»   »  ದಿನೇಶ್, ಸುದೀಪ್ ಸ್ನೇಹದ ಕಡಲಲ್ಲಿ ಹಾಲಾಹಲ

ದಿನೇಶ್, ಸುದೀಪ್ ಸ್ನೇಹದ ಕಡಲಲ್ಲಿ ಹಾಲಾಹಲ

Posted By: Super
Subscribe to Filmibeat Kannada

ಸುದೀಪ್ ಗೂ ದೆನೇಶ್ ಗಾಂಧಿಗೂ... ಓ ಗೆಳೆಯಾ! ಜೀವದ್ಗೆಳೆಯಾ! ನಿಂಗೆ ಶಾನೆ ಕ್ವಾಪ ಕಣೋ ಕ್ವಾಪಕು ಒಂದು ಕೈ ಪ್ರೀತಿ ಜಾಸ್ತಿ ಕಣೋ...ಎಂದು ಹಾಡಿಕೊಳ್ಳುವಷ್ಟು ಸ್ನೇಹ. ಆ ಕುಚುಕು ಕುಚುಕು ಸ್ನೇಹದಲ್ಲಿ ಈಗ ದೊಡ್ಡ ಬಿರುಕು ಬಿಟ್ಟಿದೆ. ಇವರಿಬ್ಬರ ಸ್ನೇಹದ ಕಡಲಲ್ಲಿ ಹಾಲಾಹಲ ಎದ್ದಿದೆ.

ಸುದೀಪ್ ಅಭಿನಯದ,ನಿರ್ದೇಶನದ 'ವೀರ ಮದಕರಿ' ಪ್ರಾರಂಭವಾದಾಗ ದಿನೇಶ್ ಗಾಂಧಿ ಬಳಿ ನಯಾಪೈಸೆ ಸಹ ಇರಲಿಲ್ಲವಂತೆ.ಗೆಳೆಯನಿಗೆ ಒಳ್ಳೆಯದಾಗಲಿ ಎಂದು ಬೆನ್ನಿಗೆ ನಿಂತುಗಾಂಧಿಗೊಂದಿಷ್ಟು ಫೈನಾನ್ಸ್ ಸಹ ಕೊಡಿಸಿ ಸಹಾಯ ಮಾಡಿದರಂತೆ ಸುದೀಪ್. ನಿಗದಿತ ಸಮಯಕ್ಕೆ ಸರಿಯಾಗಿ ಸುದೀಪ್ ಚಿತ್ರವನ್ನೂ ಮುಗಿಸಿ ಕೊಟ್ಟರು. ಇಷ್ಟೆಲ್ಲಾ ಮಾಡಿದ್ದಕ್ಕೆ ಸುದೀಪ್ ಗೆ ಸಿಕ್ಕಿದ್ದಾದರೂ ಏನು?

Actor Sudeep

ಸುದೀಪ್ ಪಾಲಿಗೆ ಕವಡೆ ಕಾಸೂ ಸಿಕ್ಕಿಲ್ಲ ಎಂಬ ಸತ್ಯ ಆಪ್ತ ವಲಯಗಳಿಂದ ಕೇಳಿ ಬರುತ್ತಿದೆ. ಈ ಆರೆಂಟು ತಿಂಗಳಲ್ಲಿ ಅವರು 'ಮೈ ತೂಕ' ಇಳಿಸಿಕೊಂಡಿದ್ದು ಬಿಟ್ಟರೆ ಇನ್ನೇನು ಸಿಕ್ಕಿಲ್ಲ ಎಂಬುದು ಕೇವಲ ಜೋಕಾಗಿ ಉಳಿದಿಲ್ಲ. ಮಿಕ್ಕಂತೆ ಎಲ್ಲವೂ ಗಾಂಧಿ ಪಾಲಾಗಿದೆ. ದಿನೇಶ್ ಗಾಂಧಿ ಹೊಸ ಮನೆ ಕೊಂಡುಕೊಂಡಿದ್ದಾರೆ ಎಂಬ ಸುದ್ದಿಯೂ ದಟ್ಟವಾಗಿದೆ.

ಈ ಎಲ್ಲ ಕಾರಣಗಳಿಂದ ಸುದೀಪ್ ಬೇಸತ್ತು ಗಾಂಧಿ ಜತೆ ಟೂ ಬಿಟ್ಟಿದ್ದಾರೆ ಎನ್ನಲಾಗಿದೆ. ಗಾಂಧಿಗಾಗಿ ತೆಲುಗಿನ 'ಛತ್ರಪತಿ'ಯನ್ನು ಕನ್ನಡಕ್ಕೆ ರೀಮೇಕ್ ಮಾಡಬೇಕಾಗಿತ್ತು. ಅದನ್ನು ಈಗ ಶಂಕರೇಗೌಡ ಮಾಡುತ್ತಿರುವ ಸುದ್ದಿ ಇದೆ. ಚಿತ್ರಕ್ಕೆ 'ದಂಡಂ ದಶಗುಣಂ' ಎಂದು ಹೆಸರು ಇಡಲಾಗಿದೆ. ಪ್ರಸ್ತುತ ರಾಮ್ ಗೋಪಾಲ್ ವರ್ಮಾರ 'ರಣ್' ಚಿತ್ರದಲ್ಲಿ ಬ್ಯುಸಿಯಾಗಿರುವ ಸುದೀಪ್ ಮುಂಬೈನಲ್ಲಿದ್ದಾರೆ. ಅಲ್ಲಿಂದ ಹಿಂತಿರುಗಿದ ನಂತರ ದಂಡಂ ದಶಗುಣಂ ಪ್ರಾರಂಭವಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸುದೀಪ್ ನಟನೆ ಬಗ್ಗೆ ಅಮಿತಾಬ್ ಪ್ರಮಾಣ ಪತ್ರ!
ವರ್ಮಾರ ಫೂಂಕ್ ಭಾಗ 2ರಲ್ಲಿ ಸುದೀಪ್
ಬಳ್ಳಾರಿ ರೆಡ್ಡಿಗಳ ವಿರುದ್ಧ ನಟ ಸುದೀಪ್ ಸ್ಪರ್ಧೆ!?
ಸುದೀಪ್ ಅಭಿನಯದ ಫೂಂಕ್ ಚಿತ್ರದ ಟ್ರೇಲರ್
ವೀರ ಮದಕರಿ: ನೂರಕ್ಕೆ ಅರುವತ್ತು ಮಾರ್ಕುಡು!

English summary
actor sudeep producer dinesh gandhi,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada