»   » ರಂಜಿತಾಳೊಂದಿಗೆ ಸ್ವಾಮಿ ನಿತ್ಯಾನಂದ 'ಪ್ರಯೋಗ'

ರಂಜಿತಾಳೊಂದಿಗೆ ಸ್ವಾಮಿ ನಿತ್ಯಾನಂದ 'ಪ್ರಯೋಗ'

Posted By:
Subscribe to Filmibeat Kannada

ರಾಸಲೀಲೆ ಪ್ರಕರಣ ಬಯಲಾದ ಹತ್ತು ದಿನಗಳ ಬಳಿಕ ನಿತ್ಯಾನಂದ ಸ್ವಾಮಿ(33) ಮತ್ತೊಮ್ಮೆ ಯೂಟ್ಯೂಬ್ ಗೆ ಮೊರೆಹೋಗಿದ್ದಾರೆ. ಯೂಟ್ಯೂಬ್ ನಲ್ಲಿ ಅವರು ಮಾತನಾಡುತ್ತಾ, ಸಮಾಜವನ್ನು ತಪ್ಪುದಾರಿಗೆ ಎಳೆಯಲು ಈ ರೀತಿಯ 'ಪ್ರಯೋಗ' ಮಾಡಲಾಗಿದೆ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಅವರು ಈ ಬಾರಿ ಮಾಡಿದ್ದಾರೆ.

ತಮ್ಮ ಅನುಯಾಯಿ ರಾಜೀವ್ ಮಲ್ಹೋತ್ರಾ ಅವರೊಂದಿಗಿನ ಸಂದರ್ಶನದಲ್ಲಿ ಸ್ವಾಮಿ ನಿತ್ಯಾನಂದ ವಿಭಿನ್ನ ಚಿಂತನೆಗಳನ್ನು ಮಂಡಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇರವಾಗಿ ಮಾತನಾಡಿದ್ದಾರೆ. ಈ ಘಟನೆ ನಿತ್ಯಾನಂದರಿಗೆ ಹಲವುಪಾಠಗಳನ್ನು ಕಲಿಸಿದೆಯಂತೆ.

ನನ್ನ 33 ವರ್ಷಗಳ ಜೀವನದಲ್ಲಿ ಎರಡು ವೈಪರೀತ್ಯಗಳು ನಡೆದಿವೆ. ಇಷ್ಟು ದಿನ ಯೂಟ್ಯೂಬ್ ನಲ್ಲಿ ಅತ್ಯಧಿಕ ಬಾರಿ ವೀಕ್ಷಿಸಿದ ಗುರು ಎನಿಸಿಕೊಂಡಿದ್ದೆ. ಇದೀಗ ರಾಸಲೀಲೆ ಪ್ರಕರಣ ಅತ್ಯಧಿಕ ಬಾರಿ ವೀಕ್ಷಿಸಲ್ಪ ವಿಡಿಯೋ ಎನಿಸಿಕೊಂಡಿದೆ. ಈ ರೀತಿಯ ಅಸಭ್ಯ, ಮಾನಹಾನಿ ಮತ್ತು ಆಕ್ರಮಣದಿಂದ ಸಮಾಜ, ಜೀವನ ಮತ್ತು ಮಾನವೀಯತೆಯ ಬಗ್ಗೆ ನಾನು ಹೊಸ ಪಾಠಗಳನ್ನು ಕಲಿತಿದ್ದೇನೆ. ಈ ಘಟನೆ ನನ್ನ ಜೀವನದಲ್ಲಿ ಕಂಡರಿಯದ ಪಾಠವನ್ನು ಕಲಿಸಿದೆ ಎಂದು ಸ್ವಾಮಿ ನಿತ್ಯಾನಂದ ತಿಳಿಸಿದ್ದಾರೆ.

ಈ ರೀತಿಯ ಪ್ರಕರಣವನ್ನು ನಿಭಾಯಿಸುವಲ್ಲಿ ನಮ್ಮ ಸಂಸ್ಥೆ ಸಂಪೂರ್ಣವಾಗಿ ವಿಫಲವಾಯಿತು. ಈ ರೀತಿಯ ಪೂರ್ವ ನಿಯೋಜಿತ ದಾಳಿಯನ್ನು ಎದುರಿಸಲು ನಮ್ಮ ಸಾರ್ವಜನಿಕ ಸಂಪರ್ಕಧಾರಿಕಾರಿ ಸಿದ್ಧತೆ ನಡೆಸಿರಲಿಲ್ಲ. ಇದು ನಮ್ಮ ಮತ್ತು ನಮ್ಮ ಸಂಸ್ಥೆಯ ವಿರುದ್ಧ ನಡೆಸಿದ ಕೃತ್ಯ. ಈ ರೀತಿಯ ಯುದ್ಧಕ್ಕೆ ನಾವು ಸಿದ್ಧರಾಗಿರಲಿಲ್ಲ. ನಾವು ನಿಶಬ್ಧ ಗುಂಪಿಗೆ ಸೇರಿದ್ದು ಜಗತ್ತಿನೊಂದಿಗೆ ಅಧ್ಯಾತ್ಮಿಕ ಸಂಶೋಧನೆ, ಸಾಧನೆಗಳನ್ನು ಹಂಚಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada