Just In
Don't Miss!
- Lifestyle
ವಾಸ್ತು ಪ್ರಕಾರ ನಿಮ್ಮ ಮನೆಯ ಬಣ್ಣ ಈ ರೀತಿ ಇದ್ದರೆ ಒಳ್ಳೆಯದು
- Automobiles
ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ
- News
ಡೊನಾಲ್ಡ್ ಟ್ರಂಪ್ರನ್ನು ಮತ್ತೆ ಕೆಣಕಿದ ಗ್ರೆಟಾ ಥನ್ಬರ್ಗ್
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- Finance
ದಿನದ ಗರಿಷ್ಠ ಮಟ್ಟದಿಂದ 500ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಿಚ್ಚ ಸುದೀಪ್‌ಗೆ ಒಂದು ತಿಂಗಳು ನಿಷೇಧ ಸಾಧ್ಯತೆ
ಬೆಳಗಾವಿ ವಿಶ್ವಕನ್ನಡ ಸಮ್ಮೇಳನದ ನಿಮಿತ್ತ ಬಿಕೋ ಎನ್ನುತ್ತಿದ್ದ ಗಾಂಧಿನಗರದಲ್ಲಿ ಸೋಮವಾರದಿಂದ (ಮಾ.14) ಚಟುವಟಿಕೆಗಳು ಮತ್ತೆ ಗರಿಗೆದರಿವೆ. ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಮಾರ್ಚ್ 9ರಿಂದ 13ರವರೆಗೆ ಐದು ದಿನಗಳ ಕಾಲ ರಜೆ ಘೋಷಿಸಲಾಗಿತ್ತು. ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲು ಬೆಳಗಾವಿಗೆ ಸುದೀಪ್ ಬರದೆ ಇದ್ದದ್ದು ಫಿಲಂ ಚೇಂಬರ್ ಕಣ್ಣು ಕುಕ್ಕಿದೆ.
ಈ ಹಿನ್ನೆಲೆಯಲ್ಲಿ ಸುದೀಪ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಇಡೀ ಚಿತ್ರೋದ್ಯಮವೇ ಬೆಳಗಾವಿಗೆ ಬಂದಿಳಿದಿತ್ತು. ಆದರೆ ಸುದೀಪ್ ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿರುವ ಮಂಡಳಿ ಅವರು ಒಂದು ತಿಂಗಳು ಚಿತ್ರೀಕರಣದಲ್ಲಿ ಭಾಗವಹಿಸುವಂತಿಲ್ಲ ಎಂದು ನಿಷೇಧ ಹೇರುವ ಸಾಧ್ಯತೆಗಳಿವೆ.
ಇತ್ತೀಚೆಗೆ ತೆರೆಕಂಡ ಸುದೀಪ್ ಅಭಿನಯದ ಭಾರಿ ಬಜೆಟ್ ಚಿತ್ರ 'ಕೆಂಪೇಗೌಡ' ಪ್ರಚಾರ ಕಾರ್ಯಗಳಲ್ಲಿ ಅವರು ಬ್ಯುಸಿಯಾಗಿದ್ದದ್ದೇ ಬೆಳಗಾವಿ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಸುದೀಪ್ ಅವರೇ ಟ್ವೀಟ್ ಮಾಡಿದ್ದು, "Just got the news that a decision has been taken that Sudeep should not act for a month for not going to Belgaum...wow" ಎಂದಿದ್ದಾರೆ.
"ವಿಶ್ವಕನ್ನಡ ಸಮ್ಮೇಳನಕ್ಕೆ ಹೋಗಬೇಕು ಎಂಬ ಮಹದಾಸೆ ನನಗೂ ಇತ್ತು. ಆದರೆ ಸಮ್ಮೇಳನಕ್ಕೆ ನನ್ನನ್ನು ಆಹ್ವಾನಿಸಿಯೇ ಇಲ್ಲ. ಹಾಗಾಗಿ ಹೋಗಲಿಲ್ಲ" ಎಂದಿದ್ದಾರೆ ಸುದೀಪ್. ಆದರೆ ಫಿಲಂ ಚೇಂಬರ್ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಮುಂದೇನು ಕ್ರಮಕೈಗೊಳ್ಳುತ್ತಾರೋ ಎಂಬ ಪ್ರಶ್ನೆ ಉದ್ಭವಿಸಿದೆ. ಕಾದುನೋಡೋಣ.