»   » ನಾಣಿ ವಿರುದ್ಧ 'ಚಂದ್ರ ಚಕೋರಿ' ಕತೆ ಕದ್ದ ಆರೋಪ

ನಾಣಿ ವಿರುದ್ಧ 'ಚಂದ್ರ ಚಕೋರಿ' ಕತೆ ಕದ್ದ ಆರೋಪ

Subscribe to Filmibeat Kannada

ಎಚ್ ಡಿ ಕುಮಾರಸ್ವಾಮಿ ನಿರ್ಮಾಣದ 'ಚಂದ್ರ ಚಕೋರಿ' (2003)ಚಿತ್ರಕ್ಕೆ ಹೊಸ ವಿವಾದ ಸುತ್ತಿಕೊಂಡಿದೆ. ತಮಿಳುನಾಡಿನ ಕಣ್ಮಣಿ ರಾಜಾ ಮೊಹಮ್ಮದ್ ಎಂಬ ಚಿತ್ರಕತೆಗಾರ 'ಚಂದ್ರ ಚಕೋರಿ' ಕತೆಯ ನನ್ನದೆ. ಚಿತ್ರದ ನಿರ್ದೇಶಕ ಎಸ್.ನಾರಾಯಣ್ ನನ್ನ ಕತೆಯನ್ನು ಕದ್ದ್ದಿದ್ದಾರೆ ಎಂದು ಆರೋಪಿಸಿದ್ದಾರೆ ಇದುವರೆಗೂ ನನಗೆ ಗೌರವ ಧನವನ್ನೂ ಕೊಟ್ಟಿಲ್ಲ ಎಂದು ಆತ ದೂರಿದ್ದಾನೆ.

ಈ ಸಂಬಂಧ ರಾಜಾ ಮೊಹಮ್ಮದ್ ತಮಿಳುನಾಡು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ದಕ್ಷಿಣ ಭಾರತದ ಲೇಖಕರ ಸಂಘಕ್ಕೆ ದೂರು ಸಲ್ಲಿಸಿದ್ದರು. ಇದೀಗ ದೂರಿನ ಪತ್ರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ತಲುಪಿದೆ. ಚೇಂಬರ್ ಮುಂದೆ ಏನು ಕ್ರಮಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

''ಬಾಕಿ ಹಣಕ್ಕಾಗಿ ನಾಲ್ಕು ವರ್ಷಗಳ ಕಾಲ ಕಾದಿದ್ದೇನೆ. ಬರೀ ಕಾದಿದ್ದೇ ಬಂತು. ಏನು ಪ್ರಯೋಜನವಾಗಲಿಲ್ಲ. ಇದೀಗ ದೂರು ಸಲ್ಲಿಸಿರುವ ಕಾರಣ ಹಣ ಕೊಡುವುದಿಲ್ಲ ಎಂದು ಎಸ್ ನಾರಾಯಣ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರ ಬಗ್ಗೆ ನನಗೆ ನಂಬಿಕೆ ಇದೆ. ಅವರ ಪ್ರತಿಕ್ರಿಯೆಯ ನಂತರ ಮುಂದಿನ ಹೆಜ್ಜೆ ಇಡುತ್ತೇನೆ'' ಎನ್ನುತ್ತಾರೆ ರಾಜಾ ಮೊಹಮ್ಮದ್.

ಒಂದು ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನನಗೆ ನ್ಯಾಯ ಸಲ್ಲಿಸದಿದ್ದ ಪಕ್ಷದಲ್ಲಿ ಎಸ್ ನಾರಾಯನ್ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿಯೂ ಅವರು ಎಚ್ಚರಿಸಿದ್ದಾರೆ. ಈ ಸಂಬಂಧ ಎಚ್ ಡಿ ಕುಮಾರಸ್ವಾಮಿ ಅವರನ್ನು ಬಹಳಷ್ಟು ಸಲ ಭೇಟಿ ಮಾಡಲು ಪ್ರಯತ್ನಿಸಿದ್ದೇನೆ. ಆದರೆ ಅವರನ್ನು ಭೇಟಿ ಮಾಡಲು ಇನ್ನೂ ನನಗೆ ಅಪಾಯಿಂಟ್ ಮೆಂಟ್ ಸಿಕ್ಕಿಲ್ಲ. ಸಮಾಜವಾದಿ ನಾಯಕರಾದ ಕುಮಾರಸ್ವಾಮಿ ಅವರು ನನಗೆ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ.

ಕುಮಾರಸ್ವಾಮಿ ನಿರ್ಮಿಸಿದ ಐದು ಚಿತ್ರಗಳಲ್ಲಿ 'ಚಂದ್ರ ಚಕೋರಿ' ಬಾಕ್ಸಾಫೀಸ್ ನಲ್ಲಿ ದುಡ್ಡು ಬಾಚಿತ್ತು. ''ಈ ಚಿತ್ರದ ಮೂಲ ಕತೆ ತಮ್ಮದೇ ಎಂಬುದಕ್ಕೆ ತಮ್ಮ ಬಳಿ ಸಾಕ್ಷಿ ಇದೆ. ದಕ್ಷಿಣ ಭಾರತ ಲೇಖಕರ ಸಂಘದಲ್ಲಿ ಈ ಚಿತ್ರಕತೆಯನ್ನು ನೋಂದಣಿ ಮಾಡಿಕೊಂಡಿರುವ ದಾಖಲೆ ಪತ್ರಗಳು ತಮ್ಮ ಬಳಿ ಇವೆ ಎಂದು ರಾಜಾ ಮೊಹಮ್ಮದ್ ತಿಳಿಸಿದ್ದಾರೆ.

ನಿರ್ಮಾಪಕರ ಸಂಘದ ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇನೆ ಎನ್ನುವ ಮೊಹಮ್ಮದ್, ವಾಣಿಜ್ಯ ಮಂಡಳಿ ಅಥವಾ ಕುಮಾರಸ್ವಾಮಿ ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ. ಇಲ್ಲದಿದ್ದರೆ ಕೋರ್ಟ್ ನಲ್ಲಿ ನ್ಯಾಯಕ್ಕಾಗಿ ಹೋರಾಡುವುದಾಗಿ ಮೊಹಮ್ಮದ್ ಎಚ್ಚರಿಸಿದ್ದಾರೆ.

ಪ್ರೇಮ ಕಥಾ ಹಂದರದ ಚಂದ್ರ ಚಕೋರಿ ಚಿತ್ರದಲ್ಲಿ ಮುರಳಿ, ಪ್ರಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ವಿ ಮನೋಹರ್ ಅವರ ಸಾಹಿತ್ಯ ಎಸ್ ಎ ರಾಜ್ ಕುಮಾರ್ ಅವರ ಸಂಗೀತ ನಿರ್ದೇಶವಿದ್ದ ಚಿತ್ರದ ಹಾಡುಗಳು ಬಹಳಷ್ಟು ಜನಪ್ರಿಯವಾಗಿದ್ದವು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada