»   » ಉಡ ಚಿತ್ರದ ಹೀರೋ ಮೇಲೆ ಮಾರಣಾಂತಿಕ ಹಲ್ಲೆ

ಉಡ ಚಿತ್ರದ ಹೀರೋ ಮೇಲೆ ಮಾರಣಾಂತಿಕ ಹಲ್ಲೆ

Subscribe to Filmibeat Kannada

ಕನ್ನಡದ 'ಉಡ' ಚಿತ್ರದ ನಾಯಕ ನಟ ಯುವರಾಜ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವರಾಜ್ ಕೆನ್ನೆಯ ಎರಡು ಬದಿಗಳಲ್ಲಿ ಬ್ಲೇಡ್ ನಿಂದ ಹಾಗೂ ಕಾಲಿಗೆ ಮಚ್ಚಿನಿಂದ ಗಾಯಗೊಳಿಸಲಾಗಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಳೆಯ ವೈಷಮ್ಯವೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಸಂಭಾವನೆ ವಿಚಾರವಾಗಿ 'ಉಡ' ಚಿತ್ರದ ನಿರ್ಮಾಪಕ ಮತ್ತು ನಾಯಕ ನಟ ಯುವರಾಜ ನಡುವೆ ಈ ಹಿಂದೆ ಜಟಾಪಟಿ ನಡೆದಿತ್ತು. ಯುವರಾಜ್ ಗೆ ಸಂಭಾವನೆ ಕೊಟ್ಟಿರಲಿಲ್ಲ ಎನ್ನಲಾಗಿದೆ. ರಾಜೀವ್ ಎಂಬುವವರು ಕರೆ ಮಾಡಿದ್ದಾಗಿ ನವರಂಗ್ ಚಿತ್ರಮಂದಿರದ ಹತ್ತಿರ ಬರಲು ಹೇಳಿದ್ದರು. ಅಲ್ಲಿಗೆ ಹೋದಾಗ ಮೂವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಯುವರಾಜ್ ತಿಳಿಸಿದ್ದಾರೆ.

ಈ ಸಂಬಂಧ ರಾಜಾಜಿನಗರ ಪೊಲೀಸರು ಒಬ್ಬರನ್ನು ಬಂಧಿಸಿದ್ದು ವಿಚಾರಣೆ ಮುಂದುವರಿದಿದೆ. ಈಗಾಗಲೇ ತೆರೆಕಂಡಿರುವ ಉಡ ಚಿತ್ರವನ್ನು ಅಕ್ಬರ್ ಪಾಷಾ ಎಂಬುವರು ನಿರ್ಮಿಸಿದ್ದರು. ಶಶಾಂಕ್ ರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದು ಯುವರಾಜ್ ಮತ್ತು ಸಂಚಿತಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada