟು ದಿನ ಅಂಬಿ ಮತ್ತು ಜಗ್ಗಿ ಅಭಿಮಾನಿಗಳಿಗಷ್ಟೇ ಸೀಮಿತವಾಗಿದ್ದ ಜಗಳಕ್ಕೆ ಈಗ ಕರವೇ ಹೊಸದಾಗಿ ಸೇರ್ಪಡೆಯಾಗಿದೆ.

ಪ್ರವೀಣ್ ಶೆಟ್ಟಿ ಬಳಗದ ಕಾರ್ಯಕರ್ತರು ಜಗ್ಗೇಶ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು. ತಕ್ಷಣ ಜಗ್ಗೇಶ್ ಅವರನ್ನು ಚೇಂಬರ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹಿಸಲಾಯಿತು. ನಂತರ ಕರ್ನಾಟಕ ಚಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಮಧ್ಯ ಪ್ರವೇಶಿಸಿ ಕರವೇ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.

''ಕಲಾವಿದರೆಲ್ಲಾ ಒಂದೇ. ಸಿನಿಮಾ ಬೇರೆ ರಾಜಕೀಯ ಬೇರೆ. ಎರಡನ್ನೂ ಒಟ್ಟಿಗೆ ಬೆರೆಸಬೇಡಿ. ಜಗ್ಗೇಶ್ ಅವರ ಬಳಿ ನಾನು ಮಾತನಾಡುತ್ತೇನೆ. ಇದೇ ತಿಂಗಳ 17, 18ರಂದು ಮಾತುಕತೆ ನಡೆಸುತ್ತೇನೆ '' ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ನಂತರ ಕರವೇ ಕಾರ್ಯಕರ್ತರು ಪ್ರತಿಭಟನೆಯನ್ನು ಕೈಬಿಟ್ಟರು.

ಈಗಾಗಲೇ ಜಗ್ಗೇಶ್ ಸಹ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಅಂಬರೀಷ್ ಮೇಲಿನ ಗೌರವ ಇಂದಿಗೂ ಇದೆ ಎಂಬ ವಿವರಗಳನ್ನು ಪತ್ರದಲ್ಲಿ ನೀಡಿದ್ದಾರೆ. ಆದರೆ ಈ ಸಮಸ್ಯೆಯನ್ನು ವಾಣಿಜ್ಯ ಮಂಡಳಿ ಹೇಗೆ ಪರಿಹರಿಸುತ್ತದೆ ಎಂಬುದನ್ನು ಕಾದು ನೋಡಬೇಕು. ''ನನ್ನ ಪಾಲಿಗೆ ಅಂಬರೀಷ್ ಅಲ್ಲ ಡಾ.ರಾಜ್ ಸರ್ವೋತ್ತಮ ನಾಯಕ '' ಎಂದು ಜಗ್ಗೇಶ್ ಚುನಾವಣಾ ಪ್ರಚಾರದ ವೇಳೆ ಹೇಳಿಕೆ ಕೊಟ್ಟಿದ್ದರು. ಈಗ ಆ ಹೇಳಿಕೆಯೇ ವಿವಾದವಾಗಿ ಪರಿಣಮಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಜಗ್ಗೇಶ್, ಅಂಬರೀಷ್ ಅಭಿಮಾನಿಗಳ ಮಾತಿನ ಕಾದಾಟ
ಜಗ್ಗೇಶ್ ವಿರುದ್ಧ ಸಿಡಿದೆದ್ದ ಅಂಬಿ ಅಭಿಮಾನಿಗಳು
ಜಗ್ಗೇಶ್, ಅಂಬರೀಶ್ ಈಗ ಒಡೆದ ಹೃದಯಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada