ಬಿಪಶಾ ಬಸು ರುಸುರುಸು ವಿಡಿಯೋ ಸಖತ್ ಹಿಟ್!
ಬಾಲಿವುಡ್ ಕೃಷ್ಣ ಸುಂದರಿ ಬಿಪಾಶಾ ಬಸು ಜಾಹೀರಾತು ಒಂದಕ್ಕೆ ಜಾಕೀಟು ಕಳಚಿದ ರುಸುರುಸು ವಿಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ಹಿಟ್ ಆಗಿದೆ. ಅರೆಬರೆ ಕ್ಯಾಬರೆ ಚಿತ್ರದಂತಿರುವ ಈ ಜಾಹೀರಾತನ್ನು 1999ರಲ್ಲಿ ಯುಎಸ್‌ನಲ್ಲಿ ಚಿತ್ರೀಕರಿಸಲಾಗಿತ್ತ್ತು. ಇದು ಇಂಟರ್‌ನೆಟ್‌ಗೆ ಸೇರಿದ್ದೇ ತಡ ಬೆಲ್ಲಕ್ಕೆ ಇರುವೆ ಮುತ್ತಿದಂತೆ ಲಗ್ಗೆ ಹಾಕಿ ಸವಿದಿದ್ದಾರೆ ರಸಿಕ ಶಿರೋಮಣಿಗಳು.
ಈ ಜಾಹೀರಾತಿನಲ್ಲಿ ಬಿಪಾಶಾ ರಾಣಿಯಾಗಿ ಅಭಿನಯಿಸಿದ್ದು, ಮದುವೆಗೆ ಸಿದ್ಧವಾಗುತ್ತಿರುವ ಸನ್ನಿವೇಶವನ್ನು ಸೆರೆಹಿಡಿಯಲಾಗಿದೆ. ಈ ಜಾಹೀರಾತಿನ ಯುವರಾಜನಾಗಿ ವಿವೇಕ್ ಒಬೆರಾಯ್ ಅಭಿನಯಿಸಿದ್ದರು. ಒಂದೊಂದೇ ಬಟ್ಟೆ ಕಳಚುವ ಬಿಪ್ಸ್ ತನ್ನ ಬೆನ್ನನ್ನು ಸಂಪೂರ್ಣ ತೋರಿಸಿದ್ದಾರೆ. ಬಳಿಕ ತಮ್ಮ ಅಂಗಸೌಷ್ಟವನ್ನು ಇಂಚಿಂಚಾಗಿ ತೆರೆದಿಟ್ಟಿದ್ದಾರೆ.
ಆರಂಭದಲ್ಲಿ ಈ ವಿಡಿಯೋ ನೋಡಲು ಹಿಂದೇಟು ಹಾಕಿದವರು ಬಳಿಕ ಕದ್ದುಮುಚ್ಚಿ ನೋಡಿ ಎಂಜಾಯ್ ಮಾಡಿದ್ದಾರೆ ಎಂಬ ರಿಪೋರ್ಟ್‌ಗಳು ಲೀಕ್ ಆಗಿವೆ. ನೋಡು ನೋಡುತ್ತಿದ್ದಂತೆ ಈ ಜಾಹೀರಾತು ತುಣುಕು ಇಂಟರ್‌ನೆಟ್‌ನಲ್ಲಿ ಭಾರಿ ಹಿಟ್ ಆಗಿದೆ. ಆರಂಭದ ದಿನಗಳಲ್ಲಿ ಆಗಷ್ಟೆ ನೆಲೆಕಂಡುಕೊಳ್ಳಲು ಬಿಪಾಶಾ ತಿಣುಕಾಡುತ್ತಿದ್ದ ದಿನಗಳವು. ಎಂದೋ ತೆಗೆದ ವಿಡಿಯೋ ಇಂದು ಹಿಟ್ ಆಗಿದೆ ಅಷ್ಟೆ. ಇತಿ ವಾರ್ತಾ ಅಂತ್ಯ. (ಏಜೆನ್ಸೀಸ್)


Click it and Unblock the Notifications











